Oppo A17K : ಒಪ್ಪೋದಿಂದ ಬಜೆಟ್ ಫ್ರೆಂಡ್ಲಿ ಫೋನ್ ಬಿಡುಗಡೆ | ಗಿಫ್ಟ್ ನೀಡಲು ಬಯಸೋದಾದರೆ ಒಮ್ಮೆ ಕಣ್ಣಾಡಿಸಿ!!!
ಜನಪ್ರಿಯ ಸ್ಮಾರ್ಟ್ಫೋನ್ ಬ್ರ್ಯಾಂಡ್ Oppo ಕಳೆದ ವರ್ಷ ನವೆಂಬರ್ನಲ್ಲಿ Oppo A16K ಅನ್ನು ಲಾಂಚ್ ಮಾಡಿದ ಬೆನ್ನಲ್ಲೆ, ತನ್ನ ಮತ್ತೊಂದು A-ಸರಣಿಯ ಸ್ಮಾರ್ಟ್ಫೋನನ್ನು ಬಿಡುಗಡೆಗೊಳಿಸಿ ಜನರಿಗೆ ಕೈಗೆಟಕುವ ದರದಲ್ಲಿ ಪಡೆದುಕೊಳ್ಳುವ ಸುವರ್ಣ ಅವಕಾಶ ಕಲ್ಪಿಸಿ, ದೇಶದ ಬಜೆಟ್ ಬೆಲೆಯ ಸ್ಮಾರ್ಟ್ಫೋನ್ ಖರೀದಿದಾರರನ್ನು ಗುರಿಯಾಗಿಸಿಕೊಂಡು ಕಳೆದ ತಿಂಗಳಷ್ಟೇ Oppo A17 ಹೆಸರಿನ ಹೊಸ ಸ್ಮಾರ್ಟ್ಫೋನನ್ನು ಮಾರುಕಟ್ಟೆಗೆ ಪರಿಚಯಿಸಿತ್ತು.
ಇದೀಗ ಇದರ ಮುಂದುವರೆದ ಭಾಗವಾಗಿ ಎ17ಕೆ (Oppo A17K) ಎಂಬ ಮತ್ತೊಂದು ಸ್ಮಾರ್ಟ್ಫೋನನ್ನು ಲಾಂಚ್ ಮಾಡಿದೆ. ಕಳೆದ ಕೆಲವು ತಿಂಗಳುಗಳಿಂದ ಚೀನಾ ಮೂಲದ ಒಪ್ಪೋ ಸಂಸ್ಥೆ ಭಾರತದಲ್ಲಿ ಒಂದರ ಹಿಂದೆ ಒಂದರಂತೆ ಆಕರ್ಷಕ ಸ್ಮಾರ್ಟ್ಫೋನ್ಗಳನ್ನು ಬಿಡುಗಡೆ ಮಾಡುತ್ತಿದೆ ಹೆಚ್ಚು ಬಜೆಟ್ ಬೆಲೆಗೆ ಅತ್ಯುತ್ತಮ ಕ್ಯಾಮೆರಾ, ಬ್ಯಾಟರಿಯ ಫೋನನ್ನು ಅನಾವರಣ ಮಾಡುತ್ತಿರುವ ಒಪ್ಪೋ ಅದೇ ಮಮಾದರಿಯ ಮತ್ತೊಂದು ಮೊಬೈಲ್ ಅನಾವರಣಗೊಳಿಸಿದೆ.
ಎ17ಕೆ (Oppo A17K) ಸ್ಮಾರ್ಟ್ಫೋನನ್ನು ಬಜೆಟ್ ಬೆಲೆಯ ಜೊತೆಗೆ ಆಕರ್ಷಕ ವಿನ್ಯಾಸ, ಉತ್ತಮ ಬ್ಯಾಟರಿ, ಕ್ಯಾಮೆರಾಗಳನ್ನು (Camera) ಹೊಂದಿದೆ. ಒಪ್ಪೋ A17 ಸ್ಮಾರ್ಟ್ಫೋನ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 8 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದಲ್ಲಿದೆ.
ವಿಡಿಯೋ ಕರೆಗಳು ಹಾಗೂ ಸೆಲ್ಫಿಗಾಗಿ 5 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ.
ಇನ್ನು ಕ್ಯಾಮೆರಾ ಫೀಚರ್ಸ್ಗಳಲ್ಲಿ ನೈಟ್ ಮೋಡ್, ಟೈಮ್ ಲಾಪ್ಸ್, ಎಕ್ಸಪರ್ಟ್, ಪನೋರಮಾ ಮತ್ತು ಗೂಗಲ್ ಲೆನ್ಸ್ ಅನ್ನು ಹೊಂದಿದ್ದು, ದೀರ್ಘ ಸಮಯ ಬಾಳಿಕೆ ಬರುವ 5000mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ.
