Breaking News | ವರ್ಷಕ್ಕೊಮ್ಮೆ ತೆರೆಯುವ ಹಾಸನದ ಹಾಸನಾಂಬ ದೇವಾಲಯ ಓಪನ್ |
ಪ್ರತಿ ಊರಿನಲ್ಲೂ ಒಂದೊಂದು ರೀತಿಯ ವಿಶೇಷ ಹಾಗೂ ಐತಿಹಾಸಿಕ ಹಿನ್ನೆಲೆಯು ಅಡಗಿರುತ್ತದೆ. ಕೆಲವೊಮ್ಮೆ ಆ ವಿಚಾರಗಳ ಬಗ್ಗೆ ಹೆಚ್ಚೇನೂ ತಲೆಕೆಡಿಸಿಕೊಳ್ಳದೆ ಸುಮ್ಮನೆ ಕಣ್ಣು ಹಾಯಿಸಿ ಬರುವ ಕ್ರಮ ಹೆಚ್ಚಿನವರಿಗಿದೆ. ಎಲ್ಲರೂ ಆಚರಿಸುವ ಹಬ್ಬ ಹರಿದಿನಗಳಿರಬಹುದು ಇಲ್ಲವೆ ಕೆಲವೊಂದು ಧಾರ್ಮಿಕ ನೆಲೆಗಟ್ಟಿನ ವಿಧಿ ವಿಧಾನಗಳು, ಆಚರಣೆಗಳು ವಿಭಿನ್ನವಾಗಿ ತನ್ನದೇ ವಿಶಿಷ್ಟವಾದ ವೈಶಿಷ್ಟ್ಯವನ್ನು ಒಳಗೊಂಡಿರುತ್ತದೆ.
ಇದೇ ರೀತಿ ಧಾರ್ಮಿಕವಾಗಿ ಹೆಚ್ಚು ಸುಪ್ರಸಿದ್ಧವಾಗಿರುವ ಹಾಸನಾಂಬೆ ದೇವಾಲಯ ಭಕ್ತರ ದರ್ಶನ ಪಡೆಯಲು ಅವಕಾಶ ಕಲ್ಪಿಸಿದೆ. ಪ್ರತೀ ವರ್ಷ ಅಕ್ಟೋಬರ್ ನವಂಬರ್ ತಿಂಗಳಿಗಾಗಿ ಭಕ್ತರು ಹಾಸನಾಂಬೆಯ ದರ್ಶನಕ್ಕಾಗಿ ಕಾಯುತ್ತಿರುತ್ತಾರೆ. ದೀಪಾವಳಿ ಸಂದರ್ಭದಲ್ಲಿ ಹಾಸನಾಂಬೆಯ ಗರ್ಭಗುಡಿಯ ಬಾಗಿಲನ್ನು ತೆರೆಯಲಾಗುತ್ತದೆ.
ಹಾಸನದ ಹಾಸನಾಂಬೆಯ ದರ್ಶನ ಪಡೆಯಲು ಕಾಯುತ್ತಿದ್ದವರಿಗೆ ಇದೀಗ ಸುವರ್ಣಾವಕಾಶ ಒದಗಿಬಂದಿದೆ. ವರ್ಷಕ್ಕೊಮ್ಮೆ ದರ್ಶನ ಭಾಗ್ಯವನ್ನು ಕರುಣಿಸುವ ಹಾಸನಾಂಬೆ ದೇವಿಯ ಗರ್ಭಗುಡಿಯ ಬಾಗಿಲನ್ನು ಶಾಸ್ತ್ರೋಕ್ತವಾಗಿ ತೆರೆಯಲಾಗುತ್ತದೆ.
ಇಂದಿನಿಂದ ಹಾಸನಾಂಬೆ ದೇವಾಲಯ ಓಪನ್ ಆಗಿರಲಿದ್ದು, ವರ್ಷಕ್ಕೊಮ್ಮೆ ಮಾತ್ರ ಭಕ್ತರಿಗೆ ಹಾಸನಾಂಬೆಯ ದರ್ಶನ ಪಡೆಯಲು ಅವಕಾಶ ದೊರೆಯಲಿದೆ. ಇನ್ನು ಹಾಸನಾಂಬ ದೇವಿಯ ದರ್ಶನ ಪಡೆಯಲು ಸಾರ್ವಜನಿಕರಿಗೆ ಅವಕಾಶ ನೀಡುವ ಮೊದಲು ದೇವಾಲಯವನ್ನು ಸ್ವಚ್ಛಗೊಳಿಸಿ, ಹೊಸ ಬಣ್ಣ ಲೇಪವನ್ನು ನೀಡಲಾಗುತ್ತದೆ. ಇಡೀ ರಾತ್ರಿ ವಿಶೇಷ ಪೂಜೆ ಮತ್ತು ಹೋಮಗಳು ನಡೆಯುತ್ತವೆ.
ಅಕ್ಟೋಬರ್ 14 ರಂದು ಬೆಳಿಗ್ಗೆ 6 ಗಂಟೆಗೆ ದೇವಾಲಯವು ಭಕ್ತರಿಗಾಗಿ ಬಾಗಿಲುಗಳನ್ನು ತೆರೆಯಲಾಗುವುದರ ಜೊತೆಗೆ ಇದು ಸಂಜೆ 4 ಗಂಟೆಯವರೆಗೆ ಬಾಗಿಲು ತೆರೆದಿರುತ್ತದೆ.
ಗೋಪಾಲಯ್ಯ ಅಧಿಕಾರಿಗಳ ಸುಮ್ಮುಖದಲ್ಲಿ ದೇವಾಲಯದ ಬಾಗಿಲು ತೆರದಿದ್ದು, ಇಂದಿನಿಂದ ಅಕ್ಟೋಬರ್ 27ರವರೆಗೆ ಭಕ್ತರಿಗೆ ದರ್ಶನಕ್ಕೆ ಮುಕ್ತ ಅವಕಾಶ ನೀಡಲಾಗಿದ್ದು, ಆದರೆ ಇಂದು ಸಾರ್ವಜನಿಕರಿಗೆ ದೇವರ ದರ್ಶನಕ್ಕೆ ಅವಕಾಶ ದೊರೆಯುವುದಿಲ್ಲ.
ಅಕ್ಟೋಬರ್ 15 ರಿಂದ 24 ರವರೆಗೆ ಬೆಳಿಗ್ಗೆ 6 ರಿಂದ ರಾತ್ರಿ 10 ರವರೆಗೆ ಭಕ್ತರಿಗೆ ದೇವಾಲಯವನ್ನು ಪ್ರವೇಶಿಸಲು ಅವಕಾಶ ನೀಡಲಾಗುತ್ತದೆ.
ಇದಲ್ಲದೇ, ನೈವೇದ್ಯ ಮತ್ತು ಇತರ ಆಚರಣೆಗಳಿಗೆ ಪ್ರತಿದಿನ ಮಧ್ಯಾಹ್ನ 1 ರಿಂದ 3.30 ರವರೆಗೆ ವಿರಾಮವಿದ್ದು, ವರ್ಷದಲ್ಲಿ ಕೆಲ ಸಮಯಗಳ ಕಾಲ ಮಾತ್ರ ಸಾರ್ವಜನಿಕರಿಗೆ ದೇವಾಲಯದಲ್ಲಿ ಪ್ರವೇಶಿಸಲು ಅವಕಾಶವಿದೆ.
ಉಳಿದ ಸಮಯದಲ್ಲಿ ಒಳ ಪ್ರವೇಶಿಸಲು ಅನುಮತಿಸಲಾಗುವುದಿಲ್ಲ. ಇದಲ್ಲದೇ,ಅಕ್ಟೋಬರ್ 25 ರಂದು ಸೂರ್ಯಗ್ರಹಣ ಇರುವುದರಿಂದ, ದೇವಾಲಯಕ್ಕೆ ಯಾವುದೇ ಪ್ರವೇಶವಿರುವುದಿಲ್ಲ.
ಹಾಸನಾಂಬೆ ದೇವಾಲಯ ತನ್ನದೆ ಶಕ್ತಿರೂಪದ ಜೊತೆಗೆ ಧಾರ್ಮಿಕ ನೆಲೆಗಟ್ಟಿನಿಂದ ಅನೇಕ ಪ್ರತೀತಿಯನ್ನು ಹೊಂದಿದ್ದು, ವರ್ಷದಲ್ಲಿ ಒಮ್ಮೆ ಮಾತ್ರ ಬಾಗಿಲು ತೆರೆಯುವುದರಿಂದ ಸಾಗರೋಪಾದಿಯಲ್ಲಿ ಭಕ್ತರು ನಾನಾ ಊರುಗಳಿಂದ ದರ್ಶನ ಪಡೆಯಲು ಬರುವುದು ವಿಶೇಷ.