ಒಂದು ರಾಷ್ಟ್ರ ಒಂದು ರಸಗೊಬ್ಬರ ಯೋಜನೆಯಡಿಯಲ್ಲಿ ಗೊಬ್ಬರದ ಬ್ರಾಂಡ್ ಹೆಸರೇನು?

ದೇಶದ ಕೃಷಿ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುವ ಉದ್ದೇಶದಿದಲೇ ಸರ್ಕಾರ ಆನೇಕ ಯೋಜನೆಗಳನ್ನು ರೂಪಿಸಿ ಜಾರಿಗೆ ತಂದಿದ್ದು, ಇದರಿಂದ ರೈತಾಪಿ ವರ್ಗದ ಜನರಿಗೆ ಆರ್ಥಿಕ ನೆರವಿನ ಜೊತೆಗೆ ಕೃಷಿ ಸಂಬಂಧಿತ ಉಪಕರಣಗಳ ಪೂರೈಕೆ ಮಾಡಿ ರಾಜ್ಯದ ಜನತೆಗೆ ಸಹಕರಿಸುತ್ತಿದೆ.

ಕೇಂದ್ರವು ಹೊಸ ಯೋಜನೆ ಒಂದು ರಾಷ್ಟ್ರ ಒಂದು ರಸಗೊಬ್ಬರ ಪ್ರಾರಂಭಿಸಿದ್ದು, ಪ್ರಧಾನ ಮಂತ್ರಿ ಭಾರತೀಯ ಜನ ಉರ್ವರಕ್ ಪರಿಯೋಜನಾ ಇದರ ಅಡಿಯಲ್ಲಿ ಕಂಪನಿಗಳು ಎಲ್ಲಾ ಸಬ್ಸಿಡಿ ರಸಗೊಬ್ಬರಗಳನ್ನು ಏಕ ಬ್ರಾಂಡ್ ‘ಭಾರತ್’ ಅಡಿಯಲ್ಲಿ ಮಾರಾಟ ಮಾಡುವುದು ಕಡ್ಡಾಯವಾಗಿದೆ.

ದೇಶಾದ್ಯಂತ ರಸಗೊಬ್ಬರ ಬ್ರಾಂಡ್ ಗಳಲ್ಲಿ ಏಕರೂಪತೆಯನ್ನು ತರಲು ಸರ್ಕಾರವು ಒಂದು ದೇಶ ಒಂದು ರಸಗೊಬ್ಬರ(One nation One Fertiliser)ಯೋಜನೆ ಅಡಿಯಲ್ಲಿ ಎಲ್ಲಾ ಕಂಪನಿಗಳು ತಮ್ಮ ಉತ್ಪನ್ನಗಳನ್ನು ಭಾರತ್ ಬ್ರಾಂಡ್ ಮಾರಾಟ ಮಾಡುವ ಭಾರತೀಯ ಜನ ಉರ್ವಕ ಪರಿಯೋಜನ ಯೋಜನೆಗೆ ನರೇಂದ್ರ ಮೋದಿ ಅವರು ಚಾಲನೆ ನೀಡಿದ್ದಾರೆ.

ರೈತರಿಗೆ ನೆರವಾಗುವ ನಿಟ್ಟಿನಲ್ಲಿ ಈ ಯೋಜನೆ ಜಾರಿಗೆ ತಂದಿದ್ದು, ರಸಗೊಬ್ಬರಗಳ ಹೆಚ್ಚುವರಿ ಸರಕು ಸಬ್ಸಿಡಿಯನ್ನು ಕಡಿಮೆ ಮಾಡಲು ಇದನ್ನು ಮಾಡಲಾಗುತ್ತಿದೆ.

ಕೇಂದ್ರ ಸರ್ಕಾರವು ರಸಗೊಬ್ಬರಕ್ಕೆ ವಾರ್ಷಿಕವಾಗಿ ಸಬ್ಸಿಡಿ ನೀಡುವ ಪ್ರಧಾನಮಂತ್ರಿ ಭಾರತೀಯ ಜನ ಉರ್ವಕ ಪರಿಯೋಜನ ಯೋಜನೆಯ ಏಕೈಕ ಬ್ರಾಂಡ್ ಹೆಸರು ಮತ್ತು ಲಾಂಛನವನ್ನು ಚೀಲಗಳ ಮೇಲೆ ಕಡ್ಡಾಯವಾಗಿ ಪ್ರದರ್ಶಿಸಲು ಆದೇಶಿಸಲಾಗಿದಒಂದು ರಾಷ್ಟ್ರ ಒಂದು ರಸಗೊಬ್ಬರ ಯೋಜನೆ ಅಡಿ ಕಂಪನಿಗಳು ತಮ್ಮ ಹೆಸರು ಬ್ರಾಂಡ್ ಲೋಗೋ ಮತ್ತು ಇತರ ಸಂಬಂಧಿತ ಉತ್ಪನ್ನ ಮಾಹಿತಿಯನ್ನು ತಮ್ಮ ಚೀಲಗಳ ಮೂರನೇ ಒಂದು ಭಾಗದಷ್ಟು ಜಾಗದಲ್ಲಿ ಭಾರತ್ ಬ್ರಾಂಡ್ ಮತ್ತು ಪ್ರಧಾನ ಮಂತ್ರಿ ಭಾರತೀಯ ಜನ ಉರ್ವಕ ಪರಿಯೋಜನ ಯೋಜನೆಯ ಲಾಂಛನವನ್ನು ಪ್ರದರ್ಶಿಸಲು ಅನುಮತಿಸಲಾಗಿದೆ.

ಯೂರಿಯಾ ಅಥವಾ ಡೈ ಅಮೋನಿಯಂ ಪಾಸ್ಪೇಟ್ (DAP), ಮೂರೆಟ್ ಆಫ್ ಪೊಟ್ಯಾಷ್ (MOP), ಅಥವಾ ಎಂಪಿಕೆಯನ್ನು ಹೊಂದಿರುವ ಎಲ್ಲಾ ರಸಗೊಬ್ಬರ ಚೀಲಗಳು ಭಾರತ ಯೂರಿಯಾ(Bhartha Urea), ಭಾರತ ಎಂಓಪಿ(Bhartha MOP)ಮತ್ತು ಭಾರತ ಎನ್ ಪಿಕೆ(Bhartha NPK)ಎಂದು ಬ್ರಾಂಡ್ ಹೆಸರನ್ನು ಹೊಂದಿರುತ್ತವೆ.

ಹೀಗಾಗಿ ಎಲ್ಲ ರಸಗೊಬ್ಬರ ಕಂಪನಿಗಳು ರಾಜ್ಯ ವ್ಯಾಪಾರ ಘಟಕಗಳು ಮತ್ತು ರಸಗೊಬ್ಬರ ಮಾರುಕಟ್ಟೆ ಘಟಕಗಳಿಗೆ ಕ್ರಮವಾಗಿ ಭಾರತೀಯ ಎಂಓಪಿ ಮತ್ತು ಭಾರತ ಎಂಪಿಕೆ ಇತ್ಯಾದಿಗಳಿಗೆ ಬ್ರಾಂಡ್ ಹೆಸರು ಎಂದು ಕಚೇರಿ ಜ್ಞಾಪಕ ಪತ್ರದಲ್ಲಿ ತಿಳಿಸಲಾಗಿದೆ.

ದೇಶದಲ್ಲಿ 3.3 ಲಕ್ಷಕ್ಕೂ ಹೆಚ್ಚು ರಸಗೊಬ್ಬರ ಚಿಲ್ಲರೆ ಅಂಗಡಿಗಳನ್ನು ಹಂತ ಹಂತವಾಗಿ ಪಿಎಂ ಕಿಸಾನ್ ಸಮೃದ್ಧಿ ಕೇಂದ್ರಗಳಾಗಿ ಪರಿವರ್ತಿಸಲು ಕೇಂದ್ರ ಸರ್ಕಾರ ಉದ್ದೇಶಿಸಿದೆ. ಪಿಎಂ ಕಿಸಾನ್ ಸಮೃದ್ಧಿ ಕೇಂದ್ರದಲ್ಲಿ ಬೀಜಗಳು, ರಸಗೊಬ್ಬರಗಳು ಮತ್ತು ಕೃಷಿ ಉಪಕರಣಗಳಂತಹ ಕೃಷಿ ವಸ್ತುಗಳನ್ನು ಪೂರೈಸುತ್ತದೆ.

