Kantara : ಕಾಂತಾರ ಸಿನಿಮಾ ನೋಡಿದ ಬಾಲಿವುಡ್ ನಟಿ ಶಿಲ್ಪಾಶೆಟ್ಟಿ | ಬಾಯಲ್ಲಿ ಬಂದದ್ದು ಇದು ಒಂದೇ ಮಾತು…

ಕರಾವಳಿಯ ಪ್ರತಿಭೆ ರಿಷಭ್ ಶೆಟ್ಟಿ ಕಾಂತಾರ ಸಿನಿಮಾದ ಮೂಲಕ ಜನಪ್ರಿಯರಾಗಿದ್ದು, ಈ ಸಿನಿಮಾ ತನ್ನ ನಿರೀಕ್ಷೆಗೂ ಮೀರಿದ ಅಭಿಮಾನಿಗಳನ್ನು ಹೊಂದಿದ್ದು, ಎಲ್ಲೆಡೆಯೂ ತನ್ನದೇ ಟ್ರೆಂಡ್ ಸೃಷ್ಟಿ ಮಾಡಿದೆ.

 

ದೇಶದಲ್ಲಿ ಮಾತ್ರವಲ್ಲದೆ ಹೊರ ದೇಶದಲ್ಲೂ ಸಹ ಟ್ರೆಂಡ್ ಆಗಿರುವ ಕಾಂತಾರ ಸಿನಿಮಾದ ಸದ್ಯ ಹೊರದೇಶದಲ್ಲಿ 350$ಗಿಂತಲೂ ಹೆಚ್ಚು ಹಣ ಗಳಿಸಿದೆ. ಕೆಜಿಎಫ್ ಸಿನಿಮಾದ ಬಳಿಕ ಹೊರ ದೇಶದಲ್ಲಿ ಕೇವಲ ಕನ್ನಡದಲ್ಲಿಯೇ ಅತಿ ಹೆಚ್ಚು ಜನಪ್ರಿಯವಾಗಿದ್ದಲ್ಲದೆ ಬಾಕ್ಸ್ ಆಫೀಸ್ನಲ್ಲಿ ದೊಡ್ದ ಮಟ್ಟದಲ್ಲಿ ಪ್ರಚಾರ ಕಂಡಿದೆ.

ಮೊದಲಿಗೆ ಕನ್ನಡದಲ್ಲಿ ಬಿಡುಗಡೆಯಾಗಿ ಅಬ್ಬರಿಸಿದ ಕಾಂತಾರ ಸಿನಿಮಾ ಈಗ ತೆಲುಗು ಹಾಗೂ ಹಿಂದಿಯಲ್ಲೂ ಭರ್ಜರಿ ಪ್ರದರ್ಶನ ಕಾಣುತ್ತಿದ್ದು, ಕರ್ನಾಟಕದ ಸಿನಿ ಪ್ರೇಕ್ಷಕರು ಮಾತ್ರವಲ್ಲದೇ ಬಾಲಿವುಡ್ , ಟಾಲಿವುಡ್ ಹಾಗೂ ಪರ ಭಾಷೆಯ ಸೆಲೆಬ್ರಿಟಿಗಳು ಸಹ ಕಾಂತಾರ ಚಿತ್ರವನ್ನು ಚಿತ್ರಮಂದಿರಗಳಲ್ಲಿ ವೀಕ್ಷಿಸಿ ರಿಷಬ್ ಶೆಟ್ಟಿ ನಿರ್ದೇಶನ ಹಾಗೂ ನಟನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ .

ಕನ್ನಡದ ಕಂಪನ್ನು ಹಾಗೂ ಕರಾವಳಿಯ ಕಲೆ ವಿಶಿಷ್ಟತೆಯನ್ನು ಬೇರೆ ಭಾಷೆಯ ನಟರು ಕೂಡ ಕೊಂಡಾಡುವಂತೆ ಮಾಡಿರುವ ಅದ್ಭುತ ಕಲಾವಿದ ಹಾಗೂ ಬಹುಮುಖ ಪ್ರತಿಭೆ ರಿಷಬ್ ಶೆಟ್ಟಿಯ ಪಾತ್ರ ಶ್ಲಾಘನೀಯವಾದದ್ದು.

ಕಾಂತಾರ ಸಿನಿಮಾದ ರಿಷಬ್ ರವರ ಅತ್ಯುತ್ತಮ ನಟನೆಗೆ ತೆಲುಗು ನಟ ಪ್ರಭಾಸ್ ಕನ್ನಡ ಹಾಗೂ ತೆಲುಗು ಎರಡೂ ಭಾಷೆಗಳಲ್ಲಿಯೂ ನೋಡಿ ಚಿತ್ರವನ್ನು ಕೊಂಡಾಡಿದ್ದಾರೆ. ಇವರ ಜೊತೆಗೆ ತಮಿಳಿನ ಧನುಷ್, ಕಾರ್ತಿ, ಮಲಯಾಳಂನ ಪೃಥ್ವಿರಾಜ್ ಸುಕುಮಾರನ್ ಕಾಂತಾರ ಚಿತ್ರವನ್ನು ವೀಕ್ಷಿಸಿ ಫುಲ್ ಫಿದಾ ಆಗಿದ್ದು, ಜನ ಮಾನಸದಲ್ಲಿ ಮಾತ್ರವಲ್ಲದೇ, ಕಾಂತಾರ ತಾರೆಗಳಿಂದಲೂ ಸಹ ಪ್ರಶಂಸೆಯ ಗಿರಿಯನ್ನು ತನ್ನೊಡಲಿಗೆ ಸೆಳೆದು ಕೊಳ್ಳುತ್ತಿದೆ.

