SBI Annuity Deposit Plan : ಈ ಯೋಜನೆಯಲ್ಲಿ ಒಮ್ಮೆ ಹೂಡಿಕೆ ಮಾಡಿ, EMI ಮೂಲಕ ತಿಂಗಳ ಪಿಂಚಣಿ ಪಡೆಯಿರಿ!

ಇಂದಿನ ಡಿಜಿಟಲ್ ಯುಗದಲ್ಲಿ ನಮ್ಮ ಬಹುತೇಕ ಕೆಲಸಗಳು ಡಿಜಿಟಲ್ ಮುಖಾಂತರವಾಗಿಯೇ ನಡೆಯುತ್ತಿದೆ. ಅದರಲ್ಲೂ ಮುಖ್ಯವಾಗಿ ಬ್ಯಾಂಕಿಂಗ್ ಕೆಲಸಗಳು ಮನೆಯಲ್ಲೆ ಕುಳಿತು ಸರಾಗವಾಗಿ ಹಣ ವರ್ಗಾವಣೆಯ ಜೊತೆಗೆ ಪಾವತಿ ಮಾಡುವ ಸೌಕರ್ಯವನ್ನು ಎಲ್ಲ ಬ್ಯಾಂಕ್ಗಳು ಒದಗಿಸಿ, ಪ್ರತಿ ಕೆಲಸಕ್ಕೂ ಬ್ಯಾಂಕಿನ ಶಾಖೆಗೆ ಓಡಾಡುವ ತಾಪತ್ರಯವನ್ನು ಕೂಡ ತಪ್ಪಿಸಿದೆ.

ದೇಶದ ಅತಿದೊಡ್ಡ ಬ್ಯಾಂಕ್‌ಗಳಲ್ಲಿ ಒಂದಾದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಮೊಬೈಲ್ ಬ್ಯಾಂಕಿಂಗ್ ಸೇವೆಗಳ ಮೂಲಕ ಗ್ರಾಹಕರಿಗೆ ಸಹಕಾರಿಯಾಗಿದೆ.

ಇಂಟರ್ನೆಟ್ ಬ್ಯಾಂಕಿಂಗ್ ಸೇವೆಗಳನ್ನು ಪ್ರಾರಂಭಿಸಿದ ನಂತರ, ಅದು ಈಗ ತನ್ನ ಮೊಬೈಲ್ ಬ್ಯಾಂಕಿಂಗ್ ಸೇವೆಗಳೊಂದಿಗೆ ಬಂದಿದೆ. ಬ್ಯಾಂಕ್ ಗ್ರಾಹಕರ ಅಗತ್ಯಗಳಿಗೆ ಅನುಗುಣವಾಗಿ ವಿವಿಧ ಬ್ಯಾಂಕಿಂಗ್ ಅಪ್ಲಿಕೇಶನ್‌ಗಳನ್ನು ಲಭ್ಯವಿದೆ. ಅವುಗಳಲ್ಲಿ SBI ಎನಿವೇರ್ ಪರ್ಸನಲ್, SBI ಯೋನೋ, BHIM SBI ಪೇ ಮತ್ತು SBI ಬಡ್ಡಿ ಸೇರಿವೆ.

ಸಾರ್ವಜನಿಕ ಬ್ಯಾಂಕ್ ಆದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ವಾರ್ಷಿಕ ಡೆಪಾಸಿಟ್ ಯೋಜನೆಯನ್ನು ಪರಿಚಯಿಸಿದ್ದು, ಈ ಯೋಜನೆಯಲ್ಲಿ ಒಮ್ಮೆ ಹೂಡಿಕೆ ಮಾಡಿ ಬಳಿಕ ಇಎಂಐ ಮೂಲಕ ಮಾಸಿಕ ಪಿಂಚಣಿಯನ್ನು ಪಡೆಯಬಹುದಾಗಿದೆ.

ಮಾಸಿಕವಾಗಿ ಇಎಂಐ ರೂಪದಲ್ಲಿ ಲಭ್ಯವಾಗುವ ಈ ಪಿಂಚಣಿಯು ಸಮಾನ ಮಾಸಿಕ ಕಂತು ಮೂಲಕ ಲಭ್ಯವಾಗಲಿದೆ. ಹಾಗೆಯೇ ಅಸಲು ಮೊತ್ತದ ಜೊತೆಯೇ ಬಡ್ಡಿಯು ಕೂಡಾ ಲಭ್ಯವಾಗಲಿದ್ದು, ತ್ರೈಮಾಸಿಕವಾಗಿ ಬಡ್ಡಿದರವನ್ನು ಪಾವತಿ ಮಾಡಲಾಗುತ್ತದೆ.

ಎಸ್‌ಬಿಐ ವರ್ಷಾಶನ ಖಾತೆ ಯೋಜನೆಯಡಿ ಹಣವನ್ನು ಠೇವಣಿ ಮಾಡಿದರೆ, ಠೇವಣಿಯ ಮೇಲಿನ ಅಸಲು ಮತ್ತು ಬಡ್ಡಿ ಎರಡನ್ನೂ ಒಳಗೊಂಡಿರುವ ಮಾಸಿಕ ವರ್ಷಾಶನವನ್ನು ಪಡೆಯಲು ಸಾಧ್ಯವಾಗಲಿದೆ.

ಎಸ್‌ಬಿಐ ವಾರ್ಷಿಕ ಡೆಪಾಸಿಟ್ ಯೋಜನೆಯ ಮಾಹಿತಿ ಇಲ್ಲಿದೆ.

