LIC : 3 ಲಕ್ಷ ಹೂಡಿಕೆ ಮಾಡಿದರೆ ನಿಮಗೆ ದೊರೆಯುತ್ತೆ 14 ಸಾವಿರ ಪಿಂಚಣಿ

ಎಲ್‌ಐಸಿ ಹೂಡಿಕೆಯು ನಮ್ಮ ಸುರಕ್ಷಿತ ಹೂಡಿಕೆಗಳಲ್ಲಿ ಒಂದಾಗಿದೆ. ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ಸರಳ ಪಿಂಚಣಿ ಯೋಜನೆಯು ಒಂದೇ ಪ್ರೀಮಿಯಂ ಅನ್ನು ಹೊಂದಿರುವ ಹೂಡಿಕೆಯಾಗಿದೆ.

ಜನರಿಗೆ ಜೀವ ವಿಮೆ ಪ್ರಯೋಜನ ನೀಡುವ ಜೊತೆಗೆ ಉಳಿತಾಯ ಮಾಡಲು ಪ್ರೇರೇಪಿಸುತ್ತದೆ.

ಪೂರ್ವನಿರ್ಧರಿತ ಅವಧಿಯವರೆಗೆ ಪಾಲಿಸಿದಾರರ ಅಕಾಲಿಕ ಮರಣದ ಸಂದರ್ಭದಲ್ಲಿ ಪಾಲಿಸಿದಾರರ ಜೀವಿತಾವಧಿಯಲ್ಲಿ ವಿವಿಧ ಹಣಕಾಸಿನ ಅಗತ್ಯಗಳನ್ನು ಪೂರೈಸಲು ನೆರವಾಗುವ ಜೊತೆಗೆ ಕೆಲ ಪಾಲಿಸಿಗಳು ಸಾಲ ಸೌಲಭ್ಯದ ಮೂಲಕವು ಜನರಿಗೆ ನೆರವಾಗುತ್ತದೆ.

ಭಾರತೀಯ ಜೀವ ವಿಮಾ ನಿಗಮವು ನವೀನ ಮತ್ತು ಲಾಭದಾಯಕ ನೀತಿಗಳನ್ನು ನಿರಂತರವಾಗಿ ತರಲು ಹೆಸರುವಾಸಿಯಾಗಿದೆ.

ಎಲ್‌ಐಸಿ ಲಿಂಕ್ಡ್ ಯೋಜನೆಯಾಗಿರದೆ ಚಾಲ್ತಿಯಲ್ಲಿದ್ದ ಯೋಜನೆಯಲ್ಲಿ ಕೆಲವು ಬದಲಾವಣೆಯನ್ನು ಮಾಡಿದ ಬಳಿಕ ಈ ವರ್ಷದ ಆಗಸ್ಟ್‌ನಲ್ಲಿ ಎಲ್‌ಐಸಿಯ ಸರಳ ಪಿಂಚಣಿ ಯೋಜನೆ ಸಂಖ್ಯೆ 862 ಅನ್ನು ಪರಿಚಯಿಸಿದೆ.

ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರದ (ಐಆರ್‌ಡಿಎಐ) ನಿಯಮಾವಳಿಗಳ ಪ್ರಕಾರ, ಈ ಯೋಜನೆ ತಕ್ಷಣ ವರ್ಷಾಶನ ಒದಗಿಸುವ ಯೋಜನೆಯು ಒಂದು ದೊಡ್ಡ ಮೊತ್ತದ ಪಾವತಿಯ ಮೇಲೆ ವರ್ಷಾಶನದ ಪ್ರಕಾರವನ್ನು ಎರಡು ಪ್ರಕಾರವಾಗಿ ಆಯ್ಕೆ ಮಾಡಲು ಪಾಲಿಸಿದಾರರಿಗೆ ಅವಕಾಶವನ್ನು ನೀಡುತ್ತದೆ.

ಪಾಲಿಸಿಯ ಪ್ರಾರಂಭವು ವರ್ಷಾಶನ ದರಗಳನ್ನು ಖಾತರಿಪಡಿಸುತ್ತದೆ. ವರ್ಷಾಶನದಾರರ ಜೀವನ ಪೂರ್ತಿ ಪಾವತಿಗಳನ್ನು ಮಾಡಲಾಗುತ್ತದೆ.

ಈ ಯೋಜನೆಯಡಿಯಲ್ಲಿ ಎರಡು ವರ್ಷಾಶನ ಆಯ್ಕೆಗಳು ಇದ್ದು, ಜಾಯಿಂಟ್ ಲೈಫ್ ಲಾಸ್ಟ್ ಸರ್ವೈವರ್ ಆನ್ಯುಟಿ ಜೊತೆಗೆ ಎಲ್ಲ ಸರ್ವವೈರ್‌ಗಳ ಮರಣದ ಮೇಲಿನ ಖರೀದಿ ಬೆಲೆಯ ಶೇಕಡ 100ರಷ್ಟು, ಜೀವನ ಪೂರ್ತಿ ವರ್ಷಾಶನದೊಂದಿಗೆ ಶೇಕಡ 100ರಷ್ಟು ಖರೀದಿ ಬೆಲೆಯ ರಿಟರ್ನ್ ದೊರೆಯಲಿದೆ.

ಹೂಡಿಕೆದಾರರು, ಅವರ ಜೀವನ ಸಂಗಾತಿ ಅಥವಾ ಮಕ್ಕಳಿಗೆ ಪಟ್ಟಿ ಮಾಡಲಾದ ಆರೋಗ್ಯ ಸಮಸ್ಯೆ ಉಂಟಾದರೆ ಪಾಲಿಸಿಯನ್ನು ಸರೆಂಡರ್ ಮಾಡಲು ಅವಕಾಶ ನೀಡಲಾದರು ಕೂಡ ಅದಕ್ಕಾಗಿ ಆರೋಗ್ಯ ಸಮಸ್ಯೆಗೆ ಸಂಬಂಧಿತ ಹಲವು ದಾಖಲೆಗಳನ್ನು ಸಲ್ಲಿಸಬೇಕು.

ಈ ಯೋಜನೆಯಲ್ಲಿ ಹೂಡಿಕೆ ಮಾಡಿದ ಆರು ತಿಂಗಳ ಬಳಿಕ ಮಾತ್ರ ಹೂಡಿಕೆಯನ್ನು ಹಿಂದಕ್ಕೆ ಪಡೆಯಲು ಅವಕಾಶವಿದ್ದು, ಅದಕ್ಕೂ ಮೊದಲು ಹೂಡಿಕೆ ಸರೆಂಡರ್ ಮಾಡುವ ಅವಕಾಶವಿಲ್ಲ.

ಪಾಲಿಸಿಯನ್ನು ಆರಂಭ ಮಾಡಿದ ಆರು ತಿಂಗಳ ಬಳಿಕ ಯಾವುದೇ ಸಮಯದಲ್ಲಿ ಪಾಲಿಸಿಯ ಮೇಲೆ ಸಾಲವನ್ನು ಪಡೆಯಬಹುದಾಗಿದೆ.

ನಾಲ್ಕು ವಿಭಿನ್ನ ವರ್ಷಾಶನ ಪಾವತಿಗಳಿದ್ದು, ವಾರ್ಷಿಕ, ಅರೆ-ವಾರ್ಷಿಕ, ತ್ರೈಮಾಸಿಕ ಹಾಗೂ ಮಾಸಿಕವಾಗಿ ಪಾವತಿಯನ್ನು ಮಾಡಲಾಗುತ್ತದೆ.

40 ವರ್ಷ ವಯಸ್ಸಿನಿಂದ 80 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಈ ಎಲ್‌ಐಸಿ ಸರಳ ಪಿಂಚಣಿ ಯೋಜನೆಗೆ ಸೇರಲು ಅರ್ಹರಾಗಿರಲಿದ್ದು, ಸರಳ ಪಿಂಚಣಿ ಯೋಜನೆ ಅಡಿಯಲ್ಲಿ ಕನಿಷ್ಠ ಮಾಸಿಕ ವರ್ಷಾಶನ ಅಥವಾ ಪಿಂಚಣಿ ಸಾವಿರ ರೂಪಾಯಿ ಆಗಿದೆ.

ಯೋಜನೆಯ ಲಾಭ ಪಡೆಯಲು ಬಯಸುವವರು ಕನಿಷ್ಠ ಹೂಡಿಕೆಯನ್ನು ಮಾಡಿ ರೂಪಾಯಿ 1000 ಮಾಸಿಕ ವರ್ಷಾಶನ ಅಥವಾ ರೂ 12000 ವಾರ್ಷಿಕ ಪಿಂಚಣಿ ಪಡೆಯಬಹುದಾಗಿದೆ.

ಎಲ್‌ಐಸಿ ಸರಳ ಪಿಂಚಣಿ ಯೋಜನೆಯಲ್ಲಿ ಹೂಡಿಕೆಯು ಸುಮಾರು ಶೇಕಡ 5ರಷ್ಟು ಲಾಭವನ್ನು ನೀಡಲಿದ್ದು, 41 ನೇ ವಯಸ್ಸಿನಲ್ಲಿ, ಒಮ್ಮೆ ಪಿಂಚಣಿ ಯೋಜನೆಯಲ್ಲಿ ರೂ 2.5 ಲಕ್ಷವನ್ನು ಹೂಡಿಕೆ ಮಾಡಿದರೆ, ಪ್ರತಿ ವರ್ಷ ರೂ 12,300 ಅಥವಾ ಪ್ರತಿ ತಿಂಗಳು ರೂ 1,025 ಪಿಂಚಣಿ ಪಡೆಯಬಹುದು.

3 ಲಕ್ಷ ರೂಪಾಯಿ ಹೂಡಿಕೆ ಮಾಡಿದರೆ ವರ್ಷಕ್ಕೆ 14,760 ರೂಪಾಯಿ ಅಥವಾ ತಿಂಗಳಿಗೆ 1,195 ರೂಪಾಯಿಗಳ ಪಿಂಚಣಿ ಪಡೆಯಲು ಸಾಧ್ಯವಾಗಲಿದೆ.

ಒಂದೇ ಬಾರಿಗೆ 10 ಲಕ್ಷ ರೂಪಾಯಿಗಳನ್ನು ಹೂಡಿಕೆ ಮಾಡಿದರೆ ಮೊದಲ ವರ್ಷಾಶನ ಆಯ್ಕೆ ಮಾಡಿಕೊಂಡರೆ ವರ್ಷಕ್ಕೆ 58,950 ರೂಪಾಯಿಗಳನ್ನು ಮತ್ತು ಎರಡನೇ ವರ್ಷಾಶನ ಆಯ್ಕೆ ಮಾಡಿಕೊಂಡರೆ ವರ್ಷಕ್ಕೆ 58,250 ರೂಪಾಯಿ ಪಿಂಚಣಿಯನ್ನು ಪಡೆಯಬಹುದು.

Leave A Reply

Your email address will not be published.