Betal Leaf : ಸರ್ವರೋಗಕ್ಕೂ ಮನೆ ಮದ್ದು ವೀಳ್ಯದೆಲೆ!!
ವೀಳ್ಯದೆಲೆ ಇಲ್ಲದೇ ಹಿಂದೂ ಸಂಪ್ರದಾಯದಲ್ಲಿ ಯಾವುದೇ ಶುಭ ಕಾರ್ಯಕ್ರಮಗಳು ನಡೆಯುವುದಿಲ್ಲ. ಹೌದು ವೀಳ್ಯದೆಲೆ ಅಂದರೆ ಅದು ತನ್ನದೇ ಆದ ಸ್ಥಾನ ಮಾನ ಹೊಂದಿದೆ. ಅಲ್ಲದೆ ಆರೋಗ್ಯಕ್ಕೂ ರಾಮಬಾಣ ಆಗಿದೆ ಮತ್ತು ಕೆಲವೊಂದು ಬಾರಿ ಬಾಯಿಯ ದುರ್ವಾಸನೆ ಮಾತ್ರವಲ್ಲ ಮಧುಮೇಹವನ್ನೂ ಕೂಡ ಕಡಿಮೆ ಮಾಡುತ್ತದೆ.
ಊಟದ ಬಳಿಕ ಎಲೆ ಅಡಿಕೆ ಹಾಕುವ ಸಂಪ್ರದಾಯ ಹಲವು ಮನೆಗಳಲ್ಲಿದೆ. ಎಲೆ ಅಡಿಕೆಯು ಕೇವಲ ಬಾಯಿಯ ದುರ್ವಾಸನೆಯನ್ನು ಕಡಿಮೆ ಮಾಡುವುದು ಮಾತ್ರವಲ್ಲದೇ ಜೀರ್ಣಕಾರಿ ಶಕ್ತಿಯನ್ನು ಕೂಡ ಹೊಂದಿದೆ. ಜೊತೆಗೆ ಇದು ತೂಕ ನಷ್ಟವನ್ನು ಇನ್ನಷ್ಟು ಸುಲಭಗೊಳಿಸುತ್ತದೆ.
ಕರಾವಳಿ ಕರ್ನಾಟಕದಲ್ಲಿ ತುಳುವರ ಎಲ್ಲ ಶುಭ ಕಾರ್ಯಗಳಿಗೂ ಅಡಿಕೆ ಎಲೆ ಬೇಕೆ ಬೇಕು. ದೇವರ ಪೂಜೆಯಿಂದ ಹಿಡಿದು ತಿನ್ನುವವರೆಗೂ ಅತಿ ಹೆಚ್ಚಿನ ಉಪಯೋಗ ದೊರೆಯುತ್ತದೆ. ಸಮಸ್ಯೆಗಳಿಲ್ಲದೆ ಮನುಷ್ಯ ಇರುವುದೇ ಇಲ್ಲ ಹಾಗಾಗಿ ಸರ್ವ ರೋಗಕ್ಕೂ ಮನೆ ಮದ್ದು ವೀಳ್ಯದೆಲೆ ಎನ್ನುವ ಮಾತಿದೆ.
ಎನ್‌ಸಿಬಿಐ (ನ್ಯಾಷನಲ್ ಸೆಂಟರ್ ಫಾರ್ ಬಯೋಟೆಕ್ನಾಲಜಿ ಇನ್ಫರ್ಮೇಷನ್) ನಲ್ಲಿ ಪ್ರಕಟವಾದ ಪಬ್‌ಮೆಡ್ ಸೆಂಟ್ರಲ್‌ನ ಸಂಶೋಧನೆಯ ಪ್ರಕಾರ, ವೀಳ್ಯದೆಲೆಯು ಆಂಟಿಡಯಾಬಿಟಿಕ್ ಮಧುಮೇಹವನ್ನು ನಿಯಂತ್ರಿಸುತ್ತದೆ, ಆಂಟಿಯುಲ್ಸರ್ ಹುಣ್ಣಿನ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ, ಉರಿಯೂತವನ್ನು ನಿವಾರಿಸುತ್ತದೆ, ಉತ್ಕರ್ಷಣ ನಿರೋಧಕ ಮತ್ತು ಕ್ಯಾನ್ಸರ್ ವಿರೋಧಿ ಗುಣಗಳನ್ನು ಹೊಂದಿದೆ. ಇದು ನಿಮ್ಮ ಒಟ್ಟಾರೆ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ಆದರೆ ವೀಳ್ಯದೆಲೆಯಲ್ಲಿ ತಂಬಾಕನ್ನು ಬಳಸದಿರುವುದು ಅವಶ್ಯಕ.
ಏನ್ ಸಿ ಬಿ ಐ ಅಧ್ಯಯನವು ಇಲಿಗಳ ಮೇಲೆ ನಡೆಸಿದ ಸಂಶೋಧನೆಯ ಪ್ರಕಾರ, ವೀಳ್ಯದೆಲೆಯು ಆಂಟಿ-ಹೈಪರ್ಗ್ಲೈಸೆಮಿಕ್ ಗುಣಲಕ್ಷಣಗಳನ್ನು ಹೊಂದಿದೆ, ಇದು ರಕ್ತದಲ್ಲಿನ ಗ್ಲೂಕೋಸ್ ಅನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಟೈಪ್ 2 ಡಯಾಬಿಟಿಸ್‌ನಲ್ಲಿ ವೀಳ್ಯದೆಲೆಯನ್ನು ಸೇವಿಸಲು ವೈದ್ಯರು ಶಿಫಾರಸು ಮಾಡುತ್ತಾರೆ.
NCBI ಸಂಶೋಧನಾ ಪ್ರಬಂಧದ ಪ್ರಕಾರ, ವೀಳ್ಯದೆಲೆಯು ಉತ್ಕರ್ಷಣ ನಿರೋಧಕ ಮತ್ತು ಆಂಟಿಮೈಕ್ರೊಬಿಯಲ್ ಔಷಧೀಯ ಗುಣಗಳನ್ನು ಹೊಂದಿದೆ. ಈ ಗುಣಲಕ್ಷಣಗಳು ಕೆಮ್ಮಿನಿಂದ ಉಪಶಮನವನ್ನು ನೀಡಬಲ್ಲವು ಮತ್ತು ಸೋಂಕನ್ನು ತೆಗೆದುಹಾಕುವ ಮೂಲಕ ಮತ್ತು ಕೆಮ್ಮಿನ ಸಮಯದಲ್ಲಿ ದಟ್ಟಣೆಯನ್ನು ತೊಡೆದುಹಾಕುವ ಮೂಲಕ ಗಂಟಲನ್ನು ಆರಾಮಗೊಳಿಸುತ್ತದೆ.
ಕ್ಯಾನ್ಸರ್ ತಡೆಗಟ್ಟುವಿಕೆ ಪಬ್‌ಮೆಡ್ ಸೆಂಟ್ರಲ್‌ನ ಸಂಶೋಧನೆಯ ಪ್ರಕಾರ, ವೀಳ್ಯದೆಲೆಯ ಸಾರಗಳು ಕ್ಯಾನ್ಸರ್ ವಿರೋಧಿ ಗುಣಲಕ್ಷಣಗಳನ್ನು ಹೊಂದಿರುತ್ತವೆ, ಇದು ಕ್ಯಾನ್ಸರ್ ಬೆಳವಣಿಗೆಯನ್ನು ತಡೆಯಲು ಸಹಾಯ ಮಾಡುತ್ತದೆ. ಕ್ಯಾನ್ಸರ್-ವಿರೋಧಿ ಗುಣಲಕ್ಷಣಗಳು ಗೆಡ್ಡೆಗಳ ಬೆಳವಣಿಗೆಯನ್ನು ತಡೆಯುವಲ್ಲಿ ಪರಿಣಾಮಕಾರಿ ಎಂದು ಸಾಬೀತುಪಡಿಸಬಹುದು. ಇದರೊಂದಿಗೆ, ಇದು ಕ್ಯಾನ್ಸರ್ ತಡೆಗಟ್ಟುವಲ್ಲಿ ಸಹ ಸಹಾಯ ಮಾಡುತ್ತದೆ.
