Shivaraj Patil On Jihad : ಅರ್ಜುನನಿಗೆ ಶ್ರೀಕೃಷ್ಣ ಜಿಹಾದ್ ಬೋಧಿಸಿದ್ದ ಎಂದ ಕಾಂಗ್ರೆಸ್ ನಾಯಕ!!!

ಜಿಹಾದ್ ಬಗ್ಗೆ ದಿನಂಪ್ರತಿ ಹೊಸ ವಿವಾದದ ಅಲೆಗಳು ವರದಿಯಾಗುತ್ತಿರುವ ಬೆನ್ನಲ್ಲೇ ಪ್ರಭಾವಿ ನಾಯಕರೊಬ್ಬರ ಜಿಹಾದ್ ಕುರಿತಾದ ಹೇಳಿಕೆ ಹೊಸ ವಿವಾದ ಹುಟ್ಟು ಹಾಕಿದೆ.

ಅದರಲ್ಲೂ ಹಿಂದೂ ಧರ್ಮದಲ್ಲಿ ಆರಾಧಿಸುವ ಭಗವದ್ಗೀತೆಯ ಕುರಿತಾಗಿ ನಾಲಿಗೆ ಹರಿಬಿಟ್ಟು ಜಿಹಾದ್ ಬಗ್ಗೆ ಹಿಂದೂ ಪುರಾಣಗಳು ಕೂಡ ಬೆಂಬಲ ಸೂಚಿಸುತ್ತದೆ ಎಂದು ದ್ವೇಷದ ಕಿಡಿ ಕಾರಿದ್ದಾರೆ.

ಹಿಂದೂ ಧರ್ಮದಲ್ಲಿ ಶ್ರೀ ಕೃಷ್ಣ ಹಾಗೂ ಧಾರ್ಮಿಕ ವಿಚಾರಗಳನ್ನು ಬಲವಾಗಿ ನಂಬುವ, ಜೀವನದಲ್ಲಿಯೂ ಕೃಷ್ಣನ ಸಂದೇಶಗಳನ್ನು ರವಾನಿಸುವ ಸಾರಗಳನ್ನು ಅಳವಡಿಸುವ ಮೂಲಕ ಹಿಂದೂ ತತ್ವಗಳನ್ನು ಸ್ವೀಕರಿಸುವ ಮನೋಭಾವದ ಜೊತೆಗೆ ಬೆಳೆಸಿಕೊಳ್ಳುವ ಪರಿಪಾಠ ಇಂದಿಗೂ ಹಲವರಲ್ಲಿದೆ.

ಇದರ ಬೆನ್ನಲ್ಲೆ ಕೇಂದ್ರ ಮಾಜಿ ಗೃಹ ಸಚಿವ ಶಿವರಾಜ್ ಪಾಟೀಲ್ ವಿವಾದಾತ್ಮಕ ಹೇಳಿಕೆ ನೀಡಿ, ಕುರಾನ್‌ನಲ್ಲಿ ಮಾತ್ರವಲ್ಲದೆ ಭಗವದ್ಗೀತೆಯಲ್ಲಿಯೂ ಜಿಹಾದ್ ಬಗ್ಗೆ ಉಲ್ಲೇಖ ಇರುವುದಾಗಿ ಹೇಳಿದ್ದು, ಇದಷ್ಟೇ ಸಾಲದೆಂಬಂತೆ ಮಹಾಭಾರತ ಯುದ್ಧದ ಸಂದರ್ಭದಲ್ಲಿ ಶ್ರೀಕೃಷ್ಣ ಕೂಡ ಅರ್ಜುನನಿಗೆ ಜಿಹಾದ್ ಬೋಧಿಸಿದ್ದ ಎಂದು ಆಟೋ ಬಾಂಬ್ ಸಿಡಿಸಿ ವಾಗ್ವಾದ ನಡೆಸಲು ಹೊಸ ವೇದಿಕೆಗೆ ಅಣಿ ಮಾಡಿದ್ದಾರೆ.

ಹಿರಿಯ ಕಾಂಗ್ರೆಸ್ ನಾಯಕ ಮತ್ತು ಮಾಜಿ ಕೇಂದ್ರ ಗೃಹ ಸಚಿವ ಶಿವರಾಜ್ ಪಾಟೀಲ್ ಜಿಹಾದ್ ಕುರಿತಾಗಿ ಹೇಳಿಕೆ ನೀಡುವ ಭರದಲ್ಲಿ ಹೊಸ ಅವಾಂತರ ಸೃಷ್ಟಿಸಿಕೊಂಡಿದ್ದಾರೆ.

ಜಿಹಾದ್ ಬಗ್ಗೆ ಭಗವದ್ಗೀತೆಯಲ್ಲಿಯೇ ಉಲ್ಲೇಖವಿದ್ದು, ಮಹಾಭಾರತ ಯುದ್ಧದ ಘಟನೆಯಲ್ಲಿ ಅರ್ಜುನನಿಗೆ ಶ್ರೀಕೃಷ್ಣ ಜಿಹಾದ್‌ ಪಾಠಗಳನ್ನು ಬೋಧಿಸಿರುವುದಾಗಿ ದ್ವೇಷದ ಕಿಡಿಯನ್ನು ಹೊತ್ತಿಸಿದ್ದಾರೆ.

ಇತ್ತೀಚೆಗೆ ದಿಲ್ಲಿಯಲ್ಲಿ ನಡೆದ ಮತ್ತು ಮಾಜಿ ಕೇಂದ್ರ ಸಚಿವೆ ಮೊಹ್ಸಿನಾ ಕಿದ್ವಾಯಿ ಅವರ ಜೀವನಚರಿತ್ರೆ ಬಿಡುಗಡೆ ಸಮಾರಂಭದಲ್ಲಿ ಕಾಂಗ್ರೆಸ್ ನಾಯಕರಾದ ಶಶಿ ತರೂರ್ ಮತ್ತು ದಿಗ್ವಿಜಯ ಸಿಂಗ್, ಫಾರೂಕ್ ಅಬ್ದುಲ್ಲಾ, ಸುಶೀಲ್ ಕುಮಾರ್ ಶಿಂಧೆ ಮುಂತಾದ ರಾಜಕೀಯ ನಾಯಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಶಿವರಾಜ್ ಪಾಟೀಲ್, “ಇಸ್ಲಾಂನಲ್ಲಿನ ಜಿಹಾದ್ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿದ್ದು, ಇಷ್ಟೆಲ್ಲ ಪ್ರಯತ್ನಗಳ ಬಳಿಕವು ಅಧಿಕಾರವನ್ನು ಸಮರ್ಥವಾಗಿ ಬಳಸಿಕೊಳ್ಳಲು ಸಾಧ್ಯವಿದೆ ಎಂಬ ಚಿಂತನೆ ಜನರಿಗೆ ಅರ್ಥವಾಗಬೇಕಾಗಿದೆ.

ಇದನ್ನು ಕುರಾನ್ ಮತ್ತು ಗೀತಾದಲ್ಲಿ ಉಲ್ಲೇಖಿಸಲಾಗಿದೆ ಎಂದಿರುವುದಲ್ಲದೆ, ಮಹಾಭಾರತದ ಭಗವದ್ಗೀತೆಯ ಭಾಗವೊಂದರಲ್ಲಿ ಅರ್ಜುನನಿಗೆ ಶ್ರೀಕೃಷ್ಣ ಜಿಹಾದಿನ ಪಾಠಗಳನ್ನು ಬೋಧಿಸುತ್ತಾನೆ ಎಂದು ಹೇಳಿಕೆ ನೀಡಿ ಜಾತಿಯೆಂಬ ವಿಷಯಕ್ಕೆ

ಉನ್ನತ ಮಟ್ಟದ ಹುದ್ದೆಯನ್ನು ಅಲಂಕರಿಸಿ ಶಿವರಾಜ್ ಪಾಟೀಲ್ ಅವರು 2004 ರಿಂದ 2008ರವರೆಗೆ ಯುಪಿಎ ಮೊದಲ ಅವಧಿಯಲ್ಲಿ ಕೇಂದ್ರ ಗೃಹ ಸಚಿವರಾಗಿದ್ದರು. 1991 ರಿಂದ 1996ರವರೆಗೂ ಅವರು ಲೋಕಸಭೆ ಸ್ಪೀಕರ್ ಆಗಿಯೂ ಕಾರ್ಯ ನಿರ್ವಹಿಸಿದ್ದಾರೆ.

ಇಂತಹ ಮಹತ್ತರ ಸ್ಥಾನದಲ್ಲಿ ಇದ್ದರೂ ಕೂಡ ನಾಲಿಗೆ ಹರಿಬಿಟ್ಟು ವಿವಾದ ಮೈಮೇಲೆ ಎಳೆದುಕೊಂಡಿರುವುದು ಮಾತ್ರ ವಿಪರ್ಯಾಸ.

ಶಿವರಾಜ್ ಪಾಟೀಲ್ ಅವರ ಜಿಹಾದಿ ಹೇಳಿಕೆಗೆ ಬಿಜೆಪಿ ಖಾರವಾಗಿ ಪ್ರತಿಕ್ರಿಯಿಸಿದ್ದು, ಕಾಂಗ್ರೆಸ್ ಪಕ್ಷವು ‘ಹಿಂದೂ ದ್ವೇಷಿ’ ಮತ್ತು ಶ್ರೀರಾಮನ ಅಸ್ತಿತ್ವವನ್ನು ವಿರೋಧಿಸುತ್ತಿದೆ ಎಂದು ಬಿಜೆಪಿ ವಕ್ತಾರ ಶೆಹಜಾದ್ ಜೈ ಹಿಂದ್ ಆರೋಪಿಸಿದ್ದಾರೆ.

ಹಿಂದೂ ದ್ವೇಷ ಕಾಕತಾಳೀಯವಲ್ಲ. ಅದು ಮತ ಬ್ಯಾಂಕ್‌ನ ಪ್ರಯೋಗವಾಗಿದ್ದು, ಗುಜರಾತ್ ಚುನಾವಣೆಗೂ ಮುನ್ನ ಮತಬ್ಯಾಂಕ್ ಅನ್ನು ಕೇಂದ್ರೀಕರಿಸಲು ಇರುವ ಪೂರ್ವ ತಯಾರಿ ಎಂದು ಶೆಹಜಾದ್ ವಾಗ್ದಾಳಿ ನಡೆಸಿದ್ದಾರೆ.

ಎಎಪಿಯ ಗೋಪಾಲ್ ಇಟಾಲಿಯಾ ಮತ್ತು ರಾಜೇಂದ್ರ ಪಾಲ್ ಅವರ ಬಳಿಕ ಹಿಂದೂ ದ್ವೇಷ ಮತ್ತು ಮತಬ್ಯಾಂಕ್ ರಾಜಕಾರಣ ಮುಂದುವರಿಯುತ್ತಿದ್ದು, ಶ್ರೀಕೃಷ್ಣ ಅರ್ಜುನನಿಗೆ ಜಿಹಾದ್ ಬೋಧಿಸಿದ್ದ ಎಂದು ಕಾಂಗ್ರೆಸ್‌ನ ಶಿವರಾಜ್ ಪಾಟೀಲ್ ಹೇಳುತ್ತಾರೆ ಎಂದು ಟ್ವೀಟ್ ಮಾಡಿದ್ದಾರೆ.

ಹಿಂದೂ/ ಕೇಸರಿ ಭಯೋತ್ಪಾದನೆ ಎಂಬ ಪದವನ್ನು ಕಾಂಗ್ರೆಸ್ ಸೃಷ್ಟಿಸಿ, ರಾಮ ಮಂದಿರ ನಿರ್ಮಾಣ ಕಾರ್ಯಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿ, ಶ್ರೀರಾಮನ ಅಸ್ತಿತ್ವವನ್ನು ಪ್ರಶ್ನಿಸಿತ್ತು. ಇದಲ್ಲದೆ, ಹಿಂದುತ್ವವನ್ನು ಐಸಿಸ್ ಗೆ ಹೋಲಿಕೆ ಎಂದು ಕೂಡ ಹೇಳಿತ್ತು ಎಂದು ಶೆಹಜಾದ್ ಕಿಡಿಕಾರಿದ್ದಾರೆ.

Leave A Reply

Your email address will not be published.