Health tips: ಸಿಗರೇಟ್ ಸೇವನೆ ಬಿಡಲು ಯೋಚಿಸುತ್ತಿದ್ದೀರಾ?? ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ ನೋಡಿ!!

ಪ್ರತಿಯೊಬ್ಬರಿಗೂ ಒಂದಲ್ಲ ಒಂದು ಹವ್ಯಾಸ ರೂಡಿಯಾಗಿರುತ್ತದೆ. ಕೆಲವರಿಗೆ ಕಾಫಿ ಕುಡಿಯುವ ಹವ್ಯಾಸ ಇದ್ದರೆ ಮತ್ತೆ ಕೆಲವರಿಗೆ ಹೆಚ್ಚು ಮಾತಾಡುವ,ಹಾಡುವ , ಚಿತ್ರ ಬಿಡಿಸುವ, ಇಲ್ಲವೇ ಸಿಗರೇಟ್, ಮದ್ಯಪಾನ ಹೀಗೆ ನಾನಾ ರೀತಿಯ ಅಭ್ಯಾಸ ಬೆಳೆಸಿಕೊಂಡಿರುತ್ತಾರೆ

ಈಗಿನ ದಿನಗಳಲ್ಲಿ ಯುವಕರಿಂದ ಹಿಡಿದು ದೊಡ್ಡವರು ಕೂಡ ಧೂಮಪಾನ ಮಾಡುವುದು ಸಾಮಾನ್ಯ. ಸಿಗರೇಟ್ ಪ್ಯಾಕೆಟ್ ಮೇಲೆ ಇರುವ ಎಚ್ಚರಿಕೆಯನ್ನು ಎಷ್ಟೇ ಸಲ ಓದಿದರೂ ಈ ಕೆಟ್ಟ ಚಟದಿಂದ ಮುಕ್ತಿ ಪಡೆಯುವುದು ತುಂಬಾ ಕಠಿಣವಾಗಿದ್ದು, ಸಿಗರೇಟ್ ನಲ್ಲಿರುವ ನಿಕೋಟಿನ್ ಅಂಶ ಸಿಗರೇಟ್ ಸೇದಲು ಉತ್ತೇಜಿಸುತ್ತದೆ. ಏಷ್ಟೋ ಬಾರಿ ಸಿಗರೇಟ್ ಸೇದುವ ಅಭ್ಯಾಸ ಬಿಡಬೇಕು ಎಂದುಕೊಂಡರು ಹೇಳಿದಷ್ಟು ಸುಲಭವಲ್ಲ!!

ಆಧುನಿಕ ಯುಗದಲ್ಲಿ ಬೀಡಿ ಸಿಗರೇಟು ಸೇವನೆ ಒಂದು ಫ್ಯಾಶನ್ ಆಗಿಬಿಟ್ಟಿದ್ದು, ಬಿಸ್ ನೆಸ್ ಕ್ಷೇತ್ರದಲ್ಲಂತೂ ಇದಿಲ್ಲದೆ ಮಾತೇ ನಡೆಯುವುದಿಲ್ಲ ಎಂಬಂತಹ ಪರಿಸ್ಥಿತಿ ಉಂಟಾಗಿಬಿಟ್ಟಿದೆ.

ಆರೋಗ್ಯಕ್ಕೆ ಇದು ಹಾನಿಕಾರಕ ಎಂಬ ಅರಿವಿದ್ದರೂ ಅದನ್ನು ಎಳೆಯುವ ಉಮೇದು ಇನ್ನೂ ಹೆಚ್ಚಾಗಿದೆ. ಧೂಮಪಾನವನ್ನು ಹೆಚ್ಚು ಹೆಚ್ಚು ಅಂಟಿಕೊಂಡಷ್ಟು ಅದು ಜನರನ್ನು ಹೆಚ್ಚು ಆವರಿಸುತ್ತಾ ಹೋಗುತ್ತದೆ.

ಈ ವ್ಯಸನವನ್ನು ತ್ಯಜಿಸಲೇಬೇಕೆಂಬ ಕಠಿಣ ನಿರ್ಧಾರ ಹಾಗೂ ಅದಕ್ಕೆ ಪೂರಕವಾಗಿ ನಡೆದುಕೊಂಡರೆ ಧೂಮಪಾನವನ್ನು ತ್ಯಜಿಸಬಹುದು. ಇಲದಿದ್ದರೆ, ಇದು ಅನೇಕ ಗಂಭೀರ ಸಮಸ್ಯೆಗಳಿಗೆ ಕಾರಣವಾಗುತ್ತದೆ.

