8 ತಿಂಗಳ ಹಿಂದೆ ಮದುವೆಯಾದ ಜೋಡಿ | ಹೆಂಡತಿನಾ ತವರು ಮನೆಯಲ್ಲಿ ಬಿಟ್ಟು ಪ್ರೇಯಸಿ ಜೊತೆ ಸುತ್ತಾಡಿದ | ಆಘಾತಕ್ಕೊಳಗಾದ ನವ ವಧು ಆತ್ಮಹತ್ಯೆ

Share the Article

ಒಬ್ಬರಿಗೊಬ್ಬರು ಇಷ್ಟಪಟ್ಟು ಮದುವೆಯಾಗಿದ್ದ ಜೋಡಿ ಅದು. ಮನೆ ಮಂದಿ ತುಂಬಾ ಅದ್ಧೂರಿಯಾಗಿಯೇ ಮದುವೆ ಮಾಡಿ ಕೊಟ್ಟಿದ್ದರು. ಆದರೆ ಮದುವೆಯಾಗಿ ಕೇವಲ 8 ತಿಂಗಳಷ್ಟೇ ಆಗಿತ್ತು. ಕೈಹಿಡಿದ ಮಡದಿಯನ್ನು ಆಕೆಯ ಗಂಡ ತವರು ಮನೆಗೆ ಕಳುಹಿಸಿ, ಪ್ರೇಯಸಿಯ ಜೊತೆ ಸುತ್ತಾಡೋಕೆ ಹೋಗಿದ್ದಾನೆ. ಇಷ್ಟೂ ಸಾಲದು ಅಂತ ತಾನು ಪ್ರೇಯಸಿ ಜೊತೆ ಸುತ್ತಾಡ್ತಿರುವ ಹಾಗೂ ಮೋಜು ಮಸ್ತಿ ಮಾಡ್ತಿರುವ ಫೋಟೊಗಳನ್ನು, ತನ್ನ ಪತ್ನಿಗೆ ಕಳುಹಿಸಿದ್ದಾನೆ. ಇದರಿಂದ ತೀವ್ರವಾಗಿ ನೊಂದ ನವವಿವಾಹಿತೆ, ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ.

ಚಿಕ್ಕಬಳ್ಳಾಪುರ ತಾಲೂಕಿನ ಹೆಣ್ಣೂರು ಕದಿರೇನಹಳ್ಳಿ ಗ್ರಾಮದ 20 ವರ್ಷದ ಮೋನಿಕಾ ಹಾಗೂ ಚಿಕ್ಕಬಳ್ಳಾಪುರ ನಗರ ಪ್ರಶಾಂತ್ ನಗರ ನಿವಾಸಿ 25 ವರ್ಷದ ಭಾರ್ಗವ್ ಎಂಬ ಜೋಡಿನೇ 8 ತಿಂಗಳ ಹಿಂದೆ ಮದುವೆಯಾದವರು. ಚಿಕ್ಕಬಳ್ಳಾಪುರ ನಗರದ ಕೆ.ಇ.ಬಿ ಸಮುದಾಯ ಭವನದಲ್ಲಿ ಇವರಿಬ್ಬರ ಮದುವೆ ಧಾಂ ಧೂಂ ಆಗಿ ನೆರವೇರಿತ್ತು. ಮದುವೆಯಾಗಿ ಸುಖ ಸಂಸಾರ ಮಾಡುತ್ತಿದ್ದ ದಂಪತಿಗಳ ಸಂಸಾರದಲ್ಲಿ ಅದೇನ್ ಆಯಿತೊ ಏನೊ.. ಇತ್ತೀಚೆಗೆ ಇಬ್ಬರ ಮಧ್ಯೆ ಮನಸ್ತಾಪ ಆಗಿದೆ. ಹಾಗಾಗಿ ಮೋನಿಕಾ ಗಂಡ ಭಾರ್ಗವ, ವಿಜಯದಶಮಿ ಹಬ್ಬದ ಪ್ರಯುಕ್ತ ಪತ್ನಿಯನ್ನು ತವರು ಮನೆಗೆ ಕಳುಹಿಸಿದ್ದ. ಅದಾದಮೇಲೆ ವಾಪಸ್ ಪತ್ನಿಯನ್ನು ಕರೆದುಕೊಂಡು ಹೋಗಲು ಬಂದಿಲ್ಲ. ಇದರಿಂದ ಅನುಮಾನಗೊಂಡ ಪತ್ನಿ, ಕರೆದುಕೊಂಡು ಹೋಗಲು ಹೇಳಿದಾಗ ಬೇರೆ ಕತೆ ಹೇಳಿದ್ದ ಗಂಡ ಭಾರ್ಗವ.

ಆದರೆ ಇಂದು ಬುಧವಾರ ಗಂಡ ಬರುವುದಾಗಿ ಹೇಳಿದ್ದ. ಆದರೆ ಆತ ಬಂದಿಲ್ಲ. ಬದಲಿಗೆ ಆತ ಕಳುಹಿಸಿದ್ದ ಕೆಲವು ಫೊಟೊಗಳು ಮೋನಿಕಾ ವಾಟ್ಸಪ್ ಗೆ ಬಂದಿತ್ತು. ಅದನ್ನು ನೋಡಿ ದಂಗಾದ ಮೋನಿಕಾ ತವರು ಮನೆಯಲ್ಲಿ ನೇಣು ಬಿಗಿದುಕೊಂಡು ನೇಣಿಗೆ ಶರಣಾಗಿದ್ದಾಳೆ.

ತಾನು ಬೇರೆ ಯುವತಿಯನ್ನು ಪ್ರೀತಿ ಮಾಡ್ತಿದ್ದೀನಿ, ಆಕೆಯೂ ತನ್ನನ್ನು ಪ್ರೀತಿ ಮಾಡ್ತಿದ್ದಾಳೆ, ಇಬ್ಬರೂ ಸೇರಿ ಪ್ರವಾಸದಲ್ಲಿ ಇದ್ದೇವೆ. ಅಂತ ಹೇಳಿದ್ದ. ಜೊತೆಗೆ, ಲವ್ವರ್ ಜೊತೆ ಇರುವ ಕೆಲವು ಪೋಟೊಗಳನ್ನು ವಾಟ್ಸಪ್ ಗೆ ಪೋಸ್ಟ್ ಮಾಡಿದ್ದಾನಂತೆ. ತೀರಾ ಆಘಾತಗೊಂಡ ಮೋನಿಕಾ ಹಿಂದು ಮುಂದು ಯೋಚಿಸದೇ, ಸಾವಿಗೆ ಶರಣಾಗಿದ್ದಾಳೆ. ತನ್ನ ಸಾವಿಗೆ ತನ್ನ ಗಂಡ ಭಾರ್ಗವನೇ ಕಾರಣ ಅಂತಾ ಡೆತ್ ನೋಟ್ ಬರೆದಿಟ್ಟು, ತಂದೆಯ ಮನೆ ಮೇಲೆ ಇರುವ ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಮೃತಪಟ್ಟಿದ್ದಾಳೆ.

ಸುದ್ದಿ ತಿಳಿಯುತ್ತಿದ್ದಂತೆ ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ತಮ್ಮ ಮಗಳ ಸಾವಿನ ಸುದ್ದಿ ಕೇಳಿ ಹೆತ್ತವರ ಆಕ್ರಂದನ ಮುಗಿಲು ಮುಟ್ಟಿದೆ.

Leave A Reply