ಸೌಹಾರ್ದತೆಯ ಬಾಂಧವ್ಯ : ಇಲ್ಲಿ ಹಿಂದೂ ಮುಸ್ಲಿಂ ಜೊತೆಗೇ ಆಚರಿಸುತ್ತಾರೆ ದೀಪಾವಳಿ!!!

ಪ್ರಪಂಚದಲ್ಲಿ ದೈವ ಶಕ್ತಿ ಮತ್ತು ದುಷ್ಟ ಶಕ್ತಿ ಇದೆ. ಹಾಗೆಯೇ ಮನುಷ್ಯರ ನಡುವೆ ಕೆಟ್ಟವರು ಮತ್ತು ಒಳ್ಳೆಯವರು ಇದ್ದಾರೆ. ಸಮಾಜವನ್ನು ಒಂದು ಗೂಡಿಸುವ ಒಂದು ಗುಂಪಾದರೆ, ಹಾಗೆಯೇ ಸಮಾಜವನ್ನು ಬೇರ್ಪಡಿಸುವ ಇನ್ನೊಂದು ಗುಂಪು ಇವೆ. ಆದರೆ ಸಮಾಜದಲ್ಲಿ ತಾವೆಲ್ಲರೂ ಹಿಂದೂಸ್ತಾನಿಗಳು ಎಂಬ ಐಕ್ಯತೆ ಇದ್ದಾಗ ನಿರಾಳವಾಗಿ ಬದುಕಬಹುದು.

ಹಾಗೆಯೇ ಐಕ್ಯತೆಗೆ ಸಾಕ್ಷಿಯಾಗಿ ಬೀಡ್ ಜಿಲ್ಲೆಯ ದೊಂಡರಾಯದ ಗ್ರಾಮದಲ್ಲಿ ಹಿಂದೂ ಮುಸ್ಲಿಮರು ಒಂದಾಗಿ ದೀಪಾವಳಿ ಹಬ್ಬದ ಔತಣಕೂಟ ಏರ್ಪಡಿಸಿ, ಸೌಹಾರ್ದತೆ ಮೆರೆದಿದ್ದಾರೆ. ಈ ದೃಶ್ಯವನ್ನು ನೋಡಿದಾಗ ಮನಸ್ಸಿಗೆ ನೆಮ್ಮದಿ ಅನಿಸುತ್ತದೆ.

ಇಲ್ಲಿನ ಗ್ರಾಮಸ್ಥರು ಸುಶಿಕ್ಷಿತರಾಗಿದ್ದು ಮಾತ್ರವಲ್ಲದೆ ಆಯಿ ಆಯಿ ದೊಂಡರೈ ಎಂಬ ವಾಟ್ಸ್ಆಯಪ್ ಗ್ರೂಪ್ ನ್ನು ಸಹ ಆರಂಭಿಸಿ ವಿವಿಧ ಸಾಮಾಜಿಕ ಕಾರ್ಯಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ. ಇವರ ಸಾಮಾಜಿಕ ಕಾರ್ಯಗಳ ಜೊತೆಗೆ ಸ್ನೇಹಮಿಲನ ಕಾರ್ಯಕ್ರಮವೂ ಒಂದಾಗಿದೆ.

ಮಹಾರಾಷ್ಟ್ರದ ಬೀಡ್ ಜಿಲ್ಲೆಯ ದೊಂಡರಾಯದ ಗ್ರಾಮದ ಹಿಂದೂ ಮುಸ್ಲಿಂ ಸಮುದಾಯದವರು ಒಂದಾಗಿ ಸಾಮಾಜಿಕ ವಿಶಿಷ್ಟ ಸಂಪ್ರದಾಯದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಸ್ನೇಹಮಿಲನ ಕಾರ್ಯಕ್ರಮವನ್ನು ಬೀಡ್ ಜಿಲ್ಲೆಯ ಗೆವ್ರಾಯಿ ತಾಲೂಕಿನ ದೊಂಡರಾಯದಲ್ಲಿ ಸಂಭ್ರಮದಿಂದ ಆಚರಿಸಿದರು.

ಏಳು ವರ್ಷಗಳಿಂದ ದೊಂಡರಾಯನ ಹಿಂದೂ ಮುಸ್ಲಿಂ ಸಮುದಾಯದವರು ಹಬ್ಬ ಹರಿದಿನಗಳಲ್ಲಿ ಸಾಮಾಜಿಕ ಸೌಹಾರ್ದತೆ ಕಾಪಾಡಲು ಹಿಂದೂ ಎನ್ನದೇ ಹಿಂದೂಸ್ತಾನಿ ಎಂಬ ಮಂತ್ರ ಜಪಿಸುವುದು ಸುತ್ತಲಿನ ಗ್ರಾಮಗಳಿಗೂ ಪಸರಿಸಿದೆ. ಆದರೆ, ಈ ಬಾರಿ ದೀಪಾವಳಿ ನಿಮಿತ್ತ ಗ್ರಾಮದ ಮಸೀದಿಯಲ್ಲಿ ಮುಸ್ಲಿಂ ಬಾಂಧವರಿಗೆ ಹಿಂದೂಗಳು ಆಯೋಜಿಸಿದ್ದ ಸ್ನೇಹಮಿಲನ ಕಾರ್ಯಕ್ರಮ ಪ್ರಚಾರ ಪಡೆದು, ಮೆಚ್ಚುಗೆ ಗಳಿಸಿದೆ.

ಹಲವಾರು ವರ್ಷಗಳಿಂದ ದೊಂಡರಾಯದ ಗ್ರಾಮದ ನಾನಾ ಹಬ್ಬಗಳಲ್ಲೂ ಸ್ನೇಹಮಿಲನ ಕಾರ್ಯಕ್ರಮ ಆಯೋಜಿಸುತ್ತಿದ್ದು ಸೌಹಾರ್ದತೆಗೆ ಸಾಕ್ಷಿಯಾಗಿದೆ.

Leave A Reply

Your email address will not be published.