‘ B- ಟೆಕ್`ಚಾಯ್‌ವಾಲಿ ’ ಟೀ ಶಾಪ್ ಶುರು ; ಸ್ವಂತ ಉದ್ಯಮದ ಕನಸು ನನಸು ಮಾಡಿಕೊಂಡ B- ಟೆಕ್ ವಿದ್ಯಾರ್ಥಿನಿ

ಚಾಯ್ ವಾಲಾ ಆಗಿದ್ದು ದೇಶದ ಪ್ರಧಾನಿ ಆದ ನರೇಂದ್ರ.ಮೋದಿಯವರಿಂದ ಇನ್ನಷ್ಟು ಜನ ಯುವಕರು ಪ್ರಭಾವಿತರಾಗಿದ್ದಾರೆ. ಅಲ್ಲಿಲ್ಲಿ ಹಲವು  ‘ ಚಾಯ್ ವಾಲೆ ‘ ಗಳು ತಲೆಯೆತ್ತುತ್ತಿದ್ದಾರೆ. ಅವರ ಮಧ್ಯೆ ಇಲ್ಲೊಬ್ಬಳು ಯುವತಿ ಸ್ಪೆಷಲ್ ಆಗಿ` ಬಿ ಟೆಕ್ – ಚಾಯ್‌ವಾಲಿ ’ ಎಂಬ ಬೋರ್ಡು ತಗುಲಿಸಿಕೊಂಡು ಸ್ವಂತ ಉದ್ಯಮದ ಕನಸು ಮಾಡ್ಕೊಂಡಿದ್ದಾರೆ.

ಸ್ವೋದ್ಯೋಗದ ಕನಸು ಕಾಣ್ತಿದ್ದ ಬಿಟೆಕ್ ವಿದ್ಯಾರ್ಥಿನಿ (B Tech Student) ತನ್ನ ಶಿಕ್ಷಣವನ್ನು ಅರ್ಧಕ್ಕೆ ಮೊಟಕುಗೊಳಿಸಿ ಕೊನೆಗೂ ತನ್ನ ಕನಸನ್ನು ನನಸು ಮಾಡಿಕೊಂಡಿದ್ದಾರೆ.
ಬಿಹಾರದ ಬಿ-ಟೆಕ್ ವಿದ್ಯಾರ್ಥಿನಿ ವರ್ತಿಕಾ ಸಿಂಗ್ ಫರಿದಾಬಾದ್‌ನಲ್ಲಿ `ಟೀ ಸ್ಟಾಲ್’ ಸ್ಥಾಪಿಸುವ ಮೂಲಕ, ಚಾಯ್ ವ್ಯಾಪಾರಕ್ಕೆ ಇಂಜಿನಿಯರಿಂಗ್ ಕಲೆ ಬೆರೆಸಲು ಹೊರಟಿದ್ದಾಳೆ.

ಆಕೆಗೆ ತನ್ನ ಪದವಿ ಮುಗಿಸಲು ಇನ್ನೂ 4 ವರ್ಷ ಇದೆ. ಅಷ್ಟು ಸಮಯ ಕಾಯದೇ `ಬಿ-ಟೆಕ್ ಚಾಯ್‌ವಾಲಿ’ ಎಂಬ ಹೆಸರಿನೊಂದಿಗೆ ಆಕೆ  ಚಹಾ ಅಂಗಡಿ ತೆರೆದಿಟ್ಟು ಖುದ್ದು ಛಾ ಅಳೆಯಲು ನಿಂತಿದ್ದಾಳೆ. ಈಗ ಈ ವೀಡಿಯೋ ಜಾಲತಾಣದಲ್ಲಿ ಭಾರಿ ಸದ್ದು ಮಾಡ್ತಿದೆ.
ಈ ವೀಡಿಯೋ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದ್ದು 56 ಸಾವಿರಕ್ಕೂ ಅಧಿಕ ಮಂದಿ ವೀಡಿಯೋ ವೀಕ್ಷಣೆ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನೊಂದೇ ವರ್ಷದಲ್ಲಿ ನೀವು ಬ್ರ‍್ಯಾಂಡ್ ಆಗುತ್ತೀರಿ ಎಂದು ಜನರು ಶ್ಲಾಘಿಸಿದ್ದಾರೆ.

ಇದಕ್ಕಾಗಿ ಆಕೆ ತನ್ನ ದಿನಚರಿಯಲ್ಲಿ ಬದಲಾವಣೆ ಮಾಡಿಕೊಂಡಿದ್ದಾಳೆ. ಪ್ರತಿದಿನ ಬೆಳಿಗ್ಗೆ ಬೇಗ ಎದ್ದು, ಮುಂಜಾನೆ 5:30 ರಿಂದ ರಾತ್ರಿ 9:30ರ ವರೆಗೆ ಚಹಾ ಬಿಸಿಮಾಡಿ ಮಾರಾಟ ಮಾಡುತ್ತಾಳೆ. ಚಾಯ್ಗೆ ಆಕೆ ವಿಷೇಶ ಬೆಲೆ ಫಿಕ್ಸ್ ಮಾಡಿದ್ದಾಳೆ. ಮಸಾಲಾ ಮತ್ತು ಲೆಮೆನ್ ಚಾಯ್‌ಗೆ ತಲಾ 20 ರೂ ಇದ್ದರೆ, ಸಾಮಾನ್ಯ ಚಾಯ್‌ಗೆ 10 ರೂ. ದರ ನಿಗದಿ ಆಗಿದೆ. 

ಈ ಹಿಂದೆ ಅರ್ಥಶಾಸ್ತ್ರ ಪದವೀಧರೆ ಪ್ರಿಯಾಂಕ ಗುಪ್ತಾ 2 ವರ್ಷಗಳಿಂದ ಕೆಲಸ ಸಿಗದೇ ಬಿಹಾರದ ರಾಜಧಾನಿಯಲ್ಲಿ ಮಹಿಳಾ ಕಾಲೇಜು ಬಳಿಯೇ ಟೀ ಸ್ಟಾಲ್ ಹಾಕಿದ್ದರು. 2019ರಲ್ಲಿ ತನ್ನ ಪದವಿ ಪೂರ್ಣಗೊಳಿಸಿದ್ದ ಎಂಬಿಎ ಪದವೀಧರ ಪ್ರಫುಲ್ ಬಿಲ್ಲೋರ್ `ಎಂಬಿಎ ಚಾಯ್‌ವಾಲಾ’ ಎಂದೇ ಪ್ರಸಿದ್ಧಿಯಾದರು. ಅವರ ಕಥೆ ನನಗೆ ಟೀ ಸ್ಟಾಲ್ ತೆರೆಯಲು ಸ್ಫೂರ್ತಿಯಾಯಿತು ಎಂದು ಅವರೆಲ್ಲರನ್ನೂ ಆಕೆ ನೆನೆದಿದ್ದಾರೆ.

Leave A Reply

Your email address will not be published.