Beauty Secrets : ಹಾಲಿನಂತಹ ಶುದ್ಧ ಬಿಳಿಪಿನ ಚರ್ಮ ಹೊಂದಿದರೂ ಈ ದೇಶದ ಮಹಿಳೆಯರಿಗೆ ಸಂತೋಷವಿಲ್ಲವಂತೆ!!!

ಮಹಿಳೆಯರು ಪ್ರತಿ ಸೂಕ್ಷ್ಮ ವಿಚಾರಗಳಿಗೂ ಕೂಡ ಹೆಚ್ಚಿನ ಗಮನ ವಹಿಸುವುದು ಸಾಮಾನ್ಯ. ಅದರಲ್ಲೂ ಕೂಡ ಸೌಂದರ್ಯದ ವಿಷಯಕ್ಕೆ ಬಂದರೆ ಅದರ ಬಗ್ಗೆ ವಿಶೇಷ ಗಮನ ವಹಿಸುತ್ತಾರೆ.


Ad Widget

Ad Widget

Ad Widget

Ad Widget
Ad Widget

Ad Widget

ಹೊಳೆಯುವ ಚರ್ಮ, ಸುಂದರ ತ್ವಚೆಯ ಜೊತೆಗೆ ವದನದ ಬಗ್ಗೆ ಕಾಳಜಿ ಕೊಂಚ ಹೆಚ್ಚಾಗಿಯೇ ಇರುತ್ತದೆ ಎಂದರೆ ತಪ್ಪಾಗದು. ಕಪ್ಪು – ಬಿಳುಪಿನ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಲೆ ಇರುತ್ತವೆ. ಚರ್ಮದ ಬಣ್ಣದ ಬಗ್ಗೆ ಜನರಿಗೆ ವಿಚಿತ್ರ ವ್ಯಾಮೋಹ ಹೊಂದಿದ್ದು, ಅದರಲ್ಲೂ ಫೇರ್‌ನೆಸ್‌ಗೆ ಸಂಬಂಧಿಸಿದಂತೆ ಅತಿ ಹೆಚ್ಚು ಕ್ರೇಜ್ ಹೊಂದಿದ್ದಾರೆ.


Ad Widget

ಬೆಳ್ಳಗೆ, ಸುಂದರವಾಗಿ ಚರ್ಮ ಹೊಳೆಯಬೇಕೆಂದು ಚರ್ಮಕ್ಕೆ ನಾನಾ ರೀತಿಯ ದುಬಾರಿ ಕ್ರೀಮುಗಳನ್ನು ಬಳಸಿ ತೊಂದರೆಗಳಿಗೆ ಎಡೆ ಮಾಡಿಕೊಡುತ್ತಿದೆ. ಪ್ರತಿಯೊಂದು ದೇಶದ ಮಹಿಳೆ ಅನನ್ಯ ಸೌಂದರ್ಯವನ್ನು ಹೊಂದಿರುತ್ತಾರೆ.

ಕೆಲವು ದೇಶಗಳಲ್ಲಿ ಮಹಿಳೆಯರ ಸೌಂದರ್ಯವನ್ನು ಸೌಂದರ್ಯವರ್ಧಕಗಳ ಜೊತೆ ಜೀವನಶೈಲಿಯಿಂದ ಸಹ ವರ್ಣಿಸಲಾಗುತ್ತದೆ.

ಈ ನಡುವೆ ಬೇರೆ ಬೇರೆ ಚಿಕಿತ್ಸೆ ಹಾಗೂ ಉತ್ಪನ್ನಗಳನ್ನು ಬಳಸಿ, ಚರ್ಮದ ಬಣ್ಣವನ್ನು ಹಾಳು ಮಾಡಿಕೊಂಡವರು ಕೂಡ ಇದ್ದು, ಈಗಿನ ದಿನಗಳಲ್ಲಿ ಬಿಳಿ ಬಣ್ಣದ ಬಗ್ಗೆ ವ್ಯಾಮೋಹ ಸ್ವಲ್ಪ ಕಡಿಮೆಯಾಗಿದೆ ಅಂದ್ರೆ ತಪ್ಪಾಗಲಾರದು.

ದೇಶದಲ್ಲಿ ಎಲ್ಲ ವ್ಯಕ್ತಿಗಳು ಒಂದೇ ಬಣ್ಣವನ್ನು ಹೊಂದಿರಲು ಸಾಧ್ಯವೇ ಇಲ್ಲ. ಕೆಲ ದೇಶದ ಜನರು ಕಪ್ಪಾಗಿದ್ದರೆ, ಮತ್ತೆ ಕೆಲವರು ಅತಿ ಹೆಚ್ಚು ಬೆಳ್ಳಗಿರುತ್ತಾರೆ. ಪ್ರಪಂಚದಲ್ಲೇ ಅತಿ ಹೆಚ್ಚು ಬಿಳಿಯರಿರುವ ದೇಶವೊಂದಿದ್ದು, ಆ ದೇಶಕ್ಕೂ ಭಾರತಕ್ಕೂ ಹಳೆಯ ಅವಿನಾಭಾವ ಸಂಬಂಧವಿದೆ.

ಕಡಿಮೆ ಯುವಿ ವಿಕಿರಣ ಇರುವ ಸ್ಥಳದಲ್ಲಿ ಜನರ ಚರ್ಮವು ಬೆಳಕಿನ ಚರ್ಮದ ವರ್ಣದ್ರವ್ಯವನ್ನು ಅಭಿವೃದ್ಧಿಪಡಿಸುತ್ತದೆ. ಐರ್ಲೆಂಡ್ ಕೂಡ ಕಡಿಮೆ ಯುವಿ ಕಿರಣ ಬೀಳುವ ದೇಶವಾಗಿದೆ. ವರದಿಯೊಂದರ ಪ್ರಕಾರ, ಐರಿಶ್ (Irish) ಜನರು ವಿಶ್ವದ ಅತ್ಯಂತ ಸುಂದರವಾದ ಚರ್ಮವನ್ನು ಹೊಂದಿದ್ದು, ಇದಕ್ಕೆ ಅವರ ಜೀನ್ ಜೊತೆಗೆ ಆನುವಂಶಿಕವಾಗಿ ಪಡೆದ ಬಣ್ಣವು ಕಾರಣವಾಗುತ್ತದೆ.

ಇಷ್ಟೆ ಅಲ್ಲದೆ, ಅಲ್ಲಿನ ಹವಾಮಾನವೂ ಇದರಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ವಿಶ್ವದಲ್ಲಿಯೇ ಅತ್ಯಂತ ಸುಂದರ ಚರ್ಮವನ್ನು ಹೊಂದಿರುವ ಮಹಿಳೆಯರು ಎಂಬ ಕೀರ್ತಿ ಐರ್ಲೆಂಡ್ ಮಹಿಳೆಯರಿಗಿದ್ದು, ಆದರೂ ಕೂಡ ಈ ಮಹಿಳೆಯರಿಗೆ ತಮ್ಮ ಬಣ್ಣದಿಂದ ಖುಷಿಯಾಗಿಲ್ಲ.

ವಿಶ್ವದ ಕೆಲ ದೇಶದ ಮಹಿಳೆಯರಿಗಿಂತ ತಾವು ಆಕರ್ಷಕವಾಗಿಲ್ಲವೆಂದು ಅವರು ಇತರರೊಂದಿಗೆ ಹೋಲಿಕೆ ಮಾಡಿಕೊಂಡು ಕೀಳರಿಮೆ ಬೆಳೆಸಿಕೊಳ್ಳುವವರೇ ಹೆಚ್ಚು. ಇದರ ಸಮೀಕ್ಷೆಯಲ್ಲಿ ಶೇಕಡಾ 61ರಷ್ಟು ಮಹಿಳೆಯರು ಈ ವಿಷಯವನ್ನು ಒಪ್ಪಿಕೊಂಡಿದ್ದಾರೆ.

ಯುಎಸ್ ಪೆನ್ ಸ್ಟೇಟ್ ಯೂನಿವರ್ಸಿಟಿಯ ಅಧ್ಯಯನದ ಪ್ರಕಾರ, SLC24A5 ಹೆಸರಿನ ಜೀನ್ ಚರ್ಮದ ವರ್ಣದ್ರವ್ಯವನ್ನು ನಿರ್ಧರಿಸುತ್ತದೆ. ಐರ್ಲೆಂಡ್ ಜನರು A111T ರೂಪಾಂತರವನ್ನು ಹೊಂದಿದ್ದಾರೆ.

