ಬಾಲಿವುಡ್ ನಟನನ್ನು ಹೂವಿನ ಚೆಂಡು ಎತ್ತಿದಂತೆ ಸಲೀಸಾಗಿ ಎತ್ತಿ ಗಮನ ಸೆಳೆದ ಮೀರಾಬಾಯಿ ಚಾನು !

ಮುಂಬೈನಲ್ಲಿ ನಡೆದ ಪ್ರಶಸ್ತಿ ಸಮಾರಂಭವೊಂದರ ವೇದಿಕೆಯಲ್ಲಿ ವೈಟ್ ಲಿಫ್ಟಿಂಗ್ ಚಾಂಪಿಯನ್ ಮೀರಾಬಾಯಿ ಚಾನು ಅವರ ಶಕ್ತಿ ಪ್ರದರ್ಶನ ಆಗಿದೆ. ಅವರು ನಟ ಖುರಾನಾ ಅವರನ್ನು ಹೂವಿನ ಚೆಂಡಿನ ಥರ ಮೇಲಕ್ಕೆತ್ತಿ ರಾಜಕುಮಾರನ ಥರ ಕೆಳಕ್ಕಿಳಿಸಿದ್ದಾರೆ. ಈ ವಿಡಿಯೋ ಇಂಸ್ಟ ಗ್ರಾಮ್ ಸೇರಿದಂತೆ ಹಲವು ಸಾಮಾಜಿಕ ಜಾಲತಾಣದಲ್ಲಿ ಈಗ ವೈರಲ್ ಆಗಿದ್ದು, ನೋಡುಗರ ಮೊಗದಲ್ಲಿ ನಗು ಮತ್ತು ಆಕೆಯ ಶಕ್ತಿಯ ಬಗ್ಗೆ ಹೆಮ್ಮೆ ಮೂಡುವಂತೆ ಮಾಡಿದೆ.

 

ವೈಟ್ ಲಿಫ್ಟರ್ ಮೀರಾಬಾಯಿ ಚಾನು ಯಾರಿಗೆ ಗೊತ್ತಿಲ್ಲ ಹೇಳಿ. ಕಳೆದ ಕಾಮನ್‌ವೆಲ್ತ್ ಗೇಮ್ಸ್ 2022 ರ ಚಿನ್ನದ ಪದಕ ವಿಜೇತೆಯಾಗಿರುವ ಮತ್ತು 2020 ರ ಟೋಕಿಯೋ ಒಲಿಂಪಿಕ್ ನಲ್ಲಿ ಬೆಳ್ಳಿ ಎತ್ತಿದ ಮೀರಾಬಾಯಿ ಮೊನ್ನೆ ಕಾಮನ್‌ವೆಲ್ತ್ ಗೇಮ್ಸ್ 2022 ರ 73 ಕೆಜಿ ವಿಭಾಗದಲ್ಲಿ ಚಿನ್ನದ ಪದಕ ಗೆದ್ದ ಅಚಿಂತಾ ಶೆಯುಲಿ ಅವರಿಗೆ ಈ ಸಮಾರಂಭದಲ್ಲಿ ‘ವೇಟ್ ಲಿಫ್ಟರ್ ಆಫ್ ದ ಇಯರ್’ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.

ಪ್ರಶಸ್ತಿಯನ್ನು ಸ್ವೀಕರಿಸಿದ ನಂತರ, ಅವರು ವೇದಿಕೆಯಲ್ಲಿ ಇದ್ದ ಸಮಾರಂಭದ ನಿರೂಪಕ, ನಟ ಅಪಾರಶಕ್ತಿ ಖುರಾನಾ ಅವರನ್ನು  ಅಪಾರ ಶಕ್ತಿ ಪ್ರಯೋಗಿಸುವ ಅಗತ್ಯ ಇಲ್ಲದೆ ಸುಲಭವಾಗಿ ಎತ್ತಿದರು. 201 ಕೆಜಿ ಎತ್ತಿದ ನನಗೆ ಇದ್ಯಾವ ಲೆಕ್ಕ ಎಂಬಂತಹ ಲುಕ್ ಇತ್ತು ಮೀರಾ ಮುಖದಲ್ಲಿ. ಈ ತಮಾಷೆಯ ಕ್ಷಣ ಎಲ್ಲರ ನಗುವಿಗೆ ಕಾರಣವಾಯಿತು.

Leave A Reply

Your email address will not be published.