ಈ ಯೋಜನೆಯಲ್ಲಿ ಯಾವುದೇ ಗರಿಷ್ಠ ಹೂಡಿಕೆ ಮಿತಿಯಿಲ್ಲ. ಇನ್ನು ಹೂಡಿಕೆದಾರರು ನಿರ್ದಿಷ್ಟ ಅಗತ್ಯದ ಸಂದರ್ಭದಲ್ಲಿ ಉಳಿದ ಮೊತ್ತದಲ್ಲಿ ಶೇಕಡ 75ರಷ್ಟು ಹಣವನ್ನು ಪಡೆದುಕೊಳ್ಳಬಹುದಾಗಿದೆ.

ಈ ಯೋಜನೆಯು ಹಲವಾರು ಅವಧಿ ಆಯ್ಕೆಗೆ ಅವಕಾಶ ಕಲ್ಪಿಸುತ್ತದೆ. ಗ್ರಾಹಕರು 36, 60, 84 ಹಾಗೂ 120 ತಿಂಗಳುಗಳ ಡೆಪಾಸಿಟ್ ಅನ್ನು ಮಾಡಬಹುದಾಗಿದ್ದು, ಈ ಯೋಜನೆಯ ಕನಿಷ್ಠ ಮಾಸಿಕ ವರ್ಷಾಶನವು ಒಂದು ಸಾವಿರ ರೂಪಾಯಿ ಆಗಿದೆ. 15,00,000 ರೂಪಾಯಿವರೆಗೆ ಹಣವನ್ನು ಮೆಚ್ಯೂರಿಟಿಗೂ ಮುನ್ನವೇ ಪಾವತಿ ಮಾಡಿ ಗ್ರಾಹಕರಿಗೆ ನೆರವಾಗುತ್ತದೆ.

ಇನ್ನು ಈ ಯೋಜನೆಯಲ್ಲಿ ಬಡ್ಡಿದರವು ಅವಧಿಯ ಮೇಲೆ ಆಧಾರಿತವಾಗಿದೆ. ಅವಧಿಯ ಮೇಲೆ ಬಡ್ಡಿದರ ಬದಲಾವಣೆಯಾಗುತ್ತದೆ. ಈ ಕಾರ್ಯಕ್ರಮದ ಅಡಿಯಲ್ಲಿ ನಾಲ್ಕು ಅವಧಿಗಳಿಗೆ ಠೇವಣಿಗೆ ಅವಕಾಶವಿದೆ.

36 ತಿಂಗಳವರೆಗೆ ಮಾಡಿದ ಠೇವಣಿಗಳಿಗೆ, ಬಡ್ಡಿ ದರವು ಶೇಕಡ 6.25, 60 ತಿಂಗಳವರೆಗೆ ಮಾಡಿದ ಠೇವಣಿಗಳಿಗೆ ಬಡ್ಡಿ ದರ ಸಾಮಾನ್ಯ ಜನರಿಗೆ ಶೇಕಡ 6.10, ಹಿರಿಯ ನಾಗರಿಕರಿಗೆ ಶೇಕಡ 6.5, 84 ತಿಂಗಳಿನಿಂದ 120 ತಿಂಗಳುಗಳವರೆಗೆ ಮಾಡಿದ ಠೇವಣಿಗಳಿಗೆ, ಬಡ್ಡಿ ದರವು ಸಾಮಾನ್ಯ ಜನರಿಗೆ ಶೇಕಡ 6.1 ಮತ್ತು ಹಿರಿಯ ನಾಗರಿಕರಿಗೆ ಶೇಕಡ 6.9 ಆಗಿದೆ.

ಸಾಮಾನ್ಯ ಜನರಿಗೆ ಹಾಗೂ ಹಿರಿಯ ನಾಗರಿಕರಿಗೆ ಈ ಡೆಪಾಸಿಟ್‌ಗಳಿಗೆ ನೀಡುವ ಬಡ್ಡಿದರದಲ್ಲಿ ಯಾವುದೇ ಬದಲಾವಣೆಯಿಲ್ಲ.

ಕೆಲವು ಯೋಜನೆಗಳಲ್ಲಿ ಹಿರಿಯ ನಾಗರಿಕರಿಗೆ ಅಧಿಕ ಬಡ್ಡಿದರವನ್ನು ನೀಡಲಾಗುತ್ತದೆ. ಆದರೆ ಈ ಯೋಜನೆಯಲ್ಲಿ ಎಲ್ಲರಿಗೂ ಸಮಾನವಾದ ಬಡ್ಡಿದರವನ್ನು ನೀಡಲಾಗುತ್ತದೆ.

ಇನ್ನು ಇತ್ತೀಚೆಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಫಿಕ್ಸಿಡ್ ಡೆಪಾಸಿಟ್ ಮೇಲಿನ ಬಡ್ಡಿದರವನ್ನು ಪರಿಷ್ಕರಣೆ ಮಾಡಿದ್ದು, ಪ್ರಸ್ತುತ ಸಾಮಾನ್ಯ ನಾಗರಿಕರಿಗೆ ಎಫ್‌ಡಿ ಮೇಲೆ ಶೇಕಡ 6.1ರಷ್ಟು ಹಾಗೂ ಹಿರಿಯ ನಾಗರಿಕರಿಗೆ ಶೇಕಡ 6.9ರಷ್ಟು ಬಡ್ಡಿದರ ಲಭ್ಯವಾಗಲಿದೆ.

Leave A Reply

Your email address will not be published.