ವಿದ್ಯಾರ್ಥಿಗೆ ‘ಬ್ಲೂಫಿಲಂ’ ಕಳುಹಿಸಿದ ಪ್ರೊಫೆಸರ್ | ಕಾಮುಕ ಶಿಕ್ಷಕ ಅರೆಸ್ಟ್

ಗುರುವನ್ನು ಗೌರವ ಕೊಟ್ಟು ಪೂಜಿಸುವ ಪದ್ಧತಿ ನಮ್ಮಲ್ಲಿ ಅನಾದಿ ಕಾಲದಿಂದಲೂ ರೂಡಿಯಲ್ಲಿದೆ. ತಪ್ಪನ್ನು ತಿದ್ದಿ ಸನ್ಮಾರ್ಗದಲ್ಲಿ ನಡೆಯಲು ಪ್ರೇರಿಪಿಸುವ ಅತ್ಯನ್ನತ ಸ್ಥಾನದಲ್ಲಿ ಶಿಕ್ಷಕರನ್ನು ಇಡಲಾಗುತ್ತದೆ.

ಆದರೆ ಮತ್ತೊಬ್ಬರನ್ನು ಸರಿ ದಾರಿಗೆ ತರುವ ಗೌರವಯುತ ಸ್ಥಾನದಲ್ಲಿ ಇರುವ ಶಿಕ್ಷಕರೇ ತಪ್ಪು ಮಾಡಿದರೆ?? ಪ್ರಶಿಸುವವರಾರು?.ಹಾಗೆಂದು, ಒಬ್ಬರು ಮಾಡುವ ತಪ್ಪಿನಿಂದ ಇಡೀ ಶಿಕ್ಷಕ ವೃತ್ತಿಯಲ್ಲಿರುವ ಶಿಕ್ಷಕ ವೃಂದವನ್ನು ದೂಷಿಸಲು ಸಾಧ್ಯವಿಲ್ಲ.

ಮಕ್ಕಳ ಲೈಂಗಿಕ ವಿಡಿಯೋ ಕಳಿಸುವುದು, ನೋಡುವುದು ಹಾಗೂ ಸ್ಟೋರ್ ಮಾಡಿರುವುದು ಶಿಕ್ಷಾರ್ಹ ಅಪರಾಧವೆಂಬುದು ಎಲ್ಲರಿಗೂ ತಿಳಿದಿರುವ ವಿಚಾರ.

ಆದರೆ ಮತ್ತೊಬ್ಬರಿಗೆ ಮಾದರಿಯಾಗಬೇಕಿದ್ದ ಗೌರವಯುತ ಸ್ಥಾನದಲ್ಲಿರುವ ಪ್ರೊಫೆಸರ್ ತಮ್ಮ ವಿದ್ಯಾರ್ಥಿಗೆ ವಿಡಿಯೋ ಕಳುಹಿಸಿ ತಮ್ಮ ಹೆಸರಿಗೆ ಮಸಿ ಬಳಿಸಿಕೊಂಡಿರುವ ಘಟನೆ ನಡೆದಿದೆ.

ಬೆಂಗಳೂರಿನ ಪ್ರತಿಷ್ಠಿತ ಕಾಲೇಜಿನ ಪ್ರೊಫೆಸರ್ ವಿರುದ್ಧ ಚೈಲ್ಡ್ ಪೋರ್ನೊಗ್ರಫಿ(Child Pornography) ಕೇಸ್ ದಾಖಲಾಗಿದೆ. ಮಧುಸೂದನ್ ಆಚಾರ್ಯ ಅವರು ತಾವು ಕೆಲಸ ಮಾಡುವ ಕಾಲೇಜಿನ ಓರ್ವ ವಿದ್ಯಾರ್ಥಿಗೆ ಇನ್ಸ್ಟಾಗ್ರಾಮ್ ಮೂಲಕ ವಿಡಿಯೋ ಕಳಿಸಿದ್ದಾರೆ.

ಮಕ್ಕಳ ಲೈಂಗಿಕ ವಿಡಿಯೋ ಕಳಿಸುವುದು, ನೋಡುವುದು ಹಾಗೂ ಸ್ಟೋರ್ ಮಾಡಿರುವುದು ಶಿಕ್ಷಾರ್ಹ ಅಪರಾಧವಾಗಿದ್ದು, ಪ್ರೊಫೆಸರ್ ತಮ್ಮ ವಿದ್ಯಾರ್ಥಿಗೆ ವಿಡಿಯೋ ಕಳಿಸಿ ಅವಾಂತರ ಸೃಷ್ಟಿಸಿಕೊಂಡಿದ್ದಾರೆ.

ಹಾಗಾಗಿ, ಚೈಲ್ಡ್ ಪೋರ್ನೊಗ್ರಫಿ (ಮಕ್ಕಳ ನೀಲಿಚಿತ್ರ) ಬೇರೆಯವರಿಗೆ ಕಳಿಸಿದ್ದಕ್ಕೆ ಮಧುಸೂದನ್ ಆಚಾರ್ಯ ಎಂಬ ಪ್ರೊಫೆಸರ್ ವಿರುದ್ಧ ಕೇಸ್ ದಾಖಲಾಗಿದೆ.

ವಿಡಿಯೋ ಕಳುಹಿಸಿರುವುದನ್ನು ಮಾನಿಟರ್ ಮಾಡಿದ್ದ National Center For Missing and Exploited Children ಪೋರ್ಟೆಲ್ ನಂತರ ಈ ಮಾಹಿತಿಯನ್ನು ಎನ್​ಸಿಆರ್​ಬಿಗೆ ನೀಡಿದ್ದು, ಎನ್​ಸಿಆರ್​ಬಿ ರಾಜ್ಯ ಸಿಐಡಿಗೆ ಸಿಡಿ ಸಹಿತ ಪ್ರಕರಣದ ಮಾಹಿತಿ ರವಾನೆ ಮಾಡಿದೆ.

ಇದರ ಜೊತೆಗೆ ಸೈಬರ್ ಕ್ರೈಮ್ ಟಿಪ್ ಲೈನ್ ಅಡಿಯಲ್ಲಿ ಮಾಹಿತಿ ನೀಡಲಾಗಿದ್ದು, ಮಾಹಿತಿ ಅನ್ವಯ ತಾಂತ್ರಿಕ ತನಿಖೆ ನಡೆಸಿದ್ದಾರೆ.

ಸಿಐಡಿ ಸೈಬರ್ ಕ್ರೈಮ್ ಪೊಲೀಸರು ವಿಚಾರಣೆ ನಡೆಸಿದ ಸಂದರ್ಭ ಯಲಹಂಕ ಬಳಿಯ ಪ್ರತಿಷ್ಠಿತ ಕಾಲೇಜಿನ ಬಗ್ಗೆ ಮಾಹಿತಿ ಲಭ್ಯವಾಗಿದೆ. ಐಪಿ ಅಡ್ರಸ್ ಸಹಿತ ಏರಿಯಾ ಪತ್ತೆ ಮಾಡಿದ್ದ ಪೊಲೀಸರು ಕಾರ್ಯಾಚರಣೆ ನಡೆಸಿ ಈಶಾನ್ಯ ವಿಭಾಗ ಸಿಇಎನ್ ಠಾಣೆಗೆ ದೂರು ನೀಡಿದ್ದಾರೆ.

ದೂರಿನ ಅನ್ವಯ ಕೇಸ್ ದಾಖಲು ಮಾಡಿದ ಸಿಇಎನ್ ಪೊಲೀಸರು ಕೇಸ್ ಸಂಬಂಧಿಸಿ ಪ್ರೊಫೆಸರ್ ಮಧುಸೂದನ್​ರನ್ನು ಅವರನ್ನು ಕರೆಸಿ ವಿಚಾರಣೆ ನಡೆಸಿದ್ದಾರೆ.

ಆಗ ಕೃತ್ಯ ಬಯಲಾಗಿದ್ದು, ಪ್ರೊಫೆಸರ್ ಮಧುಸೂದನ್ ಹಲವಾರು ವಿದ್ಯಾರ್ಥಿಗಳನ್ನು ಕಾಮ ದೃಷ್ಟಿಯಿಂದ ಕಂಡಿರುವ ಬಗ್ಗೆ ಮಾಹಿತಿ ಸಿಕ್ಕಿದ್ದು, ಈ ಘಟನೆಯ ಕುರಿತಾಗಿ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ.

ಉನ್ನತ ಸ್ಥಾನದಲ್ಲಿ ಇರಬೇಕಾಗಿದ್ದ ಶಿಕ್ಷಕನಿಗೆ ಪೋಲಿಸ್ ಅತಿಥಿಯಾಗುವ ಪರಿಸ್ಥಿತಿ ಎದುರಾಗಿದ್ದು, ಹೆಚ್ಚಿನ ತನಿಖೆಯ ಬಳಿಕ ಶಿಕ್ಷಕನ ಹೊಸ ಮುಖದ ಅನಾವರಣಗೊಳ್ಳುವ ಸಾಧ್ಯತೆ ಹೆಚ್ಚಿದೆ.

Leave A Reply

Your email address will not be published.