Cooking Utensils : ಆರೋಗ್ಯಕರ, ರುಚಿಕರ ಊಟ ತಯಾರಿಸೋದರಲ್ಲಿ ಪಾತ್ರೆಗಳ ಮಹತ್ವ ದೊಡ್ಡದು!!!

ಅಡುಗೆ ಯಾವ ರೀತಿಯಲ್ಲಿ ಮಾಡಿದರು ಸಹ ನಾವು ಯಾವ ಪಾತ್ರೆಯಲ್ಲಿ ಮಾಡುತ್ತೇವೆ ಅನ್ನೋದು ಸಹ ಪ್ರಾಮುಖ್ಯವಾಗಿದೆ. ಈಗ ನಾವು ಬಳಸುವ ಅಡುಗೆ ಪಾತ್ರೆಗಳಿಗೂ.. ಹಿಂದಿನ ಕಾಲದಲ್ಲಿ ಬಳಸುತ್ತಿದ್ದ ನಮ್ಮ ಅಡುಗೆ ಪಾತ್ರೆಗಳಿಗೂ ಸಾಕಷ್ಟು ವ್ಯತ್ಯಾಸವಿದೆ. ಅಂದರೆ ಹಿಂದಿನ ಕಾಲದಲ್ಲಿ ಮಣ್ಣಿನ ಪಾತ್ರೆಯಲ್ಲಿ ಅಡುಗೆ ಮಾಡುತ್ತಿದ್ದರು. ತಾವೇ ತೋಟಗಳಲ್ಲಿ ಬೆಳೆದ ತರಕಾರಿಗಳನ್ನು ತಂದು, ಬೇಯಿಸಿ ತಿನ್ನುತ್ತಿದ್ದರು. ಆ ಕಾಲದಲ್ಲಿ ರೋಗ ರುಜಿನಗಳ ಭಯ ಅಷ್ಟೊಂದು ಭಯ ಇರಲಿಲ್ಲ. ಪ್ರಸ್ತುತ ಎಲ್ಲವನ್ನೂ ಕೃತಕವಾಗಿ ತಿನ್ನಲಾಗುತ್ತಿದೆ. ಎಲ್ಲಾ ಆಹಾರಗಳಲ್ಲಿ ವಿಷಯುಕ್ತ ಅಂಶಗಳನ್ನು ಒಳಗೊಂಡಿದೆ. ಹಾಗಿದ್ದರೆ ಮಾಂಸಾಹಾರ ಆಗಲಿ ಅಥವಾ ಸಸ್ಯಾಹಾರಿ ಅಡುಗೆ ಆಗಲಿ ಅಡುಗೆ ರುಚಿ ಮತ್ತು ಆರೋಗ್ಯವಾಗಿರಲು ಯಾವ ಪಾತ್ರೆ ಸೂಕ್ತ ಎನ್ನುವುದು ತಿಳಿಯೋಣ.
ಪಾತ್ರೆಗಳಲ್ಲಿ ಹಲವಾರು ವೆರೈಟಿಗಳು ಇವೆ. ಬೇರೆ ಬೇರೆ ಮೂಲದ ಪಾತ್ರೆಗಳು, ಅಲ್ಯೂಮಿನಿಯಂ, ಕಬ್ಬಿಣ, ಹಿತ್ತಾಳೆ,ಸ್ಟೀಲ್, ಮಣ್ಣಿನ ಪಾತ್ರೆ ಮುಂತಾದವು. ಹಾಗಿದ್ದರೆ ಇವುಗಳಲ್ಲಿ ಯಾವುದು ಬೆಸ್ಟ್ ಯಾವ ಪಾತ್ರೆಗಳು ಆರೋಗ್ಯಕ್ಕೆ ಒಳ್ಳೆಯದು ಎಂಬುದಾಗಿದೆ.

