SBI ಗ್ರಾಹಕರಿಗೆ ಗುಡ್ ನ್ಯೂಸ್ | ಉಳಿತಾಯ ಖಾತೆ ಮೇಲಿನ ಬಡ್ಡಿದರ ಹೆಚ್ಚಳ !!!
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಗ್ರಾಹಕರಿಗೆ ಸಿಹಿಸುದ್ದಿಯೊಂದನ್ನು ನೀಡಿದ್ದು, ಅದೇನೆಂದರೆ ಬ್ಯಾಂಕ್ ಖಾತೆಗಳ ಮೇಲಿನ ಬಡ್ಡಿದರವನ್ನ ಹೆಚ್ಚಿಸಿದೆ. ಈ ನಿರ್ಧಾರದಿಂದಾಗಿ ಬ್ಯಾಂಕ್ನಲ್ಲಿ ಖಾತೆ ಹೊಂದಿರುವವರಿಗೆ ಖುಷಿ ದೊರಕಲಿದ್ದು, ಮೊದಲಿಗಿಂತ ಹೆಚ್ಚಿನ ಆದಾಯವನ್ನು ಬಡ್ಡಿಯ ರೂಪದಲ್ಲಿ ಪಡೆಯ ಬಹುದು. ಹಾಗಾದ್ರೆ, ಈಗ ಯಾವ್ಯಾವ ಖಾತೆಗಳ ಬಡ್ಡಿ ದರ ಎಷ್ಟು ಹೆಚ್ಚಾಗಿದೆ ಅನ್ನೋದನ್ನು ತಿಳಿದುಕೊಳ್ಳೋಣ.
ಎಸ್ಬಿಐ ಉಳಿತಾಯ ಖಾತೆಗಳ ಮೇಲಿನ ಬಡ್ಡಿ ದರವನ್ನು ಹೆಚ್ಚಿಸುವ ನಿರ್ಧಾರ ಅಕ್ಟೋಬರ್ 15 ರಿಂದ ಜಾರಿಗೆ ಬಂದಿದೆ. ಭಾರತೀಯ ರಿಸರ್ವ್ ಬ್ಯಾಂಕ್ (RBI) ರೆಪೊ ದರವನ್ನು ಹೆಚ್ಚಿಸಿದ ಹಿನ್ನೆಲೆಯಲ್ಲಿ ಎಸ್ಬಿಐ ಕೂಡ ಬಡ್ಡಿದರಗಳನ್ನು ಹೆಚ್ಚಿಸಲು ನಿರ್ಧರಿಸಿದೆ.
ಉಳಿತಾಯ ಖಾತೆಗಳ ಮೇಲಿನ ಬಡ್ಡಿದರ ಮಾತ್ರವಲ್ಲದೆ ಸ್ಥಿರ ಠೇವಣಿಗಳ ಮೇಲಿನ ಬಡ್ಡಿದರವನ್ನೂ ಹೆಚ್ಚಿಸಲಾಗಿದೆ. ಜತೆಗೆ ಸಾಲದ ದರವೂ ಹೆಚ್ಚಿದ್ದು, ಇದು ಸಾಲಗಾರರ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಆದರೆ ಠೇವಣಿದಾರರಿಗೆ ಪರಿಹಾರ ಸಿಗಲಿದೆ.
ಎಸ್ಬಿಐ ಸ್ಥಿರ ಠೇವಣಿಗಳ ಮೇಲಿನ ಬಡ್ಡಿ ದರವನ್ನು 20 ಬೇಸಿಸ್ ಪಾಯಿಂಟ್ಗಳಷ್ಟು ಹೆಚ್ಚಿಸಿದೆ. ಉಳಿತಾಯ ಖಾತೆಗಳ ಮೇಲಿನ ಬಡ್ಡಿ ದರವನ್ನೂ 25 ಮೂಲ ಅಂಕಗಳಷ್ಟು ಹೆಚ್ಚಿಸಿದೆ. ಹಾಗಾದರೆ ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯೋಣ ಬನ್ನಿ. ರೂ. 10 ಕೋಟಿಗಿಂತ ಕಡಿಮೆ ಮೊತ್ತದ ಉಳಿತಾಯ ಖಾತೆಗಳ ಮೇಲಿನ ಬಡ್ಡಿ ದರ ಶೇ.2.7ಕ್ಕೆ ಏರಿಕೆಯಾಗಿದೆ. ಇದುವರೆಗೆ ಬಡ್ಡಿ ದರ ಶೇ.2.75 ಇದ್ದು, ಈಗ 10 ಕೋಟಿ ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತದ ಉಳಿತಾಯ ಖಾತೆಗಳ ಮೇಲಿನ ಬಡ್ಡಿ ದರವನ್ನ 25 ಬೇಸಿಸ್ ಪಾಯಿಂಟ್ಗಳಷ್ಟು ಹೆಚ್ಚಿಸಲಾಗಿದೆ. 2.75 ರಿಂದ ಶೇ.3ಕ್ಕೆ ಹೆಚ್ಚಿಸಲಾಗಿದೆ.
SBI ತನ್ನ ಗ್ರಾಹಕರಿಗೆ ನೀಡುವ ವಿವಿಧ ಉಳಿತಾಯ ಖಾತೆ ಯಾವುದು ತಿಳಿಯೋಣ ಬನ್ನಿ : ವೀಡಿಯೊ KYC ಉಳಿತಾಯ ಖಾತೆ, ಮೂಲ ಉಳಿತಾಯ ಬ್ಯಾಂಕ್ ಖಾತೆ, ಮೂಲ ಉಳಿತಾಯ ಬ್ಯಾಂಕ್ ಠೇವಣಿ ಸಣ್ಣ ಖಾತೆ, ಉಳಿತಾಯ ಬ್ಯಾಂಕ್ ಖಾತೆ, ಅಪ್ರಾಪ್ತ ವಯಸ್ಕರಿಗೆ ಉಳಿತಾಯ ಖಾತೆ, ಉಳಿತಾಯ ಪ್ಲಸ್ ಖಾತೆ, ಮೋಟಾರು ಅಪಘಾತಗಳ ಹಕ್ಕು ಖಾತೆ, ನಿವಾಸಿ ವಿದೇಶಿ ಕರೆನ್ಸಿ ಖಾತೆ, Insta Plus ವೀಡಿಯೊ KYC ಖಾತೆ.
ಉಳಿತಾಯ ಖಾತೆಗಳ ಮೇಲಿನ ಬಡ್ಡಿದರವನ್ನು ಎಸ್ಬಿಐ ಹೆಚ್ಚಳದ ಮಾಡಿದ್ದರಿಂದ, ನಾವು ಇತರ ಬ್ಯಾಂಕ್ಗಳಲ್ಲಿನ ಬಡ್ಡಿ ದರ ಎಷ್ಟಿದೆ ತಿಳಿಯೋಣ.
• HDFC ಬ್ಯಾಂಕ್ ಖಾತೆಗಳ ಮೇಲಿನ ಬಡ್ಡಿ ದರವು 3 ಪ್ರತಿಶತ ಇದ್ದು, ಇದು 50 ಲಕ್ಷಕ್ಕಿಂತ ಕಡಿಮೆ ಬ್ಯಾಲೆನ್ಸ್ ಹೊಂದಿರುವ ಖಾತೆಗಳಿಗೆ ಅನ್ವಯವಾಗುತ್ತದೆ. ಅದರ ನಂತರದ ಬಾಕಿ 3.5 ಪ್ರತಿಶತ ಬಡ್ಡಿಯನ್ನು ಆಕರ್ಷಿಸುತ್ತದೆ.
• ICICI ಬ್ಯಾಂಕ್ನಲ್ಲಿನ ಉಳಿತಾಯ ಖಾತೆಗಳ ಮೇಲಿನ ಬಡ್ಡಿ ದರವು 3 ಪ್ರತಿಶತದಿಂದ ಪ್ರಾರಂಭವಾಗುತ್ತದೆ. ಇದು 50 ಲಕ್ಷಕ್ಕಿಂತ ಕಡಿಮೆ ಬ್ಯಾಲೆನ್ಸ್ ಹೊಂದಿರುವ ಖಾತೆಗಳಿಗೆ ಅನ್ವಯವಾಗಲಿದೆ. ಅದಕ್ಕಿಂತ ಹೆಚ್ಚಿನ ಮೊತ್ತ ಇದ್ದರೆ ಶೇ.3.5ರಷ್ಟು ಬಡ್ಡಿ ಸಿಗುತ್ತದೆ.
• ಆಕ್ಸಿಸ್ ಬ್ಯಾಂಕ್ ಕೂಡ ಬಹುತೇಕ ಒಂದೇ ರೀತಿಯ ಬಡ್ಡಿದರಗಳನ್ನ ಹೊಂದಿದೆ.