ರಾಗಿಯ ಅಡ್ಡ ಪರಿಣಾಮಗಳು ಯಾವುದೆಲ್ಲ ಕೇಳಿ
ಆರೋಗ್ಯದ ಕಾಳಜಿ ಮನುಷ್ಯನಿಗೆ ಬಹಳ ಮುಖ್ಯ. ಯಾಕೆಂದ್ರೆ ನಾವು ಜೀವಿಸುವುದೇ ನಮ್ಮ ಅರೋಗ್ಯದ ಮೇಲೆ. ಸ್ವಲ್ಪ ಏರು ಪೇರಾದರು ಜೀವ ಇರಲಾರದು. ನಾವು ಸೇವಿಸುವ ಹಾಗೂ ಪಾಲಿಸುವ ಆಹಾರ ಪದ್ಧತಿಯು ಬಹಳ ಮುಖ್ಯವಾದ ಪಾತ್ರವನ್ನು ನಮ್ಮ ಜೀವನದಲ್ಲಿ ವಹಿಸುತ್ತದೆ. ಒಳ್ಳೆಯ ಪದಾರ್ಥ ಎಂದು ಅತಿಯಾಗಿ ಸೇವಿಸಬಾರದು. ಅದಕ್ಕಾಗಿಯೇ ಆಯಾ ಹೊತ್ತುಗಳು ಇರುತ್ತದೆ ಮತ್ತು ಅಂಶಗಳು ಇರುತ್ತವೆ.
ರಾಗಿ ಅಂತ ಹೇಳಿದ ಕೂಡಲೇ ನಮಗೆ ದಟ್ಟ ನೆನಪಿಗೆ ಬರುವುದು ರಾಗಿಮುದ್ದೆ. ಇದು ದೇಹಕ್ಕೆ ಬಹಳ ತಂಪು. ಹಾಗೂ ಬಹಳಷ್ಟು ಶಕ್ತಿಯನ್ನು ಒದಗಿಸುತ್ತದೆ. ಇದೇ ರಾಗಿಯನ್ನು ಅತಿಯಾಗಿ ಸೇವಿಸುವುದರಿಂದ ಯಾವುದೆಲ್ಲ ಅಡ್ಡ ಪರಿಣಾಮಗಳಿವೆ ಎಂಬುವುದನ್ನು ತಿಳಿಯೋಣ ಬನ್ನಿ.
ಹೌದು. ರಾಗಿಯಲ್ಲಿ ಕಬ್ಬಿಣ ಮತ್ತು ನಾರಿನ ಅಂಶ ಹೆಚ್ಚಾಗಿರುತ್ತದೆ. ಹಾಗಂತ ರಾಗಿ ಅತಿಯಾಗಿ ಸೇವಿಸಿದರೆ ಅಡ್ಡ ಪರಿಣಾಮಗಳು ನಮ್ಮ ದೇಹಕ್ಕೆ ಆಗುತ್ತದೆ ಅಂದರೆ ನೀವು ನಂಬಲೇಬೇಕು.
ಮೂತ್ರಪಿಂಡ ಸಂಬಂಧಿತ ಯಾವುದೇ ಕಾಯಿಲೆಗಳಿದ್ದರೂ ಅವರು ರಾಗಿಯನ್ನು ಸೇವಿಸಲೇಬಾರದು. ಯಾಕಂದರೆ ಇದು ಅತಿಯಾದ ನೋವನ್ನು ಉಂಟು ಮಾಡುತ್ತದೆ. ಹಾಗಾಗಿ ಈ ನೋವಿನಿಂದ ಬಳಲುತ್ತಿದ್ದವರು ರಾಗಿಯನ್ನು ಸೇವಿಸಲೇಬೇಡಿ.
ಥೈರಾಯಿಡ್ ಸಮಸ್ಯೆ ಇದ್ದವರು ರಾಗಿಯ ಯಾವುದೇ ಪದಾರ್ಥವನ್ನು ತಿನ್ನಬೇಡಿ. ಇದು ತುಂಬಾ ತಂಪು ಆಗಿರುವ ಕಾರಣದಿಂದ ಥೈರಾಯಿಡ್ ಗೆ ಬಹಳಷ್ಟು ಹಾನಿಯನ್ನು ಉಂಟುಮಾಡುತ್ತದೆ. ವೈದ್ಯರು ಕೂಡ ಇದನ್ನೇ ಸಲಹೆ ನೀಡುತ್ತಾರೆ.
ಎಲ್ಲಿ ತಂಪಾದ ಪ್ರದೇಶವು ಇರುತ್ತದೆಯೋ ಹಾಗೂ ಅಲ್ಲಿ ವಾಸಿಸುತ್ತಿರುವಂತಹ ಜನರು ದಯವಿಟ್ಟು ರಾಗಿಯನ್ನು ಆದಷ್ಟು ದೂರ ಮಾಡಿ. ಈಗಾಗಲೇ ತಿಳಿಸಿರುವ ಹಾಗೆ ಇದು ತುಂಬಾ ತಂಪು ಪದಾರ್ಥ. ಹೀಗಾಗಿ ಇದನ್ನು ಸೇವಿಸುವುದರಿಂದ ಶೀತ ಮತ್ತು ಜ್ವರಗಳಿಗೆ ಭಾಗಿಯಾಗುವಂತಹ ಸಂದರ್ಭ ಬರಬಹುದು.
ಹಾಗಾಗಿ ಹೆಚ್ಚಾಗಿ ಇದನ್ನು ಹೊಲಗದ್ದೆಗಳಲ್ಲಿ ಕೆಲಸ ಮಾಡುವವರು ಮತ್ತು ಉಷ್ಣಪ್ರದೇಶ ಇರುವಲ್ಲಿ ರಾಗಿಯ ಪದಾರ್ಥಗಳನ್ನು ಸೇವನೆ ಮಾಡುತ್ತಾರೆ.
ಮಲಬದ್ಧತೆಯಂತಹ ರೋಗವನ್ನು ಎದುರಿಸುತ್ತಿರುವವರು ರಾಗಿಯನ್ನು ಆದಷ್ಟು ಅವಾಯ್ಡ್ ಮಾಡಿ. ಇದರ ಜೊತೆಗೆ ತೂಕವು ಹೆಚ್ಚಾಗಬೇಕು ಎಂದು ಅಂದುಕೊಳ್ಳುತ್ತಿರುವ ಜನರು ಕೂಡ ರಾಗಿಯನ್ನು ಸೇವಿಸಬಾರದು. ಆರೋಗ್ಯಕ್ಕೆ ಒಳ್ಳೆಯದು ಆದರೆ ತೂಕವನ್ನು ಯಾವುದೇ ಕಾರಣಕ್ಕೂ ಇದು ಹೆಚ್ಚಿಸುವುದಿಲ್ಲ. ಡಯಟ್ ಮಾಡುತ್ತಿರುವ ವ್ಯಕ್ತಿಗಳಿಗೆ ಹೇಳಿ ಮಾಡಿಸಿದ ಪದಾರ್ಥ ರಾಗಿ.