Milk Price Hike : ಅಮುಲ್ ಹಾಲಿನ ದರ ರೂ.2 ಹೆಚ್ಚಿಸಿ ಆದೇಶ ಹೊರಡಿಸಿದ ಸರಕಾರ!!!
ದೀಪಾವಳಿ ಹಬ್ಬ ಸನಿಹವಾದಂತೆ ಹಾಲು ಪ್ರಿಯರಿಗೆ ಶಾಕ್ ನೀಡಲು ಅಮುಲ್ ಬ್ರಾಂಡ್ ಮುಂದಾಗಿದೆ. ಕಳೆದೆರಡು ಬಾರಿ ಅಮುಲ್ ಬ್ರ್ಯಾಂಡ್ ಹಾಲು ದರ ಏರಿಕೆ ಮಾಡಿದ ಬೆನ್ನಲ್ಲೇ ಮಗದೊಮ್ಮೆ ದರ ಹೆಚ್ಚಳ ಮಾಡಿ ಜನರಿಗೆ ಬೇಸರ ತರಿಸಿದೆ.
ಅಮುಲ್ ಸಂಪೂರ್ಣ ಕೆನೆಭರಿತ ಹಾಲಿನ ಜೊತೆಗೆ ಎಮ್ಮೆ ಹಾಲಿನ ದರವನ್ನು ಲೀಟರ್ ಗೆ 2ರೂ. ಏರಿಕೆ ಮಾಡಿದೆ. ಈ ಪರಿಷ್ಕೃತ ದರವು ಗುಜರಾತ್ ಅನ್ನು ಹೊರತುಪಡಿಸಿ ಬೇರೆಲ್ಲ ರಾಜ್ಯಗಳಿಗೂ ಅನ್ವಯ ವಾಗಲಿದೆ.
ಆಗಸ್ಟ್ ಹಾಗೂ ಮಾರ್ಚ್ ನಲ್ಲಿ ಕೂಡ ಅಮುಲ್ ಬೆಲೆಯೇರಿಕೆ ಮಾಡಿ ರಾಜ್ಯದ ಜನತೆಗೆ ಶಾಕ್ ನೀಡಿತ್ತು. ಇದೀಗ ಹಾಲಿನ ದರ ಏರಿಕೆ ಮಾಡಿ, ಈ ವರ್ಷದಲ್ಲಿ ಮೂರನೇ ಬಾರಿ ದರ ಹೆಚ್ಚಳವಾದಂತಾಗಿದೆ.
ಆಗಸ್ಟ್ ನಲ್ಲಿ ಮದರ್ ಡೈರಿ ಕೂಡ ಹಾಲಿನ ದರ ಹೆಚ್ಚಳ ಮಾಡಿತ್ತು. ಲೀಟರ್‌ಗೆ 2 ರೂ. ಹೆಚ್ಚಳ ಮಾಡಿತ್ತು. ಕೆನೆಭರಿತ ಹಾಲಿನ ದರ ಪ್ರತಿ ಲೀಟರ್ ಗೆ 59ರೂ. ನಿಂದ 61ರೂ.ಗೆ ಹೆಚ್ಚಳವಾಗಿತ್ತು.
ಇನ್ನು ಟೋನ್ಡ್ ಹಾಲಿನ ದರ 51ರೂ.ಗೆ ಏರಿಕೆಯಾಗಿತ್ತು. ಇನ್ನು ಡಬಲ್ ಡೋನ್ಡ್ ಹಾಲಿನ ದರ ಲೀಟರ್ ಗೆ 45ರೂ.ಗೆ ಏರಿಕೆಯಾಗಿತ್ತು. ಹಸುವಿನ ಹಾಲಿನ ದರ ಲೀಟರ್ ಗೆ 53ರೂ.ಗೆ ಹೆಚ್ಚಳವಾಗಿತ್ತು.
ಈ ಬೆಲೆ ಹೆಚ್ಚಳದ ಪರಿಣಾಮ ಸಂಪೂರ್ಣ ಕೆನೆಭರಿತ ಹಾಲಿನ ಬೆಲೆ ಪ್ರತಿ ಲೀಟರ್ ಗೆ 61 ರೂ. ನಿಂದ 63 ರೂ.ಗೆ ಏರಿಕೆಯಾಗಿದೆ. ಆಗಸ್ಟ್ ನಲ್ಲಿ ಅಮುಲ್ ಹಾಲಿನ ಬೆಲೆಯನ್ನು ಪ್ರತಿ ಲೀಟರ್‌ಗೆ 2 ರೂ. ಏರಿಕೆ ಮಾಡಿತ್ತು.
