ಪೋಷಕರೇ ಎಚ್ಚರ..!  ನೀರು ತುಂಬಿದ ಬಕೆಟ್‌ಗೆ ಬಿದ್ದು 14 ತಿಂಗಳ ಹಸುಗೂಸು ದುರ್ಮರಣ

ಹೊಸ ಕನ್ನಡ : ಪುಟಾಣಿ ಮಕ್ಕಳು ಎಂದ ಪ್ರತಿಯೊಂದು ವಿಚಾರಗಳಲ್ಲೂ ಹೆಚ್ಚು ಪ್ರಾಮುಖ್ಯತೆ ವಹಿಸುವುದು ಅತ್ಯಗತ್ಯವಾಗಿದೆ. ಮಕ್ಕಳೆಂದರೇ ಹಾಗೆ ಎಲ್ಲೆಂದರಲ್ಲಿ ಆಟ ಆಡುತ್ತಲೇ ಇರುತ್ತಾರೆ ಯಾವುದು ಒಳ್ಳೆಯದ್ದು ಯಾವುದು ಕೆಟ್ಟದ್ದು ಅನ್ನೋದರ ಅವರಿಗೆ ತಿಳಿಯುವುದಿಲ್ಲ. ಹಾಗಾಗಿ ತಮ್ಮ ಪೋಷಕರು ಎಚ್ಚರ ವಹಿಸಲೇ ಇರಬೇಕು. ಎಚ್ಚರ ತಪ್ಪಿ, ಪುಟಾಣಿ ಮಗುವೊಂದು ನೀರಿಗೆ ಬಿದ್ದು ಒದ್ದಾಡಿ ಸಾಯುವಂತಾಗಿದೆ.

ಚಂಡೀಗರ್ ಭೈರಿ ಭೈರೋನ್ ಗ್ರಾಮದಲ್ಲಿ 14 ತಿಂಗಳ ಹಸುಗೂಸು ನೀರು ತುಂಬಿದ ಬಕೆಟ್ ಗೆ ಬಿದ್ದು ಸಾವನ್ನಪ್ಪಿರುವ ಘಟನೆ ನಡೆದಿದ್ದು ಎಂಥವರನ್ನು ಬೆಚ್ಚಿಬೀಳಿಸುವಂತಾಗಿದೆ.
ಪೊಲೀಸರ ಪ್ರಕಾರ, ಮೃತ ಮಗುವಿನ ತಂದೆ ಸೌರ್ಬಾ ಮೆಹಮ್ಗೆ ಕೆಲಸಕ್ಕಾಗಿ ಹೋಗಿದ್ದಾಗ ಮತ್ತು ಆಕೆಯ ತಾಯಿ ಕೂಡ ಮನೆಯಲ್ಲಿರದಿದ್ದಾಗ ಈ ಘಟನೆ ನಡೆದಿದೆ.

ಮಗು ಆಟವಾಡುತ್ತಾ ಬಾತ್ ರೂಮ್ ಗೆ ಹೋಗಿದ್ದು, ಅಲ್ಲಿ ನೀರು ತುಂಬಿದ ಬಕೆಟ್ ಕಂಡು ಆಟವಾಡಲು ಹೋಗಿದೆ. ಈ ವೇಳೆ ಬಕೆಟ್ ನಲ್ಲಿ ಬಿದ್ದು ಮಗು ಸಾವನ್ನಪ್ಪಿದೆ ಎಂದು  ಮೆಹಮ್ ಪೊಲೀಸ್ ಠಾಣೆಯ ಎಎಸ್ಐ ರಾಜೇಂದ್ರ ಕುಮಾರ್ ತಿಳಿಸಿದ್ದಾರೆ.

Leave A Reply