Gyanvapi Case: ಶಿವಲಿಂಗದ ಕಾರ್ಬನ್ ಡೇಟಿಂಗ್ಗೆ ಕೋರ್ಟ್ ನಕಾರ – ಹಿಂದುಗಳಿಗೆ ಹಿನ್ನಡೆ
ಭಾರೀ ಕುತೂಹಲ ಮೂಡಿಸಿದ್ದ ದೇಶಾದ್ಯಂತ ತೀವ್ರ ಕುತೂಹಲ ಕೆರಳಿಸಿದ್ದ ಜ್ಞಾನವಾಪಿಯ ಮಸೀದಿಯ ಒಳಗಡೆ ಸಿಕ್ಕಿರುವ ‘ಶಿವಲಿಂಗ’ದ ಕಾರ್ಬನ್ ಡೇಟಿಂಗ್ಗೆ ವಾರಣಾಸಿ ಜಿಲ್ಲಾ ಕೋರ್ಟ್ ಶುಕ್ರವಾರ ಅನುಮತಿ ನಿರಾಕರಿಸಿದೆ. ಬಿಗಿ ಬಂದೋಬಸ್ತ್ನಲ್ಲಿ ಜಿಲ್ಲಾ ನ್ಯಾಯಾಧೀಶ ಎಕೆ ವಿಶ್ವೇಶ್ ಕಾರ್ಬನ್ ಡೇಟಿಂಗ್ಗೆ ಅನುಮತಿ ನೀಡಲು ನಿರಾಕರಿಸಿದ್ದಾರೆ.
ಇದು ಹಿಂದು ಪರ ಅರ್ಜಿದಾರರಿಗೆ ದೊಡ್ಡ ಹಿನ್ನಡೆಯಾಗಿದೆ ಎಂದೇ ಹೇಳಬಹುದು. ಜ್ಞಾನವಾಪಿ ವಿಚಾರಕ್ಕೆ ಸಂಬಂಧಪಟ್ಟ ಕೇವಲ 58 ಮಂದಿಯನ್ನು ಮಾತ್ರವೇ ಕೋರ್ಟ್ ಹಾಲ್ನಲ್ಲಿ ಒಳಗಡೆ ಬಿಟ್ಟು ತೀರ್ಪು ಪ್ರಕಟಿಸಲಾಗಿದೆ. ಹಾಗೆನೇ ಯಾವುದೇ ಮಾಧ್ಯಮ ಸಿಬ್ಬಂದಿ ಕೂಡ ಕೋರ್ಟ್ ಹಾಲ್ನಲ್ಲಿ ಇರಲು ಅವಕಾಶ ಇರಲಿಲ್ಲ.
ಕಾರ್ಬನ್ ಡೇಟಿಂಗ್ ಎನ್ನುವುದು ವೈಜ್ಞಾನಿಕ ಪರೀಕ್ಷೆ. ಇದರ ಮೂಲಕ ಪುರಾತನ ವಸ್ತುಗಳ ಕಾಲಮಾನ, ಕಾಲಘಟ್ಟವನ್ನು ನಿಖರವಾಗಿ ನಿರ್ಣಯ ಮಾಡಬಹುದಾಗಿದೆ. ಆಯಾ ವಸ್ತುವಿನ ಮೇಲೆ ಇರುವ ಕಾರ್ಬನ್ ಆಧರಿಸಿ ನಡೆಯುವ ಪರೀಕ್ಷೆ ಇದಾಗಿದ್ದು,ಆ ಪರೀಕ್ಷೆಯ ಬಳಿಕವೇ ವಸ್ತುವಿನ ಕಾಲಮಾನವನ್ನು ನಿರ್ಧರಿಸಲಾಗುತ್ತದೆ. ಅಂದಾಜು 50 ಸಾವಿರ ವರ್ಷಗಳವರೆಗಿನ ವಸ್ತುಗಳ ಕಾಲಮಾನ ಈ ಪರೀಕ್ಷೆಯಿಂದ ತಿಳಿಯಬಹುದು.