ಹಿಂದೂಗಳ ಮದುವೆ ಪದ್ಧತಿ ಚೇಂಜ್ ಮಾಡ್ತಾರಂತೆ ಅಮೀರ್ ಖಾನ್, ಏನು ಹೇಳುತ್ತೆ ಅಮೀರ್ ನಟಿಸಿದ ಈ ಜಾಹೀರಾತು ?!
ಆಮಿರ್ ಖಾನ್ ಹಿಂದೂಗಳ ಮದುವೆ ಪದ್ಧತಿ ಬದಲಿಸ್ತಾರಂತೆ. ಅಮೀರ್ ಮತ್ತು ಕಿಯಾರಾ ಅಡ್ವಾಣಿ ಈಗ ತಾನೇ ಮದುವೆ ಆದ ದಂಪತಿಯ ಪಾತ್ರದಲ್ಲಿ ಜಾಹೀರಾತಿನಲ್ಲಿ ನಟಿಸಿದ್ದು ಅದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಲಾಲ್ ಸಿಂಗ್ ಛಡ್ಡ ಸೊರ ನಂತರ ಅವರ ಕೊರಳಿಗೆ ಈಗ ಇನ್ನೊಂದು ವಿವಾದ ಸುತ್ತಿ ಕೊಳ್ಳುತ್ತಿದೆ. ಒಂದು ಜಾಹೀರಾತು (Aamir Khan Advertisement) ಸಖತ್ ಕಾಂಟ್ರವರ್ಸಿ ಸೃಷ್ಟಿ ಮಾಡಿದೆ. ಮದುವೆಯ ಪದ್ದತಿಯನ್ನು ಬದಲಾಯಿಸೋಣ ಎಂಬ ಸಂದೇಶ ಈ ಜಾಹೀರಾತಿನಲ್ಲಿ ಇದೆ. ಅದನ್ನು ನೋಡಿದ ಕೆಲವರು ಅಸಮಾಧಾನ ಹೊರಹಾಕಿದ್ದಾರೆ. ಅಲ್ಲದೇ, ಆಮಿರ್ ಖಾನ್ ಅವರು ಹಿಂದೂಗಳ (Hindu) ಭಾವನೆಗೆ ಧಕ್ಕೆ ತಂದಿದ್ದಾರೆ ಎಂದು ಒಂದಷ್ಟು ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಈ ಜಾಹೀರಾತಿನಲ್ಲಿ ಆಮಿರ್ ಖಾನ್ ಮತ್ತು ಕಿಯಾರಾ ಅಡ್ವಾಣಿ ನಟಿಸಿದ್ದಾರೆ. ಈಗತಾನೇ ಮದುವೆ ಆದ ದಂಪತಿಯ ಪಾತ್ರದಲ್ಲಿ ಅವರಿಬ್ಬರು ಕಾಣಿಸಿಕೊಂಡಿದ್ದು, ಅದು ಮದುವೆ ಆದ ಬಳಿಕ ಗಂಡಿನ ಮನೆಗೆ ಹೆಣ್ಣು ಬರುವುದು ಸಂಪ್ರದಾಯ. ಗಂಡನ ಮನೆಯ ಹೊಸ್ತಿಲಿನಲ್ಲಿ ಇಟ್ಟಿರುವ ಅಕ್ಕಿಯ ಸೇರನ್ನು ಒದ್ದು ಆಕೆ ಎಂಟ್ರಿ ನೀಡುತ್ತಾಳೆ.
ಆದರೆ ಈಗ ಆಮಿರ್ ಖಾನ್ ಅವರ ಈ ಜಾಹೀರಾತಿನಲ್ಲಿ ಅದನ್ನು ಉಲ್ಟಾ ತೋರಿಸಲಾಗಿದೆ. ಇಲ್ಲಿ ಆಮಿರ್ ಖಾನ್ ಅವರು ಪತ್ನಿಯ ಕುಟುಂಬಕ್ಕೆ ಪ್ರವೇಶ ಮಾಡುತ್ತಾರೆ. ಹೆಣ್ಣಿನ ಮನೆಯ ಹೊಸ್ತಿಲಿನಲ್ಲಿ ಇಟ್ಟ ಅಕ್ಕಿಯ ಸೇರನ್ನು ಒದ್ದು ಅವರು ಒಳಗೆ ಬರುತ್ತಾರೆ. ಪತ್ನಿಯ ತಂದೆ-ತಾಯಿಯನ್ನು ನೋಡಿಕೊಳ್ಳುವ ಜವಾಬ್ದಾರಿ ಅವರು ವಹಿಸಿಕೊಳ್ಳಲು ಸಿದ್ಧರಿದ್ದಾರೆ ಎಂಬ ರೀತಿಯಲ್ಲಿ ತೋರಿಸಲಾಗಿದೆ. ಇದನ್ನು ನೋಡಿರುವ ಹಲವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ಮಧ್ಯಪ್ರದೇಶದ ಸಚಿವ ನರೋತ್ತಮ್ ಮಿಶ್ರಾ ಅವರು ಈ ಬಗ್ಗೆ ತಕರಾರು ತೆಗೆದಿದ್ದಾರೆ. ‘ಆಮಿರ್ ಖಾನ್ ನಟಿಸಿರುವ ಖಾಸಗಿ ಬ್ಯಾಂಕ್ನ ಜಾಹೀರಾತನ್ನು ನಾನು ನೋಡಿದ್ದೇನೆ. ಭಾರತೀಯ ಸಂಪ್ರದಾಯವನ್ನು ತಲೆಯಲ್ಲಿ ಇಟ್ಟುಕೊಂಡು ಜಾಹೀರಾತು ಮಾಡುವಂತೆ ನಾನು ಅವರಲ್ಲಿ ವಿನಂತಿಕೊಳ್ಳುತ್ತೇನೆ. ಈಗ ಅವರು ಮಾಡಿರುವ ಜಾಹೀರಾತು ಸರಿಯಿಲ್ಲ. ಯಾರ ಧಾರ್ಮಿಕ ಭಾವನೆಗೂ ಧಕ್ಕೆ ತರುವ ಅಧಿಕಾರ ಅವರಿಗೆ ಇಲ್ಲ – ಎಂದು ನರೋತ್ತಮ್ ಮಿಶ್ರಾ ಹೇಳಿದ್ದಾರೆ.
ಹಿಂದೂ ಮದುವೆ ಪದ್ಧತಿ ಮಾತ್ರ ಯಾಕೆ ಚೇಂಜ್ ಮಾಡ್ತೀರಾ. ಮುಸ್ಲಿಂ ಕ್ರಿಶ್ಚಿಯನ್ ಧಾರ್ಮಿಕ ಭಾವನೆಗಳಿಗೂ ಧಕ್ಕೆ ಮಾಡಿ ನೋಡೋಣ ಎಂದು ಕೆಲವರು ಚಾಲೆಂಜ್ ಹಾಕಿದ್ದಾರೆ.