Post Office : ಅಂಚೆಕಚೇರಿ ಸಣ್ಣ ಉಳಿತಾಯ ಯೋಜನೆಗೆ ಇ-ಪಾಸ್ ಬುಕ್ | ಇನ್ನು ಬ್ಯಾಲೆನ್ಸ್ ಚೆಕ್ ಮೊಬೈಲ್ ನಲ್ಲೇ ಮಾಡಬಹುದು!!!

ಅಂಚೆ ಕಚೇರಿ ಸಣ್ಣ ಉಳಿತಾಯ ಯೋಜನೆಯಲ್ಲಿ ಕೆಲವೊಂದು ಹೊಸ ಸೌಲಭ್ಯಗಳನ್ನು ಜಾರಿಗೆ ತಂದಿದೆ. ಅಂದರೆ ಜನರು ಪಿಪಿಎಫ್, ಸುಕನ್ಯಾ ಸಮೃದ್ಧಿ ಸೇರಿದಂತೆ ಸಣ್ಣ ಉಳಿತಾಯ ಯೋಜನೆಗಳ ಖಾತೆಯನ್ನು ಹೊಂದಿದ್ದು ಅವರು ತಮ್ಮ ಖಾತಾ ವಿವರಣೆ ತಿಳಿಯಲು ಅಂಚೆ ಕಚೇರಿಗೆ ಹೋಗಬೇಕಿತ್ತು ಆದರೆ ಇನ್ನು ಮುಂದೆ ಇವರಿಗೆ ತಮ್ಮ ಉಳಿತಾಯ ಖಾತೆಯ ಬ್ಯಾಲೆನ್ಸ್ ಚೆಕ್ ಮಾಡೋ ಅವಕಾಶವನ್ನು ಮತ್ತು ಇ-ಪಾಸ್ ಬುಕ್ ಸೌಲಭ್ಯವನ್ನು ಒದಗಿಸಲಾಗಿದೆ.
ಅಂದರೆ ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್), ಸುಕನ್ಯಾ ಸಮೃದ್ಧಿ ಯೋಜನೆ (ಎಸ್ ಎಸ್ ವೈ) ಸೇರಿದಂತೆ ಅಂಚೆ ಇಲಾಖೆಯ ಇತರ ಅನೇಕ ಸಣ್ಣ ಉಳಿತಾಯ ಯೋಜನೆಗಳಿಗೆ ಇ-ಪಾಸ್ ಬುಕ್ ಸೌಲಭ್ಯವನ್ನು ಅಂಚೆ ಇಲಾಖೆ ಒದಗಿಸಿದೆ.

ಅಂಚೆ ಕಚೇರಿಯ ಸಣ್ಣ ಉಳಿತಾಯ ಯೋಜನೆಯ ಗ್ರಾಹಕರು ದೇಶದ ಯಾವುದೇ ಮೂಲೆಯಿಂದ ನೆಟ್ ಬ್ಯಾಂಕಿಂಗ್ ಅಥವಾ ಮೊಬೈಲ್ ಬ್ಯಾಂಕಿಂಗ್ ಸೌಲಭ್ಯವಿಲ್ಲದೆಯೂ ಖಾತೆಯ ಮಾಹಿತಿ ಪಡೆಯಬಹುದು.

2022ರ ಅಕ್ಟೋಬರ್ 12ರ ಅಧಿಸೂಚನೆಯಲ್ಲಿ ಈ ಬಗ್ಗೆ ಮಾಹಿತಿ ನೀಡಿರುವ ಅಂಚೆ ಇಲಾಖೆ, ರಾಷ್ಟ್ರೀಯ (ಸಣ್ಣ) ಉಳಿತಾಯ ಯೋಜನೆಗಳ ಖಾತೆದಾರರಿಗೆ ಸರಳೀಕೃತ ಹಾಗೂ ಉತ್ತಮ ಡಿಜಿಟಲ್ ಸೌಲಭ್ಯ ಒದಗಿಸುವ ಉದ್ದೇಶದಿಂದ 12.10.2022ರಿಂದ ಅನ್ವಯವಾಗುವಂತೆ ಇ-ಪಾಸ್ ಬುಕ್ ಸೌಲಭ್ಯ ಒದಗಿಸಲಾಗಿದೆ ಎಂಬ ಮಾಹಿತಿ ನೀಡಿದೆ.

