ನೀನು ವೆರೈಟಿ ಮಜಾ ಮಾಡು ನಾನೂ ಮಾಡ್ತೀನಿ’ ಅಂದ ಪತಿ ; “ವೈಫ್ ಸ್ವಾಪ್” ನ ವಿರುದ್ಧ ಪತ್ನಿಯ ದೂರು !

ಜೈಪುರ್ : ಒಬ್ಬ ವ್ಯಕ್ತಿಯು ತನ್ನ ಹೆಂಡತಿಯನ್ನು ತಾನೇ ಕೆಲಸಮಾಡುವ 5 ಸ್ಟಾರ್ ಹೋಟೆಲ್ ಗೆ ಕರೆದುಕೊಂಡು ಹೋಗಿ ರೂಮ್ ಒಳಗೆ ಎರಡು ದಿನಗಳ ಕಾಲ ಕೂಡಿ ಹಾಕಿದ್ದಲ್ಲದೆ, ಆಕೆಯನ್ನು ಬೇರೆಯವರ ಜತೆ ಮಂಚ ಹಂಚಿಕೊಳ್ಳಲು ಕೇಳಿಕೊಂಡಿದ್ದಾಗಿ ಪತ್ನಿಯೊಬ್ಬಳು ತನ್ನ ಗಂಡನ ಮೇಲೆ ದೂರು ನೀಡಿದ್ದಾಳೆ.

ಅವನಿಗೆ ಬೇರೆ ಹುಡುಗಿಯರೊಂದಿಗೂ ಅಕ್ರಮಸಂಬಂಧ ಇತ್ತು. ಕೇವಲ ಹುಡುಗಿಯರೊಂದಿಗೆ ಮಾತ್ರವಲ್ಲದೆ ಹುಡುಗರೊಂದಿಗೆ ಲೈಂಗಿಕ ಕ್ರಿಯೆ ನಡೆಸುತ್ತಿದ್ದನಂತೆ. ಅಲ್ಲದೆ ತನ್ನ ಹೆಂಡತಿಯನ್ನು ಕೂಡ ಬೇರೆಯವರೊಂದಿಗೆ ಮಜಾ ಮಾಡೆಂದು ಒತ್ತಾಯಿಸಿದ. ಇದನ್ನು ನಿರಾಕರಿಸಿದ ಆಕೆಯ ಮೇಲೆ ದಾಳಿ ಮಾಡಿ, ಅಲ್ಲದೆ ಒಪ್ಪಿಗೆ ಇಲ್ಲದಿದ್ದರೂ ಆಕೆಯ ಜತೆ ಅನೈಸರ್ಗಿಕ ಲೈಂಗಿಕ ಕ್ರಿಯೆ ನಡೆಸಿದನು ಎಂದು ಮಹಿಳೆ ಒಬ್ಬಳು ಬಿಕಾನೇರ್‌ನ 5-ಸ್ಟಾರ್ ಹೋಟೆಲ್‌ನ ಮ್ಯಾನೇಜರ್ ನ ಮೇಲೆ ಕೇಸ್ ಹಾಕಿದ್ದಾರೆ.

ಅಲ್ಲದೆ, ಈ ಕಿರಾತಕನ ವಿರುದ್ಧ ಇವನ ತಾಯಿ ಮತ್ತು ತಂಗಿಯರಿಬ್ಬರೂ ವರದಕ್ಷಿಣೆಗಾಗಿ ನನಗೆ ಕಿರುಕುಳ ನೀಡಿದ್ದಾರೆಂದು ಮಹಿಳೆಯೂ ದೂರು ನೀಡಿದ್ದಾರೆ. ಈತ ಮಧ್ಯ ವ್ಯಸನಿ  ಆಗಿದ್ದು ಮಹಿಳೆ ಮೇಲೆ ಗಂಭೀರವಾದ ಹಲ್ಲೆ ನಡೆಸಿದ್ದ. ನಂತರ ಮಹಿಳೆಯನ್ನು ಆಕೆಯ ತಾಯಿ ಮನೆಗೆ ಕರೆದುಕೊಂಡು ಹೋಗಲಾಗಿದೆ. ಅಲ್ಲಿಂದಲೇ ಈ ಮಹಿಳೆಯು ಆಮೇಲೆ ಪತಿಯ ವಿರುದ್ಧ ಕೇಸು ಹಾಕಿದ್ದಾಳೆ.

ಮನೆಯ ಕುಟುಂಬ ಸದಸ್ಯರ ಮೇಲೆ ವರದಕ್ಷಿಣೆ ನಿಷೇಧ ಕಾಯ್ದೆಯ ಅಡಿಯಲ್ಲಿಪ್ರಕರಣ ದಾಖಲಿಸಲಾಗಿದೆ ಎಂದು ಮಹಿಳಾ ಪೊಲೀಸ್ ಠಾಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.

Leave A Reply