Kodi mutt ಭವಿಷ್ಯ : ಮುಂದಿನ ಮೂರು ತಿಂಗಳು ತುಂಬಾ ಡೇಂಜರ್ | ಜನ ಹುಚ್ಚರಾಗ್ತಾರೆ- ಕೋಡಿ ಶ್ರೀ ಭಯಾನಕ ಭವಿಷ್ಯ

ಜನರು ಭವಿಷ್ಯ ತಿಳಿದುಕೊಳ್ಳಲು ಕಾತುರರಾಗಿ ಮುಂದೇನು ಕಾದಿದೆಯೋ ಎಂದು ಭಯದಿಂದ ದಿನ ಕಳೆಯುವ ಸನ್ನಿವೇಶ ಸೃಷ್ಟಿಯಾಗಿದೆ. ಹೌದು. ಕೋಡಿ ಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದಿದ್ದು, ಕಾರ್ತಿಕದಿಂದ ಜನವರಿವರೆಗೂ ಮೂರು ತಿಂಗಳ ಕಾಲ ಕಂಟಕ ಎದುರಾಗಲಿದೆ ಎಂದು ಹೇಳಿದ್ದಾರೆ.

 

ರಾಜಭೀತಿ, ಭೂ ಕಂಟಕ, ಪ್ರದೇಶ, ಪ್ರಾಕೃತಿಕ ಕಂಟಕ, ಬಾಂಬ್, ಯುದ್ಧಭೀತಿ, ಭೂ ಕಂಪನ ಆಗಬಹುದು. ಕಾರ್ತಿಕದವರೆಗೆ ಮಳೆ ಇರಲಿದೆ.

ಇನ್ನೂ ಮೂರು ತಿಂಗಳು ಕಂಟಕಗಳು ಭೂ ಕಂಟಕದ ರೂಪದಲ್ಲಿಯೋ ಅಥವಾ ಪ್ರಾದೇಶಿಕವಾಗಿ ಸಂಘರ್ಷವಿರಬಹುದು ಇಲ್ಲವೇ ಪ್ರಾಕೃತಿಕವಾಗಿಯೂ ಇರಬಹುದು ಎಂದಿದ್ದಾರೆ.

ಭವಿಷ್ಯ ನುಡಿದಿರುವ ಕೋಡಿ ಮಠದ ಶ್ರೀಗಳು, ಕಾರ್ತಿಕ ಮಾರ್ಗಶಿರ ಮಧ್ಯ ಭಾಗದಿಂದ ಜನವರಿ 23ರ ವರೆಗೂ ಕಂಠಕ ಎದುರಾಗಲಿದೆ ಎಂದಿದ್ದಾರೆ.

ಜಾಗತಿಕವಾಗಿ ಬಾಂಬ್ಗಳು, ಭೂಕಂಪ, ಯುದ್ಧ ಭೀತಿ ಇದ್ದು, ಕೇವಲ ಜಗತ್ತಿಗೆ ಸೀಮಿತವಾಗಿರದೆ ದೇಶೀಯವಾಗಿ ಕೆಲವೊಂದು ಕಂಟಕಗಳಿವೆ ಎಂದಿದ್ದು, ಜನರು ತಮ್ಮ ಮೇಲೆ ನಿಯಂತ್ರಣ ಕಳೆದುಕೊಂಡು ಹುಚ್ಚರಾಗುತ್ತಾರೆ.

ಜೊತೆಗೆ ಹೆಚ್ಚಿನವರಿಗೆ ದೈಹಿಕ ಅಶಕ್ತಿ ಕಾಡಲಿದ್ದು, ಕೆಲವರು ದಾರಿಯಲ್ಲಿ ಬಿದ್ದು ಸಾಯುವ ಪ್ರಕರಣಗಳೂ ಕೂಡ ಸಂಭವಿಸುತ್ತದೆ ಎಂದು ಆತಂಕಕಾರಿ ಭವಿಷ್ಯ ನುಡಿದಿದ್ದಾರೆ.

ಮುಂದಿನ ಮೂರು ತಿಂಗಳು ಅಂಗಾಂಗಗಳ ಮೇಲೆ ಪ್ರಭಾವ ಜೋರಾಗಿರುವ ಸಾಧ್ಯತೆ ಇದ್ದು, ಜಾಗತಿಕ ದೋಷದ ಜತೆ ರಾಷ್ಟ್ರೀಯ ದೋಷವೂ ಹೆಚ್ಚಾಗಿರುವುದರಿಂದ ಮುಂದಿನ ಎರಡು, ಮೂರು ತಿಂಗಳು ಮನುಷ್ಯರು ಭಕ್ತಿಯ ಮಾರ್ಗ ಹಿಡಿಯುವ ಮೂಲಕ ದೈವಾರಾಧನೆ ಮಾಡಿದರೆ ಉತ್ತಮವೆಂದು ಭವಿಷ್ಯವಾಣಿ ನುಡಿದಿದ್ದಾರೆ.

Leave A Reply

Your email address will not be published.