ಈ ಹೆಚ್ಚಳದಿಂದ ಅಮುಲ್ ಹಾಲಿನ ಎಂಆರ್‌ಪಿಯಲ್ಲಿ ಶೇ. 4 ರಷ್ಟು ಏರಿಕೆಯಾಗಿತ್ತು. ಅಮುಲ್ ಗೋಲ್ಡ್‌ಹಾಲಿನ ದರ ಅರ್ಧ ಲೀಟರ್‌ಗೆ 31 ರೂ., ಅಮುಲ್ ತಾಜಾ ಹಾಲು ಅರ್ಧ ಲೀಟರ್‌ಗೆ 25 ರೂ. ಹಾಗೂ ಅಮುಲ್ ಶಕ್ತಿ ಹಾಲು ಅರ್ಧ ಲೀಟರ್‌ಗೆ 28 ರೂ. ಗೆ ಹೆಚ್ಚಳವಾಗಿತ್ತು.
ಗುಜರಾತ್ ಸಹಕಾರಿ ಹಾಲು ಮಾರಾಟ ಒಕ್ಕೂಟ (ಜಿಸಿಎಂಎಂಎಫ್) ತನ್ನ ಗ್ರಾಹಕರಿಂದ ಪಡೆದ ಪ್ರತಿ 1 ರೂಪಾಯಿಯಲ್ಲಿ ಅಂದಾಜು 80 ಪೈಸೆಯನ್ನು ಹಾಲು ಉತ್ಪಾದಕರಿಗೆ ವರ್ಗಾಯಿಸುತ್ತದೆ.
ಹೀಗಾಗಿ ಹಾಲಿನ (Milk) ದರ (rate) ಹೆಚ್ಚಳ ಹಾಲು ಉತ್ಪಾದಕರಿಗೆ ಉತ್ತಮ ಹಾಲಿನ ದರ ನೀಡಲು ನೆರವು ನೀಡಲಿದ್ದು, ಈ ಹಿಂದೆ ದರ ಹೆಚ್ಚಳ ಮಾಡಿದ ಸಂದರ್ಭದಲ್ಲಿ ಕಾರ್ಯಾಚರಣೆಯ ಒಟ್ಟಾರೆ ವೆಚ್ಚ ಮತ್ತು ಹಾಲಿನ ಉತ್ಪಾದನೆ ವೆಚ್ಚ ಹೆಚ್ಚಳದಿಂದ ಹಾಲಿನ ದರ ದುಬಾರಿಯಾಗುತ್ತಿದೆ ಎಂದು ಅಮುಲ್ ಕಂಪನಿ ಹೇಳಿದೆ.
ಇತ್ತೀಚೆಗೆ ಗುವಾಹಟಿಯಲ್ಲಿ ನಡೆದ ಈಶಾನ್ಯ ಸಹಕಾರ ಪರಿಷತ್ತಿನ (ಎನ್‌ಇಸಿ) 70 ನೇ ಸಭೆಯಲ್ಲಿ ನೈಸರ್ಗಿಕ ಉತ್ಪನ್ನಗಳ ಪ್ರಮಾಣೀಕರಣಕ್ಕಾಗಿ ಅಮುಲ್ (Amul) ಮತ್ತು ಇತರ ಐದು ಸಹಕಾರ ಸಂಘಗಳನ್ನು ವಿಲೀನಗೊಳಿಸಿ ಬಹು-ರಾಜ್ಯ ಸಹಕಾರಿ ಸಂಘವನ್ನು ರಚಿಸುವ ಪ್ರಕ್ರಿಯೆಗೆ ಚಾಲನೆ ನೀಡಿರುವ ಕುರಿತು ಅಮಿತ್ ಶಾ ಮಾಹಿತಿ ನೀಡಿದ್ದರು.
ಹಾಲಿಗೆ ವಿಶಾಲವಾದ ಮಾರುಕಟ್ಟೆ ಇದ್ದು, ಭೂತಾನ್ (Bhutan), ನೇಪಾಳ (Nepal), ಬಾಂಗ್ಲಾದೇಶ (Bangladesh) ಮತ್ತು ಶ್ರೀಲಂಕಾದಂತಹ (Sri Lanka) ದೇಶಗಳಿಗೆ ಹಾಲನ್ನು ರವಾನಿಸಲು ಸುವರ್ಣ ಅವಕಾಶದ ಜೊತೆಗೆ ವಿಶ್ವ ಮಾರುಕಟ್ಟೆಯನ್ನು ತಲುಪಲು ಸರ್ಕಾರವು ರಫ್ತು ಕೇಂದ್ರವಾಗಿ ಕಾರ್ಯನಿರ್ವಹಿಸುವ ಬಹು-ರಾಜ್ಯ ಸಹಕಾರಿ ಸಂಸ್ಥೆಯನ್ನು ಸ್ಥಾಪಿಸುತ್ತಿದೆ .
ಇದಲ್ಲದೆ, ಮುಂದಿನ ಐದು ವರ್ಷಗಳಲ್ಲಿ ದೇಶದಲ್ಲಿ ಹಾಲಿನ ಉತ್ಪಾದನೆಯನ್ನು ದುಪ್ಪಟ್ಟು ಮಾಡಿ ರವಾನಿಸುವ ಅಗತ್ಯವನ್ನು ಮನಗಂಡಿದ್ದಾರೆ.