Shocking.News | ರೈಲು ಪ್ಲಾಟ್ ಫಾರಂ ಗೆ ಬರುತ್ತಿದ್ದಂತೆ 20 ರ ಯುವತಿಯನ್ನು ಏಕಾಏಕಿ ಹಳಿಗೆ ತಳ್ಳಿದ ಯುವಕ

ಚೆನ್ನೈನಲ್ಲೊಂದು ಘೋರ ಕೃತ್ಯ ನಡೆದಿದೆ. ಪ್ಲಾಟ್ ಫಾರ್ಮ್ ನಲ್ಲಿ ಚಲಿಸುತ್ತಿದ್ದ ರೈಲಿನ ಮುಂಭಾಗಕ್ಕೆ ತಳ್ಳಿ ಯುವತಿಯ ಹತ್ಯೆ ಮಾಡಲಾಗಿದೆ.

ಚಲಿಸುತ್ತಿದ್ದ ರೈಲಿನ ಮುಂಭಾಗಕ್ಕೆ ತಳ್ಳಿ 20 ವರ್ಷದ ಯುವತಿಯನ್ನು ಹತ್ಯೆ ಮಾಡಿರುವ ಘಟನೆ ಇಲ್ಲಿನ ಸೆಂಟ್ ಥೋಮಸ್ ಮೌಂಟ್ ರೈಲ್ವೆ ನಿಲ್ದಾಣದಲ್ಲಿ ಇಂದು ನಡೆದಿದೆ.

ನಿನ್ನೆ ಗುರುವಾರ ಸುಮಾರು 1 ಗಂಟೆ ಸುಮಾರಿನಲ್ಲಿ ಈ ಘಟನೆ ನಡೆದಿದ್ದು, ಘಟನೆ ನೋಡಿ ಅಲ್ಲಿದ್ದವರು ಬೆಚ್ಚಿ ಬಿದ್ದಿದ್ದಾರೆ.

ಅಲ್ಲಿದ್ದ ಸುಮಾರು 20 ವರ್ಷ ವಯಸ್ಸಿನ ಹುಡುಗಿಯೊಂದಿಗೆ ಓರ್ವ ವ್ಯಕ್ತಿ ಜಗಳವಾಡುತ್ತಿದ್ದ. ಆಗ ಚೆನೈನ ಸಬ್ ಅರ್ಬನ್ ರೈಲು ಬಂತು. ಇನ್ನೇನು ಅವರು ನಿಂತಿದ್ದ ಸ್ಥಳವನ್ನು ರೈಲು ದಾಟಬೇಕು, ಅಷ್ಟರಲ್ಲಿ ಅಚಾನಕ್ ಆಗಿ ಆತ ರೈಲ್ವೇ ಫ್ಲಾಟ್ ಫಾರಂ ನಿಂದ ಆಕೆಯನ್ನು ತಳ್ಳಿದ್ದ. ಹುಡುಗಿ ಟ್ರೈನ್ ಪಾಸ್ ಆಗುವ ಒಂದೆರಡು ಕ್ಷಣಗಳಲ್ಲಿ ರೈಲು ಕಂಬಿಗಳ ಮೇಲೆ ಬಿದ್ದಿದ್ದಳು. ಕ್ಷಣಗಳಲ್ಲಿ ಆಕೆ ಮರಣಿಸಿದ್ದಳು. ಆಕೆಯನ್ನು ರೈಲ್ವೆ ಹಳಿಗೆ ತಳ್ಳಿ ಹತ್ಯೆ ಮಾಡಿದ್ದು, ಬಳಿಕ ಅಲ್ಲಿಂದ ಆತ ಕಾಲ್ಕಿತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಇದರಿಂದಾಗಿ ಅಲ್ಲಿನ ಪ್ರಯಾಣಿಕರು ಆತಂಕಗೊಂಡಿದ್ದರು. ಯುವತಿ ಸ್ಥಳದಲ್ಲಿಯೇ ಮೃತಪಟ್ಟರೆ, ಯುವಕ ಅಲ್ಲಿಂದ ಪರಾರಿಯಾಗಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.

ಯುವತಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಆಕೆಯ ತಾಯಿ ಪೊಲೀಸ್ ಕಾನ್ಸ್ ಟೇಬಲ್ ಆಗಿದ್ದು, ತಂದೆ ಸರ್ಕಾರಿ ಕಂಪನಿಯೊಂದರಲ್ಲಿ ನೌಕರರಾಗಿದ್ದಾರೆ. ಆರೋಪಿ ಹುಡುಕಾಟಕ್ಕಾಗಿ ವಿಶೇಷ ತಂಡವೊಂದನ್ನು ರಚಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Leave A Reply

Your email address will not be published.