ಗುಂಗುರು ಕೂದಲು ಇರುವವರು ಈ ತಪ್ಪು ಮಾಡಲೇ ಬೇಡಿ
ಕೂದಲುಗಳಲ್ಲಿ ಹಲವಾರು ರೀತಿಯ ಟೈಪ್ಸ್ಗಳು ಇರುತ್ತವೆ. ನೇರ, ಸಿಲ್ಕ್, ಗುಂಗುರು, ರಫ್ ಹೀಗೆ ಅನೇಕ ರೀತಿಯ ಕೂದಲುಗಳು ಇರುತ್ತವೆ.
ಕೂದಲುಗಳು ಬೇಗ ಉದುರುತ್ತವೆ ಯಾಕೆಂದರೆ ಅದು ತುಂಬಾ ಸೂಕ್ಷ್ಮ. ನೀರಿನ, ಆಹಾರ, ವಾತಾವರಣಗಳ ವ್ಯತ್ಯಾಸವಾದರೆ ಕೂದಲು ಉದುರುವುದು ಸಾಮಾನ್ಯ. ಅದರಲ್ಲಿ ಗುಂಗುರು ಕೂದಲು ಇರುವವರು ತಲೆಯನ್ನು ಬಾಚುವಾಗ ಮತ್ತು ತಲೆಸ್ನಾನ ಮಾಡುವಾಗ ತುಂಬಾ ಕಷ್ಟ ಪಡುತ್ತಾರೆ.
ಈ ರೀತಿಯ ಕೂದಲು ಇರುವವರು ತಲೆಸ್ನಾನ ಮಾಡುವಾಗ ಒಂದಷ್ಟು ತಪ್ಪುಗಳನ್ನು ಯಾವುದೇ ಕಾರಣಕ್ಕೂ ಮಾಡಲೇ ಬಾರದು. ಅವು ಯಾವುವು ಎಂದು ನೋಡೋಣ ಬನ್ನಿ.
ಗುಂಗುರು ಕೂದಲು ಇರುವವರು ಪದೇ ಪದೇ ನೀರನ್ನು ತಾಗಿಸಬೇಡಿ. ಇದರಿಂದ ಕೂದಲು ಉದುರುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ.
ಇದು ಬೇಗ ಒಣಗುವುದಿಲ್ಲ ಎಂದು ಬ್ಲೋ ಡ್ರೈಯರ್ಗಳನ್ನು ಬಳಸುವುದನ್ನು ಕಮ್ಮಿ ಮಾಡಿ. ಇದು ಇನ್ನಷ್ಟು ಸಿಕ್ಕು ಕಟ್ಟಲು ಸಾಧ್ಯವಾಗುತ್ತದೆ ಮತ್ತು ಉದುರುವ ಸಾಧ್ಯತೆ ಇರುತ್ತದೆ.
ಸ್ನಾನದ ನಂತರ ಕಂಡೀಷ್ನರ್ ಬಳಕೆ ಮಾಡುವುದು ತುಂಬಾ ಒಳ್ಳೆಯದು. ಇದರಿಂದ ನಿಮ್ಮ ಕೂದಲಿನಲ್ಲಿ ಬದಲಾವಣೆ ಆಗುವುದನ್ನು ಕಾಣಬಹುದಾಗಿದೆ. ಹಾಗಾಗಿ ಕಂಡೀಷ್ನರ್ ಅಥವಾ ಅಲೋವೇರಾಗಳನ್ನು ಬಳಸಿದರೆ ತುಂಬಾ ಉತ್ತಮ.
ಹೆಚ್ಚಿನ ರಾಸಾಯಿನಿಕ ಅಂಶವಿರುವ ಶ್ಯಾಂಪೂಗಳನ್ನು ಬಳಸಬೇಡಿ. ಯಾಕೆಂದರೆ ಬಿಳಿ ಕೂದಲು ಆಗುವ ಸಾಧ್ಯತೆ ಹೆಚ್ಚು. ಸ್ನಾನ ಮಾಡುವಾಗ ತಲೆಯನ್ನು ತುಂಬಾ ಉಜ್ಜುವುದು ಕಮ್ಮಿಮಾಡಿ. ಹೀಗೆ ಉಜ್ಜುವುದರಿಂದ ಕೂದಲು ಹೆಚ್ಚಾಗಿ ಉದುರುತ್ತದೆ. ಇವಿಷ್ಟು ಟಿಪ್ಸ್ ಫಾಲೋ ಮಾಡುವುದರಿಂದ ಗುಂಗುರು ಕೂದಲು ಉದುರುವುದನ್ನು ನಿಯಂತ್ರಿಸಬಹುದು.