ಲೇಖಕ ಸಲ್ಮಾನ್ ರಶ್ದಿ ಮೇಲೆ ಮಾರಣಾಂತಿಕ ದಾಳಿ ಪ್ರಕರಣ | ಹೇಗಿದ್ದಾರೆ ಈಗ ಅವರು ಗೊತ್ತೇ? ಅವರ ಆರೋಗ್ಯ ಸ್ಥಿತಿ ವಿವರ ಇಲ್ಲಿದೆ!!
1981ರಲ್ಲಿ ತಮ್ಮ ಎರಡನೇ ಕಾದಂಬರಿ ‘ದಿ ಮಿಡ್‌ನೈಟ್ ಚಿಲ್ಡ್ರನ್’ಗೆ ಮ್ಯಾನ್ ಬೂಕರ್ ಪ್ರಶಸ್ತಿ ಪಡೆಯುವುದರೊಂದಿಗೆ ಸಲ್ಮಾನ್ ರಶ್ದಿ ಜನಪ್ರಿಯತೆ ದೇಶ, ಸಾಹಿತ್ಯ ವಲಯದ ಗಡಿಗಳನ್ನು ದಾಟಿ ಹೆಸರು ಪಡೆದಿತ್ತು.
ಅಷ್ಟೆ ಅಲ್ಲದೆ ವಿಶ್ವದೆಲ್ಲೆಡೆ ಪ್ರಖ್ಯಾತಿ ಕೂಡ ಪಡೆದಿದ್ದರು. ಸೆಲೆಬ್ರಿಟಿ ಸ್ಟೇಟಸ್ ಪಡೆದಿದ್ದ ಲೇಖಕ ರಶ್ದಿ 1988ರ ಸೆಪ್ಟೆಂಬರ್‌ನಲ್ಲಿ ‘ದಿ ಸಟಾನಿಕ್ ವರ್ಸಸ್’ ಕಾದಂಬರಿ ಹೊರತಂದಿದ್ದರು. ಮಾರುಕಟ್ಟೆಗೆ ಲಗ್ಗೆ ಇಡುವ ಸಂದರ್ಭದಲ್ಲೇ ವಿವಾದದ ಉರುಳು ರಶ್ದಿಯನ್ನು ಸುತ್ತಿಕೊಂಡಿತ್ತು.
ಇತ್ತೀಚೆಗಷ್ಟೇ ದಾಳಿಗೆ ಒಳಗಾಗಿದ್ದ ಲೇಖಕ ಸಲ್ಮಾನ್ ರಶ್ದಿ ಒಂದು ಕಣ್ಣಿನ ದೃಷ್ಟಿ ಹಾಗೂ ಒಂದು ಕೈ ಸ್ವಾಧೀನ ಕಳೆದುಕೊಂಡಿದ್ದಾರೆ.
ಅಮೇರಿಕಾದ ನ್ಯೂ ಯಾರ್ಕ್ ಸ್ಟೇಟ್ ನಲ್ಲಿ ಉಪನ್ಯಾಸ ನೀಡುತ್ತಿದ್ದ ವೇಳೆ, ರಶ್ದಿ ವಿರುದ್ಧ ದಾಳಿ ನಡೆದಿತ್ತು. 1980 ರಲ್ಲಿ ಸೆಟಾನಿಕ್ ವರ್ಸಸ್ ಪುಸ್ತಕ ಬರೆದಿದ್ದ ರಶ್ದಿ ಅವರಿಗೆ ಇರಾನ್ ನಿಂದ ಆಗಾಗ್ಗೆ ಬೆದರಿಕೆ ಕರೆಗಳು ಬರುತ್ತಿದ್ದವು.
ಆ.12 ರಂದು ಚೌಟಕ್ವಾ ಸಂಸ್ಥೆಯಲ್ಲಿ ಉಪನ್ಯಾಸ ನೀಡುತ್ತಿದ್ದ ರಶ್ದಿ ಅವರ ಮೇಲೆ ವೇದಿಕೆಯಲ್ಲೇ ಮಾರಣಾಂತಿಕ ದಾಳಿ ನಡೆದಿತ್ತು.ಆಗಸ್ಟ್ ತಿಂಗಳಲ್ಲಿ ಯುನೈಟೆಡ್ ಸ್ಟೇಟ್ಸ್‌ನ ನ್ಯೂಯಾರ್ಕ್ ನಗರದಲ್ಲಿ ನಡೆದ ಸಾಹಿತ್ಯಿಕ ಸಮಾರಂಭದಲ್ಲಿ ಲೇಖಕ75ರ ಹರೆಯದ ಸಲ್ಮಾನ್ ರಶ್ದಿ (Salman Rushdie) ಮೇಲೆ ಮಾರಣಾಂತಿಕ ದಾಳಿ ನಡೆದು ದುಷ್ಕರ್ಮಿಯೊಬ್ಬ ವೇದಿಕೆ ಮೇಲಿದ್ದ ರಶ್ದಿ ಕುತ್ತಿಗೆ ಮತ್ತು ತಲೆ ಮತ್ತು ದೇಹದ ಇತರ ಭಾಗಗಳಿಗೆ ಹಲವು ಬಾರಿ ಇರಿದಿದ್ದಾನೆ .
ಈ ಸಂದರ್ಭ ಗಂಭೀರ ಗಾಯಗೊಂಡ ರಶ್ದಿ ಚೇತರಿಕೆ ಕಂಡರೂ ಸಹ ಅವರು ಕಣ್ಣಿನ ದೃಷ್ಟಿ ಮತ್ತು ಕೈಯಲ್ಲಿನ ಬಲ ಕಳೆದುಕೊಂಡಿದ್ದಾರೆ ಎಂದು ಅವರ ಏಜೆಂಟ್ ಮೂಲಗಳು ತಿಳಿಸಿವೆ.
ಹಾಡಹಗಲೇ ಸಭಿಕರ ಎದುರು ಅಮೆರಿಕದಂಥ ದೇಶದಲ್ಲಿ ದಾಳಿಗೆ ಗುರಿಯಾಗಿದ್ದು, ಜಗತ್ತನ್ನೇ ಬೆಚ್ಚಿ ಬೀಳಿಸಿದ್ದು, ಲೇಖಕ, ಚಿಂತಕ ವರ್ಗ ದಿಗ್ಭ್ರಮೆಗೊಳಗಾಗಿಸಿತ್ತು.
ತನ್ನ ಕಾದಂಬರಿ ದಿ ಸೈಟಾನಿಕ್ ವರ್ಸಸ್‌ಗಾಗಿ ಮರಣದಂಡನೆಯನ್ನು ಎದುರಿಸಿದ ಭಾರತೀಯ ಸಂಜಾತ ಬ್ರಿಟಿಷ್ ಬರಹಗಾರ ರಶ್ದಿಗೆ ದುರ್ಷರ್ಮಿ ಸುಮಾರು 12 ಬಾರಿ ಇರಿದಿದ್ದಾನೆ. ಚಾಕು ಇರಿತದಿಂದಾಗಿ ರಶ್ದಿ ಅವರ ಕುತ್ತಿಗೆ ಬಳಿ ಮೂರು ಗಂಭೀರ ಗಾಯಗಳ ಜೊತೆ ಎದೆ ಭಾಗದಲ್ಲೂ ಗಾಯಗಳಾಗಿವೆ.
ತೋಳಿನ ನರ ಕತ್ತರಿಸಿರುವುದರಿಂದ ಅವರ ಒಂದು ಕೈ ಸ್ವಾಧೀನ ಕಳೆದುಕೊಂಡಿದೆ’ ಎಂದು ರಶ್ದಿ ಅವರ ಏಜೆಂಟ್ ಆ್ಯಂಡ್ರ್ಯೂ ವೈಲಿ ಭಾನುವಾರ ತಿಳಿಸಿದ್ದಾರೆ.
ಹದಿ ಮತರ್ ಎಂಬ 24 ವರ್ಷದ ಯುವಕನನ್ನು ದಾಳಿಕೋರ ಎಂದು ಗುರುತಿಸಲಾಗಿದ್ದು, ದಾಳಿಯ ನಂತರ, ಇರಾನ್ ದಾಳಿಕೋರನೊಂದಿಗೆ ನಮಗೆ ಯಾವುದೇ ಸಂಬಂಧ ಇಲ್ಲ ಎಂದು ಹೇಳಿಕೊಂಡಿದೆ.