ನ್ಯಾಯಲಯದ ಮೆಟ್ಟಲೇರಿ ನ್ಯಾಯಕ್ಕಾಗಿ ಮೊರೆ ಇಟ್ಟ ಇಡ್ತಲೆ ಹಾವು, ಏನೀ ಪ್ರಕರಣ ?

ಮನುಷ್ಯರು ಯಾವುದಾದರೂ ಪ್ರಕರಣದ ತನಿಖೆಗೆ ಕೋರ್ಟ್ ಮೆಟ್ಟಿಲೇರುವುದು ಸಾಮಾನ್ಯ. ಆದರೆ, ಪ್ರಾಣಿಗಳು ಇಲ್ಲವೇ ಬೇರೆ ಜೀವಿಗಳು ಕೋರ್ಟ್ ಒಳಗೆ ಪ್ರವೇಶಿಸಿದರೆ, ಆಕಸ್ಮಿಕವಾಗಿ ಬಂದಿರಬಹುದು ಎಂದು ಅಂದುಕೊಳ್ಳುವುದು ಸಹಜ.

 


ಬೆಕ್ಕಿಗೆ ಆಟ… ಇಲಿಗೆ ಪ್ರಾಣಸಂಕಟ ಎಂಬಂತೆ ಮನುಷ್ಯನ ದುರಾಸೆಗಾಗಿ ಎರಡು ತಲೆ ಹಾವನ್ನು ಹಿಡಿದು ಮಾರಾಟ ಮಾಡಲು ಯತ್ನಿಸಿ ಆರೋಪಿ ಪೋಲಿಸ್ ಅತಿಥಿಯಾಗಿದ್ದಾನೆ. ಈ ವಿಚಾರದ ಕುರಿತಾದ ವಿಚಾರಣೆಯ ನಡುವೆ ಹಾವನ್ನೇ ಕೋರ್ಟ್ ಮೆಟ್ಟಿಲೇರಿಸಿದ ಘಟನೆ ಬಿಹಾರದಲ್ಲಿ ನಡೆದಿದೆ.


ಪ್ರತಿಯೊಂದು ಜೀವಿಗೂ ತನಗೆ ಬೇಕಾದಂತೆ ಜೀವಿಸುವ ಹಕ್ಕಿದ್ದು, ಅದನ್ನು ಕಸಿದುಕೊಳ್ಳುವ ಅಥವಾ ಕೊಲ್ಲುವ ಅಧಿಕಾರ ಯಾರಿಗೂ ಇಲ್ಲ…ಹಾಗೆಂದು ಮಾಂಸಾಹಾರ ಮಾಡುವವರು ಪ್ರಾಣಿಗಳನ್ನು ಕೊಲ್ಲದೆ ಸೇವಿಸಲು ಸಾಧ್ಯವಿಲ್ಲ.. ಯಾವುದೇ ಪ್ರಾಣಿ ಇಲ್ಲವೇ ವಿಷಕಾರಿ ಜೀವಿಗಳು ಅದಕ್ಕೆ ತೊಂದರೆ ಕೊಡದೆ ಇದ್ದರೆ ತಮ್ಮ ಪಾಡಿಗೆ ಸಾಗುವುದು ಸಹಜ.. ಇದಲ್ಲದೆ ಮನುಷ್ಯರೇ ತೊಂದರೆ ಕೊಟ್ಟರೆ ಖಂಡಿತ ವಿಕೃತ ರೂಪವನ್ನು ಅನಾವರಣಗೊಳಿಸುತ್ತದೆ.


ಪ್ರತಿ ಪ್ರಾಣಿ ಪಕ್ಷಿಗಳು ಜೀವಿಸುವ ಪ್ರಕ್ರಿಯೆ ವಿಭಿನ್ನವಾಗಿದ್ದು, ತಮಗೆ ಬೇಕಾದ ಆಹಾರ ಸಂಗ್ರಹಣೆಗೆ ಅಲೆದಾಡುವ, ವಲಸೆ ಹೋಗುವ ಕ್ರಮ ಅನುಸರಿಸುತ್ತವೆ. ಅದರ ಜೊತೆಗೆ ಬದಲಾಗಿರುವ ಪ್ರಾಕೃತಿಕ ಸಂಪತ್ತು, ಬರಡಾಗಿರುವ ನೆಲ, ಮರಗಳ ಸಂಖ್ಯೆ ಕಡಿಮೆಯಾಗಿ ಜನರು ಜೀವಿಸುವ ಪ್ರದೇಶಗಳಿಗೆ ಲಗ್ಗೆ ಇಡುವ ಸ್ಥಿತಿ ಎದುರಾಗಿದೆ.


ಇತ್ತೀಚಿನ ದಿನಗಳಲ್ಲಿ ಪ್ರಾಣಿ ಪಕ್ಷಿಗಳ ಸಂಖ್ಯೆ ದಿನದಿಂದ ದಿನಕ್ಕೆ ಇಳಿಮುಖವಾಗುತ್ತಿದೆ. ಮುಂಚೆ ಇದ್ದ ಏಷ್ಟೋ ಪ್ರಭೇದಗಳು ಈಗ ಕಾಣಲು ಆಗುತ್ತಿಲ್ಲ ಜೊತೆಗೆ ಪ್ರಾಣಿ, ಕೀಟ ,ಪಕ್ಷಿಗಳ ಸುಳಿವೇ ಸಿಗದಂತೆ ಪಳೆಯುಳಿಕೆಗಳು ಮಾತ್ರ ಕಾಣುವ ಸ್ಥಿತಿ ಮುಂದೆ ಎದುರಾದರೂ ಅಚ್ಚರಿಯಿಲ್ಲ.


ಎರಡು ತಲೆ ಹಾವನ್ನು ಚೀನದಂತಹ ರಾಷ್ಟ್ರಗಳು ಔಷಧ ತಯಾರಿಕೆಗೆ ಬಳಸುತ್ತವೆ. ಆ ಕಾರಣಕ್ಕೆ ಸ್ಥಳೀಯರು ಹಾವನ್ನು ಹಿಡಿದು ಮಾರಾಟ ಮಾಡುತ್ತಾರೆ. ಆದರೆ ಹಾಗೆ ಮಾಡಬಾರದು, ಹಾವಿಗೆ ಅದರ ಪಾಡಿಗೆ ಬದುಕುವುದಕ್ಕೆ ಅವಕಾಶ ಮಾಡಿಕೊಡಬೇಕು.
ಹಾವಿನ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ನ್ಯಾಯಾಧೀಶರು ಹಾವನ್ನು ಕೋರ್ಟ್ ಮೆಟ್ಟಿಲೇರಿಸಿದ್ದಾರೆ.

ಈ ಹಾವು ಬಾಲವನ್ನು ತಲೆಯಂತೆಯೇ ಎತ್ತುತ್ತದೆಯಾದ್ದರಿಂದ ಅದಕ್ಕೆ 2 ತಲೆ ಹಾವು ಎನ್ನಲಾಗುತ್ತದೆ. ಇದು ವಿಶೇಷ ಪ್ರಭೇದದ ಹಾವಾಗಿರುವುದರಿಂದ ನ್ಯಾಯಾಲಯಕ್ಕೆ ಕರೆಸಿ, ಪ್ರಾಣಿ ಹಿಂಸೆ ಮಾಡದಂತೆ ನ್ಯಾಯಾಧೀಶ ಸತೀಶ್‌ ಚಂದ್ರ ಝಾ ಮಾರ್ಗದರ್ಶನ ಮಾಡಿದ್ದಾರೆ.


ಇದಲ್ಲದೇ,ಗ್ರಾಮಗಳಲ್ಲಿ ಎರಡು ತಲೆ ಹಾವು ಹಿಡಿಯುವ ಪ್ರಕರಣಗಳು ಹೆಚ್ಚಾಗಿರುವ ಹಿನ್ನೆಲೆಯಿಂದ ಅವುಗಳ ರಕ್ಷಣೆಗೆ ಅರಣ್ಯ ಅಧಿಕಾರಿಗಳಿಗೆ ಜಡ್ಜ್ ಸೂಚನೆ ನೀಡಿದ್ದಾರೆ.

Leave A Reply

Your email address will not be published.