Drunk and drive : ಫೈನ್ ಹಾಕಿದ್ದಕ್ಕೆ ತಿಂಗಳ ನಂತರ ಕೋರ್ಟ್ ಗೆ ನುಗ್ಗಿ ಈತ ಮಾಡಿದ ಕೆಲಸ ಏನು ಗೊತ್ತಾ?
ಎಣ್ಣೆನೂ ಸೊಡಾನು ಎಂತ ಒಳ್ಳೆ ಫ್ರೆಂಡು… ಒಂದನೊಂದು ಬಿಟ್ಟು ಇರೋದಿಲ್ಲ… ಹಾಗೇನೇ ನಾನು ನೀನು …. ಒಳ್ಳೆ ಫ್ರೆಂಡು… ಎಂದು ಕಂಠ ಪೂರ್ತಿ ಕುಡಿದು.. ರಾತ್ರಿ ನೈಟ್ ಟೈಟು ಆದ ಮೇಲೆ ರೋಡು ನಮ್ಮದೇ..ಎಂಬ ರೀತಿಯಲ್ಲಿ ಕುಡಿದ ಮತ್ತಿನಲ್ಲಿ ಅಡ್ಡಾದಿಡ್ಡಿ ವಾಹನ ಚಲಾಯಿಸಿ, ರೂಲ್ಸ್ ಇರುವುದೇ ಬ್ರೇಕ್ ಮಾಡುವುದಕ್ಕೆ ಎಂಬಂತೆ ವರ್ತಿಸಿದ ಘಟನೆ ಚಿಕ್ಕ ಮಗಳೂರಿನಲ್ಲಿ ನಡೆದಿದೆ.
ಸಂಚಾರಿ ನಿಯಮ ಉಲ್ಲಂಘನೆಗಾಗಿ ನ್ಯಾಯಾಧೀಶರು ದಂಡ ವಿಧಿಸಿದ್ದಕ್ಕೆ ಕುಡಿದ ಅಮಲಿನಲ್ಲಿ ವ್ಯಕ್ತಿಯೊಬ್ಬ ನ್ಯಾಯಾಲಯದಲ್ಲಿ ಕೂಗಾಡಿ ಜಡ್ಜ್ಗೆ ಪಾದರಕ್ಷೆಯನ್ನು ಎಸೆದು ಆಕ್ರೋಶ ವ್ಯಕ್ತಪಡಿಸಿದ್ದಾನೆ.
ಕುಡಿಯೋದೆ ನಮ್ಮ ವೀಕ್ನೆಸ್ ಎಂದು ಕುಡಿದು ಡ್ರೈವ್ ಮಾಡಿ ಸಂಚಾರಿ ನಿಯಮ ಪಾಲಿಸದೆ ಟ್ರಾಫಿಕ್ ಪೊಲೀಸರ ಕೈಯಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದು ದಂಡ ವಿಧಿಸಿದ ಘಟನೆ ಚಿಕ್ಕಮಗಳೂರು ನ್ಯಾಯಾಲಯದ ಒಂದನೇ ಹೆಚ್ಚುವರಿ ಕಿರಿಯ ಶ್ರೇಣಿಯ ಕೋರ್ಟ್ನಲ್ಲಿ ನಡೆದಿದ್ದು, ಚಿಕ್ಕಮಗಳೂರು ನಗರದ ಅರವಿಂದ ನಗರ ನಿವಾಸಿ ಲೋಕೇಶ್ ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಪುಣ್ಯಾತ್ಮನಾಗಿದ್ದಾನೆ.
ಕುಡಿದ ಮತ್ತಿನಲ್ಲಿ ರೋಡ್ ತನ್ನದೇ ಎಂಬ ರೀತಿ ವಾಹನ ಚಲಾಯಿಸಿ ,ಸಂಚಾರ ಠಾಣೆ ಪೊಲೀಸರು ಡ್ರಂಕ್ ಆ್ಯಂಡ್ ಡ್ರೈವ್ ತಪಾಸಣೆಯಲ್ಲಿದ್ದಾಗ ಲೋಕೇಶ್ ಸಿಕ್ಕಿಬಿದ್ದಿದ್ದಾನೆ. ಹಾಗಾಗಿ, ಈ ಪ್ರಕರಣದ ಸಲುವಾಗಿ ಆತನಿಗೆ ಕೋರ್ಟ್ನಲ್ಲಿ ದಂಡ ಕಟ್ಟುವಂತೆ ಪೋಲೀಸರು ಸೂಚಿಸಿದ್ದು, ಕೋರ್ಟ್ಗೆ ಬಂದ ಆರೋಪಿ ಲೋಕೇಶ್ 5000ರೂಪಾಯಿ ದಂಡ ಕಟ್ಟಿ ವಾಪಸಾಗಿದ್ದಾನೆ.
ದಂಡ ಕಟ್ಟಿದ ಒಂದು ತಿಂಗಳ ಬಳಿಕ ಜಿಲ್ಲಾ ನ್ಯಾಯಾಲಯದ ಒಂದನೇ ಹೆಚ್ಚುವರಿ ಕಿರಿಯ ಶ್ರೇಣಿಯ ಕೋರ್ಟ್ ಹಾಲ್ಗೆ ಎಂಟ್ರಿ ಕೊಟ್ಟಿರುವ ಲೋಕೇಶ್ ಎಣ್ಣೆಯ ಮಹಾತ್ಮೆಯಿಂದ ದಂಡ ವಿಧಿಸಿದಕ್ಕಾಗಿ ಆಕ್ರೋಶ ಗೊಂಡ್ಡಿದ್ದು, ಸೀದಾ ಒಳ ನುಗ್ಗಿ ಜಡ್ಜ್ ಮೇಲೆ ಚಪ್ಪಲಿ ತೂರಿದ್ದಾನೆ.
ತಕ್ಷಣ ಕಾರ್ಯ ಪ್ರವೃತ್ತರಾದ ಖಾಕಿ ಪಡೆ ಆತನನ್ನು ಬಂಧಿಸಿದ ಘಟನೆ ನಡೆದಿದೆ. ಚಿಕ್ಕಮಗಳೂರು ನಗರ ಠಾಣೆಯಲ್ಲಿ ಲೋಕೇಶ್ ವಿರುದ್ಧ ಪ್ರಕರಣ ದಾಖಲಾಗಿದ್ದು, ಘಟನೆಯ ಬಗ್ಗೆ ವಕೀಲರು ಕೂಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.