ಇದನ್ನು ಅರಿತು ಕೆಲವರು ಈ ಅಭ್ಯಾಸವನ್ನು ಬಿಡಲು ಪ್ರಯತ್ನಿಸುತ್ತಿರುತ್ತಾರೆ. ಇದಕ್ಕೆ ಸಿಂಪಲ್ಸ್ ಟಿಪ್ಸ್ ಗಳು ಇಲ್ಲಿವೆ. ಜಾಗತಿಕವಾಗಿ ಕ್ಯಾನ್ಸರ್ ಬರಲು ಒಂದು ದೊಡ್ಡ ಕಾರಣವೆಂದರೆ ತಂಬಾಕು ಅಥವಾ ಧೂಮಪಾನ. ಇದು ಅನೇಕ ಮಾರಣಾಂತಿಕ ಕಾಯಿಲೆಗಳಿಗೆ ಕಾರಣವಾಗಬಹುದು.

ಅವುಗಳಲ್ಲಿ ಶ್ವಾಸಕೋಶ, ಕೊಲೊನ್, ಸ್ತನ, ಗಂಟಲು, ಗರ್ಭಾಶಯ, ಮೂತ್ರಕೋಶ, ಬಾಯಿ ಮತ್ತು ಅನ್ನನಾಳದ ಕ್ಯಾನ್ಸರ್ಗಳು ಪ್ರಮುಖವಾಗಿವೆ.

ಇದು ದೀರ್ಘಾವಧಿಯ ಪ್ರತಿಕೂಲ ಆರೋಗ್ಯ ಪರಿಣಾಮ ಹೊಂದಿರುವ ವ್ಯಸನಕಾರಿ ಅಭ್ಯಾಸವಾಗಿದ್ದು, ಸಿಗರೆಟ್‍ ತಯಾರಿಸಲು ಅನೇಕ ರಾಸಾಯನಿಕಗಳನ್ನು ಬಳಸಲಾಗುತ್ತದೆ. ಇದು ಚಟವಾಗಿ ಮಾರ್ಪಟ್ಟರೆ ವ್ಯಕ್ತಿಯ ಜೀವಕ್ಕೆ ಕುತ್ತುಂಟಾಗುತ್ತದೆ.

ತಂಪು ಪಾನೀಯಗಳು, ಚಹಾ ಮತ್ತು ಕಾಫಿ ಇವೆಲ್ಲವೂ ಸಿಗರೇಟಿನ ನಶೆಯನ್ನು ಹೆಚ್ಚಿಸಲು ಮತ್ತು ಸಿಗರೇಟನ್ನು ಮತ್ತಷ್ಟು ರುಚಿಕರ ಮಾಡಲು ನೆರವಾಗುತ್ತವೆ. ಹಾಗಾಗಿ ಈ ಹವ್ಯಾಸ ಬಿಟ್ಟರೆ ಒಳಿತು. ಕೆಲವರು ಒತ್ತಡ ಹೆಚ್ಚಾದಾಗ ಸಿಗರೇಟು ಸೇದುವ ಅಭ್ಯಾಸ ಬೆಳೆಸಿಕೊಳ್ಳುತ್ತಾರೆ. ಆದರೆ ಸಿಗರೇಟು ಸೇದುವ ಬದಲಿಗೆ ಒತ್ತಡವನ್ನು ನಿಭಾಯಿಸಲು ಬೇರೆ ಹವ್ಯಾಸ ಬೆಳೆಸಿಕೊಂಡರೆ ಒಳ್ಳೆಯದು.

ಧೂಮಪಾನವನ್ನು ಬಿಡಲು ಮೊದಲು ಅದಕ್ಕೆ ಒಂದು ಕಾರಣವನ್ನು ಹುಡುಕಿಕೊಳ್ಳಬೇಕು. ಈ ರೀತಿ ಮಾಡುವುದರಿಂದ, ಆ ಕಾರಣದಿಂದ ಪ್ರೇರಿತರಾದರೆ ಸಿಗರೇಟ್ ಸೇದುವ ಅಭ್ಯಾಸ ಬಿಡಬಹುದು. ಸಿಗರೇಟ್ ಧೂಮಪಾನದ ನಿಲ್ಲಿಸುವ ಅಪ್ಲಿಕೇಶನ್‌ಗಳು, ತರಗತಿಗಳು, ಸಮಾಲೋಚನೆ, ಸಲಹೆಗಳು ಇತ್ಯಾದಿಗಳ ಕುರಿತು ವೈದ್ಯರಿಂದ ಮೊದಲು ಮಾಹಿತಿಯನ್ನು ಪಡೆಯಬಹುದಾಗಿದೆ.