ಖಾತೆದಾರರು ನೋಂದಾಯಿತ ಮೊಬೈಲ್ ಸಂಖ್ಯೆಯಿಂದ ಇ-ಪಾಸ್ ಬುಕ್ ಸೌಲಭ್ಯ ಬಳಸಿಕೊಳ್ಳಬಹುದು. ಈ ಸೇವೆ ಉಚಿತ ಎಂದು ಅಂಚೆ ಇಲಾಖೆ ತಿಳಿಸಿದೆ. ಹೀಗಾಗಿ ಅಂಚೆ ಇಲಾಖೆಯಲ್ಲಿ ಉಳಿತಾಯ ಖಾತೆ ಹೊಂದಿರೋರಿಗೆ ಇ-ಪಾಸ್ ಬುಕ್ ಸೌಲಭ್ಯ ಅನೇಕ ವಿಧದಲ್ಲಿ ನೆರವಾಗಲಿದೆ.

ನೆನಪಿರಲಿ ನಮೂದಿಸಿರುವ ಮೊಬೈಲ್ ಸಂಖ್ಯೆ ನಿಮ್ಮ ಅಂಚೆ ಇಲಾಖೆ ಖಾತೆ ಜೊತೆಗೆ ಲಿಂಕ್ ಆಗಿಲ್ಲದೆ ಇದ್ದಾಗ ನಿಮಗೆ ಮಾಹಿತಿ ಪಡೆಯಲು ಸಾಧ್ಯವಾಗೋದಿಲ್ಲ. ಹೀಗಾಗಿ ನಿಮ್ಮ ಅಂಚೆ ಕಚೇರಿ ಖಾತೆ ಜೊತೆಗೆ ಮೊಬೈಲ್ ಸಂಖ್ಯೆ ಲಿಂಕ್ ಆಗಿಲ್ಲವಾದರೆ ನೀವು ಖಾತೆ ಹೊಂದಿರುವ ಅಂಚೆ ಕಚೇರಿಗೆ ಭೇಟಿ ನೀಡಿ ಲಿಂಕ್ ಮಾಡಬೇಕಾಗುತ್ತದೆ.

ಇ-ಪಾಸ್ ಬುಕ್ ನಲ್ಲಿ ಪಡೆಯಬಹುದಾದ ಮಾಹಿತಿಗಳು:

ಮಿನಿ ಸ್ಟೇಟ್ ಮೆಂಟ್:
ಅಂಚೆ ಇಲಾಖೆ ಉಳಿತಾಯ ಖಾತೆ ,ಸುಕನ್ಯಾ ಸಮೃದ್ಧಿ ಖಾತೆಗಳು ಹಾಗೂ ಸಾರ್ವಜನಿಕ ಭವಿಷ್ಯ ನಿಧಿ ಖಾತೆಗಳಿಗೆ ಮಾತ್ರ ಮಿನಿ ಸ್ಟೇಟ್ ಮೆಂಟ್ ಸೌಲಭ್ಯ ಪ್ರಾರಂಭದಲ್ಲಿ ಸಿಗಲಿದೆ. ಇದರಲ್ಲಿ ಇತ್ತೀಚಿನ 10 ವಹಿವಾಟುಗಳ ಮಾಹಿತಿಯನ್ನು ಮಾತ್ರ ತೋರಿಸಲಾಗುತ್ತದೆ. ಅಲ್ಲದೆ, ಇದನ್ನು ಪಿಡಿಎಫ್ ಸ್ವರೂಪದಲ್ಲಿ ಡೌನ್ ಲೋಡ್ ಮಾಡಿಕೊಳ್ಳಲು ಕೂಡ ಅವಕಾಶವಿದೆ.

ಬ್ಯಾಲೆನ್ಸ್ ಮಾಹಿತಿ: ಪ್ರತಿ ರಾಷ್ಟ್ರೀಯ ಉಳಿತಾಯ ಯೋಜನೆಯ ಖಾತೆ ಬ್ಯಾಲೆನ್ಸ್ ಅನ್ನು ನೋಡಬಹುದು. ಈ ಹಿಂದೆ ಅಂಚೆ ಕಚೇರಿ ಉಳಿತಾಯ ಖಾತೆಗಳಲ್ಲಿನ ಬ್ಯಾಲೆನ್ಸ್ ಚೆಕ್ ಮಾಡಲು ಅಂಚೆ ಕಚೇರಿಗೇ ಹೋಗಬೇಕಾದ ಅಗತ್ಯವಿತ್ತು. ಇನ್ನುಮುಂದೆ ಇ-ಪಾಸ್ ಬುಕ್ ಈ ಕೆಲಸವನ್ನು ಸುಲಭಗೊಳಿಸಿದೆ.

ಫುಲ್ ಸ್ಟೇಟ್ ಮೆಂಟ್ : ಇನ್ನು ಖಾತೆಯ ಪೂರ್ಣ ಸ್ಟೇಟ್ ಮೆಂಟ್ ಕೂಡ ಲಭಿಸುತ್ತದೆ. ಗ್ರಾಹಕರು ಖಾತೆ ಸ್ಟೇಟ್ ಮೆಂಟ್ ಅನ್ನು ಕೂಡ ನಿರ್ದಿಷ್ಟ ಸಮಯದ ಚೌಕಟ್ಟಿನಲ್ಲಿ ಪಡೆಯಬಹುದು.

ಪಿಪಿಎಫ್ (PPF), ಸುಕನ್ಯಾ ಸಮೃದ್ಧಿ (Sukanya Samridhi) ಖಾತೆ ಬ್ಯಾಲೆನ್ಸ್ ಚೆಕ್ ಮಾಡುವ ವಿಧಾನ:

-www.indiapost.gov.in or www.ippbonline.com ಭೇಟಿ ನೀಡಿ.

ಅಲ್ಲಿ ಇ-ಪಾಸ್ ಬುಕ್ ಮೇಲೆ ಕ್ಲಿಕ್ ಮಾಡಿ.

ಮೊಬೈಲ್ ಸಂಖ್ಯೆ ನಮೂದಿಸಿ. ಕ್ಯಾಪ್ಚ-ಲಾಗಿ ಇನ್-ಒಟಿಪಿ ನಮೂದಿಸಿ ಸಲ್ಲಿಕೆ ಮಾಡಿ.

ನಂತರ ಇ-ಪಾಸ್ ಬುಕ್ (e-Passbook) ಆಯ್ಕೆ ಮಾಡಿ.

ಯೋಜನೆ ವಿಧ ಆಯ್ಕೆ ಮಾಡಿ. ಖಾತೆ ಸಂಖ್ಯೆ,
ನೋಂದಾಯಿತ ಮೊಬೈಲ್ ಸಂಖ್ಯೆ ನಮೂದಿಸಿ.

ಆ ಬಳಿಕ Continue ಮಾಡಿ. OTP ನಮೂದಿಸಿ ವೆರಿಫೈ ಮಾಡಿ.

ನಂತರ ಈ ಕೆಳಗಿನವುಗಳಲ್ಲಿ ನಿಮಗೆ ಯಾವುದರ ಮಾಹಿತಿ ಬೇಕೋ ಅದನ್ನು ಆಯ್ಕೆ ಮಾಡಿ.
ಬ್ಯಾಲೆನ್ಸ್ ಚೆಕ್
ಮಿನಿ ಸ್ಟೇಟ್ಮೆಂಟ್
ಫುಲ್ ಸ್ಟೇಟ್ಮೆಂಟ್

ಈ ರೀತಿಯಾಗಿ ನೀವು ನಿಮ್ಮ ಉಳಿತಾಯ ಖಾತೆಯ ಸ್ಟೇಟ್ ಮೆಂಟ್ ಗಳನ್ನು ಪಡೆದುಕೊಳ್ಳಬಹುದಾಗಿದೆ.

Leave A Reply

Your email address will not be published.