ಜನಸಾಮಾನ್ಯರೇ ಗಮನಿಸಿ | ಹಾಲಿನ ಬೆಲೆ ಏರಿಕೆ ಬೆನ್ನಲ್ಲೇ ಇನ್ನೊಂದು ಶಾಕಿಂಗ್ ನ್ಯೂಸ್ | ‘ಈರುಳ್ಳಿ’ ಬಲು ದುಬಾರಿ !!!
ಒಂದೆಡೆ ಸರ್ಕಾರ ದೀಪಾವಳಿ ಸಮೀಪಿಸಿದಂತೆ ತೈಲಗಳ ಬೆಲೆ ಇಳಿಕೆ ಮಾಡಿ ಕೊಂಚ ಮಟ್ಟಿಗೆ ನೆಮ್ಮದಿಯ ನಿಟ್ಟುಸಿರು ಬಿಡುವ ಮುನ್ನವೆ ಹಾಲಿನ ದರ ಏರಿಕೆ ಮಾಡಿ ರಾಜ್ಯದ ಜನತೆಗೆ ಶಾಕ್ ನೀಡಿ ಬೆಲೆಯೇರಿಕೆಯ ಬಿಸಿ ಮುಟ್ಟಿಸಿತ್ತು.
ಈ ನಡುವೆ ದೈನಂದಿನ ಬದುಕಿನಲ್ಲಿ ಹೆಚ್ಚು ಬಳಕೆಯಾಗುವ ಹೆಂಗೆಳೆಯರ ಕಣ್ಣಲ್ಲಿ ನೀರು ಹರಿಸುವ ಈರುಳ್ಳಿ ಬೆಲೆ ಏರಿಕೆ ಮಾಡಿ ಜನತೆಗೆ ಶಾಕ್ ನೀಡಿದ್ದು, ಮನೆಯರ ಗೃಹಿಣಿಯರಿಗೆ ಬಿಸಿ ತುಪ್ಪದಂತಾಗಿದೆ.
ಮನೆಯ ಎಲ್ಲಾ ಅಡಿಗೆಗೆ ಹೆಚ್ಚು ಬಳಕೆಯಾಗುವ ಈರುಳ್ಳಿ ಅಹಾರ ಪ್ರಿಯರ ಅಡಿಗೆಯಲ್ಲಿ ರುಚಿ ಹೆಚ್ಚಿಸಿ ನೆಚ್ಚಿಕೊಂಡಿರುವವರಿಗೆ ಈರುಳ್ಳಿ ಬೆಲೆ ಹೆಚ್ಚಳವಾಗಗಿದ್ದು, ಗಾಯದ ಮೇಲೆ ಬರೆ ಹಾಕಿದಂತಾಗಿದೆ.
ಈಗಾಗಲೇ ಪ್ರತಿ ದಿನೋಪಯೋಗಿ ವಸ್ತುಗಳ ಬೆಲೆ ಗಣನೀಯವಾಗಿ ಏರಿಕೆಯಾಗಿದ್ದು, ಈ ಹಿಂದೆ 20 ರಿಂದ 25 ರೂಪಾಯಿ ಆಸುಪಾಸಿನಲ್ಲಿದ್ದ ಈರುಳ್ಳಿ ಬೆಲೆ ಈಗ ಕೆಜಿಗೆ 35 ರೂಪಾಯಿ ತಲುಪಿದ್ದು, ಕೇವಲ ಒಂದೇ ವಾರಕ್ಕೆ 10 ರೂಪಾಯಿ ಏರಿಕೆಯಾಗಿದೆ.
ರಾಜ್ಯ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಅಕಾಲಿಕ ಮಳೆಯಾಗುತ್ತಿರುವ ಕಾರಣ ಬೆಳೆ ನಷ್ಟವಾಗಿದ್ದು, ಈ ಕಾರಣಕ್ಕಾಗಿಯೇ ಈರುಳ್ಳಿ ಬೆಲೆಯಲ್ಲಿ ಏರಿಕೆಯಾಗಿದೆ ಎಂದು ಅಂದಾಜಿಸಲಾಗಿದೆ.
ನವೆಂಬರ್ ವೇಳೆಗೆ ಮಾರುಕಟ್ಟೆಗೆ ಹೊಸ ಈರುಳ್ಳಿ ಬರಲಿದ್ದು, ಅಲ್ಲಿಯವರೆಗೂ ಇದೇ ರೀತಿ ಬೆಲೆ ಏರಿಕೆ ಇರಲಿದೆ. ಈ ನಡುವೆ ಹೋಟೆಲ್ ಮಾಲೀಕರಿಗೆ ಈರುಳ್ಳಿ ಬೆಲೆ ಏರಿಕೆ ಆಗಿರುವುದು ಇಕ್ಕಟ್ಟಿನಲ್ಲಿ ಸಿಲಿಕಿಸಿದ್ದು , ಆಹಾರ ಪದಾರ್ಥಗಳ ಬೆಲೆ ಹೆಚ್ಚಳ ಮಾಡಿದರು ಅಚ್ಚರಿಯಿಲ್ಲ.
ಹೀಗೆ ಹೊಟೇಲ್ಗಳು ಕೂಡ ಬೆಲೆ ಏರಿಕೆ ಮಾಡಿದ್ದಲ್ಲಿ ದೀಪಾವಳಿ ಹಬದ ಸಡಗರಕ್ಕೆ ಬ್ರೇಕ್ ನೀಡುವ ಜೊತೆಗೆ ಬೆಲೆ ಏರಿಕೆ ಬಡ ಹಾಗೂ ಮಧ್ಯಮ ವರ್ಗದವರನ್ನು ಕಂಗೆಡಿಸಲಿದೆ.