ಇದು ಮಣ್ಣು, ಬೀಜಗಳು ಮತ್ತು ರಸಗೊಬ್ಬರಗಳಿಗೆ ಪರೀಕ್ಷಾ ಸೌಲಭ್ಯಗಳನ್ನು ಒದಗಿಸುತ್ತದೆ. ಸರ್ಕಾರದ ಯೋಜನೆಗಳ ಬಗ್ಗೆಯೂ ಮಾಹಿತಿ ನೀಡಲಾಗುತ್ತದೆ.

ಈ ಹೊಸ ಆದೇಶದಿಂದ ರಸಗೊಬ್ಬರಗಳ ಬ್ರಾಂಡ್ ಮೌಲ್ಯ ಮತ್ತು ಮಾರುಕಟ್ಟೆ ವ್ಯತ್ಯಾಸವನ್ನು ಇಳಿಸುವ ಭಯದಿಂದ ಕೇಂದ್ರ ಸರ್ಕಾರ ಹೊರಡಿಸಿರುವ ಆದೇಶಕ್ಕೆ ರಸಗೊಬ್ಬರ ಕಂಪನಿಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ.

ಗರಿಷ್ಟ ಚಿಲ್ಲರೆ ಬೆಲೆಯನ್ನು ಪ್ರಸ್ತುತ ಸರ್ಕಾರವು ನಿಗದಿಪಡಿಸಿದ್ದು, ಇದು ಕಂಪನಿಗಳು ಉತ್ಪಾದನೆ ಹಾಗೂ ಆಮದಿನ ಹೆಚ್ಚಿನ ವೆಚ್ಚವನ್ನು ಸರಿದೂಗಿಸುತ್ತದೆ. ಕಾಗದದ ಮೇಲೆ ನಿಯಂತ್ರಿತವಾಗಿರುತ್ತದೆ.

ಸುಮಾರು 26 ರಸಗೊಬ್ಬರಗಳು ಅವುಗಳಲ್ಲಿ ಸರ್ಕಾರವು ಸಬ್ಸಿಡಿಯನ್ನು ಸೇರಿಸುತ್ತದೆ ಮತ್ತು ಎಂ ಆರ್ ಪಿ ಗಳನ್ನು ಪರಿಣಾಮಕಾರಿಯಾಗಿ ನಿರ್ಧರಿಸುತ್ತದೆ. ಅಲ್ಲದೆ ರಸಗೊಬ್ಬರ ಸಬ್ಸಿಡಿ ಯೋಜನೆಯನ್ನು ಸೂಚಿಸುವ ಲಾಂಛನವಾದ ಪ್ರಧಾನ ಮಂತ್ರಿ ಭಾರತೀಯ ಜನ ಉರ್ವಕ ಪರಿಯೋಜನ ಯೋಜನೆಯ ಸದರಿ ರಸಗೊಬ್ಬರ ಚೀಲಗಳ ಮೇಲೆ ಬಳಸಲಾಗುವುದು.

ಕಂಪನಿಗಳು ಮಾರಾಟ ಮಾಡುವ ದರ, ಸಬ್ಸಿಡಿ ನೀಡುವುದನ್ನು ನಿರ್ಧರಿಸುವುದರ ಜೊತೆಗೆ ಅವು ಎಲ್ಲಿ ಮಾರಾಟ ಮಾಡಬಹುದು ಎಂಬುದನ್ನು ಸರ್ಕಾರ ತೀರ್ಮಾನ ಕೈಗೊಳ್ಳಲಿದೆ. ಇದನ್ನು ರಸಗೊಬ್ಬರ ನಿಯಂತ್ರಣ ಆದೇಶ 1973ರ ಮೂಲಕ ಮಾಡಲಾಗುತ್ತದೆ.ಈ ಯೋಜನೆಯನ್ನು ಮುಂದಿನ ತಿಂಗಳು ಪ್ರತಿ ತಿಂಗಳು 25ನೇ ತಾರೀಕಿನ ಮೊದಲು ನೀಡಲಾಗುತ್ತದೆ.

ದೂರದ ಪ್ರದೇಶಗಳು ಸೇರಿದಂತೆ ಅಗತ್ಯಕ್ಕೆ ಅನುಗುಣವಾಗಿ ರಸಗೊಬ್ಬರದ ಲಭ್ಯತೆಯನ್ನು ಖಚಿತ ಪಡಿಸಿಕೊಳ್ಳಲು ಇಲಾಖೆಯು ನಿಯಮಿತವಾಗಿ ಚಲನ ವಲನಗಳನ್ನು ಮೇಲ್ವಿಚಾರಣೆ ಮಾಡುತ್ತದೆ.

ಈ ಯೋಜನೆಯ ಅಡಿಯಲ್ಲಿ ರಸ ಗೊಬ್ಬರಗಳ ಇಲಾಖೆಯು ಉತ್ಪಾದಕರು ಮತ್ತು ಆಮದುದಾರರಿಗೆ ಸಮಲೋಚನೆ ನಡೆಸಿ ಎಲ್ಲಾ ಸಬ್ಸಿಡಿ ರಸಗೊಬ್ಬರಗಳ ಮೇಲೆ ಒಪ್ಪಿತ ಮಾಸಿಕ ಪೂರೈಕೆ ಯೋಜನೆಯನ್ನು ರೂಪಿಸುತ್ತದೆ.

ರಸಗೊಬ್ಬರ ಸಬ್ಸಿಡಿಗಾಗಿ ಸರ್ಕಾರವು ಅಪಾರ ಪ್ರಮಾಣದ ಹಣವನ್ನು ಖರ್ಚು ಮಾಡುತ್ತಿರುವಾಗ 2 ಲಕ್ಷ ಕೋಟಿ ರೂಗಳನ್ನು ದಾಟುವ ಸಾಧ್ಯತೆ ಇದ್ದು, ಜೊತೆಗೆ ಕಂಪನಿಗಳು ಎಲ್ಲಿ ಮತ್ತು ಯಾವ ಬೆಲೆಗೆ ಮಾರಾಟ ಮಾಡಬಹುದು ಎಂದು ನಿರ್ಧರಿಸುತ್ತದೆ.

ತಯಾರಿಕಾ ಕಂಪನಿಗಳು ತಮ್ಮ ಉತ್ಪನ್ನಗಳನ್ನು ಸ್ಥಳೀಯವಾಗಿ ಮಾರಾಟ ಮಾಡುವಂತಾಗಲಿ ಅನಗತ್ಯ ಸಾರಿಗೆ ಕೆಲಸಗಳನ್ನು ಕಡಿಮೆ ಮಾಡಲು ಯೋಜನೆ ರೂಪಿಸಲಾಗಿದೆ. ಇದರಿಂದ ರೈತರಿಗೆ ಸಕಾಲದಲ್ಲಿ ಗೊಬ್ಬರ ಸಿಗುವ ಜೊತೆಗೆ ಬೇರೆ ಬೇರೆ ಕಂಪನಿಗಳು ತಯಾರಿಸುವ ರಸಗೊಬ್ಬರಗಳು ಒಂದೇ ಆಗಿದ್ದರೂ ರಸಗೊಬ್ಬರಗಳನ್ನು ಬೇರೆ ಬೇರೆ ಬ್ರಾಂಡಲ್ಲಿ ಬೇರೆ ಬೇರೆ ರಾಜ್ಯಗಳಲ್ಲಿ ತಯಾರಿಸಲಾಗುತ್ತಿದೆ.

ರಸಗೊಬ್ಬರಗಳನ್ನು ತಯಾರಿಕಾ ಕೇಂದ್ರಗಳಿಂದ ಬಹು ದೂರದ ಪ್ರದೇಶಗಳಿಗೆ ರವಾನೆ ಮಾಡಲಾಗುತ್ತಿದೆ. ಇದರಿಂದಾಗಿ ಸಾಗಣೆ ಸಬ್ಸಿಡಿ ಹೊರೆ ಕೇಂದ್ರದ ಮೇಲೆ ಬೀಳಲಿದೆ.

Leave A Reply