ಪರೀಕ್ಷೆಯ ನಕಲು ಚೀಟಿಯನ್ನು ಲವ್ ಲೆಟರ್ ಎಂದು ತಿಳಿದ ವಿದ್ಯಾರ್ಥಿನಿ | ಚೀಟಿ ಎಸೆದ ಬಾಲಕನ ಶಿರಚ್ಛೇದ ಮಾಡಿದ ಬಾಲಕರು
ಬಿಹಾರದಲ್ಲಿ (Bihar) ದಲ್ಲೊಂದು ಮನಕರಗುವ ಘಟನೆಯೊಂದು ನಡೆದಿದೆ. ಭೋಜ್ ಪುರ ಜಿಲ್ಲೆಯಲ್ಲಿ (Bhojpur District) ಅರ್ಧ ವಾರ್ಷಿಕ ಪರೀಕ್ಷೆಗೆ (Exam) ಹಾಜರಾಗಿದ್ದ ಬಾಲಕನನ್ನು ವಿದ್ಯಾರ್ಥಿನಿಯೊಬ್ಬಳ ಸಹೋದರರು ಕೊಚ್ಚಿ ಕೊಲೆಗೈದ ಘಟನೆಯದು ನಡೆದಿದೆ.
ವಿದ್ಯಾರ್ಥಿನಿಯೊಬ್ಬಳ ಕುಟುಂಬಸ್ಥರು, 12 ವರ್ಷದ ಬಾಲಕನನ್ನು ಕಡಿದು ಹತ್ಯೆಗೈದಿದ್ದಾರೆ. ಬಾಲಕ ಪರೀಕ್ಷೆಯಲ್ಲಿ ನಕಲು ಮಾಡುವಾಗ ಆದ ಸಣ್ಣ ತಪ್ಪು, ಅಪಾರ್ಥಕ್ಕೆ ಕಾರಣವಾಗಿ ಈಗ ಬಾಲಕನ ಹೆಣ ಬಿದ್ದಿದೆ. ವಾಸ್ತವದಲ್ಲಿ ಬಾಲಕ ಪರೀಕ್ಷೆ ವೇಳೆ ನಕಲು ಮಾಡುತ್ತಿದ್ದ ಚೀಟಿಯನ್ನು ಎಸೆದಿದ್ದ. ಆ ಚೀಟಿ ಆ ವಿದ್ಯಾರ್ಥಿನಿಯೋರ್ವಳ ಕೈಗೆ ಸಿಕ್ಕಿತ್ತು. ಆದರೆ ಆಕೆ ಅದನ್ನು ಲವ್ ಲೆಟರ್ ಎಂದು ತಪ್ಪಾಗಿ ತಿಳಿದುಕೊಂಡಿದ್ದಾಳೆ. ಈ ಅಪಾರ್ಥ ಬಾಲಕನ ಜೀವವನ್ನೇ ಕೊಂಡು ಹೋಗಿದೆ. ಪರೀಕ್ಷೆ ವೇಳೆ ಬಾಲಕನೊಬ್ಬ ನಕಲು ಮಾಡುತ್ತಿದ್ದ. ಈ ವೇಳೆ ನಕಲು ಮಾಡುತ್ತಿದ್ದ ಚೀಟಿಯನ್ನು ವಿದ್ಯಾರ್ಥಿನಿಗೆ ಎಸೆದಿದ್ದ.
ಇದನ್ನು ವಿದ್ಯಾರ್ಥಿನಿ ಲವ್ ಲೆಟರ್ ಎಂದು ತಪ್ಪಾಗಿ ತಿಳಿದಿದ್ದಳು. ಇದೇ ವಿಷಯದಲ್ಲಿ ಆಕೆಯ ಕುಟುಂಬಸ್ಥರು 12 ವರ್ಷದ ಬಾಲಕನ್ನು ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿದ್ದಾರೆ. ಈ ಘಟನೆ ಕಳೆದ ವಾರ ಬಿಹಾರದ ಭೋಜ್ ಪುರ ಜಿಲ್ಲೆಯಲ್ಲಿ ಈ ಘಟನೆ ನಡೆದಿತ್ತು.
ಕೊಲೆ ಮಾಡಿ ಬಾಲಕನ ಶವವನ್ನು ಮಹತ್ವಾನಿಯಾ ಹಾಲ್ಡ್ ಸ್ಟೇಷನ್ ಬಳಿಯ ರೈಲ್ವೆ ಹಳಿಯ ಪಕ್ಕದಲ್ಲಿ ಬಿಸಾಡಲಾಗಿತ್ತು. ಈಗ ಪೊಲೀಸರು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ಬಾಲಕನ ದೇಹದ ಭಾಗಗಳನ್ನು ಸೋಮವಾರ ಪತ್ತೆ ಹಚ್ಚಿದ್ದಾರೆ.
ಪೊಲೀಸರು ಬಾಲಕಿಯ ಸಹೋದರ ಮತ್ತು ಆತನ ಸ್ನೇಹಿತರನ್ನು ಬಂಧಿಸಿದ್ದು, ಮುಂದಿನ ತನಿಖೆ ಆರಂಭಿಸಿದ್ದಾರೆ. ಈ ವಿಚಾರದಲ್ಲಿ ಪೊಲೀಸರು ರಾಜ್ಯ ವಿಧಿ ವಿಜ್ಞಾನ ಪ್ರಯೋಗಾಲಯದ ಸಹಾಯವನ್ನೂ ಪಡೆದಿದ್ದಾರೆ.
ಪೊಲೀಸರ ಪ್ರಕಾರ, ಬಾಲಕನ ಶಿರಚ್ಛೇದ ಮಾಡಲಾಗಿದೆ. ಮತ್ತು ಅವನ ಕೈ ಮತ್ತು ಕಾಲುಗಳನ್ನು ಸಹ ಕತ್ತರಿಸಲಾಗಿದೆ ಎಂದು ತಿಳಿಸಿದ್ದಾರೆ. ಬಾಲಕನ ಹತ್ಯೆಗೈದಿರುವ ದಾಳಿಕೋರರು ಅಪ್ರಾಪ್ತ ವಯಸ್ಸಿನವರಾಗಿದ್ದು ಪೊಲೀಸರು ಅವರನ್ನು ಬಾಲಾಪರಾಧಿಗೃಹಕ್ಕೆ ಕಳುಹಿಸಿದ್ದಾರೆ. ಬಂಧಿತರಲ್ಲಿ ನಾಲ್ವರು ಬಾಲಾಪರಾಧಿಗಳು ಮತ್ತು ಬಾಲಕಿಯ ಕುಟುಂಬದ ಉಳಿದ ವಯಸ್ಕ ಸದಸ್ಯರು ಸೇರಿದ್ದಾರೆ. ಯುವಕರನ್ನು ಜೈಲಿಗೆ ಕಳುಹಿಸಲಾಗಿದೆ.