ಎರಡು ಚಮಚ ಬೇಕಿಂಗ್ ಸೋಡಾವನ್ನು ನೀರಿನಲ್ಲಿ ಬೆರೆಸಿ ಪ್ರತಿ ಬಾರಿ ಊಟವಾದ ಮೇಲೆ ಸೇವಿಸಬಹುದು. ಇಲ್ಲವೇ, . ಹಾಲು, ಕ್ಯಾರೆಟ್, ಹಣ್ಣುಗಳು ಮತ್ತು ತರಕಾರಿಗಳು ಸಿಗರೇಟು ಸೇದುವ ಮುನ್ನ ಸೇವಿಸಿದ್ದರೆ ಸಿಗರೇಟನ್ನು ಕಹಿಯನ್ನಾಗಿಸುತ್ತದೆ. ಸಿಗರೇಟು ಬೇಡ ಅನ್ನಿಸುವ ಹಾಗೆ ಮಾಡಬಹುದು.

ನಿಕೋಟಿನ್ ಸೇವನೆಯ ಮಾಡಬೇಕು ಎಂದೇನಿಸಿದರೆ ನಿಕೋಟಿನ್ ಬದಲಿಗೆ ಗಮ್, ಲೋಜೆಂಜಸ್, ಪ್ಯಾಚ್‌ಗಳು ಇತ್ಯಾದಿಗಳನ್ನು ಬಳಸಬಹುದು. ಹಾಗೆಯೇ ಡ್ರೈ ಫ್ರೂಟ್ಸ್ ಗಳನ್ನು ಸೇವಿಸಬಹುದಾಗಿದೆ.

ಪ್ರತಿದಿನ ಮಾಡುವ ವ್ಯಾಯಾಮವು ಒತ್ತಡ ನಿಭಾಯಿಸಲು ಮತ್ತು ಒತ್ತಡದ ಮನಸ್ಥಿತಿಯನ್ನು ಸುಧಾರಿಸಲು ಸಹಕಾರಿಯಾಗುತ್ತದೆ. ಇದರ ಜೊತೆಗೆ ಜಾಗಿಂಗ್ ಅಥವಾ ಧೀರ್ಘ ನಡಿಗೆಯಿಂದ ಆರೋಗ್ಯವು ಸುಧಾರಿಸುತ್ತದೆ.

ಮದ್ಯಪಾನ ಮಾಡುವ ಅಭ್ಯಾಸ ಹೊಂದಿದ್ದರೆ, ನಿಮಗೆ ಸಿಗರೇಟಿನ ಹಂಬಲವಾಗಬಹುದು. ಅಂತಹ ಪರಿಸ್ಥಿತಿಯಲ್ಲಿ ಪ್ರಚೋದಿಸುವ ವಿಷಯಗಳನ್ನು ತಪ್ಪಿಸಬೇಕು.

ಸಿಗರೇಟ್ ಸೇದುವ ಸ್ಥಳಗಳನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿ, ಕೆಲವೊಮ್ಮೆ ಈ ವಸ್ತುಗಳ ವಾಸನೆಯು ನಿಮಗೆ ಸಿಗರೇಟ್ ಬೇಕು ಅನಿಸುತ್ತದೆ.

ಒಂದು ವರದಿಯ ಪ್ರಕಾರ ಜಿನ್ಸೆಂಗ್ ಎಂಬ ಶುಂಠಿಯಂತಹ ಗಡ್ಡೆಯ ರಸದ ಸೇವನೆಯಿಂದ ಡೋಪಮೈನ್ ಎಂಬ ನರಪ್ರಚೋದಕ ಹಾರ್ಮೋನೊಂದು ಬಿಡುಗಡೆಯಾಗುತ್ತದೆ.

ಇದು ಸಿಗರೇಟು ಸೇದಿದಾಗ ಸಿಗುವಂತಹ ಪರಿಣಾಮವನ್ನೇ ನೀಡುವ ಕಾರಣ ಸಿಗರೇಟು ಸೇದುವ ಬಯಕೆಯುಂಟಾಗುವುದಿಲ್ಲ. ಇದು ಧೂಮಪಾನ ತ್ಯಜಿಸುವವರಿಗೆ ವರದಾನವಾಗಿದೆ.

ನಿಯಮಿತವಾದ ಸೇವನೆಯಿಂದ ದಿನವೂ ಕೊಂಚಕೊಂಚವಾಗಿ ಸಿಗರೇಟಿನ ಪ್ರಮಾಣವನ್ನು ಕಡಿಮೆ ಮಾಡುತ್ತಾ ಬರುತ್ತದೆ.

Leave A Reply

Your email address will not be published.