ಶಿಕ್ಷಕಿ ಜೊತೆ ವಿದ್ಯಾರ್ಥಿಯ ಅನೈತಿಕ ಸಂಬಂಧ | ಆಕೆಯ ಮನೆಗೂ ಭೇಟಿ ಕೊಡ್ತಿದ್ದ ವಿದ್ಯಾರ್ಥಿ, ಕೊನೆಗೆ ಸಾವಿಗೆ ಶರಣಾದ |

ಇದೊಂಥರಾ ಲವ್ ಫೈಲ್ಯೂರ್ ಕೇಸ್ ಎಂದೇ ಹೇಳಬಹುದು. ಆದರೆ ಇಲ್ಲಿ ಲವ್ ಮಾಡ್ಕೊಂಡಿರೋರು ಟೀಚರ್ ಮತ್ತು ಸ್ಟುಡೆಂಟ್. ಈ ಸಂಬಂಧನೇ ಸರಿ ಇಲ್ಲ ಎಂದ ಮೇಲೆ ಎಡವಟ್ಟು ಖಂಡಿತಾ ಆಗಲೇಬೇಕು. ಇಲ್ಲೂ ಕೂಡ ಅದೇ ಅನಾಹುತ ನಡೆದಿರುವುದು. ಶಾಲಾ ಮಕ್ಕಳ‌ ಜೀವನ ಉಜ್ವಲವಾಗಿಸೋ ಹೊಣೆ ಹೊತ್ತಿರೋ ಈ ಟೀಚರ್ ವಿದ್ಯಾರ್ಥಿ ಜೊತೆ ಲವ್ವಿ ಡವ್ವಿ ಮಾಡೋಕೆ ಹೋಗಿ ಕೊನೆಗೆ ಜೈಲುಪಾಲಾಗಿದ್ದಾಳೆ. ಆದರೆ ಆ ಮುಗ್ಧ ಮನಸ್ಸಿನ ಬಾಲಕ ಮಾತ್ರ ಈ ಅನೈತಿಕ ಸಂಬಂಧದಿಂದ ಹೊರಬರಲಾರದೆ ಸಾವಿಗೆ ಶರಣಾಗಿದ್ದಾನೆ.


Ad Widget

Ad Widget

Ad Widget

Ad Widget
Ad Widget

Ad Widget

ಶಿಕ್ಷಕಿ ಜೊತೆ ದೈಹಿಕ ಸಂಬಂಧ ಹೊಂದಿದ್ದ ವಿದ್ಯಾರ್ಥಿಯೊಬ್ಬ ಸಾವಿಗೆ ಶರಣಾದ ಬಳಿಕ ಶಿಕ್ಷಕಿಯನ್ನು ಬಂಧಿಸಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ.


Ad Widget

ಈ ಶಿಕ್ಷಕಿ 17 ವರ್ಷದ ವಿದ್ಯಾರ್ಥಿ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಳು. ಆದರೆ ಯಾವಾಗ ಆತ ಜತೆಗಿನ ಸಂಬಂಧವನ್ನು ಕಡಿದುಕೊಂಡಳೋ ನೊಂದ ವಿದ್ಯಾರ್ಥಿ ಸಾವಿಗೆ ಶರಣಾಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ಚೆನ್ನೈನ ಅಂಬತ್ತೂರ್ ನಲ್ಲಿನ ಅನುದಾನಿತ ಸರ್ಕಾರಿ ಶಾಲೆಯಲ್ಲಿ ಈ ಶಿಕ್ಷಕಿ ಕೆಲಸ ಮಾಡುತ್ತಿದ್ದಳು. ಅಲ್ಲಿ ಈ ವಿದ್ಯಾರ್ಥಿ ಕೂಡಾ ಕಲಿಯುತ್ತಿದ್ದ. ಕಳೆದ ಮೂರು ವರ್ಷಗಳಿಂದ ಆ ಶಾಲೆಯಲ್ಲಿ ಈಕೆ ಶಿಕ್ಷಕಿಯಾಗಿದ್ದಳು. ಅಲ್ಲಿ ಪರಿಚಯವಾಗಿ ಅನಂತರ ಸಂಬಂಧ ಬೆಳೆದಿದೆ. ಕೆಲವು ಬಾರಿ ವಿದ್ಯಾರ್ಥಿ ಈಕೆಯ ಮನೆಗೂ ಭೇಟಿ ನೀಡುತ್ತಿದ್ದ ಎಂದು ವರದಿ ತಿಳಿಸಿದೆ.

ಆದರೆ ಇತ್ತೀಚೆಗೆ ಶಿಕ್ಷಕಿಗೆ ನಿಶ್ಚಿತಾರ್ಥವಾಗಿದೆ. ಅನಂತರ ಆಕೆ ವಿದ್ಯಾರ್ಥಿ ಜೊತೆ ಅಂತರ ಕಾಯ್ದುಕೊಂಡಿದ್ದಳು. ಆದರೆ ವಿದ್ಯಾರ್ಥಿ ಶಿಕ್ಷಕಿ ಜತೆಗಿನ ಸಂಬಂಧ ಮುಂದುವರಿಸಲು ಬಯಸಿದ್ದ ಎಂದು ಅಂಬತ್ತೂರ್ ಮಹಿಳಾ ಪೊಲೀಸ್ ಇನ್ಸ್ ಪೆಕ್ಟರ್ ಜ್ಯೋತಿಲಕ್ಷ್ಮೀ ತಿಳಿಸಿದ್ದಾರೆ.

ಈ ವಿದ್ಯಾರ್ಥಿ ಕಳೆದ ತಿಂಗಳು ಆತ್ಮಹತ್ಯೆಗೆ ಶರಣಾಗಿದ್ದ. ಆದರೆ ತಾಯಿ ಹೃದಯ ಇದನ್ನು ಒಪ್ಪಲಿಲ್ಲ. ಮಗನ ಸಾವಿಗೆ ಏನೋ ಬಲವಾದ ಕಾರಣವಿದೆ ಎಂದು ಅಮ್ಮ ಅನುಮಾನ ಪಟ್ಟಿದ್ದರು. ಹಾಗಾಗಿ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದರು. ಕೊನೆಗೆ ಪೊಲೀಸರು ಕೇಸು ದಾಖಲಿಸಿ ತನಿಖೆ ಮುಂದುವರಿಸಿದಾಗ, ವಿದ್ಯಾರ್ಥಿಯ ಮೊಬೈಲ್ ನಲ್ಲಿ ಇಬ್ಬರ ಫೋಟೊ ಪತ್ತೆಯಾಗಿತ್ತು. ಹಾಗೂ ತನಿಖೆಯ ಸಮಯದಲ್ಲಿ ಶಿಕ್ಷಕಿಯೊಂದಿಗಿನ ಸಂಬಂಧ ಬಹಿರಂಗ ಗೊಂಡಿದ್ದು, ಈಗ ಶಿಕ್ಷಕಿಯನ್ನು ಬಂಧಿಸಲಾಗಿದೆ ಎಂದು ವರದಿ ವಿವರಿಸಿದೆ.

error: Content is protected !!
Scroll to Top
%d bloggers like this: