ದೀಪಾವಳಿಗೆ ಸರ್ಕಾರದಿಂದ ಗುಡ್​ ​ನ್ಯೂಸ್ | ಇವತ್ತು ಸಂಜೆಯೊಳಗೆ ನಿಮ್ಮ ಖಾತೆ ಸೇರುತ್ತೆ ಇಂತಿಷ್ಟು ಹಣ !​

PM Kisan: ಕೇಂದ್ರ ಸರಕಾರ ಪಿಎಂ ಕಿಸಾನ್ ಯೋಜನೆಗೆ ಸಂಬಂಧಿಸಿದ ಹಣವನ್ನು ಬಿಡುಗಡೆ ಮಾಡಿ ಈಗಾಗಲೇ ಒಂದು ವಾರ ಆಗಿದೆ. ಆದರೆ ಇಲ್ಲಿಯವರೆಗೆ ಹಲವು ಮಂದಿ ರೈತರ ಖಾತೆಗೆ ಪಿಎಂ ಕಿಸಾನ್ ಮೊತ್ತ ಜಮಾ ಆಗಿಲ್ಲ. ಇದುವರೆಗೂ ಪಿಎಂ ಕಿಸಾನ್ ಯೋಜನೆಯ ಹಣ ಯಾವ ರೈತರ ಖಾತೆಗೆ ಜಮಾ ಆಗಿಲ್ಲವೋ ಅವರಿಗೆ ಸಂತಸದ ಸುದ್ದಿಯೊಂದು ಬಂದಿದೆ.

ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿಯವರು ಪಿಎಂ ಕಿಸಾನ್ ಯೋಜನೆಯ 12 ನೇ ಕಂತನ್ನು ಬಿಡುಗಡೆ ಮಾಡಿದರು. ಪ್ರಧಾನಿ ನರೇಂದ್ರ ಮೋದಿ ಅವರು ನವದೆಹಲಿಯಲ್ಲಿ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಸಮ್ಮೇಳನ 2022 ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅದೇ ವೇದಿಕೆಯಿಂದ ರೈತರ ಖಾತೆಗಳಿಗೆ ಪಿಎಂ ಕಿಸಾನ್ ಹಣವನ್ನು ಬಿಡುಗಡೆ ಮಾಡಿದರು.

ಕೇಂದ್ರ ಸರ್ಕಾರವು ಪಿಎಂ ಕಿಸಾನ್ ಯೋಜನೆಯ ಭಾಗವಾಗಿ ಇದುವರೆಗೆ 11 ಕಂತುಗಳಲ್ಲಿ ರೂ.2 ಲಕ್ಷ ಕೋಟಿಗಳನ್ನು ಬಿಡುಗಡೆ ಮಾಡಿದೆ. ಇತ್ತೀಚೆಗೆ ಬಿಡುಗಡೆಯಾದ 16,000 ಕೋಟಿ ರೂ.ಗಳ ಜೊತೆಗೆ ಇದುವರೆಗೆ ಒಟ್ಟು 2.16 ಲಕ್ಷ ಕೋಟಿ ರೂ.ಗಳನ್ನು ರೈತರ ಖಾತೆಗೆ ಜಮಾ ಮಾಡಲಾಗಿದೆ.

ಹೀಗಾಗಿ ಇಲ್ಲಿಯವರೆಗೆ ಪಿಎಂ ಕಿಸಾನ್ ಹಣ ಸಿಗದ ರೈತರಿಗೆ ಇಂದು ರಾತ್ರಿಯೊಳಗೆ 12ನೇ ಕಂತು ಜಮೆಯಾಗುವ ಸಾಧ್ಯತೆಗಳಿವೆ. ಪಿಎಂ ಕಿಸಾನ್ ಅಧಿಕೃತ ವೆಬ್‌ಸೈಟ್ https://pmkisan.gov.in/ ನಲ್ಲಿ ಪಿಎಂ ಕಿಸಾನ್ ಹಣವನ್ನು ಠೇವಣಿ ಮಾಡಲಾಗಿದೆಯೇ ಎಂದು ರೈತರು ಪರಿಶೀಲಿಸಬಹುದು.

ಈ ಕೆಳಗೆ ನೀಡಲಾದ ಹಂತಗಳಲ್ಲಿ ಹಣ ಬಂದಿದೆಯೇ ಎಂದು ತಿಳಿಯಿರಿ.

ಮೊದಲು PM ಕಿಸಾನ್ ಅಧಿಕೃತ ವೆಬ್‌ಸೈಟ್ https://pmkisan.gov.in/ ತೆರೆಯಿರಿ. ರೈತರ ಕಾರ್ನರ್ ವಿಭಾಗದಲ್ಲಿ ಫಲಾನುಭವಿಯ ಸ್ಥಿತಿಯ ಮೇಲೆ ಕ್ಲಿಕ್ ಮಾಡಿ. ನಂತರ ತಮ್ಮ ಆಧಾರ್ ಸಂಖ್ಯೆ ವಿವರಗಳನ್ನು ನಮೂದಿಸಬೇಕು ಮತ್ತು ಡೇಟಾ ಪಡೆಯಿರಿ ಮೇಲೆ ಕ್ಲಿಕ್ ಮಾಡಬೇಕು. 12ನೇ ಕಂತು ರೈತರ ಖಾತೆಗೆ ಜಮೆಯಾಗಿದೆಯೇ ಎಂಬುದು ಗೊತ್ತಾಗಲಿದೆ.

Leave A Reply

Your email address will not be published.