ಕೊರೊನಾದಿಂದ ಹೆಣ್ಣುಮಕ್ಕಳ ಆರೋಗ್ಯದಲ್ಲಾಗಿದೆ ಪ್ರಮುಖ ಬದಲಾವಣೆ – ಸಮೀಕ್ಷೆ ಶಾಕಿಂಗ್ ನ್ಯೂಸ್

ಜಗತ್ತು ಎಂದು ಕೇಳಿರದ ಕೊರೊನಾ ಮಹಾಮಾರಿಯಿಂದ ಇಡೀ ವಿಶ್ವದಲ್ಲೇ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದ್ದು ಎಲ್ಲರಿಗೂ ತಿಳಿದಿದೆ.


Ad Widget

Ad Widget

Ad Widget

Ad Widget
Ad Widget

Ad Widget

ಈ ಮಹಾಮಾರಿಯನ್ನು ತಡೆಗಟ್ಟಲು ಬಹುತೇಕ ದೇಶಗಳು ಲಾಕ್ ಡೌನ್ ಮಂತ್ರವನ್ನು ಜಪಿಸಿ ಆತಂಕದಲ್ಲೆ ದಿನಗಳನ್ನು ದೂಡಿದ ಜೊತೆಗೆ ಸಾಕಷ್ಟು ಸಾವು ಬದುಕಿನ ಹೋರಾಟ ನಡೆಸಿದ ಘಟನೆಗಳು ನಡೆದಿವೆ.


Ad Widget

ಈ ಮಧ್ಯೆ ಲಾಕ್ ಡೌನ್ ನಿಂದ ಮಹಿಳೆಯರ ಆರೋಗ್ಯದ ಮೇಲೂ ಗಂಭೀರ ಪರಿಣಾಮ ಬೀರಿದ್ದು, ಅತಿಯಾದ ಒತ್ತಡ ಮತ್ತು ಭೀತಿಯಿಂದ ಮಹಿಳೆಯರು ಋತುಚಕ್ರದ ಸಮಸ್ಯೆ ಎದುರಿಸಿದ್ದಾರೆ.

ದಿನಗಟ್ಟಲೆ ಮನೆಯಲ್ಲಿ ಲಾಕ್ ಆಗಿರುವ ಕಾರಣ, ಮಹಿಳೆಯರ ಊಟ, ನಿದ್ರೆ ಮತ್ತು ದೈಹಿಕ ಚಟುವಟಿಕೆಗಳಲ್ಲಿ ಭಾರಿ ವ್ಯತ್ಯಾಸವಾಗಿದೆ. ಇದು ಋತುಚಕ್ರದ ಮೇಲೂ ಪ್ರಭಾವ ಬೀರಿದಿರುವ ಬಗ್ಗೆ ವೈದ್ಯರು ಮಾಹಿತಿ ನೀಡಿದ್ದಾರೆ.

ವಿಶ್ವದ ದೇಶಗಳನ್ನು ಬೆಚ್ಚಿಬೀಳಿಸಿರುವ ಕೊರೊನಾ ವೈರಸ್ ಮಾನವನ ಜೀವನ ವಿಧಾನವನ್ನು ಸಂಪೂರ್ಣವಾಗಿ ಬದಲಾಯಿಸಿದೆ. ಸಾಂಕ್ರಾಮಿಕ ರೋಗದ ಹರಡುವಿಕೆಯಿಂದಾಗಿ, ಮಾನವನ ಜೀವನ ವಿಧಾನದಲ್ಲಿ ಆಹಾರ ಪದ್ಧತಿಯಿಂದ ಇತರ ವಿಷಯಗಳವರೆಗೆ ಅನೇಕ ಬದಲಾವಣೆಗಳು ಸಂಭವಿಸಿವೆ.

ಅತಿಯಾದ ಒತ್ತಡ, ಆತಂಕ ಕೆಲವರಲ್ಲಿ ತಲೆನೋವು ಉಂಟಾಗುವ ಹಾಗೆಯೇ, ಋತುಚಕ್ರಕ್ಕೂ ಅಡ್ಡಿಯುಂಟು ಮಾಡಿತ್ತು. ನಿಯಮಿತ ಅವಧಿಯಲ್ಲಿ ಋತುಸ್ರಾವ ಸಂಭವಿಸಲು ನಿರ್ದಿಷ್ಟ ದಿನಚರಿ ಮತ್ತು ಆರೋಗ್ಯಕರ ಜೀವನ ನಡೆಸಬೇಕು

.ಇತ್ತೀಚಿನ ಸಮೀಕ್ಷೆಯಲ್ಲಿ, ಕರೋನಾ ಸಾಂಕ್ರಾಮಿಕ ರೋಗದಿಂದಾಗಿ, ಹೆಣ್ಣುಮಕ್ಕಳ ದೇಹದಲ್ಲಿ ಆಗುತ್ತಿರುವ ಬದಲಾವಣೆಗಳ ಬಗ್ಗೆ ಆಘಾತಕಾರಿ ವಿಷಯಗಳು ಬೆಳಕಿಗೆ ಬಂದಿದ್ದು, ಕರೋನಾ ನಂತರ ಹೆಣ್ಣುಮಕ್ಕಳಲ್ಲಿ ಅಕಾಲಿಕ ಮುಟ್ಟಿನ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ ಎಂದು ವರದಿಯಾಗಿದೆ.

ಸಾಮಾನ್ಯವಾಗಿ, ಹೆಣ್ಣುಮಕ್ಕಳು 13 ರಿಂದ 16 ವರ್ಷ ವಯಸ್ಸಿನೊಳಗೆ ಋತುಮತಿಯಾಗುತ್ತಾರೆ. ಕೊರೋನಾ ಸಾಂಕ್ರಾಮಿಕದ ನಂತರ ಹೆಚ್ಚಿನ ಹೆಣ್ಣುಮಕ್ಕಳು ಎಂಟನೇ ವಯಸ್ಸಿನಲ್ಲಿ ಋತುಮತಿಯಾಗುತ್ತಿರುವ ಕುರಿತು ವೈದ್ಯರು ಅಚ್ಚರಿಯ ಜೊತೆಗೆ ಕಳವಳ ವ್ಯಕ್ತಪಡಿಸಿದ್ದಾರೆ.

ಪಿಟ್ಯುಟರಿ ಗ್ರಂಥಿಯು ದೇಹದಲ್ಲಿ ಉತ್ಪತ್ತಿಯಾಗುವ ಎಲ್ಲಾ ಹಾರ್ಮೋನುಗಳ ಮಟ್ಟವನ್ನು ಮೇಲ್ವಿಚಾರಣೆ ಮಾಡುತ್ತದೆ. ದೇಹವು ಒಂದು ನಿರ್ದಿಷ್ಟ ತೂಕವನ್ನು ತಲುಪಿದಾಗ ಈ ಗ್ರಂಥಿಯು ಪ್ರೌಢಾವಸ್ಥೆಯನ್ನು ಪ್ರಚೋದಿಸುತ್ತದೆ. ಇದರಿಂದ ಹುಡುಗಿಯರಲ್ಲಿ ಪಿರಿಯಡ್ಸ್ ಶುರುವಾಗುತ್ತದೆ. ಕೆಲವು ದೈಹಿಕ ಚಟುವಟಿಕೆಯನ್ನು ಪಡೆಯುವುದು ಆರಂಭಿಕ ಋತುಬಂಧವನ್ನು ತಡೆಯಲು ಸಹಾಯ ಮಾಡುತ್ತದೆ.

ದೆಹಲಿಯ ಪ್ರಖ್ಯಾತ ಪೀಡಿಯಾಟ್ರಿಕ್ ಎಂಡೋಕ್ರೈನಾಲಜಿಸ್ಟ್ ವೈದ್ಯರು ಈ ವಿಷಯ ಬಹಿರಂಗ ಪಡಿಸಿದ್ದಾರೆ. ಕೇವಲ ಎಂಟು ವರ್ಷದ ಬಾಲಕಿ ಗೆ ಆ ವಯಸ್ಸಿನಲ್ಲಿಯೇ ಪಿರಿಯಡ್ಸ್ ಶುರುವಾಗಿದ್ದು, ಕೊರೋನಾ ಎಂಬ ಮಹಾಮಾರಿ ಯ ಆಕ್ರಮಣದ ಮೊದಲು (ಅರ್ಲಿ ಪ್ಯೂಬರ್ಟಿ) ಪ್ರಕರಣಗಳು ತಿಂಗಳಿಗೆ ಕೇವಲ 10ಕೇಸ್ಗಳು ಮಾತ್ರ ವರದಿಯಾಗುತ್ತಿತ್ತು.

ಆದರೆ ಕೋವಿಡ್ -19 ನಂತರ, ಇದು 30 ಪ್ರಕರಣಗಳನ್ನು ದಾಟುತ್ತಿದೆ. ಇದು ಬರೀ ನಮ್ಮ ದೇಶದಲ್ಲಿ ಮಾತ್ರವಲ್ಲದೆ ಇಟಲಿ, ಟರ್ಕಿ ಮತ್ತು ಅಮೆರಿಕದಲ್ಲೂ ಈ ರೀತಿಯ ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗಿ ನಡೆಯುತ್ತಿವೆ.

ಕೊರೊನಾ ನಿಯಂತ್ರಿಸಲು ಸರ್ಕಾರಗಳು ವಿಧಿಸಿರುವ ಲಾಕ್‌ಡೌನ್ ನಿರ್ಬಂಧಗಳು ಇದಕ್ಕೆ ಮುಖ್ಯ ಕಾರಣವೆಂದು ಅಂದಾಜಿಸಲಾಗಿದೆ.

ಲಾಕ್‌ಡೌನ್‌ನಿಂದ ಶಿಕ್ಷಣ ಸಂಸ್ಥೆಗಳು ಮುಚ್ಚಲ್ಪಟ್ಟು, ಮಕ್ಕಳು ಮನೆಯಿಂದ ಹೊರಗೆ ಕಾಲಿಡದೆ, ಮನೆಯಲ್ಲಿ ಯಾವುದೇ ಆಟಗಳನ್ನು ದೈಹಿಕ ಚಟುವಟಿಕೆ ಯಲ್ಲಿ ತೊಡಗಿಸದೆ ಕೇವಲ ವಿಡಿಯೋ ಗೇಮ್‌, ಟಿವಿ ಮುಂತಾದವುಗಳ ಮೊರೆ ಹೋಗಿದ್ದೆ ಹೆಚ್ಚು.

ಇದು ಅವರ ಚಯಾಪಚಯದ ಮೇಲೆ ಪರಿಣಾಮ ಬೀರುತ್ತದೆ .ಮಕ್ಕಳ ದೇಹಕ್ಕೆ ದೈಹಿಕ ಚಟುವಟಿಕೆ ಅತ್ಯಗತ್ಯ ವಾಗಿದ್ದು, ನಮ್ಮ ಮೆದುಳು ಮತ್ತು ನಮ್ಮ ದೇಹವು ಎತ್ತರವನ್ನು ಪರಿಗಣಿಸದೆ ಕೇವಲ ತೂಕವನ್ನು ಮಾತ್ರ ಪರಿಗಣಿಸುತ್ತದೆ.

ಇದಲ್ಲದೆ, ಹಾರ್ಮೋನ್ ಗಳಲ್ಲಿ ಅಸಮತೋಲನ ಹೆಚ್ಚಾದರೆ, ಕೂದಲು ಉದುರಲು ಆರಂಭವಾಗುವ ಜೊತೆಗೆ ತೂಕದಲ್ಲೂ ವ್ಯತ್ಯಾಸವಾಗುತ್ತದೆ. ಹೀಗಾಗಿ, ಮಹಿಳೆಯರು ಆರೋಗ್ಯಕರ ಜೀವನ ಕ್ರಮವನ್ನು ಅನುಸರಿಸಲು ವೈದ್ಯರು ಸಲಹೆ ನೀಡಿದ್ದಾರೆ.

ಕೋವಿಡ್ 19 ರ ಅಡ್ಡ ಪರಿಣಾಮಗಳಲ್ಲಿ ರಕ್ತಹೆಪ್ಪುಗಟ್ಟುವಿಕೆಯೂ (blood clot) ಸೇರಿದ್ದು, ಮುಟ್ಟಿನ ಸಮಯದಲ್ಲಿ ರಕ್ತದ ಹೆಪ್ಪುಗಟ್ಟುವಿಕೆಯು ಕಳವಳ ಪಡುವ ವಿಚಾರವಲ್ಲದೆ ಹೋದರೂ ಕೂಡ ಕೋವಿಡ್ 19 ರ ನಂತರ ಸಂಭವಿಸುವ ಈ ರಕ್ತ ಹೆಪ್ಪುಗಟ್ಟುವಿಕೆಗಳು ರಕ್ತಹೀನತೆ ಮತ್ತು ಇತರ ಸಮಸ್ಯೆಗಳನ್ನು ಉಂಟುಮಾಡಿದೆ.

ಆದುದರಿಂದ ಹೆಚ್ಚು ಜಾಗರೂಕರಾಗಿರುವ ಜೊತೆಗೆ ಇಂತಹ ಸಮಸ್ಯೆ ಎದುರಾದಾಗ ವೈದ್ಯರನ್ನೂ ಭೇಟಿ ಮಾಡುವುದು ಉತ್ತಮ.

ಇವೆಲ್ಲವನ್ನೂ ಮೀರಿ ಕೋವಿಡ್‌ ನಂತರದ ಈ ವರ್ಷಗಳಲ್ಲಿ ಮನುಷ್ಯನ ವ್ಯಕ್ತಿತ್ವ ಕೂಡ ಬದಲಾಗಿದೆ . ಒತ್ತಡ ಅಥವಾ ಆಘಾತವನ್ನು ಉಂಟುಮಾಡುವ ನಮ್ಮ ವೈಯಕ್ತಿಕ ಜೀವನದ ಗಮನಾರ್ಹ ಘಟನೆಗಳು ನಮ್ಮ ವ್ಯಕ್ತಿತ್ವವನ್ನು ಕೆಲವೊಮ್ಮೆ ಬದಲಾಯಿಸುತ್ತವೆ.

ಹೀಗೆ ಕೋವಿಡ್‌ ಮನುಷ್ಯರ ನಡವಳಿಕೆ ಮೇಲೆ ಪ್ರಭಾವ ಬೀರಿದೆ ಎಂದು PLOS ONE ನಲ್ಲಿ ಪ್ರಕಟವಾದ ಹೊಸ ಅಧ್ಯಯನವು ತಿಳಿಸಿದೆ.

error: Content is protected !!
Scroll to Top
%d bloggers like this: