Karnataka Rain Alert | ಕರ್ನಾಟಕ ಸೇರಿದಂತೆ ಈ ರಾಜ್ಯಗಳಲ್ಲಿ ಭಾರೀ ಮಳೆ | IMD ಯಿಂದ ಮುನ್ಸೂಚನೆ
ದೀಪಾವಳಿ ಹಬ್ಬದ ಸಡಗರ ಮುಗಿಯುತ್ತಿದ್ದಂತೆ ವರುಣನ ಅಬ್ಬರ ಎಲ್ಲೆಡೆ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಅಕ್ಟೋಬರ್ 29 ರಿಂದ ಕರ್ನಾಟಕ ಸೇರಿದಂತೆ, ದೇಶದ ದಕ್ಷಿಣ ಕರಾವಳಿ ಆಂಧ್ರಪ್ರದೇಶದ ಕರಾವಳಿ ತಮಿಳುನಾಡು, ಪುದುಚೇರಿ, ಕಾರೈಕಲ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಈಶಾನ್ಯ ಮಾನ್ಸೂನ್ ಮಳೆ ಪ್ರಾರಂಭವಾಗುವ ಕುರಿತು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮಾಹಿತಿ ನೀಡಿದೆ.
ಬಂಗಾಳಕೊಲ್ಲಿ ಮತ್ತು ದಕ್ಷಿಣ ಪರ್ಯಾಯ ದ್ವೀಪ ಭಾರತದ ಮೇಲೆ ಕಡಿಮೆ ಟ್ರೋಪೋಸ್ಫಿರಿಕ್ ಮಟ್ಟಗಳಲ್ಲಿ ಈಶಾನ್ಯ ಮಾರುತಗಳು ಹುಟ್ಟಿರುವುದನ್ನು ಐಎಂಡಿ ದೃಢಪಡಿಸಿದೆ.
ಹಾಗಾಗಿ, ಮುಂದಿನ 24 ಗಂಟೆಗಳಲ್ಲಿ, ಈಶಾನ್ಯ ಮಾನ್ಸೂನ್ ಮಳೆಯು ದೇಶದ ಆಗ್ನೇಯ ಭಾಗಗಳಲ್ಲಿ ಪ್ರಾರಂಭವಾಗುವ ಸಾಧ್ಯತೆ ದಟ್ಟವಾಗಿದೆ. ಮುಂದಿನ ಐದು ದಿನಗಳು ಇಲ್ಲವೇ ಅದರಾಚೆಗೂ ಕೂಡಾ ಮಳೆರಾಯ ಅಬ್ಬರಿಸುವ ಸಾಧ್ಯತೆ ಇದೆ.
ಅಕ್ಟೋಬರ್ 29 ರಿಂದ ನವೆಂಬರ್ 2 ರವರೆಗೆ ತಮಿಳುನಾಡು, ಪುದುಚೇರಿ ಮತ್ತು ಕಾರೈಕಲ್ನಲ್ಲಿ ಗುಡುಗು ಸಹಿತ ಸಿಡಿಲು ಸಹಿತ ಚದುರಿದ / ಸಾಕಷ್ಟು ವ್ಯಾಪಕ ಲಘು / ಮಧ್ಯಮ ಮಳೆಯಾಗಲಿದೆ.
ಅಕ್ಟೋಬರ್ 30 ರಿಂದ ನವೆಂಬರ್ 02 ರವರೆಗೆ ಕೇರಳ ಮತ್ತು ಮಾಹೆಯಲ್ಲಿ ಮಳೆಯಾಗಲಿದೆ. ಅಕ್ಟೋಬರ್ 31 ರಿಂದ ನವೆಂಬರ್ 2 ರವರೆಗೆ ಕರಾವಳಿ ಆಂಧ್ರಪ್ರದೇಶ ಮತ್ತು ಯಾನಾಮ್ ಮೇಲೆ ವರುಣನ ಆರ್ಭಟ ನಡೆಯಲಿದೆ
ನವೆಂಬರ್ 2 ರಂದು ದಕ್ಷಿಣ ಒಳನಾಡಿನ ಕರ್ನಾಟಕದ ಮೇಲೆ ಮತ್ತು ನವೆಂಬರ್ 1 ರಿಂದ ನವೆಂಬರ್ 2 ರಂದು ರಾಯಲಸೀಮೆಯ ಮೇಲೆ ಮಳೆಯಾಗಲಿದೆ ಎಂದು ವರದಿಯಾಗಿದೆ.
ಅಕ್ಟೋಬರ್ 31 ಮತ್ತು ನವೆಂಬರ್ 01 ರಂದು ತಮಿಳುನಾಡು, ಪುದುಚೇರಿ ಮತ್ತು ಕಾರೈಕಲ್ನಲ್ಲಿ ಗುಡುಗು/ಮಿಂಚು ಸಹಿತ ಪ್ರತ್ಯೇಕ ಭಾರಿ ಮಳೆಯಾಗುವ ಸಾಧ್ಯತೆಯಿದೆ.
2022 ರ ನವೆಂಬರ್ 1 ರಂದು ಆಂಧ್ರಪ್ರದೇಶದ ಕರಾವಳಿ ಮತ್ತು ಯಾಣಂ ಮತ್ತು 2022 ರ ನವೆಂಬರ್ 1 ಮತ್ತು 2 ರಂದು ರಾಯಲಸೀಮೆಯಲ್ಲಿ ವರುಣನ ಅಬ್ಬರ ಜೋರಾಗಿ ಇರಲಿದೆ ಎಂದು ಅಂದಾಜಿಸಲಾಗಿದೆ.
ಇದರ ಹೊರತಾಗಿ , ಅಕ್ಟೋಬರ್ 31 ರಿಂದ ನವೆಂಬರ್ 2 ರವರೆಗೆ ಜಮ್ಮು, ಕಾಶ್ಮೀರ, ಲಡಾಖ್, ಗಿಲ್ಗಿಟ್, ಬಾಲ್ಟಿಸ್ತಾನ್ ಮತ್ತು ಮುಜಫ್ಫರಾಬಾದ್ ಮತ್ತು 2022 ರ ನವೆಂಬರ್ 1 ರಂದು ಹಿಮಾಚಲ ಪ್ರದೇಶದ ಪ್ರತ್ಯೇಕ ಸ್ಥಳಗಳಲ್ಲಿ ಹಗುರ / ಮಧ್ಯಮ ಮಳೆಯಾಗುವ ಸಂಭವವಿದೆ.
ಮುಂದಿನ 5 ದಿನಗಳಲ್ಲಿ ದೇಶದ ಉಳಿದ ಭಾಗಗಳಲ್ಲಿ ಒಣ ಹವೆಮುಂದುವರಿಯುವ ಸಾಧ್ಯತೆ ದಟ್ಟವಾಗಿದೆ.