“ರಕ್ಷಿತ್ ಶೆಟ್ಟಿಗೆ ಇನ್ ಸೆಕ್ಯೂರ್ ಫೀಲಿಂಗ್ ಇತ್ತು” – ಸ್ಟ್ರೇಟ್ ಹಿಟ್ ಬೈ ರಶ್ಮಿಕಾ ಮಂದಣ್ಣ

ಕನ್ನಡದ ನಟಿ ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಈಗ ಬಾಲಿವುಡ್ ನಲ್ಲಿ ಮಿಂಚುತ್ತಾ ಇದ್ದಾರೆ. ಇತ್ತೀಚೆಗಷ್ಟೇ ಅವರ ನಟನೆಯ ಮೊದಲ ಹಿಂದಿ ಸಿನಿಮಾ ‘ಗುಡ್​ಬೈ’ ತೆರೆಗೆ ಬಂತು. ಆದರೆ, ಈ ಸಿನಿಮಾ ಹೆಚ್ಚು ಸದ್ದು ಮಾಡಲೇ ಇಲ್ಲ. ಅಂದಾಜು ತೋಪೆದ್ದು ಹೋಯಿತು ಎಂದೇ ಹೇಳಬಹುದು.


Ad Widget

Ad Widget

Ad Widget

Ad Widget

Ad Widget

Ad Widget

Ad Widget

ಆದರೆ ನಾವಿಲ್ಲಿ ಮಾತಾಡೋಕೆ ಹೋಗ್ತಾ ಇರೋದು ಈ ಸಿನಿಮಾ‌ ಬಗ್ಗೆ ಅಲ್ಲ. ರಶ್ಮಿಕಾ ಮಂದಣ್ಣ (Rashmika Mandanna) ಹಾಗೂ ವಿಜಯ್ ದೇವರಕೊಂಡ ವಿಷಯ ಬಗ್ಗೆ. ಅಂದ ಹಾಗೆ ಮೊನ್ನೆಯಷ್ಟೇ ಇಬ್ಬರೂ ಮಾಲ್ಡೀವ್ಸ್ ಗೆ ಡೇಟ್ ಗೆ ಹೋಗಿದ್ದಾರೆ ಎಂಬ ಗುಸು ಗುಸುಗಳ ಮಧ್ಯೆ ಇನ್ನೊಂದು ಬಿಸಿ ಬಿಸಿ ಸುದ್ದಿ ಹೊರಬಂದಿದೆ.


Ad Widget

ಎಲ್ಲರಿಗೂ ತಿಳಿದಿರುವ ಹಾಗೇ, ವಿಜಯ್ ದೇವರಕೊಂಡ (Vijay Devarakonda) ಬಗ್ಗೆ ರಶ್ಮಿಕಾಗೆ ವಿಶೇಷ ಪ್ರೀತಿ ಹಾಗೂ ಕಾಳಜಿ ಇದೆ. 2020ರಲ್ಲಿ ಈ ಬಗ್ಗೆ ರಶ್ಮಿಕಾ ಮಂದಣ್ಣ ಒಂದು ಮಾತನ್ನು ಹೇಳಿಕೊಂಡಿದ್ದರು. ‘ರಕ್ಷಿತ್ ಶೆಟ್ಟಿಯಂತೆ ವಿಜಯ್ ದೇವರಕೊಂಡ​​ಗೆ ಇನ್​ಸೆಕ್ಯೂರ್ ಫೀಲಿಂಗ್ ಇಲ್ಲ” ಎಂದು.

Ad Widget

Ad Widget

Ad Widget

ಇಂಟರ್​ನ್ಯಾಷನಲ್​ ಬಿಸ್ನೆಸ್ ಟೈಮ್ಸ್​ಗೆ ರಶ್ಮಿಕಾ 2020ರಲ್ಲಿ ಸಂದರ್ಶನ ನೀಡಿದ್ದರು. ಈ ಸಂದರ್ಶನದ ವೇಳೆ ರಶ್ಮಿಕಾ ಅವರು ಹಲವು ವಿಚಾರಗಳ ಬಗ್ಗೆ ನೇರವಾಗಿ ಮಾತನಾಡಿದ್ದರು. ‘ವಿಜಯ್ ದೇವರಕೊಂಡ ತುಂಬಾನೇ ಸರಳ ವ್ಯಕ್ತಿ. ಅವರು ಅವರದೇ ಜಗತ್ತಿನಲ್ಲಿ ಖುಷಿಯಾಗಿದ್ದಾರೆ. ‘ಗೀತ ಗೋವಿಂದಂ’ ಸಿನಿಮಾ ಶೂಟಿಂಗ್ ಸಂದರ್ಭದಲ್ಲಿ ನಾವು ಗೆಳೆಯರಾಗಿದ್ದೆವು ಅಷ್ಟೇ. ಆದರೆ ನಮ್ಮ ಮಧ್ಯೆ ಒಂದು ಸ್ಪಾರ್ಕ್ ಇತ್ತು. ‘ಅವರು ತುಂಬಾನೇ ಸ್ಪೆಷಲ್’ ಎಂದು ನನ್ನ ಹೃದಯ ಹೇಳುತ್ತಲೇ ಇತ್ತು’ ಎಂದು ರಶ್ಮಿಕಾ ಹೇಳಿಕೊಂಡಿದ್ದರು.

‘ನನ್ನ ಮಾಜಿ ಬಾಯ್​ಫ್ರೆಂಡ್ ರಕ್ಷಿತ್ ಶೆಟ್ಟಿಯಂತೆ ಇನ್​ಸೆಕ್ಯೂರ್​ ಭಾವನೆ ಅವರನ್ನು ಕಾಡುತ್ತಿರಲಿಲ್ಲ. ವಿಜಯ್ ದೇವರಕೊಂಡ ಮುಕ್ತ ಮನಸ್ಸಿನ ವ್ಯಕ್ತಿ. ನಾನು ಸದಾ ಸ್ವತಂತ್ರನಾಗಿರಬೇಕೆಂದು ಬಯಸುತ್ತಾರೆ’ ಎಂದು ರಶ್ಮಿಕಾ ಇಂಟರ್​ನ್ಯಾಷನಲ್​ ಬಿಸ್ನೆಸ್ ಟೈಮ್ಸ್ ಬಳಿ ಹೇಳಿಕೊಂಡಿದ್ದರು.

ರಕ್ಷಿತ್ ಶೆಟ್ಟಿ ಜೊತೆಗಿನ ಸಂಬಂಧ ಮುಗಿದ ಅಧ್ಯಾಯ ಎಂದೇ ಹೇಳಬಹುದು. ಹಾಗೆನೇ ಇವರಿಬ್ಬರೂ ಅವರವರ ಕೆಲಸಸಲ್ಲಿ ಬ್ಯುಸಿಯಾಗಿದ್ದಾರೆ. ಏನೇ ಹೇಳಿ ವಿಜಯದೇವರಕೊಂಡ ಹಾಗೂ ರಶ್ಮಿಕಾ ನಡುವಿನ ಸಂಬಂಧ ಇನ್ನೂ ಸೀಕ್ರೇಟ್ ಆಗಿಯೇ ಇದೆ. ಇದು ಸೀಕ್ರೇಟ್ ಆಗಿಯೇ ಉಳಿಯುತ್ತಾ ಅಥವಾ ಗಟ್ಟಿ ಅಡಿಪಾಯ ಹೊಂದಿ….ಮುಂದೆ ಮದುವೆ ಆಗುವವರೆಗೆ ಹೋಗುತ್ತಾ ಅಂತ ಈ ಇಬ್ಬರ ಅಭಿಮಾನಿಗಳು ಎದಿರು ನೋಡುತ್ತಿರಬಹುದು.

error: Content is protected !!
Scroll to Top
%d bloggers like this: