Moto E22s : ಮೋಟೋದಿಂದ ತನ್ನ ಗ್ರಾಹಕರಿಗೆ ಬಂಪರ್ ಕೊಡುಗೆ | ಈ ಫೋನ್ ಖರೀದಿಗೆ ಜನ ಮುಗಿ ಬೀಳೋದು ಖಂಡಿತ!
ಮೊಬೈಲ್ ಎಂಬ ಮಾಯಾವಿ ಮಾರುಕಟ್ಟೆ ಪ್ರವೇಶಿಸಿದ ಬಳಿಕ ಸರ್ವಾಂತರ್ಯಾಮಿ ಸಾಧನವಾಗಿ ಪ್ರತಿ ಕೆಲಸ ಕಾರ್ಯಗಳಲ್ಲೂ ಕೂಡ ಜನತೆಯ ಜೀವನದೊಂದಿಗೆ ಹಾಸು ಹೊಕ್ಕಾಗಿದೆ. ಬೆಳಿಗ್ಗೆ ಎದ್ದಾಗಲಿಂದ ರಾತ್ರಿ ಮಲಗುವವರೆಗೆ ಅರೆ ಕ್ಷಣ ಬಿಟ್ಟಿರಲಾರದಷ್ಟು ಮೊಬೈಲ್ ಎಂಬ ಸಾಧನಕ್ಕೆ ಅವಲಂಬಿತರಾಗಿದ್ದಾರೆ.
ಮಾರುಕಟ್ಟೆಯಲ್ಲಿ ದಿನಂಪ್ರತಿ ನವೀನ ಮಾದರಿಯ ವೈಶಿಷ್ಟ್ಯದ ಮೊಬೈಲ್ಗಳು ಅನಾವರಣಗೊಂಡು ಜನರ ಬಳಕೆಗೆ ನೆರವಾಗುತ್ತಿವೆ. ಭಾರತೀಯ ಮಾರುಕಟ್ಟೆಯಲ್ಲಿ 10,000 ರೂ. ಒಳಗಡೆ ಲಭ್ಯವಿರುವ ಕೆಲವೇ ಕೆಲವು ಬೆಸ್ಟ್ ಸ್ಮಾರ್ಟ್ಫೋನ್ಗಳ ಸಾಲಿಗೆ ಮೋಟೋ E22s ಸ್ಮಾರ್ಟ್‌ಫೋನ್ ಕೂಡ ಸೇರಿದೆ.
ಬಜೆಟ್ ಬೆಲೆಯಿಂದ ಹಿಡಿದು ಹೈ ರೇಂಜ್ ಮಾದರಿಯ ಫೋನ್ಗಳನ್ನು ತಯಾರು ಮಾಡುತ್ತಿರುವ ಮೋಟೋ ಕಂಪನಿಯ ಪೋನ್ಗಳಿಗೆ ಬೇಡಿಕೆ ಕೂಡ ಹೆಚ್ಚಾಗುತ್ತಿದೆ.
ಹಾಗಾಗಿ,ಮೋಟೋರೊಲಾ (Motorola) ಕಂಪನಿ ಭಾರತದಲ್ಲಿ ಕಳೆದ ಕೆಲವು ತಿಂಗಳುಗಳಿಂದ ಒಂದರ ಹಿಂದೆ ಒಂದರಂತೆ ಆಕರ್ಷಕ ಸ್ಮಾರ್ಟ್ಫೋನ್ಗಳನ್ನು ಬಿಡುಗಡೆ ಮಾಡುತ್ತಲೇ ಇದೆ.
ಇತ್ತೀಚೆಗಷ್ಟೆ ತನ್ನ E ಸರಣಿಯಲ್ಲಿ ಮೋಟೋ E32 ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಿದ್ದ ಕಂಪನಿ ಇದೀಗ ಇದೇ ಸರಣಿಯಡಿಯಲ್ಲಿ ಮೋಟೋ ಇಎ22ಎಸ್ (Moto E22s) ಫೋನನ್ನು ರಿಲೀಸ್ ಮಾಡಿದೆ.
ಮೋಟೋ E32s ಸ್ಮಾರ್ಟ್‌ಫೋನ್ ಭಾರತದಲ್ಲಿ ಸದ್ಯಕ್ಕೆ ಒಂದು ಮಾದರಿಯಲ್ಲಷ್ಟೆ ಬಿಡುಗಡೆ ಆಗಿದ್ದು, ಇದರ 4GB RAM ಮತ್ತು 64GB ಇಂಟರ್ ಸ್ಟೋರೇಜ್ ಆಯ್ಕೆಗೆ 8,999 ರೂ. ನಿಗದಿ ಪಡಿಸಲಾಗಿದೆ.
