ನವೆಂಬರ್ ನಲ್ಲಿ ಬಿಡುಗಡೆಯಾಗಲಿದೆ ಈ 5 ಕಾರುಗಳು ! ಇದರ ವೈಶಿಷ್ಟ್ಯತೆಗಳೇನು?

Share the Article

ವಾಹನ ಬಳಕೆಯ ಪ್ರಮಾಣವು ನಿರಂತರವಾಗಿ ಹೆಚ್ಚುತ್ತಿದೆ. ಹೀಗಾಗಿ ಪ್ರಮುಖ ಕಾರು ಉತ್ಪಾದನಾ ಕಂಪನಿಗಳು ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಹಲವು ಹೊಸ ಕಾರು ಮಾದರಿಗಳನ್ನು ಬಿಡುಗಡೆ ಮಾಡುತ್ತಿವೆ.

ವಾಹನ ಮಾರುಕಟ್ಟೆಯಲ್ಲಿ ಸದ್ಯ ಹೊಸ ಕಾರುಗಳ ಮಾರಾಟವು ಸಾಕಷ್ಟು ಬೇಡಿಕೆ ಪಡೆದುಕೊಳ್ಳುತ್ತಿದ್ದು, ಶೀಘ್ರದಲ್ಲಿಯೇ ಪ್ರಮುಖ ಕಾರು ಕಂಪನಿಗಳು ತಮ್ಮ ಬಹುನೀರಿಕ್ಷಿತ ಮಾದರಿಗಳನ್ನು ಬಿಡುಗಡೆ ಮಾಡಲು, ಈ ವಿಷಯಗಳನ್ನು ತಿಳಿದುಕೊಳ್ಳುವುದು ಉತ್ತಮ. ಏಕೆಂದರೆ ಮುಂದಿನ ತಿಂಗಳು ನವೆಂಬರ್ ನಲ್ಲಿ ಐದು ಕಾರುಗಳು ಭಾರತೀಯ ಮಾರುಕಟ್ಟೆಗೆ ಬಿಡುಗಡೆಯಾಗಲಿವೆ.

ಇದರಲ್ಲಿ ಐದು ವಾಹನಗಳಲ್ಲಿ ಒಂದು ಎಲೆಕ್ಟ್ರಿಕ್, (Electric) ಒಂದು ಸಿಎನ್ಜಿ (CNG) ಮತ್ತು ಮೂರು ಪೆಟ್ರೋಲ್-ಡೀಸೆಲ್ (Petrol-diesel) ಕಾರುಗಳು ಒಳಗೊಂಡಿವೆ.

ಟೊಯೊಟಾ ಇನೋವಾ ಹೈಕ್ರಾಸ್

ಇತ್ತೀಚೆಗಷ್ಟೇ ಹೈರೈಡರ್ ಎಸ್ಯುವಿಯನ್ನು ಬಿಡುಗಡೆಗೊಳಿಸಿದ್ದ ಟೊಯೋಟಾ ಇನ್ನೋವಾ ಹೈ ಕ್ರಾಸ್ (Innova High cross) ಅನ್ನು ಬಿಡುಗಡೆಗೊಳಿಸಲು ಸಜ್ಜಾಗಿದೆ. ಇತ್ತೀಚೆಗೆ ಅನೇಕ ಸ್ಥಳಗಳಲ್ಲಿ ಪ್ರಾಯೋಗಿಕವಾಗಿ ಗುರುತಿಸಲ್ಪಟ್ಟಿದ್ದು, ಮುಂದಿನ ತಿಂಗಳು ಈ ವಾಹನವನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲು ಭರದ ತಯಾರಿ ನಡೆಯುತ್ತಿದೆ. ಇದು ಪ್ರಸ್ತುತ ಮಾರುಕಟ್ಟೆಯಲ್ಲಿರುವ ಇನೋವಾ ಕ್ರಿಸ್ಟಾ ಮಾದರಿಗಿಂತಲೂ ವಿಭಿನ್ನವಾಗಿದ್ದು, ಹೊಸ ತಲೆಮಾರಿನ ವೈಶಿಷ್ಟ್ಯತೆಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಲಿದೆ.

ಹೊಸ ಇನೋವಾ ಹೈಕ್ರಾಸ್ ಕಾರು ಪ್ರಸ್ತುತ ಮಾರುಕಟ್ಟೆಯಲ್ಲಿರುವ ಪೆಟ್ರೋಲ್ ಜೊತೆಗೆ ಹೆಚ್ಚಿನ ಮೈಲೇಜ್ ಹೊಂದಿರುವ ಹೈಬ್ರಿಡ್ ಮಾದರಿಯೊಂದಿಗೆ ಮಾರುಕಟ್ಟೆ ಪ್ರವೇಶಿಸಲಿದೆ.

ಬಿವೈಡಿ ಆಟ್ಟೋ 3 (BYD Atto 3)

ಚೈನೀಸ್ ತಯಾರಕ ಕಂಪನಿ ಬಿವೈಡಿ ಇಂಡಿಯಾ ಕಂಪನಿಯು ತನ್ನ ಬಹುನೀರಿಕ್ಷಿತ ಅಟ್ಟೊ 3 ಎಲೆಕ್ಟ್ರಿಕ್ ಎಸ್ ಯುವಿ ಮಾದರಿಯನ್ನು ಅನಾವರಣಗೊಳಿಸಿದ್ದು, ಸದ್ಯದಲ್ಲೇ ಬಿಡುಗಡೆ ಮಾಡಲಿದೆ. ಹೊಸ ಕಾರು ಖರೀದಿಗಾಗಿ ಕಂಪನಿಯು ಈಗಾಗಲೇ ರೂ. 50 ಸಾವಿರ ಮುಂಗಡದೊಂದಿಗೆ ಬುಕಿಂಗ್ ಕೂಡಾ ಆರಂಭಿಸಿದ್ದು, ಪ್ರೀಮಿಯಂ ಫೀಚರ್ಸ್, ಅತ್ಯುತ್ತಮ ಬ್ಯಾಟರಿ ಪ್ಯಾಕ್ ಮೂಲಕ ಭಾರೀ ಬೇಡಿಕೆ ಪಡೆದುಕೊಳ್ಳಲಿದೆ.

ಅಟ್ಟೊ 3 ಚೈನೀಸ್ ಕಂಪನಿಯ ಮೊದಲ ಎಲೆಕ್ಟ್ರಿಕ್ SUV ಆಗಿರಲಿದೆ. ಕಂಪನಿಯು ಮುಂದಿನ ತಿಂಗಳು ಇದರ ವಿತರಣೆಯನ್ನು ಪ್ರಾರಂಭಿಸಬಹುದು ಎಂದು ನಿರೀಕ್ಷಿಸಲಾಗಿದೆ. ಈ ಕಾರು ಉತ್ತಮ ಶ್ರೇಣಿ ಮತ್ತು ಹಲವು ಉತ್ತಮ ವೈಶಿಷ್ಟ್ಯಗಳೊಂದಿಗೆ ಮಾರುಕಟ್ಟೆಯನ್ನು ಪ್ರವೇಶಿಸಲಿದೆ .

ಮಾರುತಿ ಬಲೆನೊ 2022 ಸಿಎನ್ಜಿ (Cng)

ಮಾರುತಿ ಸುಜುಕಿ ತನ್ನ ಬಲೆನೊ ಅನ್ನು ಸಿಎನ್ಜಿ ವೇರಿಯಂಟ್ಗಳಲ್ಲಿ ಬಿಡುಗಡೆ ಮಾಡಲು ತಯಾರಿ ನಡೆಸುತ್ತಿದೆ. ಈ ಕಾರು ಈಗಾಗಲೇ ಮಾರುಕಟ್ಟೆಯಲ್ಲಿ ಜನಪ್ರಿಯತೆ ಗಳಿಸಿದ್ದು, ಗ್ರಾಹಕರು ಸಿಎನ್ಜಿ ಮಾದರಿಯನ್ನು ಖರೀದಿಸಲಿದ್ದಾರೆ ಎಂದು ಕಂಪನಿ ಭರವಸೆ ಹೊಂದಿದೆ.

5 ಆಸನದ ಈ ಹ್ಯಾಚ್ಬ್ಯಾಕ್ 6.42 ಲಕ್ಷ ರೂ.ಗಳಿಂದ 9.60 ಲಕ್ಷ ರೂ.ಗಳವರೆಗೆ ಲಭ್ಯವಿದೆ. ಇದು 22.3 ಇಂದ 22.9 ಕಿಮೀ ಮೈಲೇಜ್ ನೀಡುತ್ತದೆ. ಇದು 7 ವೇರಿಯಂಟ್ಗಳಲ್ಲಿ ಲಭ್ಯವಿದೆ.

ಹೊಸ ಪೀಳಿಗೆಯ ಎಂಜಿ ಹೆಕ್ಟರ್ (MG Hector)

ಎಂಜಿ ಮೋಟಾರ್ ಕಂಪನಿಯು ಇದೇ ತಿಂಗಳಾಂತ್ಯಕ್ಕೆ 2022ರ ಹೆಕ್ಟರ್ ಎಸ್ ಯುವಿ ಬಿಡುಗಡೆ ಮಾಡಲಿದ್ದು, ಹೊಸ ಕಾರು ಪ್ರಮುಖ ಫೀಚರ್ಸ್ ಗಳೊಂದಿಗೆ ಭರ್ಜರಿ ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಿದೆ.

ಹೊಸ ಕಾರಿನಲ್ಲಿ ಕಂಪನಿಯು ಈ ಬಾರಿ ಎಡಿಎಎಸ್(ಅಡ್ವಾನ್ಸ್ ಡ್ರೈವರ್ ಅಸಿಸ್ಟ್ ಸಿಸ್ಟಂ) ಜೋಡಣೆ ಮಾಡಲಿದ್ದು, MG ಯ ಈ SUV ಅನೇಕ ಸುಧಾರಿತ ವೈಶಿಷ್ಟ್ಯಗಳೊಂದಿಗೆ ಬರಲಿದ್ದು, ಬಿಡುಗಡೆಯ ನಂತರ ಈ ಎಸ್ಯುವಿ (SUV) ಕಂಪನಿಯ ಬೆಳವಣಿಗೆಗೆ ಸಹಾಯ ಮಾಡುತ್ತದೆ ಎಂದು ನಿರೀಕ್ಷಿಸಲಾಗಿದೆ.

ಈ ಹಿಂದೆ ಬಿಡುಗಡೆಗೊಳಿಸಿದ್ದ ಎಂ.ಜಿ. ಹೆಕ್ಟರ್, ಆಟೊಮೊಬೈಲ್ ವಲಯದಲ್ಲಿ ಹೊಸ ಕ್ರಾಂತಿ ಮೂಡಿಸಿತ್ತು. ಎಂ.ಜಿ. ಹೆಕ್ಟರ್ನ ದರ 14.42 ಲಕ್ಷ ರೂ.ಗಳಿಂದ ಆರಂಭವಾಗುತ್ತದೆ. ಇದು ಪೆಟ್ರೋಲ್, ಡೀಸೆಲ್ ಹಾಗೂ ಹೈಬ್ರಿಡ್ ವೇರಿಯಂಟ್ಗಳಲ್ಲಿ ಲಭ್ಯವಿದೆ.

ಜೀಪ್ ಗ್ರ್ಯಾಂಡ್ ಚೆರೋಕೀ

ಈ ಪಟ್ಟಿಯಲ್ಲಿ ಎರಡನೇ ಹೆಸರು ಜೀಪ್ ಗ್ರ್ಯಾಂಡ್ ಚೆರೋಕೀ (Jeep Grand Cherokee). ಜೀಪ್ ಗ್ರ್ಯಾಂಡ್ ಚೆರೋಕೀ ಪ್ರೀಮಿಯಂ ಅನ್ನು ವಿಭಾಗದಲ್ಲಿ ಮುಂದಿನ ತಿಂಗಳು ಮಾರುಕಟ್ಟೆಯಲ್ಲಿ ಪರಿಚಯಿಸಲಾಗುವುದು.

ಈ ಜೀಪ್ ಕಾರು ಪ್ರೀಮಿಯಂ ವಿಭಾಗದಲ್ಲಿ ಹೊಸ ಕ್ರಾಂತಿ ಉಂಟುಮಾಡಬಹುದು ಎಂದು ನಿರೀಕ್ಷಿಸಲಾಗುತ್ತಿದೆ. ಅದರ ಎಂಜಿನ್ ಮತ್ತು ವೈಶಿಷ್ಟ್ಯಗಳು ಬಹಳಷ್ಟು ನವೀಕರಣಗಳನ್ನು ಹೊಂದಲಿದೆ. ಇದರ ಬೆಲೆ 75.15 ಲಕ್ಷ ರೂ.ಗಳಿಂದ 1.14 ಕೋಟಿ ರೂ.ಗಳವರೆಗೆ ಇರಲಿದೆ ಎಂದು ಅಂದಾಜಿಸಲಾಗಿದೆ.

Leave A Reply

Your email address will not be published.