ವಾಟ್ಸಪ್ ಸಂದೇಶಗಳನ್ನು ಇನ್ಮುಂದೆ ಎಡಿಟ್ ಮಾಡಿ!!!

ದಿನನಿತ್ಯದ ದಿನಚರಿಯ ಅವಿಭಾಜ್ಯ ಭಾಗವಾಗಿ, ಎಲ್ಲರ ಕೈಯಲ್ಲೂ ಹರಿದಾಡುವ ಮೊಬೈಲ್ನಲ್ಲಿ ಅತಿ ಹೆಚ್ಚು ಜನಪ್ರಿಯತೆ ಗಳಿಸಿರುವ ಮೆಟಾ (Meta) ಮಾಲೀಕತ್ವದ ಪ್ರಸಿದ್ಧ ಮೆಸೇಜಿಂಗ್ ಅಪ್ಲಿಕೇಷನ್ ವಾಟ್ಸಪ್ , ವಿಶ್ವದಲ್ಲಿಂದು ಕೋಟ್ಯಾಂತರ ಬಳಕೆದಾರರನ್ನು ಹೊಂದಿರುವ ಅಪ್ಲಿಕೇಶನ್ ಆಗಿ ಬೆಳೆದಿದ್ದು, ಈ ವರ್ಷ ಹಲವು ಫೀಚರ್​ಗಳನ್ನು ಪರಿಚಯಿಸಿ ಮತ್ತಷ್ಟು ಪ್ರಸಿದ್ಧಿ ಪಡೆದುಕೊಂಡಿದೆ.

ಅಷ್ಟೆ ಅಲ್ಲದೆ, ತನ್ನದೇ ಆದ ಛಾಪು ಮೂಡಿಸಿ, ಜನರ ಮನ ಸೆಳೆಯುವ ಪ್ರಯತ್ನವನ್ನೂ ಸದಾ ನಡೆಸುತ್ತಲೇ ಇದೆ.
ವಾಟ್ಸಪ್ ಸಂದೇಶ ರವಾನೆ ಮಾಡಲು ಅತಿ ಹೆಚ್ಚು ಬಳಕೆಯಾಗುವ ಪ್ಲಾಟ್ ಫಾರಂ ಆಗಿದ್ದು, ವಾಟ್ಸಾಪ್ ಚಾಟ್, ವಾಟ್ಸಾಪ್ ಕಾಲ್, ಅಥವಾ ವಾಟ್ಸಾಪ್ ವೀಡಿಯೊ ಕಾಲ್ ಇತ್ತೀಚಿನ ದಿನಗಳಲಿ ಭಾರೀ ಜನಪ್ರಿಯವಾಗಿದೆ.

ಇದು ಇತರ ಸಾಮಾಜಿಕ ಮಾಧ್ಯಮ ಅಪ್ಲಿಕೇಶನ್‌ಗಳಿಗಿಂತ ಹೆಚ್ಚು ಸುರಕ್ಷಿತವಾಗಿದ್ದು ತ್ವರಿತ ಸಂದೇಶವನ್ನು ಕಳುಹಿಸಲು ನೆರವಾಗುತ್ತದೆ.
ದಿನದಿಂದ ದಿನಕ್ಕೆ ಹೊಸ ಅಪ್ಡೇಟ್ ಮಾಡುತ್ತಾ ಹೊಸ ವೈಶಿಷ್ಟ್ಯದ ಮೂಲಕ ಜನರ ಬಳಕೆಗೆ ಅವಕಾಶ ಕಲ್ಪಿಸಿರುವ ವಾಟ್ಸಪ್ , ಇತ್ತೀಚಿಗಷ್ಟೇ ವಾಟ್ಸಾಪ್ ಗ್ರೂಪ್‌ಗೆ 256 ಸದಸ್ಯರನ್ನು ಸೇರಿಸಲು ಇದ್ದ ಅವಕಾಶವನ್ನು ಕೆಲವು ತಿಂಗಳುಗಳ ಹಿಂದೆಯಷ್ಟೇ 512 ಕ್ಕೆ ಹೆಚ್ಚಿಸಲಾಗಿತ್ತು.

ಇದೀಗ ಈ ಸಂಖ್ಯೆಯನ್ನು 1024 ಗೆ ಹೆಚ್ಚಿಸಲು ವಾಟ್ಸಾಪ್ ಸಂಸ್ಥೆ ಕೆಲಸ ಮಾಡುತ್ತಿದೆ.
ಈ ಆಯ್ಕೆಯು ಪ್ರಸ್ತುತ ಆಯ್ದ ಬೀಟಾ ಬಳಕೆದಾರರಿಗೆ ಲಭ್ಯವಾಗಿದ್ದು, ಶೀಘ್ರದಲ್ಲೇ ಎಲ್ಲಾ ಆಂಡ್ರಾಯ್ಡ್ ಮತ್ತು ಐಒಎಸ್ ಬಳಕೆದಾರರಿಗೆ ಈ ಸೇವೆ ದೊರೆಯಲಿದೆ.


ಇದರ ಜೊತೆಗೆ ಮೆಸೇಜಿಂಗ್ ಅಪ್ಲಿಕೇಷನ್ ವಾಟ್ಸಾಪ್ ತನ್ನ ಸಂದೇಶಗಳನ್ನು ಎಡಿಟ್ ಬಟನ್ (Edit Button) ವೈಶಿಷ್ಟ್ಯವನ್ನು ಪರೀಕ್ಷಿಸಲು ಪ್ರಾರಂಭಿಸಿದ್ದು, ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಿಗೆ ಸಪೋರ್ಟ್ ಮಾಡುವ ಇತ್ತೀಚಿನ ಬೀಟಾ ಆವೃತ್ತಿಯ ವಾಟ್ಸಾಪ್ ಅಪ್ಲಿಕೇಷನ್‌ನಲ್ಲಿ ಸಂದೇಶಗಳನ್ನು ಎಡಿಟ್ ಮಾಡಬಹುದಾದ ಎಡಿಟ್ ಬಟನ್ ವೈಶಿಷ್ಟ್ಯವನ್ನು ಗುರುತಿಸಲಾಗಿದ್ದು, ಶೀಘ್ರದಲ್ಲೇ ಈ ಹೊಸ ವೈಶಿಷ್ಟ್ಯವು ಬಳಕೆದಾರರಿಗೆ ಲಭ್ಯವಾಗಬಹುದು.

ಪ್ರಸ್ತುತ, ವಾಟ್ಸಾಪ್​ನಲ್ಲಿ ಮೀಸಲಾದ ಎಡಿಟ್ ಆಯ್ಕೆ ಇಲ್ಲ. ಒಮ್ಮೆ ಕಳುಹಿಸಿದ ಸಂದೇಶಗಳನ್ನು ಮಾತ್ರ ಅಳಿಸಬಹುದು. ಅದನ್ನು ಮರಳಿ ಪಡೆಯಲು ಅವಕಾಶ ಇಲ್ಲ.ಮುಂದಿನ ದಿನಗಳಲ್ಲಿ ಸಂದೇಶಗಳನ್ನು ನಕಲಿಸಲು ಮತ್ತು ಫಾರ್ವರ್ಡ್ ಮಾಡುವ ಆಯ್ಕೆಗಳ ಜೊತೆಗೆ, ಬಳಕೆದಾರರು ಎಡಿಟ್ ಆಯ್ಕೆಯನ್ನು ಸಹ ಪಡೆಯಬಹುದು.


ವಾಟ್ಸಾಪ್ ತನ್ನ ಸಂದೇಶಗಳಲ್ಲಿ ಎಡಿಟ್ ಬಟನ್ (Edit Button) ವೈಶಿಷ್ಟ್ಯವನ್ನು ಪರೀಕ್ಷಿಸಲು ಪ್ರಾರಂಭಿಸಿರುವ ಬಗ್ಗೆ WaBetaInfo ವರದಿಯಲ್ಲಿ ಸ್ಕ್ರೀನ್‌ಶಾಟ್ ಒಂದನ್ನು ಹಂಚಿಕೊಳ್ಳಲಾಗಿದೆ. ಈ ಸ್ಕ್ರೀನ್‌ಶಾಟ್ ನಲ್ಲಿ ಕಾಣಿಸುವಂತೆ ಕಳುಹಿಸಿದ ಪ್ರತಿ ವಾಟ್ಸಾಪ್ ಸಂದೇಶಗಳ ಮೇಲೆ “Edited” ಲೇಬಲ್ ಪ್ರದರ್ಶಿಸುವುದನ್ನು ನೋಡಬಹುದು.

ಇದರಿಂದ ವಾಟ್ಸಾಪ್ ನಲ್ಲಿ ನಾವು ತಪ್ಪಾಗಿ ಕಳುಹಿಸಿದ ಸಂದೇಶಗಳನ್ನು ಸರಿಪಡಿಸಲು ಸಾಧ್ಯವಾಗಲಿದೆ ಎಂದು WaBetaInfo ವರದಿಯಲ್ಲಿ ತಿಳಿಸಲಾಗಿದೆ.
ಪ್ರಸ್ತುತ ಅಪ್ಲಿಕೇಶನಲ್ಲಿನ ಪ್ರತಿ ಸಂದೇಶಗಳು “Edited” ಲೇಬಲ್ ಪ್ರದರ್ಶಿಸುತ್ತವೆ.

ಸಂದೇಶಗಳನ್ನು ಎಡಿಟ್ ಮಾಡಲು ಬಳಕೆದಾರರಿಗೆ ಕೇವಲ 15 ನಿಮಿಷಗಳ ಸಮಯವಿರುತ್ತದೆ ಎಂದು ಹೇಳಲಾಗಿದ್ದು, ಆದರೆ, ಕಳುಹಿಸದ ಸಂದೇಶಗಳನ್ನು ಎಡಿಟ್ ಮಾಡಿದ ನಂತರ ಈ ಬಗ್ಗೆ ಅಲರ್ಟ್ ಕಳುಹಿಸಲಾಗುತ್ತದೆಯೇ ಎಂಬುದರ ಕುರಿತಾದ ಸ್ಪಷ್ಟ ಮಾಹಿತಿ ಇಲ್ಲ.

Leave A Reply

Your email address will not be published.