ಮಕ್ಕಳಲ್ಲಿ ನೆಗಡಿ, ಕೆಮ್ಮು , ಕಫ ಇರುವವರಿಗೆ ವೀಳ್ಯದೆಲೆಯ ರಸ ಅದಕ್ಕೆ ಬಿಳಿ ಈರುಳ್ಳಿಯ ರಸ ಹಾಗೂ ಜೇನುತುಪ್ಪ ಬೆರೆಸಿ, ಅದರಲ್ಲಿ ಶುದ್ಧ ಇಂಗನ್ನು ಸೇರಿಸಿ ದಿನಕ್ಕೆ 3 ರಿಂದ 4 ಬಾರಿ ಸೇವಿಸಿದರೆ ತುಂಬಾ ಪರಿಣಾಮಕಾರಿ.
ವೀಳ್ಯದೆಲೆಯಲ್ಲಿ ಕ್ಯಾಲ್ಸಿಯಂ ಅಂಶ ಹೆಚ್ಚಿರುವುದರಿಂದ ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ. ಜತೆಗೆ ಗ್ಯಾಸ್ಟ್ರಿಕ್ ಟ್ರಬಲ್ ಅನ್ನು ಬಹುಮಟ್ಟಿಗೆ ಗುಣಪಡಿಸುತ್ತದೆ.
ಮಕ್ಕಳಲ್ಲಿ ಉಸಿರಾಟದ ತೊಂದರೆಯಾದಾಗ ಎಣ್ಣೆ ಸವರಿ, ಬಾಣಲೆಯಲ್ಲಿ ಬೆಚ್ಚಗೆ ಮಾಡಿದ ವೀಳ್ಯದೆಲೆ ಯನ್ನು ಎದೆಯ ಮೇಲಿಡುವುದರಿಂದ ಉಸಿರಾಟದ ತೊಂದರೆಗೆ ಮುಕ್ತಿ.
ಕೂದಲು ಉದುರುವಿಕೆಗೆ 2 ಕಪ್ ಕೊಬ್ಬರಿ ಎಣ್ಣೆಗೆ ಅರ್ಧ ಕಪ್ ವಿಳ್ಯದೆಲೆ ರಸ ಮತ್ತು ಅರ್ಧ ಕಪ್ ಒಂದೆಲಗ ರಸ ಬೆರೆಸಿ ಚೆನ್ನಾಗಿ ಕುದಿಸಿ ನಿತ್ಯ ಹಚ್ಚಿ ಮಾಲೀಸು ಮಾಡಿದರೆ ಕೂದಲು ಸೊಂಪಾಗಿ ಬೆಳೆಯುತ್ತದೆ.
ವೀಳ್ಯದೆಲೆಯನ್ನು ಕತ್ತರಿಸಿ ನೀರಿನಲ್ಲಿ ಹಾಕಿ ಕುದಿಸಿ, ಬಳಿಕ ಸೋಸಿ ಕಷಾಯಕ್ಕೆ ಉಪ್ಪು ಬೆರೆಸಿ ಬಾಯಿ ಮುಕ್ಕಳಿಸಿದರೆ ವಸಡಿನ ನೋವು, ಊತ ಗುಣವಾಗುತ್ತದೆ.
ತೀವ್ರ ಹಲ್ಲು ನೋವಿದ್ದಾಗ ವೀಳ್ಯದೆಲೆಯ ರಸದಲ್ಲಿ ಲವಂಗದ ಹುಡಿಯನ್ನು ಬೆರೆಸಿ ಅದರಲ್ಲಿ ಅದ್ದಿದ ಹತ್ತಿಯನ್ನು ನೋವಿರುವ ಭಾಗದಲ್ಲಿ ಇರಿಸಿಬೇಕು.
ಗರ್ಭಿಣಿ ಸ್ತ್ರೀಯರಲ್ಲಿ ವಾಕರಿಕೆ ,ಬಿಕ್ಕಳಿಕೆ ಉಂಟಾದಾಗ 2 ವೀಳ್ಯದೆಲೆಯಲ್ಲಿ ಅಡಿಕೆಯ ಚೂರನ್ನು ಇಟ್ಟು ಜತೆಗೆ 4 ಏಲಕ್ಕಿ ಕಾಳು ಇಟ್ಟು ಜಗಿದು ರಸ ಹೀರಿದರೆ ಶಮನಕಾರಿ.
ಗಾಯ ಉಂಟಾದಾಗ ತುರಿಕೆ ಕಜ್ಜಿಗಳಿಗೆ ವೀಳ್ಯದೆಲೆ ರಸದಲ್ಲಿ ನಾಲ್ಕರಿಂದ ಆರು ಹನಿಯಷ್ಟು ನಿಂಬೆರಸ ಬೆರೆಸಿ ಹಚ್ಚಿದರೆ ಬೇಗ ಗುಣವಾಗುತ್ತದೆ. ವೀಳ್ಯದೆಲೆಯನ್ನು ಕಾವಲಿಯ ಮೆಲೆ ಬೆಚ್ಚಗೆ ಮಾಡಿ ಅದಕ್ಕೆ ಕರ್ಪೂರ ಬೆರೆಸಿ ಕೊಬ್ಬರಿ ಎಣ್ಣೆಯನ್ನು ಲೇಪಿಸಿ, ಹಣೆಗೆ ಶಾಖ ನೀಡಿದರೆ ತಲೆನೋವು ಕಡಿಮೆಯಾಗುತ್ತದೆ.
ಬಾಯಿಯ ಆರೋಗ್ಯ ಮತ್ತು ಹಲ್ಲಿನ ಚಿಕಿತ್ಸೆಗೆ ಪ್ರಯೋಜನಕಾರಿ ಹಲ್ಲುಗಳನ್ನು ಬಲಪಡಿಸಲು ಮತ್ತು ಬಾಯಿಯ ಆರೋಗ್ಯವನ್ನು ಕಾಪಾಡಿಕೊಳ್ಳಲು ವೀಳ್ಯದೆಲೆಗಳನ್ನು ಬಳಸಬಹುದು. ಬ್ಯಾಕ್ಟೀರಿಯಾದಿಂದ ಹಲ್ಲುಗಳಿಗೆ ಆಗುವ ಹಾನಿಯನ್ನು ಗುಣಪಡಿಸುವಲ್ಲಿ ವೀಳ್ಯದೆಲೆ ಔಷಧಿಯಂತೆ ಕೆಲಸ ಮಾಡುತ್ತದೆ. ಇದರೊಂದಿಗೆ, ಬ್ಯಾಕ್ಟೀರಿಯಾದಿಂದ ಉಂಟಾಗುವ ಬಾಯಿಯ ಸೋಂಕನ್ನು ನಿವಾರಿಸಲು ಸಹ ಇದು ಕೆಲಸ ಮಾಡುತ್ತದೆ.
ಜೀರ್ಣಕ್ರಿಯೆ ಉತ್ತಮವಾಗುತ್ತದೆ ಜೀರ್ಣಕ್ರಿಯೆಯ ಸಮಸ್ಯೆಗಳಿಂದ ಪರಿಹಾರ ಪಡೆಯಲು ವೀಳ್ಯದೆಲೆಯನ್ನು ಸಹ ಬಳಸಬಹುದು. ಏಕೆಂದರೆ ವೀಳ್ಯದೆಲೆಯನ್ನು ಜಗಿಯುವುದರಿಂದ ಉತ್ಪತ್ತಿಯಾಗುವ ಲಾಲಾರಸವು ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ವೀಳ್ಯದೆಲೆಯಲ್ಲಿ ಕಂಡುಬರುವ ಜೀರ್ಣಕಾರಿ ಗುಣಗಳು ಇದಕ್ಕೆ ಕಾರಣ.