ಈ ನಡುವೆ ಸ್ಟಾರ್ ನಟಿ ಅನುಷ್ಕಾ ಶೆಟ್ಟಿ ಕೂಡ ಸಿನಿಮಾ ನೋಡಿ ಫುಲ್ ಖುಷ್ ಆಗಿದ್ದು, ಕಾಂತಾರ ಸಿನಿಮಾ ಪ್ರತಿಯೊಬ್ಬ ನಟ, ನಿರ್ಮಾಪಕರು, ತಂತ್ರಜ್ಞರಿಗೆ ಅಭಿನಂದನೆಯನ್ನು ಸಲ್ಲಿಸಿದ್ದಾರೆ.

ಕಾಂತಾರ ತಂಡವನ್ನು ಹೊಗಳಿರುವ ನಟಿ ಅನುಷ್ಕಾ ತೆರೆಮೇಲೆ ಅದ್ಭುತ ಅನುಭವ ನೀಡಿದ್ದಕ್ಕೆ ಧನ್ಯವಾದ ಸಲ್ಲಿಸಿದ್ದು, ರಿಷಬ್ ಶೆಟ್ಟಿಯನ್ನೂ ಹಾಡಿ ಹೊಗಳಿದ್ದಾರೆ. ದಯವಿಟ್ಟು ಚಿತ್ರಮಂದಿರದಲ್ಲೇ ಎಲ್ಲರೂ ಸಿನಿಮಾ ನೋಡಿ ಮಿಸ್ ಮಾಡಲೇಬೇಡಿ’ ಎಂದು ಇನ್‌ಸ್ಟಾಗ್ರಾಂನಲ್ಲಿ ತಮ್ಮ ಅಭಿಮಾನಿಗಳಿಗೆ ತಿಳಿಸಿದ್ದಾರೆ.

ಇತ್ತೀಚೆಗಷ್ಟೇ ಬಾಲಿವುಡ್ ನಟಿ ಶಿಲ್ಪಾ ಕಾಂತಾರ ಚಿತ್ರವನ್ನು ವೀಕ್ಷಿಸಿದ್ದು, ಕ್ಲೈಮ್ಯಾಕ್ಸ್ ದೃಶ್ಯದ ಫೋಟೋವೊಂದನ್ನು ತಮ್ಮ ಅಧಿಕೃತ ಇನ್ ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಕಾಂತಾರ ಚಿತ್ರದ ಬಗ್ಗೆ ತನ್ನ ಅಧಿಕೃತ ಇನ್ ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಶಿಲ್ಪಾ ಶೆಟ್ಟಿ ಕಾಂತಾರ ಚಿತ್ರಕ್ಕಿದು ಪ್ರಶಂಸೆಯ ಪೋಸ್ಟ್ ಎಂದು ಬರೆದುಕೊಂಡಿದ್ದಾರೆ.

‘ಕಾಂತಾರ ಚಿತ್ರವನ್ನು ಚಿತ್ರಮಂದಿರದಲ್ಲಿ ನೋಡಿದೆ, ಓ ಮೈ ಗಾಡ್ ಎಂಥ ಚಿತ್ರವಿದು, ಎಂತಹ ನಿರೂಪಣೆ, ಭಾವನೆ ಮತ್ತು ಪ್ರಪಂಚ.. ಚಿತ್ರದ ಕ್ಲೈಮ್ಯಾಕ್ಸ್ ರೋಮಾಂಚನಗೊಳಿಸಿದೆ ಎಂದು ಹೇಳಿಕೊಂಡಿದ್ದಾರೆ.

ಅಲ್ಲದೆ ಕಾಂತಾರ ಸಿನಿಮಾ ಒಂದು ಶಕ್ತಿಯಾಗಿದ್ದು, ವೀಕ್ಷಕನನ್ನು ಬೇರೆಯದೇ ಪ್ರಪಂಚಕ್ಕೆ ಕೊಂಡೊಯ್ಯುವಂತಹ ಚಿತ್ರವಾಗಿದ್ದು ನಾನು ಹುಟ್ಟಿ ಬೆಳೆದಂತಹ ಕರಾವಳಿಯ ನೆನಪನ್ನು ಮೆಲುಕು ಹಾಕಿಸಿ ಆ ಪ್ರಪಂಚಕ್ಕೆ ಕೊಂಡೊಯ್ದ ಚಿತ್ರ’ ಎಂದು ಶಿಲ್ಪಾ ಶೆಟ್ಟಿ ಹೊಗಳಿ ಸಿನಿಮಾವನ್ನು ಮೆಚ್ಚಿಕೊಂಡಿದ್ದಲ್ಲದೆ, ಚಿತ್ರದಲ್ಲಿನ ರಿಷಬ್ ಶೆಟ್ಟಿ ನಟನೆಯನ್ನು ನೆಚ್ಚಿಕೊಂಡು ಶಿಲ್ಪಾ ಶೆಟ್ಟಿ ವಿಜಯವನ್ನು ಆನಂದಿಸಿ ಎಂದು ರಿಷಬ್ ಶೆಟ್ಟಿಗೆ ಶುಭ ಕೋರಿದ್ದಾರೆ.

Leave A Reply

Your email address will not be published.