ಮಾಹಿತಿ : ದೀಪಾವಳಿಯಲ್ಲಿ ವಿಶೇಷ ರೈಲುಗಳ ಓಡಾಟ |ಯಾವಾಗ? ಯಾವುದು? ಎಲ್ಲಿಗೆ? | ಕಂಪ್ಲೀಟ್ ವಿವರ ಇಲ್ಲಿದೆ!!!
ಸದ್ಯ ಕಳೆದೆರಡು ವರ್ಷಗಳಿಂದ ಕೊರೋನಾ ಮಹಾಮಾರಿಯಿಂದ ಹಬ್ಬವನ್ನು ಆಚರಿಸಲಾಗದೆ ಇದ್ದ ಜನತೆ ಈ ಬಾರಿ ಹಬ್ಬದ ಸಂಭ್ರಮದಲ್ಲಿ ತೊಡಗಿಕೊಂಡಿದ್ದು ಇನ್ನೇನೂ ಕೆಲವೇ ದಿನಗಳಲ್ಲಿ ದೀಪಾವಳಿಯ ಮೆರುಗನ್ನು ಹೆಚ್ಚಿಸಲು ಭರದ ಸಿದ್ದತೆ ಎಲ್ಲೆಡೆ ನಡೆಯುತ್ತಿದೆ.
ಈ ನಡುವೆ ಜನರಿಗೆ ರೈಲ್ವೆ ಇಲಾಖೆ ದೂರ ಪ್ರಯಾಣ ಮಾಡುವ ಪ್ರಯಾಣಿಕರಿಗೆ ಹೆಚ್ಚುವರಿ ರೈಲಿನ ವ್ಯವಸ್ಥೆ ಮಾಡಿದೆ. ಅದರಲ್ಲೂ ಹಬ್ಬದ ಸಂದರ್ಭ ತಮ್ಮ ಊರಿಗೆ ತೆರಳುವ ಮಂದಿ ಹೆಚ್ಚು ಇದ್ದು, ಬಸ್, ಮಾತ್ರವಲ್ಲದೇ ರೈಲಿಗಳಲ್ಲಿಯು ಪ್ರಯಾಣಿಕರ ಸಂಖ್ಯೆ ಹೆಚ್ಚಾಗಲಿದ್ದು ಪ್ರಯಾಣಿಕರಿಗೆ ನೆರವಾಗಲು ದಕ್ಷಿಣ ಮಧ್ಯ ರೈಲ್ವೆ ವಿಶೇಷ ಎಕ್ಸ್‌ಪ್ರೆಸ್ ಹೆಚ್ಚುವರಿ ರೈಲುಗಳನ್ನು ಓಡಿಸಲು ತೀರ್ಮಾನಿಸಿದೆ.
ದೀಪಾವಳಿ ಪ್ರಯುಕ್ತ ಜನದಟ್ಟಣೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ದಕ್ಷಿಣ ಮಧ್ಯ ರೈಲ್ವೆ ವಿಶೇಷ ಎಕ್ಸ್ಪ್ರೆಸ್ ರೈಲುಗಳನ್ನು ಓಡಿಸಲು ನಿರ್ಧರಿಸಿದ್ದು, ಅದರ ಕುರಿತಾದ ವಿವರಗಳು ಇಲ್ಲಿವೆ.
ಯಶವಂತಪುರ – ನರಸಾಪುರ ವಿಶೇಷ ಎಕ್ಸ್‌ಪ್ರೆಸ್ ರೈಲು ಸಂಖ್ಯೆ. 07153/07154 ನರಸಾಪುರ – ಯಶವಂತಪುರ – ನರಸಾಪುರ ವಿಶೇಷ ಎಕ್ಸ್‌ಪ್ರೆಸ್ ಇದು ಕೇವಲ ಒಂದು ಟ್ರಿಪ್ ಹೋಗಲಿದ್ದು, ರೈಲು ಸಂಖ್ಯೆ 07153 ನರಸಾಪುರ – ಯಶವಂತಪುರ ವಿಶೇಷ ಎಕ್ಸ್‌ಪ್ರೆಸ್ 16.10.2022 ರಂದು (ಭಾನುವಾರ) 03:10 ಗಂಟೆಗೆ ನರಸಾಪುರದಿಂದ ಹೊರಟು ಮರುದಿನ ಸೋಮವಾರ ಬೆಳಿಗ್ಗೆ 10:50 ಕ್ಕೆ ಯಶವಂತಪುರಕ್ಕೆ ಆಗಮಿಸುತ್ತದೆ.
ಈ ರೈಲುಗಳು 2 – AC-2 ಶ್ರೇಣಿ, 11 – ಸ್ಲೀಪರ್ ವರ್ಗ, 5 – ಸಾಮಾನ್ಯ ಎರಡನೇ ದರ್ಜೆ ಮತ್ತು 2 – ಎರಡನೇ ದರ್ಜೆಯ ಲಗೇಜ್ ಕಮ್ ಬ್ರೇಕ್-ವ್ಯಾನ್‌ಗಳ ಒಟ್ಟು 20 ಕೋಚ್‌ಗಳ ಸಂಯೋಜನೆಯನ್ನು ಹೊಂದಿರುತ್ತದೆ .
ಹಿಂದಿರುಗುವ ದಿಕ್ಕಿನಲ್ಲಿ, ರೈಲು ಸಂಖ್ಯೆ 07154 ಯಶವಂತಪುರ – ನರಸಾಪುರ ವಿಶೇಷ ಎಕ್ಸ್‌ಪ್ರೆಸ್ 17.10.2022 (ಸೋಮವಾರ) ರಂದು ಮಧ್ಯಾಹ್ನ 03:50 ಕ್ಕೆ ಯಶವಂತಪುರದಿಂದ ಹೊರಟು ಮರುದಿನ 08:30 ಕ್ಕೆ ನರಸಾಪುರಕ್ಕೆ ಆಗಮಿಸುತ್ತದೆ.
ಯಶವಂತಪುರ – ನರಸಾಪುರ ವಿಶೇಷ ಎಕ್ಸ್‌ಪ್ರೆಸ್ ಈ ವಿಶೇಷ ರೈಲುಗಳು ಪಾಲಕೊಳ್ಳು, ಭೀಮಾವರಂ ಟೌನ್, ಅಕಿವೀಡು, ಕೈಕಲೂರು, ಗುಡಿವಾಡ, ವಿಜಯವಾಡ, ಗುಂಟೂರು, ನರಸರಾವ್‌ಪೇಟೆ, ಡೊಣಕೊಂಡ, ಮಾರ್ಕಾಪುರ ರಸ್ತೆ, ಗಿದ್ದಲ್ಲೂರು, ನಂದ್ಯಾಲ್, ಧೋಣೆ, ಅನಂತಪುರ, ಧರ್ಮಾವರಂ, ಪೆನುಕೊಂಡ, ಹಿಂದೂಪುರ ಮತ್ತು ಯಲಹಂಕ ಎರಡೂ ದಿಕ್ಕಿನ ನಿಲ್ದಾಣಗಳಲ್ಲಿ ನಿಲ್ಲಿಸಲಾಗುತ್ತದೆ.
ಯಶವಂತಪುರ – ಹೈದರಾಬಾದ್ ವಿಶೇಷ ಎಕ್ಸ್‌ಪ್ರೆಸ್
ರೈಲು ಸಂಖ್ಯೆ. 07265/07266 ಹೈದರಾಬಾದ್ – ಯಶವಂತಪುರ – ಹೈದರಾಬಾದ್ ವಿಶೇಷ ಎಕ್ಸ್‌ಪ್ರೆಸ್ ಎರಡು ಟ್ರಿಪ್‌ಗಳು ಹೋಗಲಿದ್ದು, ರೈಲು ಸಂಖ್ಯೆ. 07265 ಹೈದರಾಬಾದ್ – ಯಶವಂತಪುರ ವಿಶೇಷ ಎಕ್ಸ್‌ಪ್ರೆಸ್ ಹೈದರಾಬಾದ್‌ನಿಂದ 18.10.2022 ಮತ್ತು 25.10.2022 (ಮಂಗಳವಾರ) ರಾತ್ರಿ 09:05 ಕ್ಕೆ ಹೊರಟು ಮರುದಿನ ಬೆಳಿಗ್ಗೆ 10:50 ಕ್ಕೆ ಯಶವಂತಪುರ ತಲುಪಲಿದೆ.
ಈ ವಿಶೇಷ ರೈಲುಗಳು 1 – ಎಸಿ ಎರಡು ಶ್ರೇಣಿ, 7 – ಎಸಿ ಮೂರು ಶ್ರೇಣಿ, 9 – ಸ್ಲೀಪರ್ ಕ್ಲಾಸ್, 2 – ಸಾಮಾನ್ಯ ಎರಡನೇ ದರ್ಜೆ, 1 – ಎರಡನೇ ದರ್ಜೆಯ ಲಗೇಜ್ ಕಮ್ ಬ್ರೇಕ್-ವ್ಯಾನ್ಸ್ / ದಿವ್ಯಾಂಗಜನ ಸ್ನೇಹಿ ವಿಭಾಗ ಮತ್ತು 1 – ಲಗೇಜ್ ಕಮ್ ಬ್ರೇಕ್ಒಟ್ಟು 21 ಕೋಚ್‌ಗಳ ಸಂಯೋಜನೆಯನ್ನು ಹೊಂದಿರುತ್ತದೆ.
ಹಿಂದಿರುಗುವ ದಿಕ್ಕಿನಲ್ಲಿ, ರೈಲು ಸಂಖ್ಯೆ 07266 ಯಶವಂತಪುರ – ಹೈದರಾಬಾದ್ ವಿಶೇಷ ಎಕ್ಸ್‌ಪ್ರೆಸ್ ಯಶವಂತಪುರದಿಂದ 19.10.2022 ಮತ್ತು 26.10.2022 (ಬುಧವಾರ) ಮಧ್ಯಾಹ್ನ 03:50 ಕ್ಕೆ ಹೊರಟು ಮರುದಿನ 05:45 ಕ್ಕೆ ಹೈದರಾಬಾದ್‌ಗೆ ತಲುಪುತ್ತದೆ.
ಯಶವಂತಪುರ – ಹೈದರಾಬಾದ್ ವಿಶೇಷ ಎಕ್ಸ್‌ಪ್ರೆಸ್ ಈ ವಿಶೇಷ ರೈಲುಗಳು ಸಿಕಂದರಾಬಾದ್, ಕಾಚಿಗುಡ, ಉಮ್ದನಗರ, ಶಾದ್‌ನಗರ, ಜಡ್ಚೆರ್ಲಾ, ಮಹೆಬೂಬ್‌ನಗರ, ವನಪರ್ತಿ ರಸ್ತೆ, ಗದ್ವಾಲ್, ಕರ್ನೂಲ್ ಸಿಟಿ, ಧೋನೆ, ಅನಂತಪುರ, ಧರ್ಮಾವರಂ, ಹಿಂದೂಪುರ ಮತ್ತು ಯಲಹಂಕ ನಿಲ್ದಾಣಗಳಲ್ಲಿ ಎರಡೂ ದಿಕ್ಕುಗಳಲ್ಲಿ ನಿಲುಗಡೆಯಾಗುತ್ತವೆ.
ಜನರಿಗೆ ರೈಲ್ವೆ ಇಲಾಖೆ ದೀಪಾವಳಿ ಪ್ರಯುಕ್ತ ವಿಶೇಷವಾಗಿ ಓಡಾಡಲು ನೆರವಾಗಲು ದಕ್ಷಿಣಾ ಮದ್ಯ ರೈಲ್ವೆ ವಿಶೇಷ ಎಕ್ಸ್ಪ್ರೆಸ್ ರೈಲುಗಳನ್ನು ಓಡಿಸಲು ನಿರ್ಧರಿಸಿದ್ದು, ಇದರಿಂದ ಜನದಟ್ಟಣೆ ಕಡಿಮೆಯಾಗಿ ಪ್ರಯಾಣಿಕರು ಸರಾಗವಾಗಿ ಓಡಾಡಲು ನೆರವಾಗುತ್ತವೆ..