ಇದು ಸೂಪರ್ ಪವರ್ ಸೇವಿಂಗ್ ಮೋಡ್ ಮತ್ತು ಸೂಪರ್ ನೈಟ್ಟೈಮ್ ಸ್ಟ್ಯಾಂಡ್ಬೈ ಅನ್ನು ಪಡೆದುಕೊಂಡದೆ. ಡ್ಯಯೆಲ್ ಸಿಮ್, ವೈ-ಫೈ 5, ಬ್ಲೂಟೂತ್ v5.3, ಮೈಕ್ರೊ ಯುಎಸ್ಬಿ ಪೋರ್ಟ್ ಸಿಯಿಂದ ಕೂಡಿದೆ.
ಈ ಸ್ಮಾರ್ಟ್ಫೋನ್ 720 x 1600 ಪಿಕ್ಸೆಲ್ ಸ್ಕ್ರೀನ್ (HD+ ರೆಸಲ್ಯೂಶನ್ )ಮತ್ತು ವಾಟರ್ಡ್ರಾಪ್ ನಾಚ್ನೊಂದಿಗೆ 6.56-ಇಂಚಿನ ಡಿಸ್ಪ್ಲೇ 60Hz ರಿಫ್ರೆಶ್ ರೇಟ್ನಿಂದ ಕೂಡಿದೆ. ಇದು 8.29 ಮಿಮೀಗಳಷ್ಟು ದಪ್ಪವಾಗಿದ್ದು ಹುಡ್ ಅಡಿಯಲ್ಲಿ, A17K ಮೀಡಿಯಾ ಟೆಕ್ ಹೆಲಿಯೊ G35 ಚಿಪ್ಸೆಟ್ನಲ್ಲಿ ಕಾರ್ಯನಿರ್ವಹಿಸಲಿದೆ.
ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 12 ಬೆಂಬಲವನ್ನು ಪಡೆದಿದೆ. ಹಾಗೆಯೇ 6GB RAM ಮತ್ತು 64GB ಇಂಟರ್ ಸ್ಟೋರೇಜ್ ಅನ್ನು ಹೊಂದಿದೆ.ಅದು 3GB RAM ಮತ್ತು 64GB ಸಂಗ್ರಹಣೆಯೊಂದಿಗೆ ಪೂರಕವಾಗಿರುತ್ತದೆ .
ಸಾಧನವು ವರ್ಚುವಲ್ RAM ಅನ್ನು 4GB ವರೆಗೆ ವಿಸ್ತರಿಸಲು ಅನುಮತಿಸುತ್ತದೆ. ಇದರ 3GB RAM ಮತ್ತು 64GB ಸ್ಟೋರೇಜ್ ರೂಪಾಂತರಕ್ಕೆ 10,499 ರೂ. ನಿಗದಿ ಮಾಡಲಾಗಿದ್ದು, ಈ ಫೋನ್ ಕಪ್ಪು ಮತ್ತು ಗೋಲ್ಡ್ ಕಲರ್ ಆಯ್ಕೆಗಳಲ್ಲಿ ಖರೀದಿಗೆ ಲಭ್ಯವಿದೆ.
ಸಾಧನವು 10W ವೇಗದ ಚಾರ್ಜಿಂಗ್ನೊಂದಿಗೆ 5,000mAh ಬ್ಯಾಟರಿಯನ್ನು ಸಹ ಹೊಂದಿದ್ದು, ಟಿಪ್ಸ್ಟರ್ ಉಲ್ಲೇಖಿಸಿರುವ ಅತ್ಯಂತ ಆಸಕ್ತಿದಾಯಕ ವೈಶಿಷ್ಟ್ಯವೆಂದರೆ ಸಾಧನವು ಡಿರಾಕ್ 3.0 ಅನ್ನು ಮೊದಲೇ ಸ್ಥಾಪಿಸಲಾಗಿದೆ.
Dirac ಮೂಲಭೂತವಾಗಿ ಕಡಿಮೆ-ಮಟ್ಟದ ಇಯರ್ಫೋನ್ಗಳು ಮತ್ತು ಹೆಡ್ಫೋನ್ಗಳ ಧ್ವನಿ ಗುಣಮಟ್ಟವನ್ನು ಮಾಪನಾಂಕ ನಿರ್ಣಯದ ಮೂಲಕ ಸುಧಾರಿಸುವ ಅಪ್ಲಿಕೇಶನ್ ಅನ್ನು ಕೂಡ ಒಳಗೊಂಡಿದೆ.