ರೈತರೇ ಗಮನಿಸಿ : ರೈತರ ಮುಂಗಾರು ಹಂಗಾಮಿನ ಬೆಳೆಹಾನಿಗೆ ಪರಿಹಾರ ಘೋಷಿಸಿದ ಸಚಿವ ಬಿಸಿ ಪಾಟೀಲ್

ಕೃಷಿ ಸಚಿವ ಬಿ.ಸಿ.ಪಾಟೀಲ್ ಅವರು ಮುಂಗಾರು ಹಂಗಾಮಿನಲ್ಲಿ ರಾಜ್ಯದಲ್ಲಿ ಸಂಭವಿಸಿದ್ದ ಬೆಳೆ ಹಾನಿ ಹಾಗೂ ಇನ್ನಿತರೆ ಹಾನಿಗಳ ಕುರಿತು ಮಾಹಿತಿ ನೀಡಿದ್ದಾರೆ. ಯಾವ ಹಾನಿಗೆ ಎಷ್ಟೆಷ್ಟು ಪರಿಹಾರ ನೀಡಲಾಗಿದೆ ಹಾಗೂ ಇತರೆ ಮಾಹಿತಿಯನ್ನು ಕೃಷಿ ಸಚಿವರು ನೀಡಿದ್ದಾರೆ.


Ad Widget

Ad Widget

Ad Widget

Ad Widget
Ad Widget

Ad Widget

ಇತ್ತೀಚೆಗೆ ರಾಜ್ಯದೆಲ್ಲೆಡೆ ಮುಂಗಾರು ಹಂಗಾಮಿನ ಸಮಯದಲ್ಲಿ ಸುರಿದಿದ್ದ ಭಾರೀ ಮಳೆಯಿಂದಾಗಿ ರಾಜ್ಯದ ಹಲವಾರು ಪ್ರದೇಶಗಳಲ್ಲಿ ಸಮಸ್ಯೆಗಳು ಉಂಟಾಗಿದ್ದವು.
ಈ ಸಂದರ್ಭದಲ್ಲಿ ರೈತರ ಬೆಳೆಹಾನಿ, ರೈತರ ಜಾನುವಾರುಗಳ ಸಾವು, ಸಾಮಾನ್ಯ ಜನರ ಮನೆ ಹಾನಿ ಮುಂತಾದವುಗಳು ತೀರಾ ಹಾನಿಗೊಳಗಾಗಿ ಮನುಷ್ಯ ಬಹಳ ಸಂಕಷ್ಟಕ್ಕೀಡಾಗಿದ್ದ.


Ad Widget

ಇಷ್ಟೊಂದು ಹಾನಿ ಸಂಭವಿಸಿದರೂ, ಸಂತ್ರಸ್ಥರಿಗೆ ಪರಿಹಾರ ಒದಗಿರಲಿಲ್ಲ. ಈಗ ರಾಜ್ಯದ ಕೃಷಿ ಸಚಿವರಾದ ಬಿ.ಚಿ. ಪಾಟೀಲ್‌ ಅವರು ಇದಕ್ಕೆ ತಮ್ಮ ಸಾಮಾಜಿಕ ಜಾಲತಾಣವಾದ ಫೇಸಬುಕ್‌ನಲ್ಲಿ ಈ ಕುರಿತಾದ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಸಚಿವ ಬಿ.ಸಿ. ಪಾಟೀಲ್‌ ಅವರ ನೀಡಿರುವ ವರದಿಗಳ ಪ್ರಕಾರ, ಒಟ್ಟು 9,90,957 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಹಾನಿ ಸಂಭವಿಸಿದ್ದು, 6,16,138 ಹೆಕ್ಟೇರ್ ಪ್ರದೇಶದ ಬೆಳೆಹಾನಿಗೆ 8.83 ಲಕ್ಷ ರೈತರಿಗೆ 947.8 ಕೋಟಿ ರೂಪಾಯಿಗಳ ಪರಿಹಾರ ವಿತರಿಸಲಾಗಿದೆ.

ರಾಜ್ಯದಲ್ಲಿ ಹಿಂಗಾರು ಹಂಗಾಮಿನಲ್ಲಿ ದಿನಾಂಕ 1-10-2022ರಿಂದ ಈ ವರೆಗೆ ಸಂಬಂಧಿಸಿದಂತೆ ವರದಿಯಾಗಿರುವ ಮಳೆಹಾನಿಯ ವಿವರ:
ಜೀವಹಾನಿ- 13
ಜಾನುವಾರುಗಳ ಸಾವು- 28
ಮನೆಹಾನಿ- 3309
ಬೆಳೆಹಾನಿ- 6279 ಹೆಕ್ಟೇರ್
ಕಾಳಜಿ ಕೇಂದ್ರಗಳ ಸ್ಥಾಪನೆ- 5, ಆಶ್ರಯ ಪಡೆದವರ ಸಂಖ್ಯೆ 1330

ಪರಿಹಾರ ವಿತರಣೆ ವಿವರ
ಬೆಳೆಹಾನಿ ಪರಿಹಾರ: ಮುಂಗಾರು ಹಂಗಾಮಿನಲ್ಲಿ ಒಟ್ಟು 9,90,957 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಹಾನಿ ಸಂಭವಿಸಿದ್ದು, 6,16,138 ಹೆಕ್ಟೇರ್ ಪ್ರದೇಶದ ಬೆಳೆಹಾನಿಗೆ 8.83 ಲಕ್ಷ ರೈತರಿಗೆ 947.8 ಕೋಟಿ ರೂ. ಪರಿಹಾರ ವಿತರಿಸಲಾಗಿದೆ.

ಇನ್ನು ಎರಡು ದಿನಗಳಲ್ಲಿ ಇನ್ನೊಂದು ಹಂತದಲ್ಲಿ ಸುಮಾರು 2 ಲಕ್ಷ ರೈತರಿಗೆ ಅಂದಾಜು 250 ಕೋಟಿ ರೂ. ಬೆಳೆ ಪರಿಹಾರ ಬಿಡುಗಡೆಗೆ ಕ್ರಮ ಕೈಗೊಳ್ಳಲಾಗುತ್ತಿದೆ.
ಮನೆಹಾನಿ ಪರಿಹಾರ: ಜೂನ್ 1 ರಿಂದ ಸೆಪ್ಟೆಂಬರ್ 30ರ ವರೆಗೆ 48485 ಮನೆ ಹಾನಿ ಸಂಭವಿಸಿದ್ದು, 42,661 ಮನೆಗಳಿಗೆ ಪರಿಹಾರ ವಿತರಿಸಲಾಗಿದೆ.

error: Content is protected !!
Scroll to Top
%d bloggers like this: