ನಾಯಿನೂ ಹೆಲ್ಮೆಟ್ ಹಾಕಬಹುದು ಕಣ್ರೀ!

ಸಾಮಾಜಿಕ ಜಾಲತಾಣಗಳಲ್ಲಿ ಮನರಂಜನೆಗೆ ಏನು ಕೊರತೆ ಅಂತೂ ಇಲ್ಲ ಬಿಡಿ. ಒಂದಷ್ಟು ಮೀಮ್ಸ್, ಟ್ರೋಲ್ ಮತ್ತು ವಿಡಿಯೋ ಜೊತೆಗೆ ಯಾವಾಗಲೂ ಜನರನ್ನ ನಕ್ಕು ನಗಿಸುತ್ತದೆ.
ಹಾಗಾಗಿ ಜನರು ಸಾಕಷ್ಟು ಬಾರಿ ಸಾಮಾಜಿಕ ಜಾಲತಾಣಗಳನ್ನು ಮನರಂಜನೆಗಾಗಿ ಕೂಡ ಬಳಸುತ್ತಾರೆ. ಇದೀಗ ಅಂತದ್ದೇ ವಿಷಯಕ್ಕೆ ಸೀಮಿತವಾಗಿರುವಂತಹ ವಿಡಿಯೋ ವೈರಲ್ ಆಗಿದೆ.

ಸಿಗ್ನಲ್ ಗಳಲ್ಲಿ ಬೈಕ್ ಸವಾರರು ಹೆಲ್ಮೆಟ್ ಹಾಕಿಲ್ಲ ಅಂದ್ರೆ ಪೊಲೀಸರು ದಂಡ ವಿಧಿಸುವುದಂತು ಪಕ್ಕ. ಪೊಲೀಸರ ಭಯಕ್ಕಾಗಿ ಆದ್ರೂ ಹೆಲ್ಮೆಟ್ ಅನ್ನು ಧರಿಸುವವರು ಇದ್ದಾರೆ. ಇನ್ನು ಇತರ ಚಾಲಕರಂತೂ ಸೀಟ್ ಬೆಲ್ಟ್ ಅನ್ನು ಹಾಕುವುದು ಕಡ್ಡಾಯವಾಗಿದೆ. ಈ ರೀತಿಯಾದಂತಹ ಕಾನೂನುಗಳು ಮಾಡುವುದು ಮನುಷ್ಯನ ರಕ್ಷಣೆಗಾಗಿ ಹೊರೆತು ಅವರ ಹಿಂಸೆಗಳಿಗಾಗಿ ಅಲ್ಲ.

https://www.instagram.com/reel/Ci-rwpGM8TZ/?igshid=YmMyMTA2M2Y=

ಮನುಷ್ಯರು ಸವಾರಿ ಮಾಡಬೇಕಾದರೆ ಹೆಲ್ಮೆಟ್ ಧರಿಸಲು ಇಷ್ಟು ಹಿಂಜರಿಯ ಬೇಕಾದರೆ ಇಲ್ಲೊಂದು ಶ್ವಾನ ಏನು ಮಾಡಿದೆ ಗೊತ್ತಾ? ನನಗಂತೂ ಯಾವುದೇ ರೂಲ್ಸ್ ಇಲ್ಲ ಹಾಗಾಗಿ ಕಲ್ಲಂಗಡಿ ಹಣ್ಣಿನ ಹೆಲ್ಮೆಟ್ ಮಾಡಿಕೊಳ್ಳುತ್ತೇನೆ ಎನ್ನುವ ಹಾಗೆ ಖುಷಿಖುಷಿಯಾಗಿ ಇದೆ. ಇದರ ಮಾಲೀಕರು ಚಂದವಾಗಿ ಕಲ್ಲಂಗಡಿಯಿಂದ ಹೆಲ್ಮೆಟ್ ಅನ್ನು ಮಾಡಿ ನಾಯಿಗೆ ಧರಿಸಿದ್ದಾರೆ. ಕಸದಿಂದ ರಸ ಅಂತ ಹೇಳುವುದು ಇಂತಹುಗಳಿಗೆ ಅಲ್ವಾ?

ಆ ಹೆಲ್ಮೆಟ್ ಹಾಕುವಾಗಲೂ ಕೂಡ ಶ್ವಾನ ಯಾವುದೇ ರೀತಿಯ ಕಿರಿಕಿರಿಯನ್ನು ಮಾಲೀಕರಿಗೆ ಕೊಡುವುದಿಲ್ಲ. ಖುಷಿಖುಷಿಯಾಗಿ ಹೆಲ್ಮೆಟ್ ಹಾಕಿಕೊಂಡು ಪೋಸ್ ಕೊಡುತ್ತೆ. ಇದೀಗ ಈ ವಿಡಿಯೋ ಎಲ್ಲಾ ಕಡೆ ಸಕ್ಕತ್ತು ಸದ್ದು ಮಾಡ್ತಾ ಇದೆ. ಅಬ್ಬಬ್ಬಾ ನಾಯಿ ಕೂಡ ಹೆಲ್ಮೆಟ್ ಹಾಕೊಳ್ಬೋದ ಅಂತ ಯೋಚಿಸುತ್ತ ಇದ್ದೀರಾ! ವಿಡಿಯೋನೇ ಇದೆ ಅಲ್ವಾ ಸಾಕ್ಷಿಗೆ ನೋಡಿ ಎಂಜಾಯ್ ಮಾಡಿ.

Leave A Reply

Your email address will not be published.