ಮಹಿಳೆ ಮಾಡಿದ ಎಡವಟ್ಟಿನಿಂದ ಐವರ ಸಾವು| ತಾನು ಮಾಡಿದ ಟೀ ಯಿಂದ ಪತಿ ಮಕ್ಕಳನ್ನು ಕಳೆದುಕೊಂಡ ಪತ್ನಿ|

ಕೆಲಸದ ವಿಷಯದಲ್ಲಿ ಮಾಡುವ ಸಣ್ಣ ಅವಾಂತರ ಕೆಲವೊಮ್ಮೆ ದೊಡ್ದ ಪ್ರಮಾದ ಸೃಷ್ಟಿ ಮಾಡಬಹುದು. ಎಂಬುದಕ್ಕೆ ನಿದರ್ಶನ ಎಂಬಂತೆ ಘಟನೆಯೊಂದು ವರದಿಯಾಗಿದೆ.

ಉತ್ತರ ಪ್ರದೇಶದ ಮೈನ್‌ಪುರಿಯಲ್ಲಿ ಕೀಟನಾಶಕ ಔಷಧ ಬೆರೆಸಿದ ಚಹಾ ಕುಡಿದು ಒಂದೇ ಕುಟುಂಬದ ಐವರು ಮೃತಪಟ್ಟ ಘಟನೆ ನಡೆದಿದೆ.

ಉತ್ತರಪ್ರದೇಶದ ಜಿಲ್ಲೆಯಲ್ಲಿ ದುರಂತ ಘಟನೆಯೊಂದು ಸಂಭವಿಸಿದ್ದು, ಹೆಂಡತಿ ಮಾಡಿದ ತಪ್ಪಿಗೆ ಐದು ಜೀವಗಳು ಬಲಿಯಾಗಿವೆ.

ಮನೆಯಲ್ಲಿ ಟೀ ಕುಡಿದು ತೀವ್ರ ಅಸ್ವಸ್ಥಗೊಂಡು ಇಬ್ಬರು ಮಕ್ಕಳು ಸೇರಿ ಐವರು ಸಾವನ್ನಪ್ಪಿರುವ ಘಟನೆ ನಾಗ್ಲಾ ಕನ್ಹೈ ಗ್ರಾಮದಲ್ಲಿ ನಡೆದಿದೆ.

ಮಹಿಳೆಯೊಬ್ಬಳು ಮಾಡಿದ ಸಣ್ಣ ಎಡವಟ್ಟಿನಿಂದ ಗಂಡ ಮತ್ತು ಮುದ್ದಾದ ಇಬ್ಬರು ಮಕ್ಕಳು ಸೇರಿದಂತೆ ಐವರು ಸಾವಿನ ದವಡೆಗೆ ಸಿಲುಕಿದ ಶೋಚನೀಯ ಸಂಗತಿ ನಡೆದಿದೆ.

ಟೀ ಪುಡಿ ಬದಲಿಗೆ ಕೀಟನಾಶಕ ಔಷಧ ಬಳಕೆ ಮಾಡಿದ್ದು, ಶಿವಾನಂದನ ಪತ್ನಿ ಭತ್ತದ ಬೆಳೆಗೆ ಸಿಂಪರಣೆ ಮಾಡಿದ ಔಷಧವನ್ನು ಟೀ ಪುಡಿ ಎಂದು ತಪ್ಪಾಗಿ ಭಾವಿಸಿ ಚಹಾ ಮಾಡಿದ್ದು, ಇದನ್ನು ಕುಡಿದ ಆ ಐವರು ಸಾವನ್ನಪ್ಪಿದ ಧಾರುಣ ಘಟನೆ ನಡೆದಿದೆ.

ಘಟನೆಯ ವಿವರಗಳ ಪ್ರಕಾರ, ಶಿವಾನಂದನ್ (35), ಅವರ ಮಕ್ಕಳಾದ ಶಿವಂಗ್ (6), ದಿವ್ಯಾಂಶ್ (5), ಮಾವ ರವೀಂದ್ರಸಿಂಗ್ (55) ಮತ್ತು ನೆರೆಹೊರೆಯವರಾದ ಸೊಬ್ರಾನ್ (45) ಮನೆಯಲ್ಲಿ ಚಹಾ ಕುಡಿದು ತೀವ್ರ ಅಸ್ವಸ್ಥಗೊಂಡಿದ್ದಾರೆ.

ಇವರೆಲ್ಲರನ್ನೂ ಕೂಡಲೇ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋದರೂ ಕೂಡ ದುರದೃಷ್ಟವಶಾತ್ ರವೀಂದ್ರ ಸಿಂಗ್, ಶಿವಾಂಗ್ ಮತ್ತು ದಿವಾನ್ಶ್ ಮೃತಪಟ್ಟಿದ್ದಾರೆ .

ಇನ್ನುಳಿದ ಸೊಬ್ರಾನ್ ಮತ್ತು ಶಿವಾನಂದನ ಆರೋಗ್ಯ ಸ್ಥಿತಿ ಗಂಭೀರವಾಗಿ ಹದಗೆಟ್ಟಿದ್ದರಿಂದ ಅವರನ್ನು ಸೈಫಾಯಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ಆದರೆ ಚಿಕಿತ್ಸೆ ಫಲಕಾರಿಯಾಗದೇ ಇವರಿಬ್ಬರೂ ಕೂಡ ಮೃತಪಟ್ಟಿದ್ದಾರೆ. ಈ ಪ್ರಕರಣದ ಕುರಿತಾಗಿ ಪ್ರಾಥಮಿಕ ತನಿಖೆಯನ್ನೂ ಎಸ್ಪಿ ಕಮಲೇಶ್ ದೀಕ್ಷಿತ್ ನಡೆಸುತ್ತಿದ್ದಾರೆ.

Leave A Reply

Your email address will not be published.