Contact lenses : ಬರೋಬ್ಬರಿ 23 ಕಾಂಟ್ಯಾಕ್ಟ್ ಲೆನ್ಸ್ ಗಳನ್ನು ತನ್ನ ಕಣ್ಣಲ್ಲೇ ಇಟ್ಟ ಮಹಿಳೆ !!! ಇದನ್ನು ತೆಗೆಯಲು ಡಾಕ್ಟರ್ ಬಳಸಿದ ಸಾಧನ ಯಾವುದು ಗೊತ್ತೇ?

ಕೆಲವರು ಕನ್ನಡಕದ ಬದಲಾಗಿ ಕಾಂಟ್ಯಾಕ್ಟ್​ ಲೆನ್ಸ್​ ಹಾಕಿಕೊಳ್ಳುವುದನ್ನು ಅಭ್ಯಾಸ ಮಾಡಿಕೊಂಡಿರುತ್ತಾರೆ. ಕೆಲವರಿಗೆ ಕನ್ನಡಕ ಹಾಕಿಕೊಳ್ಳಲು ಮುಜುಗರ, ಇನ್ನು ಕೆಲವರಿಗೆ ಕನ್ನಡಕ ಅಂದರೆ ಇರಿಟೇಷನ್, ಇನ್ನು ಕೆಲವರಿಗಂತೂ ಕನ್ನಡಕ ಅನಿವಾರ್ಯ, ಒಂದಿಷ್ಟು ಜನರಿಗೆ ಪ್ಯಾಷನ್ ಆಗಿದೆ. ಏನೇ ಆಗಲಿ ಆದರೆ ಲೆನ್ಸ್​ ಹಾಕಿಕೊಳ್ಳಬೇಕೆಂದರೆ ಕೆಲವು ನಿಯಮಗಳನ್ನು ಕಡ್ಡಾಯವಾಗಿ ಅನುಸರಿಸಲೇಬೇಕು. ಇಲ್ಲವಾದಲ್ಲಿ ಕಣ್ಣಿಗೆ ತೊಂದರೆಯಾಗುವ ಅಪಾಯವಿರುತ್ತದೆ. ಕಣ್ಣು ನಮ್ಮ ದೇಹದ ಪಂಚೇಂದ್ರಿಯಗಳಲ್ಲಿ ಒಂದಾಗಿದೆ. ಕಣ್ಣಿನ ಮಹತ್ವ ತುಂಬಾ ಇದೆ.

ಇಲ್ಲೊಬ್ಬ ಹಿರಿಯ ಮಹಿಳೆಯು ಹಲವಾರು ದಿನಗಳು ರಾತ್ರಿ ಮಲಗುವಾಗ ಲೆನ್ಸ್​ ತೆಗೆದಿಡುವುದನ್ನು ಮರೆತು ಹಾಗೇ ಮಲಗಿದ್ದಾರೆ. ಆದರೆ ಪ್ರತೀ ದಿನ ಬೆಳಗ್ಗೆ ಹೊಸ ಲೆನ್ಸ್​ ಹಾಕಿಕೊಳ್ಳುವುದನ್ನು ಮಾತ್ರ ಮರೆತಿಲ್ಲ! ಆ ಎಲ್ಲ ಲೆನ್ಸ್​ಗಳು ಕಣ್ಣುಗಳಲ್ಲಿ ಸಂಗ್ರಹವಾಗಿ ತೊಂದರೆ ಕೊಡಲಾರಂಭಿಸಿವೆ. ಆಗ ಡಾ. ಕ್ಯಾಟರೀನಾ ಕುರ್ಟೀವಾ ಎಂಬ ಡಾಕ್ಟರ್​ ಬಳಿ ಕಣ್ಣು ತಪಾಸಣೆ ಮಾಡಲೆಂದು ಹೋಗಿದ್ದಾರೆ. ಆಗ ಡಾಕ್ಟರ್​ ಆಕೆಯ ಕಣ್ಣನ್ನು ಪರೀಕ್ಷಿಸಿದಾಗ ಒಳಗೆ ಲೆನ್ಸ್​ ಇರುವುದು ಪತ್ತೆಯಾಗಿದೆ. ನಂತರ ಆಕೆಯ ಕಣ್ಣಿನಿಂದ ಒಂದೊಂದೇ ಲೆನ್ಸ್​ಗಳನ್ನು ತೆಗೆಯಲು ಶುರುಮಾಡಿದ್ದಾರೆ. ಒಂದಲ್ಲ ಎರಡಲ್ಲ ಬರೋಬ್ಬರಿ 23 ಲೆನ್ಸ್​ಗಳು! ಇದೊಂದು ಆತಂಕಕಾರಿ ವಿಷಯವಿದು.

ಡಾ. ಕ್ಯಾಟರೀನಾ ತಮ್ಮ ಇನ್​ಸ್ಟಾಗ್ರಾಂ ಪುಟದಲ್ಲಿ ಈ ವಿಡಿಯೋ ಅಪ್​ಲೋಡ್ ಮಾಡಿದ್ದಾರೆ. ಮತ್ತು ‘ಯಾರೂ ಕಾಂಟ್ಯಾಕ್ಟ್​ ಲೆನ್ಸ್​ ತೆಗೆಯದೇ ಮಲಗಬೇಡಿ. ನೋಡಿ ಈಗ ಈ ಮಹಿಳೆಯ ಪರಿಸ್ಥಿತಿ. ಎಲ್ಲಾ ಲೆನ್ಸ್​ಗಳನ್ನು ಹೊರತೆಗೆದ ಮೇಲೆ ಒಂದಕ್ಕೊಂದು ಅಂಟಿಕೊಂಡಿದ್ದ 23 ಲೆನ್ಸ್​ಗಳನ್ನು ಆಭರಣದಂಗಡಿಯವರು ಉಪಯೋಗಿಸುವ ಫೋರ್ಸೆಪ್ಸ್​ನ ಸಹಾಯದಿಂದ ಬೇರ್ಪಡಿಸಬೇಕಾಯಿತು. ಏಕೆಂದರೆ 23 ದಿನಗಳ ಕಾಲ ಒಂದರ ಮೇಲೆ ಒಂದು ಲೆನ್ಸ್​ ಹಾಕಿಕೊಂಡ ಪರಿಣಾಮ ಆ 23 ಲೆನ್ಸ್​ಗಳು ಕಣ್ಣಗುಡ್ಡೆಯ ಮೇಲೆ ಅಂಟಿಕೊಂಡು ಕುಳಿತಿದ್ದವು.’ ಎಂದು ತಿಳಿಸಿದ್ದಾರೆ ಕ್ಯಾಟರೀನಾ. ಡಾ. ಕ್ಯಾಟರೀನಾ ತಮ್ಮ ಇನ್​ಸ್ಟಾಗ್ರಾಂ ನಲ್ಲಿ ಅಪ್ಲೋಡ್ ಮಾಡಿದ ವಿಡಿಯೋವನ್ನು 3 ಮಿಲಿಯನ್​ ಜನರು ವೀಕ್ಷಿಸಿರುವ ಸುದ್ದಿಯಾಗಿದೆ.

https://www.instagram.com/p/CjIzDvzrP2Y/?utm_source=ig_web_copy_link

ವೀಕ್ಷಕರು ಈ ವಿಡಿಯೋ ನೋಡಿ ಗಾಬರಿಗೆ ಬಿದ್ದಿದ್ದಾರೆ. ಮತ್ತು ಹಲವಾರು ಕಮೆಂಟ್ ಗಳನ್ನು ಮಾಡಿದ್ದಾರೆ.

Leave A Reply

Your email address will not be published.