Kantara : ಇವರ್ಯಾರು ಗೊತ್ತಾಯ್ತೇ? ಇಲ್ವಾ? ಇವರು ‘ಕಾಂತಾರ’ದ ಶೀಲಾ | ಇವರ ಸಣ್ಣ ಕಿರುಪರಿಚಯ ಇಲ್ಲಿದೆ!!!

ದೇಶ ವಿದೇಶಗಳಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿರುವ ಸಿನಿಮಾವೇ ಕಾಂತಾರ. ಸಿನಿಮಾ ರಿಲೀಸ್ ಆಗಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಬಹಳ ದೊಡ್ಡ ಮಟ್ಟದಲ್ಲಿ ಸಿನಿಮಾ ಸದ್ದು ಮಾಡುತ್ತಿದೆ. ಹಾಗೆನೇ ಬೇರೆ ಬೇರೆ ಭಾಷೆಯಿಂದ ಸಿನಿಮಾಗೆ ಭರಪೂರ ಮೆಚ್ಚುಗೆ ಗಳಿಸುತ್ತಿದೆ. ಜನ ಅಂತೂ ರಿಷಬ್ ಆ್ಯಕ್ಟಿಂಗ್, ನಿರ್ದೇಶನಕ್ಕೆ ಮಾರು ಹೋಗಿದ್ದಾರೆ. ನಿಜ ಹೇಳಬೇಕೆಂದರೆ ಚಿತ್ರದ ಪ್ರತಿಯೊಂದು ಪಾತ್ರ ಸಹ ಪ್ರೇಕ್ಷಕರ ಹೃದಯ ಗೆದ್ದಿವೆ. ಹಾಗೆನೇ ಈ ಕಾಂತಾರದ ಅನೇಕ ಪಾತ್ರಗಳಲ್ಲಿ ಶೀಲಾ ಪಾತ್ರ ಕೂಡ ಒಂದು.


Ad Widget

Ad Widget

Ad Widget

Ad Widget

Ad Widget

Ad Widget

Ad Widget

ಸುಂದರನ ಪತ್ನಿ ಶೀಲಾ ಪಾತ್ರದಲ್ಲಿ ಮಿಂಚಿ ಸೈ ಎನಿಸಿಕೊಂಡ ಈ ಪಾತ್ರವನ್ನು ಯಾರಾದರೂ ಮರೆಯಲು ಸಾಧ್ಯವೇ? ಅಂದಹಾಗೇ, ಹಲ್ಲು ಉಬ್ಬು ಪಾತ್ರದಲ್ಲಿ ಕಾಣಿಸಿಕೊಂಡಿದ್ದ ನಟಿ ಮತ್ಯಾರು ಅಲ್ಲ ಚಂದ್ರಕಲಾ ಭಟ್. ಶೀಲಾ ಪಾತ್ರ ನೋಡಿದವರಿಗೆ ಅವರೇ ಚಂದ್ರಕಲಾ ಭಟ್ ಅಂತ ಗೊತ್ತಾಗಲ್ಲ. ಅಷ್ಟರ ಮಟ್ಟಿಗೆ ಲುಕ್ ಬದಲಾವಣೆ ಮಾಡಿ ಅವರನ್ನು ಆ ಪಾತ್ರಕ್ಕೆ ತಯಾರಿ ಮಾಡಲಾಗಿತ್ತು.


Ad Widget

ಹಲ್ಲು ಉಬ್ಬಿ ಶೀಲಾ ಯಾರೆಂದು ಹುಡುಕುತ್ತಿದ್ದ ಕಾಂತಾರ ಸಿನಿಮಾದ ಅಭಿಮಾನಿಗಳಿಗೆ ಕೊನೆಗೂ ಶೀಲಾ ಸಿಕ್ಕಿದ್ದಾರೆ. ಅವರ ರಿಯಲ್ ಫೋಟೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಶೀಲಾ ಇವರೇನಾ ಎಂದು ನಿಜಕ್ಕೂ ಜನ ಆಶ್ಚರ್ಯ ಪಡುತ್ತಿದ್ದಾರೆ.

Ad Widget

Ad Widget

Ad Widget

ರಂಗಭೂಮಿ ಕಲಾವಿದೆಯಾದ ಚಂದ್ರಕಲಾ ಭಟ್, ಅನೇಕ ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಇವರ ಅಭಿನಯ ಕಂಡು ರಕ್ಷಿತ್ ಶೆಟ್ಟಿ ಅವರು ಶಾರ್ಟ್ ಸಿನಿಮಾದಲ್ಲಿ ನಟಿಸಲು ಅವಕಾಶ ನೀಡಿದ್ದರು. ರಕ್ಷಿತ್ ಶೆಟ್ಟಿ ಅಭಿನಯದ ಉಳಿದವರು ಕಂಡಂತೆ ಸಿನಿಮಾದಲ್ಲಿ ನಟಿಸುವ ಅವಕಾಶ ಗಿಟ್ಟಿಸಿಕೊಂಡರು.

ನಟಿ ಚಂದ್ರಕಲಾ ಅವರು ಉಳಿದವರು ಕಂಡಂತೆ ಸಿನಿಮಾದಲ್ಲಿ ಮೀರು ಮಾರುವ ಮಹಿಳೆ ಪಾತ್ರದಲ್ಲಿ ನಟಿಸಿದ್ದರು. ನಟಿ ತಾರಾ ಜೊತೆ ತೆರೆಹಂಚಿಕೊಂಡಿದ್ದರು. ಬಳಿಕ ರಿಷಬ್ ಶೆಟ್ಟಿ ಅವರ ರಿಕ್ಕಿ, ಕಟಕ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದೀಗ ಚಂದ್ರಕಲಾ ಅವರು ಕಾಂತಾರ ಮತ್ತೊಮ್ಮೆ ಮೆಚ್ಚುಗೆ ಪಡೆದುಕೊಂಡಿದ್ದಾರೆ.

‘ಕಾಂತಾರ ಸಿನಿಮಾ ತಂಡದಿಂದ ಮೊದಲು ಕಾಲ್ ಬಂತು. ಫಿಲ್ಮ್ ಇದೆ ಮಾಡ ಬಹುದಾ ಎಂದು ಕೇಳಿದರು. ಓಕೆ ಅಂತ ಹೇಳಿದೆ. ಅನೇಕ ದಿನಗಳ ನಂತರ ಮತ್ತೆ ಒಬ್ಬರು ಕಾಲ್ ಮಾಡಿ ಕುಂದಾಪುರಕ್ಕೆ ಬರಲಿಕ್ಕೆ ಹೇಳಿದರು. ಫೋನ್ ಮಾಡಿ ನಿಮ್ಮ ಹಲ್ಲು ಒಮ್ಮೆ ಚೆಕ್ ಮಾಡಬೇಕು ಎಂದರು. ನನಗೆ ಶಾಕ್ ಆಯ್ತು. ನನ್ನ ಹಲ್ಲು ಸರಿ ಇದೆ ಯಾಕೆ ಅಂತ. ಅಲ್ಲಿಗೆ ಹೋದ ಮೇಲೆ ಗೊತ್ತಾಯಿತು. ನನಗೆ ಹಲ್ಲು ಸೆಟ್ ರೆಡಿ ಮಾಡಿಸಿದ್ದರು. ಯಾವ ಪಾತ್ರ ಅಂತ ಭಯ ಇತ್ತು. ಒಳ್ಳೆ ಪಾತ್ರ ಇದೆ ಅಂತ ಹೇಳಿದ್ರು’ ಎಂದು ಯೂಟ್ಯೂಬ್ ಚಾನೆಲ್ ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ನಾನು ಶೂಟಿಂಗ್ ಹೋಗುವಾಗ ಹಲ್ಲು ಸೆಟ್ ತೆಗೆದು ಇಟ್ಟು ಹೋಗುತ್ತಿದ್ದೆ. ಆಗ ಯಾರು ನನ್ನನ್ನು ಗುರುತು ಹಿಡಿಯುತಿರಲಿಲ್ಲ. ನಾನು ಕೂಡ ನಟಿ ಅಂತ ಯಾರಿಗೂ ಗೊತ್ತಾಗುತ್ತಿರಲಿಲ್ಲ. ನನಗೆ ತುಂಬಾ ಜನ ತಮಾಷೆ ಮಾಡುತ್ತಿದ್ದರು. ಅದೂ ನನಗೆ ಗೊತ್ತಾಗುತ್ತಿತ್ತು’ ಎಂದು ತಮ್ಮ ಅನುಭವ ಹಂಚಿಕೊಂಡಿದ್ದಾರೆ.

error: Content is protected !!
Scroll to Top
%d bloggers like this: