‘GPF ನಿಯಮ’ಗಳಲ್ಲಿ ಮಹತ್ವದ ಬದಲಾವಣೆ; ಹೊಸ ನಿಯಮದ ಮಾಹಿತಿ ಇಲ್ಲಿದೆ

ಪಿಂಚಣಿ ಮತ್ತು ಪಿಂಚಣಿದಾರರ ಕಲ್ಯಾಣ ಇಲಾಖೆಯ ಅಡಿಯಲ್ಲಿ ಬರುವ ಎಲ್ಲಾ ಸರ್ಕಾರಿ ನೌಕರರು ಸಾಮಾನ್ಯ ಭವಿಷ್ಯ ನಿಧಿಯ ಯೋಜನೆಯ ಪ್ರಯೋಜನವನ್ನು ಪಡೆಯುತ್ತಾರೆ. ಸಾಮಾನ್ಯ ಭವಿಷ್ಯ ನಿಧಿಯು(General Provident Fund) ಕೇಂದ್ರ ಸರ್ಕಾರಿ ನೌಕರರಿಗೆ ಸೇವೆ ಸಲ್ಲಿಸುತ್ತಿರುವ ಉಳಿತಾಯ ನಿಧಿ. ಪಿಂಚಣಿ ಮತ್ತು ಪಿಂಚಣಿದಾರರ ಕಲ್ಯಾಣ ಇಲಾಖೆಯಿಂದ ಜಿಪಿಎಫ್ ನಿರ್ವಹಿಸಲಾಗುತ್ತದೆ ಎಂಬುದನ್ನು ಗಮನಿಸಬಹುದು. ಸಾಮಾನ್ಯ ಭವಿಷ್ಯ ನಿಧಿಗೆ ಉದ್ಯೋಗಿಯ ಕೊಡುಗೆಯನ್ನು ಅವನ / ಅವಳ ನಿವೃತ್ತಿಯ ದಿನಾಂಕಕ್ಕೆ ಮೂರು ತಿಂಗಳ ಮೊದಲು ನಿಲ್ಲಿಸಲಾಗುತ್ತದೆ ಮತ್ತು ಉದ್ಯೋಗಿಯ ನಿವೃತ್ತಿಯ ನಂತರ ಅಂತಿಮ ಬಾಕಿಯ ತಕ್ಷಣದ ಪಾವತಿಯನ್ನು ಮಾಡಲಾಗುತ್ತದೆ.

ನೌಕರರ ಭವಿಷ್ಯ ನಿಧಿಯಂತೆಯೇ, ಜಿಪಿಎಫ್ ಖಾತೆಯು ಕೇಂದ್ರ ಸರ್ಕಾರಿ ನೌಕರರಿಗೆ ತಮ್ಮ ವೇತನದ ನಿರ್ದಿಷ್ಟ ಪ್ರತಿಶತವನ್ನು ಈ ಯೋಜನೆಗೆ ಕೊಡುಗೆಯಾಗಿ ನೀಡಲು ಅನುವು ಮಾಡಿಕೊಡುತ್ತದೆ. ಜಿಪಿಎಫ್ ( GPF) ನಲ್ಲಿನ ಠೇವಣಿಗಳು ಕೇಂದ್ರ ಸರ್ಕಾರ ನಿರ್ಧರಿಸಿದಂತೆ ಸ್ಥಿರವಾದ ಬಡ್ಡಿಯನ್ನು ಗಳಿಸುತ್ತವೆ. ಅಕ್ಟೋಬರಿಂದ ಡಿಸೆಂಬರ್ 2022ರ ತ್ರೈಮಾಸಿಕದಲ್ಲಿ, ಕೇಂದ್ರ ಸರ್ಕಾರವು ಜಿಪಿಎಫ್ ಬಡ್ಡಿದರವನ್ನು ಶೇಕಡಾ 7.1 ಕ್ಕೆ ನಿಗದಿಪಡಿಸಿದೆ.

ಕೆಲವೊಂದು ಅಸ್ಪಷ್ಟತೆಗಳನ್ನು ತೊಡೆದುಹಾಕುವುದಕ್ಕಾಗಿ ಹಾಗೂ ಪಾರದರ್ಶಕತೆಯನ್ನು ಕಾಪಾಡಲು ಪಿಂಚಣಿ ಸಚಿವಾಲಯದ ಅಡಿಯಲ್ಲಿ ಬರುವ ಪಿಂಚಣಿ ಮತ್ತು ಪಿಂಚಣಿದಾರರ ಕಲ್ಯಾಣ ಇಲಾಖೆ ಸಾಮಾನ್ಯ ಭವಿಷ್ಯ ನಿಧಿಯ ಠೇವಣಿ ನಿಯಮದಲ್ಲಿ ಬದಲಾವಣೆ ಮಾಡಿದೆ.

1960 ರ ಪ್ರಕಾರ, ಸಾಮಾನ್ಯ ಭವಿಷ್ಯ ನಿಧಿ (ಕೇಂದ್ರ ಸೇವೆ) ನಿಯಮಗಳು, ಚಂದಾದಾರರಿಗೆ ಸಂಬಂಧಿಸಿದಂತೆ ಜಿಪಿಎಫ್ ಚಂದಾದಾರಿಕೆಯ ಮೊತ್ತವು ವೇತನದ 6% ಕ್ಕಿಂತ ಕಡಿಮೆ ಇರಬಾರದು ಮತ್ತು ಚಂದಾದಾರರ ಒಟ್ಟು ವೇತನಕ್ಕಿಂತ ಹೆಚ್ಚಿರಬಾರದು ಎಂಬುದಾಗಿ ಇಲಾಖೆ ಅಕ್ಟೋಬರ್ 11ರ ತನ್ನ ಅಧಿಸೂಚನೆಯಲ್ಲಿ ಹೇಳಿದೆ. ಇನ್ನು ಒಂದು ಹಣಕಾಸು ವರ್ಷದಲ್ಲಿ ತನ್ನ ಜಿಪಿಎಫ್ ಖಾತೆಗೆ ಚಂದಾದಾರರ ಒಟ್ಟು ಚಂದಾದಾರಿಕೆಯ ಮೊತ್ತಕ್ಕೆ ಯಾವುದೇ ಮಿತಿ ಇಲ್ಲ ಎಂದು ಇಲಾಖೆ ಒತ್ತಿಹೇಳಿದೆ.

ಜಿಪಿಎಫ್ ಕೊಡುಗೆಗಳ ಮೇಲೆ ಗರಿಷ್ಠ 5 ಲಕ್ಷ ರೂ.ಗಳ ವಾರ್ಷಿಕ ಮಿತಿಯನ್ನು ನಿಗದಿಪಡಿಸಲು ಸರ್ಕಾರ ನಿರ್ಧರಿಸಿದೆ ಎಂದು ಇಲಾಖೆ ತಿಳಿಸಿದೆ. ಹಾಗೆನೇ ಗರಿಷ್ಠ ಮಿತಿಯ ಬಗ್ಗೆ ಜಾಗೃತಿ ಮೂಡಿಸಲು ಎಲ್ಲಾ ಸಂಬಂಧಿತ ಸಚಿವಾಲಯಗಳು ಮತ್ತು ಇಲಾಖೆಗಳಿಗೆ ಸೂಚನೆ ನೀಡುವಂತೆ ಅದು ಎಲ್ಲಾ ಸಚಿವಾಲಯಗಳು / ಇಲಾಖೆಗಳನ್ನು ಒತ್ತಾಯಿಸಿದೆ.

Leave A Reply

Your email address will not be published.