ಮೋಟೋ E32s ಸ್ಮಾರ್ಟ್‌ಫೋನ್ ಡ್ಯುಯಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದ್ದು, ಇದರಲ್ಲಿ ಮುಖ್ಯ ಕ್ಯಾಮೆರಾ 16 ಮೆಗಾಪಿಕ್ಸೆಲ್ ಸೆನ್ಸಾರ್ ಹಾಗೂ ಎರಡನೇ ಕ್ಯಾಮೆರಾ 2 ಮೆಗಾಫಿಕ್ಸೆಲ್ ಡೆಪ್ತ್ ಸೆನ್ಸಾರ್ ಹೊಂದಿದೆ. ಇವುಗಳ ಜೊತೆಗೆ 8 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಅಳವಡಿಸಲಾಗಿದೆ.
ಈ ಕ್ಯಾಮೆರಾಗಳ ಮೂಲಕ 30fps ಫುಲ್ HD ವಿಡಿಯೋವನ್ನು ರೆಕಾರ್ಡಿಂಗ್ ಮಾಡಬಹುದು. ಜೊತೆಗೆ ಪನೋರಮ, ಪೋಟ್ರೆಟ್, ನೈಟ್ ವರ್ಷನ್, ಡ್ಯುಯೆಲ್ ಕಾಪ್ಚರ್, ಲೈವ್ ಫಿಲ್ಟರ್ ಸೇರಿದಂತೆ ಅನೇಕ ಆಯ್ಕೆಗಳನ್ನು ಸಹ ನೀಡಲಾಗಿದೆ.
ಮೋಟೋ E22s ಸ್ಮಾರ್ಟ್‌ಫೋನ್ 5000mAh ಸಾಮರ್ಥ್ಯದ ಬ್ಯಾಟರಿ ಸಾಮರ್ಥ್ಯ ಹೊಂದಿದ್ದು, ಇದು 10W ಚಾರ್ಜಿಂಗ್ ವೇಗವನ್ನು ಬೆಂಬಲಿಸುತ್ತದೆ.
ಕನೆಕ್ಟಿವಿಟಿ ಆಯ್ಕೆಗಳಲ್ಲಿ 3.5mm ಹೆಡ್‌ಫೋನ್ ಜ್ಯಾಕ್, ವೈಫೈ, ಬ್ಲೂಟೂತ್ v5.0 ಬೆಂಬಲ ಪಡೆದುಕೊಂಡಿದೆ. ಮೀಡಿಯಾ ಟೆಕ್ ಹೆಲಿಯೊ G37 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, ಆಂಡ್ರಾಯ್ಡ್ 12 OS ಜೊತೆಗೆ ರನ್ ಆಗಲುತ್ತಿದ್ದು 1TB ವರೆಗೆ ಮೆಮೋರಿಯನ್ನು ಹೆಚ್ಚಿಸಬಹುದಾಗಿದ್ದು, ಈ ಸ್ಮಾರ್ಟ್‌ಫೋನ್ 720 x 1,600 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.5-ಇಂಚಿನ IPS LCD ಡಿಸ್‌ಪ್ಲೇ ಹೊಂದಿದ್ದು, ಇದು 90Hz ರಿಫ್ರೆಶ್ ರೇಟ್ನಿಂದ ಕೂಡಿದೆ.
ಇದು 5ಜಿ ಗೆ ಕನೆಕ್ಟ್ ಮಾಡಲು ಸಾಧ್ಯವಿಲ್ಲ ಬದಲಾಗಿ 4G VoLTE ಸಪೋರ್ಟ್ ಮಾಡುತ್ತದೆ. ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸಾರ್ ಜೊತೆಗೆ ಫೇಸ್ ಅನ್‌ಲಾಕ್ ತಂತ್ರಜ್ಞಾನ ಒಳಗೊಂಡಿದೆ.
ಈ ಫೋನ್ ಪ್ರಸಿದ್ಧ ಇ ಕಾಮರ್ಸ್ ತಾಣವಾದ ಫ್ಲಿಪ್ಕಾರ್ಟ್ ಮೂಲಕ ಅಕ್ಟೋಬರ್ 22 ರಿಂದ ಖರೀದಿಗೆ ಲಭ್ಯವಿದ್ದು, ಮೋಟೋ E32s ಸ್ಮಾರ್ಟ್‌ಫೋನ್ ಕಪ್ಪು ಮತ್ತು ಆರ್ಟಿಕ್ ಬ್ಲೂ ಕಲರ್ನಲ್ಲಿ ಲಭ್ಯವಿದೆ.
ಕಡಿಮೆ ಬೆಲೆಗೆ ಬಿಡುಗಡೆಯಾಗುವ ಮೊಟೊರೊಲಾ ಮೊಬೈಲ್ ಅನ್ನು ಖರೀದಿಸಿ ಹೆಚ್ಚಿನ ಪ್ರಯೋಜನ ಪಡೆಯಬಹುದು.
Very interesting information!Perfect just what I was
looking for!Raise range