ಉತ್ತಮ ಆರೋಗ್ಯಕ್ಕಾಗಿ ಆರೋಗ್ಯಕರ ಆಹಾರವನ್ನು ಸೇವಿಸುವುದು ಬಹಳ ಮುಖ್ಯ. ಅಡುಗೆಗಾಗಿ ಸರಿಯಾದ ಪಾತ್ರೆಗಳನ್ನು ಆರಿಸುವುದು ಬಹಳ ಮುಖ್ಯ. ಅಡುಗೆಗೆ ಬಳಸುವ ಬಹುತೇಕ ಪಾತ್ರೆಗಳು ವಿಷಕಾರಿ ರಾಸಾಯನಿಕಗಳಿಂದ ತುಂಬಿದ್ದು ಅದು ಆಹಾರದೊಳಗೆ ಸೇರಿಕೊಂಡು ಆಹಾರವನ್ನು ಕಲುಷಿತಗೊಳಿಸುತ್ತದೆ ಎಂಬುದು ನಮಗೆ ತಿಳಿದಿದೆ. ಹಾಗಾದರೆ ಕಲಬೆರಕೆ ಇಲ್ಲದ ಮತ್ತು ಆರೋಗ್ಯಕ್ಕೆ ಪೂರಕವಾದ ಆಹಾರವನ್ನು ಯಾವ ಪಾತ್ರೆಯಲ್ಲಿ ಬೇಯಿಸುವುದು ಎಂದು ಆಯುರ್ವೇದ ತಜ್ಞರು ವಿವರಿಸುತ್ತಾರೆ.

ಆಯುರ್ವೇದ ತಜ್ಞರುಗಳ ಪ್ರಕಾರ :

ಕಂಚಿನ ಪಾತ್ರೆಗಳು: ಕಂಚಿನ ಪಾತ್ರೆಯು ಆಹಾರದಲ್ಲಿ 97 ಪ್ರತಿಶತದಷ್ಟು ಪೋಷಕಾಂಶಗಳನ್ನು ಉಳಿಸಿಕೊಳ್ಳುತ್ತದೆ ಎಂದು ವೈದ್ಯರು ಹೇಳುತ್ತಾರೆ. ಆದಾಗ್ಯೂ, ತಾಮ್ರ ಅಥವಾ ನಿಕಲ್ ಲೋಹ ಲೇಪದೊಂದಿಗೆ ಬರುವ ಕಂಚಿನ ಪಾತ್ರೆಗಳಲ್ಲಿ ಅಡುಗೆ ಮಾಡದಂತೆ ಸಲಹೆ ನೀಡುತ್ತಾರೆ. ಈ ಆಹಾರಗಳು ಆರೋಗ್ಯಕ್ಕೆ ಹಾನಿಕಾರಕ ಆಗಿದೆ ಎಂದಿದ್ದಾರೆ.

ಸ್ಟೈನ್​​ಲೆಸ್​​ ಸ್ಟೀಲ್: ಇತ್ತೀಚಿನ ದಿನಗಳಲ್ಲಿ ಸ್ಟೈನ್​​ಲೆಸ್​​ ಸ್ಟೀಲ್ ಪಾತ್ರೆಗಳನ್ನು ಹೆಚ್ಚಾಗಿ ಬಳಸಲಾಗುತ್ತಿದೆ. ಅದರಲ್ಲಿ ವಿವಿಧ ಆಹಾರಗಳನ್ನು ತಯಾರಿಸಬಹುದು. ತಜ್ಞರ ಪ್ರಕಾರ, ಕೇವಲ 60-70 ಪ್ರತಿಶತ ಪೋಷಕಾಂಶಗಳು ಸರಳ ಉಕ್ಕಿನ ಪಾತ್ರೆಗಳಲ್ಲಿ ಸಂಗ್ರಹವಾಗುತ್ತವೆ. ಕ್ರೋಮಿಯಂ ಅಥವಾ ನಿಕಲ್​ನಲೊಂದಿಗೆ ಪಾಲಿಶ್ ಮಾಡಿದ ಸ್ಟೈನ್​​ಲೆಸ್​​ ಸ್ಟೀಲ್ ಖರೀದಿಸುವುದನ್ನು ತಪ್ಪಿಸಲು ತಜ್ಞರು ಎಚ್ಚರಿಸುತ್ತಾರೆ. ಏಕೆಂದರೆ ಅವು ಆರೋಗ್ಯಕ್ಕೆ ಹಾನಿಕರ.

ಕಚ್ಚಾ ಕಬ್ಬಿಣ: ಎರಕಹೊಯ್ದ ಕಬ್ಬಿಣದ ಪಾತ್ರೆಗಳ ಬಗ್ಗೆ ತಜ್ಞರು ಹೇಳುವುದೇನೆಂದರೆ ಇದು ಬಾಳಿಕೆ ಬರುವ ಲೋಹವಾಗಿದ್ದು ಅದು ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ ಎಂಬುದು. ಕ್ಯಾಸ್ಟ್​​ ಐರನ್ ಪಾತ್ರೆಗಳಲ್ಲಿ ಆಹಾರವನ್ನು ಬೇಯಿಸಿದಾಗ, ಆಹಾರದಲ್ಲಿ ಸ್ವಲ್ಪ ಪ್ರಮಾಣದ ಕಬ್ಬಿಣ ಸೇರುತ್ತದೆ. ಇದರಿಂದ ನಮ್ಮ ದೇಹ ಆರೋಗ್ಯಕರವಾಗುತ್ತದೆ ಎನ್ನುತ್ತಾರೆ. ಆದರೆ, ದೇಹದಲ್ಲಿ ಕಬ್ಬಿಣದ ಅಂಶ ಹೆಚ್ಚಿರುವವರು ಈ ಪಾತ್ರೆಯಲ್ಲಿ ಬೇಯಿಸಿದ ಆಹಾರವನ್ನು ಸೇವಿಸಬಾರದು ಎಂದು ತಜ್ಞರು ಎಚ್ಚರಿಸುತ್ತಾರೆ.

ಹಿತ್ತಾಳೆ ಪಾತ್ರೆಗಳು: ಹಿತ್ತಾಳೆಯ ಪಾತ್ರೆಗಳಲ್ಲಿ ಅಡುಗೆ ಮಾಡುವ ಮೂಲಕ ಆಹಾರದ 90 ಪ್ರತಿಶತ ಪೋಷಕಾಂಶಗಳನ್ನು ಉಳಿಸಿಕೊಳ್ಳಲಾಗುತ್ತದೆ. ಆದರೆ ಈ ಪಾತ್ರೆಗಳನ್ನು ತೊಳೆಯಲು ಹೆಚ್ಚಿನ ಕಾಳಜಿಯನ್ನು ತೆಗೆದುಕೊಳ್ಳಬೇಕು. ಈ ಪಾತ್ರೆಗಳಲ್ಲಿ ಸಿಟ್ರಿಕ್ ಆಹಾರವನ್ನು ಬೇಯಿಸಬಾರದು ಎಂದು ತಜ್ಞರು ಹೇಳುತ್ತಾರೆ.

ಅಲ್ಯೂಮಿನಿಯಂ ಪಾತ್ರೆಗಳು: ಅಲ್ಯೂಮಿನಿಯಂ ಅನ್ನು ಥೈರೋಟಾಕ್ಸಿಕ್ ಲೋಹವೆಂದು ಪರಿಗಣಿಸಲಾಗುತ್ತದೆ. ಇದು ಸುಲಭವಾಗಿ ಆಹಾರದಲ್ಲಿ ಕರಗುತ್ತದೆ. ಇದು ಯಕೃತ್ತಿನ ಅಸ್ವಸ್ಥತೆಗಳು, ಮಲಬದ್ಧತೆ, ಪಾರ್ಶ್ವವಾಯು ಮತ್ತು ಮೆದುಳಿನ ಕಾಯಿಲೆಗಳಿಗೆ ಆಹ್ವಾನ ನೀಡುತ್ತದೆ.

ಮಣ್ಣಿನ ಪಾತ್ರೆಗಳು: ಮಣ್ಣಿನ ಪಾತ್ರೆಗಳು ನಿಧಾನವಾಗಿ ಬಿಸಿಯಾಗುತ್ತವೆ. ಇದು ಆಹಾರದಲ್ಲಿ ತೇವಾಂಶ ಪೋಷಕಾಂಶಗಳನ್ನು ಉಳಿಸಿಕೊಳ್ಳಲು ಸಹಾಯ ಮಾಡುತ್ತದೆ. ಮಣ್ಣಿನ ಪಾತ್ರೆಗಳಲ್ಲಿ ಬೇಯಿಸಿದ ಆಹಾರವು ಪೌಷ್ಟಿಕವಾಗಿರುತ್ತದೆ. ಆದರೆ ಬೇಯಿಸಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ ಎಂದು ತಜ್ಞರು ಹೇಳುತ್ತಾರೆ. ಮತ್ತು ಹಿರಿಯರ ಪ್ರಕಾರ ಮಣ್ಣಿನ ಪಾತ್ರೆಯಲ್ಲಿ ಮಾಡಿದ ಅಡುಗೆ ರುಚಿಕರ ಆಗಿರುತ್ತದೆ ಎಂಬುದು ಅವರ ಅನುಭವದ ಮಾತು.

ಹೀಗೆ ಪ್ರತಿಯೊಂದು ವಿಧದ ಪಾತ್ರೆಯು ತನ್ನದೇ ಆದ ಗುಣಲಕ್ಷಣಗಳನ್ನು ಒಳಗೊಂಡಿದೆ.

Leave A Reply

Your email address will not be published.