ಪವಾಡ : ಮುಸ್ಲಿಂ ವ್ಯಕ್ತಿಯ ಜಮೀನಿನಲ್ಲಿ ಪತ್ತೆಯಾಯಿತು ಶಿವಲಿಂಗ !!!
ದೇವರ ಬಗ್ಗೆ ಇರುವ ನಂಬಿಕೆ ಸುಳ್ಳು ಎಂದಾಗ ಒಂದಲ್ಲ ಒಂದು ರೀತಿಯಲ್ಲಿ ಸಾಕ್ಷಿಗಳು, ಅನುಭವಗಳು ಆಗಿರುವುದು ನೋಡಿದ್ದೇವೆ. ಭಾರತದಲ್ಲಿ ದೇವರ ಮೇಲಿನ ನಂಬಿಕೆಯ ಆಸರೆಯಲ್ಲಿ ಬದುಕು ನಡೆಸುತ್ತಾ, ಸಂಸ್ಕೃತಿ ಬೆಳೆಸುವ ಜನರಿಗೆ ಮತ್ತು ಮಣ್ಣಿಗೆ ಇಡೀ ಪ್ರಪಂಚದ ಮನ್ನಣೆ ದೊರಕಿದೆ.
ಭಾರತ ಪುಣ್ಯ ಭೂಮಿಯಲ್ಲಿ ಅನಾದಿಕಾಲದಿಂದ ಪೂಜಿಸಿಕೊಂಡು ಬಂದ ವಿಗ್ರಹಗಳು, ಗುಡಿಗಳು ಪತ್ತೆಯಾಗುತ್ತಿವೆ. ಹಾಗೆಯೇ ಅಮೇಥಿ ಜಿಲ್ಲೆಯ ಜೈಸ್ ಪ್ರದೇಶದ ಹೊಲವೊಂದರಲ್ಲಿ ಶಿವಲಿಂಗ ಪತ್ತೆಯಾದಾಗ ಗೊಂದಲ ಮೂಡಿ ಸಾವಿರಾರು ಜನರು ಸ್ಥಳಕ್ಕೆ ತಲುಪಿದರು. ಈ ಜಾಗವು ಮುಸ್ಲಿಂ ವ್ಯಕ್ತಿಗೆ ಸೇರಿದ್ದರಿಂದ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು.
ಮುಸಲ್ಮಾನರ ಕ್ಷೇತ್ರದಲ್ಲಿ ಶಿವಲಿಂಗದ ಮಾಹಿತಿ ತಿಳಿದ ತಕ್ಷಣ ಎಸ್‌ಡಿಎಂ ಮತ್ತು ಸಿಒ ನೇತೃತ್ವದಲ್ಲಿ ಹೆಚ್ಚಿನ ಸಂಖ್ಯೆಯ ಆಡಳಿತ ಸಿಬ್ಬಂದಿ ಕೂಡ ಸ್ಥಳಕ್ಕೆ ತಲುಪಿದರು. ಅಧಿಕಾರಿಗಳು ಶಿವಲಿಂಗವನ್ನು ಮೇಲಕ್ಕೆತ್ತಿ ಸಮೀಪದ ಶಿವನ ದೇವಸ್ಥಾನದಲ್ಲಿಟ್ಟರು.
ಜೈಸ್ ಕೊತ್ವಾಲಿ ಪ್ರದೇಶದ ಪಟ್ಟಣದಲ್ಲಿರುವ ರಾಯ್ ಬರೇಲಿ ರಸ್ತೆಯ ಪಕ್ಕ ಗುರುವಾರ ಸಂಜೆ ಇಲ್ಲಿ ಕೆಲವು ಮಕ್ಕಳು ಜಾನುವಾರುಗಳನ್ನು ಮೇಯಿಸುತ್ತಿದ್ದಾಗ ಮಣ್ಣಿನಲ್ಲಿ ಶಿವಲಿಂಗದಂತಹ ಕಲ್ಲು ಕಂಡಿದೆ. ಕಲ್ಲಿನ ಮೇಲೆ ಹಾವಿನ ಆಕಾರವೂ ಇರುವುದನ್ನು ಕಂಡ ಮಕ್ಕಳು ಗಾಬರಿಗೊಂಡು ಅಲ್ಲಿದ್ದವರಿಗೆ ಮಾಹಿತಿ ನೀಡಿದ್ದಾರೆ.
ಮಾಹಿತಿ ತಿಳಿದ ಕೂಡಲೇ ಜನರು ಸ್ಥಳಕ್ಕೆ ಆಗಮಿಸಲಾರಂಭಿಸಿದ್ದಾರೆ. ನೋಡ ನೋಡುತ್ತಿದ್ದಂತೆಯೇ ಅಲ್ಲಿ ಜನಸಾಗರ ಸೇರಿದೆ. ಸ್ಥಳದಲ್ಲಿದ್ದ ಜನರು ಶಿವಲಿಂಗ ಕಾಣಿಸಿಕೊಂಡ ಬಗ್ಗೆ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದರು. ನಂತರ ಆಡಳಿತ ವರ್ಗದಲ್ಲಿ ಭಾರೀ ಗೊಂದಲ ಮೂಡಿದೆ. ಕನುಂಗೋ, ಲೆಖ್‌ಪಾಲ್ ಮತ್ತು ತಿಲೋಯ್ ಎಸ್‌ಡಿಎಂ ಫಲ್ಗುಣಿ ಸಿಂಗ್, ಸಿಒ ಅಜಯ್ ಸಿಂಗ್ ಸೇರಿದಂತೆ ಆಡಳಿತ ಸಿಬ್ಬಂದಿಯೊಂದಿಗೆ ಹೆಚ್ಚಿನ ಸಂಖ್ಯೆಯ ಪೊಲೀಸ್ ಪಡೆ ಕೂಡ ಸ್ಥಳಕ್ಕೆ ತಲುಪಿತು.
ನಂತರ ಸುತ್ತಮುತ್ತಲಿನ ಪ್ರದೇಶಗಳನ್ನು ಪರಿಶೀಲಿಸಿದ ನಂತರ, ಆಡಳಿತಾಧಿಕಾರಿಗಳು ಶಿವಲಿಂಗವನ್ನು ಸುರಕ್ಷಿತವಾಗಿ ಮೇಲಕ್ಕೆತ್ತಿ ಹತ್ತಿರದ ಶಿವ ದೇವಾಲಯದಲ್ಲಿ ಇರಿಸಿದರು. ಶಿವಲಿಂಗ ಹೊರಬಂದ ಜಾಗ ಮುಸ್ಲಿಂ ವ್ಯಕ್ತಿ ಮೊಹ್ಸಿನ್ ಖಾನ್ಗೆ ಸೇರಿತ್ತು. ವಿಷಯದ ಗಂಭೀರತೆ ನೋಡಿದ ಆಡಳಿತ ಮಂಡಳಿ ಯಾವುದೇ ವಿವಾದ ಹುಟ್ಟಿಕೊಳ್ಳುವ ಮುನ್ನ ಶಿವಲಿಂಗವನ್ನು ಎತ್ತಿ ಶಿವಾಲಯದಲ್ಲಿ ಇರಿಸಿದೆ. ಸದ್ಯ ಆಡಳಿತಾಧಿಕಾರಿಗಳು ಈ ವಿಚಾರದಲ್ಲಿ ಏನನ್ನೂ ಹೇಳದೆ ಮೌನವಾಗಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಹುಳಗೋಳ ಬಳಿ ಹರಿಯುತ್ತಿರೋ ಶಾಲ್ಮಲಾ ನದಿಯ ಪ್ರತಿ ಬಂಡೆಗಳಲ್ಲೂ ದೇವರ ಪ್ರತಿರೂಪವಿದೆ . 17 ನೇ ಶತಮಾನದಲ್ಲಿ ಸೋದೆ ಸದಾಶಿವರಾಯರು ಇಲ್ಲಿ ಕೈಲಾಸವನ್ನೇ ನಿರ್ಮಿಸಿದ್ದಾರೆ ಎಂಬ ಮಾಹಿತಿ ಇದೆ.
ವಿಷ್ಣು ಅಲಂಕಾರ ಪ್ರಿಯನಾದರೆ, ಶಿವ ಅಭಿಷೇಕ ಪ್ರಿಯ. ಹೀಗಾಗಿಯೇ ನೋಡಿ ಪರಮಶಿವಭಕ್ತರಾದ ಸೋದೆ ಸದಾಶಿವರಾಯರು ಪ್ರತಿ ಕಲ್ಲಿಗೂ ಲಿಂಗರೂಪ ನೀಡಿದ್ದಾರೆ. ಇಲ್ಲಿ ನದಿ ದಡದಲ್ಲಿ ಮಾತ್ರವಲ್ಲದೇ ನದಿ ಒಡಲಲ್ಲಿರೋ ಕಲ್ಲುಗಳಲ್ಲಿ ಶಿವ ದರ್ಶನ ನೀಡುತ್ತಾನೆ ಎಂಬ ನಂಬಿಕೆ ಇದೆ.ಹುಳಗೋಳದಲ್ಲಿರೋ ಈ ತಾಣವು ಪುಣ್ಯ ಸ್ಥಳ ಆಗಿದೆ ಎಂದು ಅಲ್ಲಿನ ಜನರ ದೃಢ ನಂಬಿಕೆ ಆಗಿದೆ.