ಓಲಾ ಊಬರ್ ಬಿಗ್ ರಿಲೀಫ್ | ಸಾರಿಗೆ ಇಲಾಖೆ ಆದೇಶಕ್ಕೆ ಮಧ್ಯಂತರ ತಡೆ

ಓಲಾ ( OLA) ಊಬರ್ ( UBER) ಓಡಿಸಬಾರದು ಎಂದು ಸರ್ಕಾರ ಯಾವುದೇ ಬಲವಂತದ ಕ್ರಮ ಕೈಗೊಳ್ಳುವಂತಿಲ್ಲ ಎಂದು ಹೈಕೋರ್ಟ್ ಮಧ್ಯಂತರ ಆದೇಶ ಹೊರಡಿಸಿದೆ.

ಓಲಾ, ಊಬರ್ ಸೇವೆಗೆ ಸಂಬಂಧಿಸಿದಂತೆ ಹೈಕೋರ್ಟ್‌ ಏಕಸದಸ್ಯ ಪೀಠ ಅರ್ಜಿ ವಿಚಾರಣೆ ನಡೆಸಿತು. ನಿನ್ನೆ ನಡೆದ ಸಭೆ ಕುರಿತು ಮಾಹಿತಿ ಪಡೆದ ನ್ಯಾಯಮೂರ್ತಿಗಳು, ಓಲಾ ಹಾಗೂ ಊಬರ್ ಓಡಿಸದಂತೆ ಸಾರಿಗೆ ಇಲಾಖೆ ಕೈಗೊಂಡಿದ್ದ ಕ್ರಮದ ಬಗ್ಗೆ ಅಸಮಾಧಾನ ಹೊರಗೆ ಹಾಕಿದ್ದಾರೆ.

ಆಟೋಗೆ ಮಾತ್ರ ಅನುಮತಿ ಕೇಳುತ್ತಿದ್ದೀರಿ ಅಲ್ವಾ? ಕೇಂದ್ರ ಸರ್ಕಾರದ ನಿಯಮಾವಳಿ ಇದೆ. ಈ ನಿಯಮಾವಳಿ ಬಗ್ಗೆ ನಿನ್ನೆ ಯಾಕೆ ಹೇಳಿಲ್ಲ? ಸಭೆಯ ತೀರ್ಮಾನ ಏನು ಎಂದು ಪೀಠ ಪ್ರಶ್ನಿಸಿತು. ಕೆಲವೊಂದು ವಿಚಾರ ಪ್ರಸ್ತಾಪಕ್ಕೆ ಕಾಲಾವಕಾಶ ನೀಡುವಂತೆ ಅಡ್ವಕೇಟ್ ಜನರಲ್ ಪ್ರಭುಲಿಂಗ ನಾವದಗಿ ಮನವಿ ಮಾಡಿದರು.

ಸಾರಿಗೆ ಇಲಾಖೆ 2021ರಲ್ಲಿ ನಿಗದಿಪಡಿಸಿದ ದರವನ್ನು ಪಾಲಿಸಬೇಕು. ಹಾಗೂ ಹೆಚ್ಚುವರಿ ಸೇವೆಯ ಚಾರ್ಜ್ ಬಗ್ಗೆ ನ್ಯಾಯಾಲಯಕ್ಕೆ ತಿಳಿಸಬೇಕು. ಹಾಗೂ 10 ರಿಂದ 15 ದಿನದ ಒಳಗೆ ಸರ್ಕಾರ ವರದಿ ಸಲ್ಲಿಸಬೇಕು ಎಂದು ಸೂಚನೆ ನೀಡಿದ ನ್ಯಾಯಾಲಯ, ವಿಚಾರಣೆಯನ್ನು ನವೆಂಬರ್ 7ಕ್ಕೆ ಮುಂದೂಡಿದೆ.

Leave A Reply

Your email address will not be published.