ಇದು ತೆಳು ಚರ್ಮಕ್ಕೆ ಕಾರಣವಾದ ರೂಪಾಂತರವಾಗಿದೆ. ಈ ರೂಪಾಂತರದಲ್ಲಿ ಕಂಡು ಬರುವ ಎಲ್ಲ ಆನುವಂಶಿಕ ಸಂಕೇತ ಒಂದೇ ವ್ಯಕ್ತಿಯಿಂದ ಬಂದಿದೆ ಎಂದು ವರದಿ ಹೇಳಿದೆ.

ವ್ಯಕ್ತಿಯು 10,000 ವರ್ಷಗಳ ಹಿಂದೆ ಭಾರತ ಅಥವಾ ಮಧ್ಯಪ್ರಾಚ್ಯದ ನಿವಾಸಿಯಾಗಿದ್ದು, ಅವನ ವಂಶಸ್ಥರು ಐಬೆರಿಯನ್ ಪೆನಿನ್ಸುಲಾ ಮೂಲಕ ಐರ್ಲೆಂಡ್‌ಗೆ ತಮ್ಮ ಜೀನ್‌ಗಳನ್ನು ತಂದರು ಎನ್ನಲಾಗಿದೆ.

ಮತ್ತೊಂದು ಅಚ್ಚರಿಯ ವಿಚಾರವೇನೆಂದರೆ, ಐರಿಶ್ ನ 10 ಮಹಿಳೆಯರಲ್ಲಿ ಒಬ್ಬರು ಮೇಕಪ್, ಸನ್ಟ್ಯಾನ್ ಲೋಷನ್ ಮತ್ತು ಸನ್‌ಬೆಡ್‌ಗಳಿಲ್ಲದೆ ಮನೆಯಿಂದ ಹೊರಗೆ ಬರುವುದಿಲ್ಲ ಹಾಗೂ ಈ ಮೂರು ಚರ್ಮವನ್ನು ಸ್ವಲ್ಪ ಡಾರ್ಕ್ ಮಾಡಲು ನೆರವಾಗುತ್ತದೆ ಎಂದು ಬಲವಾಗಿ ನಂಬುತ್ತಾರೆ..

ಅಷ್ಟೇ ಅಲ್ಲದೆ ಅಲ್ಲಿನ ಶೇಕಡಾ 52ರಷ್ಟು ಮಹಿಳೆಯರು ಸಂಬಂಧಕ್ಕೆ ಬಂದ ಎರಡು ವಾರಗಳ ಕಾಲ ತಮ್ಮ ನಿಜ ಬಣ್ಣವನ್ನು ಸಂಗಾತಿಗೆ ತೋರಿಸುವುದಿಲ್ಲ.

ಇಂದು ನಮ್ಮಲ್ಲಿ ಹೆಚ್ಚಿನ ಜನರು ನಾವಿರುವ ಬಣ್ಣದಲ್ಲೇ ತಮ್ಮನ್ನು ಸ್ವೀಕರಿಸುವ ನಿರ್ಧಾರಕ್ಕೆ ಬರುತ್ತಿದ್ದು, ಹೆಣ್ಣು ಮಕ್ಕಳು ಕೂಡ ತಮ್ಮ ದೇಹದ ಆಕಾರ ಹಾಗೂ ತ್ವಚೆಯನ್ನು ಒಪ್ಪಿಕೊಳ್ಳಲು ಮುಂದಾಗಿದ್ದಾರೆ.

ಬಣ್ಣ ಕಪ್ಪು ಎನ್ನುವ ಕಾರಣಕ್ಕೆ ಹಿಂದೆ ಸರಿಯುವ ಬದಲು ಎಲ್ಲರ ಜೊತೆ ಬೆರೆಯುವ ಆತ್ಮವಿಶ್ವಾಸ ಬೆಳೆಸಿಕೊಳ್ಳುತ್ತಿದ್ದಾರೆ

error: Content is protected !!
Scroll to Top
%d bloggers like this: