ಈ ರೀತಿಯ ಲಕ್ಷಣ ನಿಮ್ಮ ಉಗುರುಗಳಲ್ಲಿ ಕಂಡು ಬಂದಿದೆಯೇ? ಎಚ್ಚರ ವಹಿಸಿ

ನಮ್ಮ ದೇಹದ ಪ್ರತಿಯೊಂದು ಭಾಗಗಳನ್ನು ಕಾಪಾಡಿಕೊಳ್ಳುವುದು ನಮ್ಮ ಕರ್ತವ್ಯ ಆಗಿದೆ. ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದು ನಮ್ಮ ಜವಾಬ್ದಾರಿಯು ಹೌದು. ಆರೋಗ್ಯವೇ ಭಾಗ್ಯ ಅನ್ನೋ ನುಡಿಮುತ್ತು ಕೇಳಿರಬಹುದು. ಹಾಗೆಯೇ ನಮಗೆ ಆರೋಗ್ಯ ಇದ್ದರೆ ಮಾತ್ರ ನಾವು ಪರಿಪೂರ್ಣ ತಾನೇ.

ಅಲ್ಲದೆ ಕೆಲವರಿಗೆ ದುರ್ಬಲವಾದ ಉಗುರುಗಳನ್ನು ನೀವು ಗಮನಿಸಿರಬಹುದು. ಅಥವಾ ನಿಮ್ಮ ಉಗುರು ದುರ್ಬಲ ಆಗಿರಬಹುದು. ಪ್ರಮುಖವಾಗಿ ಪೋಷಣೆಯ ಕೊರತೆ, ವಿಟಮಿನ್ ಎ, ಸಿ ಕೊರತೆವು ದುರ್ಬಲವಾದ ಉಗುರುಗಳಿಗೆ ಕಾರಣವಾಗುತ್ತದೆ. ಇಂತಹ ಉಗುರುಗಳು ತುಂಬಾ ಮೃದುವಾಗಿದ್ದು ಬೇಗ ಮುರಿಯುವ ಸಾಧ್ಯತೆ ಇದೆ.

ಉಬ್ಬಿದ ಉಗುರುಗಳು :
ಕೆಲವೊಮ್ಮೆ ಉಬ್ಬಿದ ಉಗುರುಗಳು ಶ್ವಾಸಕೋಶ ಅಥವಾ ಹೃದಯ ಸಂಬಂಧಿ ಕಾಯಿಲೆ, ಕ್ಯಾನ್ಸರ್ ಮುಂತಾದ ಗಂಭೀರ ಸ್ಥಿತಿಯ ಎಚ್ಚರಿಕೆಯ ಸಂಕೇತವಾಗಿದೆ. ನಿಮ್ಮ ಬೆರಳ ತುದಿಗಳು ಉಬ್ಬಿದ ರೀತಿಯಲ್ಲಿದ್ದರೆ ಸಾಮಾನ್ಯವಾಗಿ ಅದು ವಂಶ ಪಾರಂಪರ್ಯವಾಗಿಯು ಬಂದಿರಬಹುದು ಅದರ ಕುರಿತು ಭಯಬೇಡ.

ಉಗುರಿನ ಗೆರೆಗಳು :
ನಿಮ್ಮ ಉಗುರಿನ ಮೇಲೆ ಬಿಳಿ ಬಣ್ಣದ ಗೆರೆಗಳು ಕಂಡುಬಂದಲ್ಲಿ ದೇಹದಲ್ಲಿ ಕಬ್ಬಿಣದ ಅಂಶ ಕಡಿಮೆಯಾಗಿದೆ ಎಂದರ್ಥ. ಈ ಸಮಸ್ಯಗೆ ಆದಷ್ಟು ಪೋಷಕಾಂಶಗಳಿರುವ ಅಹಾರವನ್ನು ಸೇವಿಸಿ.

ಹಳದಿ ಉಗುರುಗಳು:
ನಿಮ್ಮ ಉಗುರುಗಳು ಹಳದಿ ಬಣ್ಣವನ್ನು ಹೊಂದಿದ್ದರೆ ಆರೋಗ್ಯವಾಗಿಲ್ಲ ಎಂದರ್ಥ. ಈ ಲಕ್ಷಣಗಳು ನಿಮ್ಮಲ್ಲಿ ಕಂಡುಬಂದಿದ್ದರೆ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾಗಿದೆ ಸೂಚಿಸುತ್ತದೆ.

ಮುಖ್ಯವಾಗಿ ಉಗುರುಗಳನ್ನು ಧೂಳು ಮತ್ತು ಕೊಳೆಗಳಿಂದ ಸ್ವಚ್ಚವಾಗಿಟ್ಟುಕೊಳ್ಳುವುದು ಉತ್ತಮ.
ಈ ತರಹದ ಉಗುರುಗಳು ನಿಮ್ಮ ಒತ್ತಡದಿಂದ ಹಿಡಿದು ಮೂತ್ರಪಿಂಡ ಮತ್ತು ಥೈರಾಯ್ಡ್ ಕಾಯಿಲೆಯವರೆಗೆ ಅನೇಕ ರೋಗಗಳ ಲಕ್ಷಣಗಳಿಗೆ ಕಾರಣವಾಗಬಹುದು. ಆದ್ದರಿಂದ ಉಗುರುಗಳ ಆರೋಗ್ಯದ ಬಗ್ಗೆಯು ಎಚ್ಚರ ವಹಿಸುವುದು ಅಗತ್ಯ.

ನಿಮ್ಮ ಕಾಲ್ಬೆರಳ ಉಗುರುಗಳ ಮೇಲೆ ಕಡು ಕೆಂಪು ಬಣ್ಣದ ಗೆರೆಗಳು ಕಂಡುಬಂದರೆ, ಈ ಚಿಹ್ನೆಗಳು ಹೃದಯದ ಸೋಂಕಿನ ಸೂಚನೆಯಾಗಿದೆ. ಏಕೆಂದರೆ ರಕ್ತನಾಳಗಳು ಒಡೆದಾಗ ಈ ರೀತಿಯಾಗಿ ಕಾಣಿಸುತ್ತದೆ. ಈ ಸ್ಥಿತಿಯನ್ನು ಸ್ಪ್ಲಿಂಟರ್ ಹೆಮರೇಜ್ ಎಂದು ಕರೆಯಲಾಗುತ್ತದೆ. ಆದ್ದರಿಂದ, ಇಂತಹ ಸೂಚನೆ ಕಂಡು ಬಂದಲ್ಲಿ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು.

Leave A Reply

Your email address will not be published.